Subscribe to Updates
Get the latest creative news from FooBar about art, design and business.
Author: editor.udayarashmi@gmail.com
’ವ್ಯಂಗೋತ್ಸವ’- ಶ್ರೀನಿವಾಸ ಜಾಲವಾದಿ, ಸುರಪುರ ‘ರೆಡ್ಡಿನ್ನ ನಿಂದರಿಸಿ ಕೆಡವಿದ್ರಲೋ ತಮ್ಮಾ?’ ಕೇಳಿದ ಕಾಕಾ ಗುಡುಮ್ಯಾಗ’ಏನಪಾ ಕಾಕಾ ಯಾವಾಗ ಬಂದಿ? ನೋಡ್ಲೆ ಇಲ್ಲಲಾ?’ ಅಂದ ಗುಡುಮ್ಯಾ’ನಾ ವೋಟಿಂಗ್ ಮುಗದ ಮ್ಯಾಕ ಬಂದೆ’ ಅಂದ ಕಾಕಾ’ಯಾವ ವೋಟಿಂಗ? ಈಗ ಯಾವ್ದು ಎಲೆಕ್ಷನ್ಕ ವೋಟ ಹಾಕಾಕ ಹೋಗಿದ್ದೇಪಾ ಯಪ್ಪಾ?’ ಕೇಳಿದಳು ರಾಣಿ ಕುತೂಹಲದಿಂದ’ಏ ಅದೇ ರಾಜ್ಯಸಭಾ ಎಲೆಕ್ಷನ್ ಆತಲಾ, ಗೊತ್ತಿಲ್ಲೇನ ನಿಂಗ?’ ಎಂದ ಕಾಕಾ’ಅರೇ ಅದು ಹ್ಯಾಂಗ ನಿನ್ಗ ಗೊತ್ತಾತೈಪಾ?’ ಅಂದಳು ರಾಶಿ’ಏ ಮನಷಾ ಅಂದ ಮ್ಯಾಕ ಎಲ್ಲಾ ತಿಳ್ಕಂಡಿರಬೇಕು ತಿಳಿತಿಲ್ಲೋ?’ ಅಂತ ನಕ್ಕ ಕಾಕಾ’ಹೌದಾ?’ ಅಂತ ಬಾಯ್ತೆರೆದ ಗುಂಡ್ಯಾ’ಅದು ಸರಿ, ನೀ ಯಾಕ ಆ ಎಲೆಕ್ಷನ್ಕ ವೋಟ ಹಾಕಾಕ ಹೋಗಿದ್ದಿ?’ ಅಂತ ಎನ್ಕ್ವೈರಿ ಮಾಡಿದಳು ರಾಶಿ’ಯಾಕ, ಹೋಗಬಾರದಿತ್ತೇನು?’ ಅಂದ ಕಾಕಾ’ನಿಂಗ ಅಲ್ಲಿ ಒಳಾಕ ಬಿಟ್ರೇನು?’ ಅಂದ ಶೌರಿ’ಏ ಅಲ್ಲಿ ಬರೇ ಎಂಎಲ್ಎಯವರು ವೋಟ ಹಾಕುದಿತ್ತು, ನೀ ಯಾಕ ಅಲ್ಲಿ ಹೋಗಿದ್ದಿ?’ ಅಂದ ಕಾಳ್ಯಾ’ಅಲ್ಲಾ ಕಾಳ್ಯಾಗ ಸೈತ ಈ ವಿಷಯದಾಗ ತಿಳಿತೈತಿ,ನಿಂಗ ತಿಳೇಣಿಲ್ಲಾ?’ ಅಂದ ರಬಡ್ಯಾ’ಅಂದ್ರs…
ವಿಜಯಪುರ: ಪಾಕ್ ಪರ ಘೋಷಣೆ ಕೂಗಿದ ತಮ್ಮ ಬೆಂಬಲಿಗರ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳುವುದನ್ನು ಬಿಟ್ಟು ಈ ವಿದ್ಯಮಾನದ ಕುರಿತು ಪ್ರಶ್ನೆ ಮಾಡಿದ ಪತ್ರಕರ್ತರ ಮೇಲೆ ಹರಿಹಾಯ್ದಿರುವ ರಾಜ್ಯ ಸಭಾ ಸದಸ್ಯ ನಾಸಿರ ಹುಸೇನ್ ಅವರ ಸದಸ್ಯತ್ವವನ್ನು ಅನುರ್ಜಿತಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಒತ್ತಾಯಿಸಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಾಕ್ ಪರ ಘೋಷಣೆ ಮೊಳಗಿರುವುದೇ ದೊಡ್ಡ ದುರಂತ, ಇದನ್ನು ಖಂಡಿಸಬೇಕಾದ ಸಂಸದರು ಮಾಧ್ಯಮಗಳ ಮೇಲೆ ಏಕವಚನ ಪದ ಪ್ರಯೋಗಿಸಿ ನಿಂದಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಮಾನ, ಕೂಡಲೇ ಅವರು ದೇಶದಜನತೆ ಹಾಗೂ ಮಾಧ್ಯಮ ವರ್ಗದ ಕ್ಷಮೆ ಕೋರಬೇಕು. ಈ ರೀತಿ ಒಬ್ಬ ಸಂಸದ ಬೇಜವಾಬ್ದಾರಿಯಿಂದ ವರ್ತನೆ ಮಾಡಿರುವುದು ಖಂಡನೀಯ. ಕೂಡಲೇ ಅವರನ್ನು ರಾಜ್ಯ ಸಭಾ ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಸ ಪ ಪೂ ಕಾಲೇಜು ಹಿರೇಬಾಗೇವಾಡಿ, ತಾ:ಜಿ: ಬೆಳಗಾವಿ ೯೪೪೯೨೩೪೧೪೨ ಹೋದ ವರ್ಷದಂತೆ ಪರೀಕ್ಷೆ ಸಮಯದಲ್ಲಿ ಕೊನೆ ಗಳಿಗೆಯಲ್ಲಿ ಒತ್ತಡದ ಓದನ್ನು ಈ ವರ್ಷ ಮುಂದುವರಿಸುವುದು ಬೇಡ ಅಂತ ದಿನಾಲೂ ಅಂದುಕೊಳ್ತಿನಿ. ಇವತ್ತಿನಿಂದ ಅಭ್ಯಾಸ ಪ್ರಾರಂಬಿಸಬೇಕು, ಗುರುಗಳು ಹೇಳಿದಂತೆ ಅಂದಂದಿನ ಅಭ್ಯಾಸ ಮಾಡಬೇಕಂತಾನೂ ಅಂದುಕೊಳ್ತಿನಿ. ಅಪ್ಪ ಅವ್ವನ ಒತ್ತಾಯಕ್ಕೆ ಶಾಲೆಯಲ್ಲಿ ಕೊಟ್ಟ ಮನೆಗೆಲಸ ಅನಿವಾರ್ಯವೆಂಬಂತೆ ಮುಗಿಸ್ತಿನಿ. ಟಿವಿ ಮೊಬೈಲ್‌ನೊಳಗ ಸಿಕ್ಕಿ ಹಾಕಿಕೊಂಡು ಸಮಯ ಸರಿದಿದ್ದೇ ಗೊತ್ತಾಗಲ್ಲ. ತಲೆದಿಂಬಿಗೆ ತಲೆ ಇಟ್ಟಾಗ ಮತ್ತೆ ಪಶ್ಚಾತ್ತಾಪವೆನಿಸುತ್ತದೆ. ನಾಳೆಯಿಂದ ಮೊದಲನೇ ಅಧ್ಯಾಯದಿಂದ ಎಲ್ಲ ವಿಷಯಗಳ ಓದನ್ನು ಪ್ರಾರಂಭಿಸ್ತಿನಿ ಅಂದುಕೊಂಡು ಮಲಗ್ತಿನಿ. ಮತ್ತೆ ಮರುದಿನವೂ ಇದೇ ಗೋಳು. ಇದಕ್ಕೆ ಏನು ಮಾಡಬೇಕು ಅಂತ ತಿಳಿತಿಲ್ಲ ಅನ್ನೋದು ರಾಜುವಿನ ಚಿಂತೆ. ಇದನ್ನು ತನ್ನ ಆತ್ಮೀಯ ಗೆಳೆಯ ಶಶಿ ಜೊತೆ ಹಂಚಿಕೊಳ್ಳುತ್ತಾನೆ. ನನ್ನ ಪರಿಸ್ಥತಿಯೇನೂ ಬೇರೆ ಇಲ್ಲ ಎನ್ನುವುದು ಶಶಿಯ ಉತ್ತರ. ಇವು ಕೇವಲ ರಾಜು ಮತ್ತು…
ಚಡಚಣ: ಪಟ್ಟಣದ ಸಂಗಮೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದ ಹತ್ತು ವಿದ್ಯಾರ್ಥಿಗಳಿಗೆ ಸಂಸ್ಥೆಯು ಉಚಿತ ಶಿಕ್ಷಣ ನೀಡಲಿದೆ ಎಂದು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಎಸ್.ಎಸ್. ಚೋರಗಿ ಹೇಳಿದರು.ಮಹಾವಿದ್ಯಾಲಯ ನಡೆಸಿದ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಮೊದಲ ಹತ್ತು ಸ್ಥಾನ ನಡೆದ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ ಮಾತನಾಡಿ, ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ಶಿಕ್ಷಣ ಕಲಿತ ಸಂಸ್ಥೆ ಇದಾಗಿದ್ದು, ಜಾಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರು ಹತ್ತು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ನಿರ್ಧಾರ ಕೈಕೊಂಡಿದ್ದಾರೆ ಎಂದರು.ವಿದ್ಯಾರ್ಥಿಗಳಾದ ಸ್ನೇಹಾ ಪಾಟೀಲ, ಮಲ್ಲಿಕಾರ್ಜುನ ಸದ್ದಲಗಿ, ಸುಹಾನಿ ಭೋಹಿ, ಬಸವರಾಜ ಕೋಳಿ, ಐಶ್ವರ್ಯಾ ಪಾಟೀಲ, ಸಂತೋಷ ಹಾವಿನಾಳ, ಲಕ್ಷ್ಮೀ ನಂದೂರ, ಆಕಾಶ ಬಗಲಿ, ಮಲ್ಲಿಕಾ ಕಂಟಿಕರ, ಉಪನ್ಯಾಸಕರಾದ…
Udayarashmi kannada daily newspaper
ಬೆಂಗಳೂರು: ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಹಾಗೂ ಆಗಾಗ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿರುವ ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಅವರು ಅಡ್ಡ ಮತದಾನ ಮೂಲಕ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಗೆ ಬಿಗ್ ಶಾಕ್ ನೀಡಿದ್ದಾರೆ.ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್ ಸಿ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆಂದು ತಿಳಿದುಬಂದಿದೆ.ಇನ್ನು ಎಸ್ ಟಿ ಸೋಮಶೇಖರ್ ಅವರು ಕಾಂಗ್ರೆಸ್ ಗೆ ಅಡ್ಡ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ಚುನಾವಣಾ ಏಜೆಂಟ್‌ರೊಬ್ಬರು ಖಚಿತಪಡಿಸಿದ್ದಾರೆ.ಮತದಾನಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಸೋಮಶೇಖರ್ ಅವರು, “11 ವರ್ಷದಿಂದ ಎಲ್ಲರಿಗೂ ಮತ ಹಾಕಿದ್ದೇನೆ. ಆದರೆ, ರಾಜ್ಯಸಭೆಗೆ ಆಯ್ಕೆ ಆದವರು ಒಂದು ರೂಪಾಯಿ ಅನುದಾನವನ್ನೂ ಕೊಟ್ಟಿಲ್ಲ. ನೇರ ನೇರ ಹೇಳುತ್ತೇನೆ, ನಾನು ಈ ಬಾರಿ ಆತ್ಮಸಾಕ್ಷಿಯಂತೆ ಮತ ಹಾಕುತ್ತೇನೆ. ಕಳೆದ ಬಾರಿ (ಹಾಲಿ ಹಣಕಾಸು ಸಚಿವೆ) ನಿರ್ಮಲಾ ಸೀತಾರಾಮನ್ ಅವರಿಗೆ ಮತ ಹಾಕಿದ್ದೆ. ಆಮೇಲೆ ನಿರ್ಮಲಾ ಸೀತಾರಾಮನ್ ನನಗೆ ಭೇಟಿಗೆ ಅಪಾಯಿಟ್ಮೆಂಟ್ ಕೂಡ ಕೊಡಲೇ ಇಲ್ಲ,” ಎಂದು…
ಸಿಂದಗಿ: ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಮಿತಿಗೆ ನಿಖಟ ಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ ರಾಜಿನಾಮೆ ಸಲ್ಲಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ನಾನು ನೇಮಿತ ಅಧ್ಯಕ್ಷನಾಗಿ ತೃಪ್ತಿಕರವಾಗಿ ಕಾರ್ಯನಿರ್ವಹಿಸಿದ್ದೇನೆ. ಜಿಲ್ಲಾಧ್ಯಕ್ಷರ ಆದೇಶದಂತೆ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡಿದ್ದರೂ ನಿಕಟ ಪೂರ್ವ ಅಧ್ಯಕ್ಷನಾಗಿ ಪರಿಷತ್ತಿನ ಹತ್ತು ಹಲವಾರು ಕಾರ್ಯ ಚಟುವಟಿಕೆಗಳನ್ನು ಪ್ರಸ್ತುತ ತಾಲೂಕಾಧ್ಯಕ್ಷರ ಬೆಂಬಲವಾಗಿ ನಿಂತು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಆದರೆ ಇತ್ತೀಚಿನ ದಿನಮಾನದಲ್ಲಿನ ಪರಿಷತ್ತಿನ ಬೆಳವಣಿಗೆಗೆ ಬೆಸತ್ತು ಸ್ವ ಇಚ್ಚೆಯಿಂದ ರಾಜೀನಾಮೆಯನ್ನು ಜಿಲ್ಲಾಧ್ಯಕ್ಷರಿಗೆ ಸಲ್ಲಿಸುತ್ತಿದ್ದೇನೆ. ನನ್ನೊಂದಿಗೆ ತಾಲೂಕು ಗೌರವ ಕಾರ್ಯದರ್ಶಿ ಶಿವುಕುಮಾರ ಕಲ್ಲೂರ, ಸಂಘಟನಾ ಕಾರ್ಯದರ್ಶಿ ರಮೇಶ ಪೂಜಾರಿ, ದತ್ತಿ ಸಂಚಾಲಕ ಸಿದ್ದಲಿಂಗ ಕಿಣಗಿ, ಗೌರವ ಕೋಶಾಧ್ಯಕ್ಷ ಖಾದರಬಾಷಾ ವಾಲಿಕಾರ, ಪ್ರಚಾರ ಸಮಿತಿಯ ದುಂಡಪ್ಪ ಸೊನ್ನದ, ಕಾರ್ಯಕಾರಿಣಿ ಸದಸ್ಯ ಭೀಮಣ್ಣ ಹೆರೂರ ಯರಗಲ್ಲ ಬಿ.ಕೆ ಅವರು ರಾಜೀನಾಮೆಯನ್ನು ಸಲ್ಲಿಸುತಿದ್ದಾರೆ. ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟ ಜಿಲ್ಲಾಧ್ಯಕ್ಷರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಕೂಚಬಾಳ ತಿಳಿಸಿದ್ದಾರೆ.
ಸಿದ್ಧಾಪುರ ಶಿವಕುಮಾರ್ ನಿಮಗೊಬ್ಬ ಅದ್ಭುತ ಕಲಾವಿದ ವ್ಯಕ್ತಿಯನ್ನು ಪರಿಚಯಿಸುತ್ತೇನೆ ಎಂದು ಟಿ.ಎಂ.ವೀರೇಶ್ ಅವರು ಹೇಳಿದಾಗ ಖುಷಿ ಕುತೂಹಲ ಒಟ್ಟಿಗೆ ಆಯ್ತು. ಯಾಕೆಂದರೆ ಅವರೊಬ್ಬ ಸಹೃದಯಿ ಕಲಾವಿದರಾಗಿ ಅವರದು ಯಾವಾಗಲೂ ತೀಕ್ಷ್ಣ ಗ್ರಹಿಕೆಯ ಆಯ್ಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅವರ ಮಾತು ನನ್ನಲ್ಲಿ ಕುತೂಹಲ ಹೆಚ್ಚಿಸಿತು. ಒಂದು ಸಮಯ ಪಿಕ್ಸ್ ಮಾಡಿಕೊಂಡು ನನ್ನೊಂದಿಗೆ ಮತ್ತೊಬ್ಬ ಚಿತ್ರಕಲಾವಿದರಾದ ವೆಂಕಟೇಶ ರೆಡ್ಡಿಯವರನ್ನು ಆ ಕಲಾವಿದರ ಹತ್ತಿರ ಕರೆದುಕೊಂಡು ಹೋದರು. ಮೊದಲ ನೋಟದಲ್ಲೆ ಕಲಾವಿದನ ಕಳೆ ಕಂಡಿತು. ಅವರು ನಾನು ವಿಜಯಕುಮಾರ್ ಎಂದು ಸಹಜ ಸೌಜನ್ಯದಿಂದ ಪರಿಚಯಿಸಿಕೊಂಡರು. ಅವರೊಬ್ಬ ಸಾದಾರಣ ಶಿಲ್ಪ ಕಲಾವಿದರಲ್ಲ ಎಂಬುದನ್ನು ನಮ್ಮೆದುರು 31ಅಡಿ ಎತ್ತರದ ಸಿಮೆಂಟಿನ ಭವ್ಯವಾದ ಧ್ಯಾನಸ್ತ ಶಿವ ಪ್ರತಿಮೆ ಸಾಕ್ಷಿಕರಿಸಿತು. ಪ್ರತಿಮೆಯ ಪ್ರತಿ ಭಾಗವೂ ಶಿವ ದೇವರ ಜೀವ ಭಾವ ತನ್ಮಯತೆ ರೋಚಕವೆನಿಸಿತು. ವಿಜಯಕುಮಾರರೊಂದಿಗೆ ಹತ್ತಾರು ಕಲಾವಿದರು ಸೇರಿ ನಿರ್ಮಿಸಿದ ಈ ಕೃತಿಯೂ ನೋಡುಗರಲ್ಲಿ ಭಕ್ತಿಭಾವವನ್ನು ಮೂಡಿಸುತ್ತದೆ. ನಮ್ಮ ವೀರೇಶ್ ಅವರಂತೂ ಪ್ರತಿಮೆ ಮುಂದೆ ಎರಡು ಕೈಜೋಡಿಸಿ ಮುಗಿಯುತ್ತ ನಿಂತು ಬಿಟ್ಟರು.…
-ಸಿದ್ಧಾಪುರ ಶಿವಕುಮಾರ್ ನಿಮಗೊಬ್ಬ ಅದ್ಭುತ ಕಲಾವಿದ ವ್ಯಕ್ತಿಯನ್ನು ಪರಿಚಯಿಸುತ್ತೇನೆ ಎಂದು ಟಿ.ಎಂ.ವೀರೇಶ್ ಅವರು ಹೇಳಿದಾಗ ಖುಷಿ ಕುತೂಹಲ ಒಟ್ಟಿಗೆ ಆಯ್ತು. ಯಾಕೆಂದರೆ ಅವರೊಬ್ಬ ಸಹೃದಯಿ ಕಲಾವಿದರಾಗಿ ಅವರದು ಯಾವಾಗಲೂ ತೀಕ್ಷ್ಣ ಗ್ರಹಿಕೆಯ ಆಯ್ಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅವರ ಮಾತು ನನ್ನಲ್ಲಿ ಕುತೂಹಲ ಹೆಚ್ಚಿಸಿತು. ಒಂದು ಸಮಯ ಪಿಕ್ಸ್ ಮಾಡಿಕೊಂಡು ನನ್ನೊಂದಿಗೆ ಮತ್ತೊಬ್ಬ ಚಿತ್ರಕಲಾವಿದರಾದ ವೆಂಕಟೇಶ ರೆಡ್ಡಿಯವರನ್ನು ಆ ಕಲಾವಿದರ ಹತ್ತಿರ ಕರೆದುಕೊಂಡು ಹೋದರು. ಮೊದಲ ನೋಟದಲ್ಲೆ ಕಲಾವಿದನ ಕಳೆ ಕಂಡಿತು. ಅವರು ನಾನು ವಿಜಯಕುಮಾರ್ ಎಂದು ಸಹಜ ಸೌಜನ್ಯದಿಂದ ಪರಿಚಯಿಸಿಕೊಂಡರು. ಅವರೊಬ್ಬ ಸಾದಾರಣ ಶಿಲ್ಪ ಕಲಾವಿದರಲ್ಲ ಎಂಬುದನ್ನು ನಮ್ಮೆದುರು 31ಅಡಿ ಎತ್ತರದ ಸಿಮೆಂಟಿನ ಭವ್ಯವಾದ ಧ್ಯಾನಸ್ತ ಶಿವ ಪ್ರತಿಮೆ ಸಾಕ್ಷಿಕರಿಸಿತು. ಪ್ರತಿಮೆಯ ಪ್ರತಿ ಭಾಗವೂ ಶಿವ ದೇವರ ಜೀವ ಭಾವ ತನ್ಮಯತೆ ರೋಚಕವೆನಿಸಿತು. ವಿಜಯಕುಮಾರರೊಂದಿಗೆ ಹತ್ತಾರು ಕಲಾವಿದರು ಸೇರಿ ನಿರ್ಮಿಸಿದ ಈ ಕೃತಿಯೂ ನೋಡುಗರಲ್ಲಿ ಭಕ್ತಿಭಾವವನ್ನು ಮೂಡಿಸುತ್ತದೆ. ನಮ್ಮ ವೀರೇಶ್ ಅವರಂತೂ ಪ್ರತಿಮೆ ಮುಂದೆ ಎರಡು ಕೈಜೋಡಿಸಿ ಮುಗಿಯುತ್ತ ನಿಂತು ಬಿಟ್ಟರು.…
ಬಿಇಓ ಕಚೇರಿಯಲ್ಲಿ ಅನಾಥವಾಗಿ ಬಿದ್ದಿರುವ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು! *- ಚೇತನ ಶಿವಶಿಂಪಿ* ಮುದ್ದೇಬಿಹಾಳ: ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಭಯ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಂತೂ ಪರೀಕ್ಷೆ ಬರೆದು ಫಲಿತಾಂಶ ಬರೋವರೆಗೂ ಸಮಾಧಾನವಿರಲ್ಲ. ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಕೈ ಸೇರುತ್ತಿದ್ದಂತೆ ಅಬ್ಬಾ! ನನಗೆ ಇಷ್ಟು ಮಾಕ್ಸ್ ಬರುತ್ತೆ ಅಂದುಕೊಂಡಿರ್ತಾರೆ. ಆದರೆ ಫಲಿತಾಂಶ ಬಂದಾಗ ಬೇರೆನೇ ಆಗಿರುತ್ತೆ. ಕಾಣದ ಕೈಗಳ ಕೈಚಳಕದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಂಕದಲ್ಲಿ ಏರುಪೇರಾಗಿಬಿಟ್ಟಿರುತ್ತೆ. ಮುಗ್ಧ ಮಕ್ಕಳು ಇಲಾಖೆಯ ಮೇಲೆ ವಿಶ್ವಾಸ ಇಟ್ಟು ಪರೀಕ್ಷಾ ಕೇಂದ್ರಗಳಿಗೆ ಬಂದು ಪರೀಕ್ಷೆಗಳನ್ನು ಬರೀತಾರೆ. ಆದರೆ ಕೆಲ ಕರಾಳ ಮುಖಗಳು ತಮ್ಮ ಮಗು ಎಲ್ಲರಿಗಿಂತ ಹೆಚ್ಚಿನ ಅಂಕ ಗಳಿಸಬೇಕು ಅಂತಾ ಏನೇನೋ ಕರಾಮತ್ತನ್ನ ಮಾಡಿರ್ತಾರೆ.ಇಲಾಖೆಯವರು ಅಧಿಕಾರಿಗಳಿಗೆ ಕೆಲವು ಸುತ್ತೋಲೆಗಳನ್ನು ಕೊಟ್ಟು ಪರೀಕ್ಷೆಗಳನ್ನು ಕಟ್ಟು ನಿಟ್ಟಾಗಿ ನಡೆಸುವಂತೆ ಆದೇಶ ಮಾಡ್ತಾರೆ. ಕೆಲವು ಬಾರಿ ಕಟ್ಟು ನಿಟ್ಟಾಗಿ ಪರೀಕ್ಷೆಗಳು ನಡೆಯದೇ ಎಲ್ಲೋ ಒಂದೆಡೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಇಲಾಖೆಯ ಮರ್ಯಾದೆ ಮೂರು ಪಾಲಾದ್ರೂ ಮೇಲಾಧಿಕಾರಿಗಳು ತಪ್ಪಿತಸ್ಥರ…
