ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಶುಶ್ರುಷ ದಿನಾಚರಣೆ
ವಿಜಯಪುರ: ಮಾತೃ ಸಮಾನರಾದ ನರ್ಸ್ ಗಳ ಸೇವೆ ನಿಜಕ್ಕೂ ಅನನ್ಯವಾದದ್ದು, ವಿಶ್ವದ ಶ್ರೇಷ್ಠ ನರ್ಸ್ ಆಗಿ ಸೇವೆ ಸಲ್ಲಿಸಿದ್ದ ಫ್ಲೋರೆನ್ಸ್ ನೈಟಿಂಗೆಲ್ ಹುಟ್ಟಿದ ದಿನವನ್ನು ಅಂತರಾಷ್ಟ್ರೀಯ ಶುಶ್ರುಷ ದಿನವನ್ನಾಗಿ ಆಚರಿಸಲಾಗುತ್ತಿದೆ. ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ನೈಟಿಂಗೆಲ್ಲಳ ತ್ಯಾಗ ಸೇವೆ ಜಗತ್ತಿನಾದ್ಯಂತ ಇವತ್ತಿಗೂ ಸ್ಮರಣೀಯವಾಗಿದೆ. ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಅವರ ಬದುಕು ಒಂದು ಪ್ರೇರಣೆಯಾಗಲಿ ಎಂದು ಆಕ್ಸ್ಫರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಸೋಮವಾರ ಅವರು ನಗರದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಶುಶ್ರುಷ ದಿನಾಚರಣೆಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಅಖಿಲಾ ಬಿರಾದಾರ, ಅಂಜುಮ್ ಹತ್ತಿರಕಿಹಾಳ, ಆಕಾಶ ಮಲನೂರ, ರಾಜು ತಿಡುಗುಂದಿ ಆಗಮಿಸಿದ್ದರು.
ಅಶ್ವಿನಿ ಸಾಲ್ಗಾರ, ಸಮತಾ ಸಿಂಗಾಡಿ, ಪಂಕಜ ಪವಾರ ಮಲ್ಲಿಕಾರ್ಜುನ್ ಎಸ್ ಕೆ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

