ದೇವರಹಿಪ್ಪರಗಿ: ಸರ್ಕಾರದ ಯಾವುದೇ ಸಹಾಯ ಪಡೆಯದೇ ಕಳೆದ ಹಲವು ವರ್ಷಗಳಿಂದ ಮಕ್ಕಳ ಪಾಲನೆ, ಪೋಷಣೆಗೆ ನಿಂತ ಧಾಮದ ಕುರಿತು ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು. ಈ ಕುರಿತು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಸಲಹಾ ಸಮಿತಿ ಸದಸ್ಯ ರಾಜೀವ ಗುತ್ತೇದಾರ ಹೇಳಿದರು.
ಪಟ್ಟಣದ ನಮ್ಮೂರು ಮಕ್ಕಳ ಧಾಮದಲ್ಲಿ ಭಾನುವಾರ ಜರುಗಿದ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳಧಾಮದ ನವೀಕರಣಕ್ಕೆ ಅಗತ್ಯವಾದ ದಾಖಲೆಗಳನ್ನು ಪೂರೈಸಿದ ನಂತರವೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳು ನೋಂದಣಿ ನವೀಕರಣಕ್ಕೆ ಅನಗತ್ಯವಾಗಿ ವಿಳಂಬನೀತಿ ಅನುಸರಿಸುತ್ತಿರುವುದು ತಪ್ಪು. ಅವರ ಈ ನೀತಿಯ ವಿರುದ್ಧವಾಗಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ಗಣ್ಯವ್ಯಾಪಾರಿ ಹೀರಾಚಂದ್ ಗಾಂಧಿ ಮಾತನಾಡಿ, ಸೋಂಕಿತ ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆ, ವಸತಿಯ ಜೊತೆಗೆ ಮನೋ ಸಾಮಾಜಿಕ ಬೆಂಬಲ ನೀಡುವ ನಮ್ಮೂರ ಮಕ್ಕಳ ಧಾಮದ ಸೇವೆ ಜಿಲ್ಲೆ ಹಾಗೂ ತಾಲ್ಲೂಕಿಗೆ ಅಗತ್ಯವಾಗಿದೆ ಎಂದರು.
ಸ್ಥಳೀಯ ವ್ಯಾಪಾರಸ್ಥರು ಹಾಗೂ ಸಮಿತಿಯ ಸದಸ್ಯರಾದ ಬಾಬುಲಾಲ್ ದೇವಣಗಾಂವ, ಕಾಶೀಪತಿ ಕುದರಿ, ರಾಜಕುಮಾರ ಸಿಂದಗೇರಿ(ಪಡಗಾನೂರ) ಮಾತನಾಡಿದರು. ಸಿಬ್ಬಂದಿ ರಾವುತ ಮರಬಿ ಧಾಮ ನಡೆದುಬಂದ ದಾರಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಜ್ವಲ ಸಂಸ್ಥೆಯ ನಿರ್ದೇಶಕ ವಾಸುದೇವ ತೋಳಬಂದಿ, ಯೋಜನಾ ಸಂಯೋಜಕಿ ಸುನಂದಾ ತೋಳಬಂದಿ, ಎ.ಎ.ಹಿಪ್ಪರಗಿ, ಬಸವರಾಜ ಬಿರಾದಾರ, ಚಿದಾನಂದ ಕುಂಬಾರ, ಸಾಗರ್ ಘಾಟಗೆ, ಶ್ರೀಕಾಂತ ರಡ್ಡಿ, ಚನಬಸಪ್ಪ ಜೋಗೂರ, ಸುನೀಲ ಚಾಕರೆ, ಭೀಮಬಾಯಿ ಹೆರೂರು, ಮಲ್ಲಮ್ಮ ಹೊನ್ನಳ್ಳಿ ಸೇರಿದಂತೆ ದೇವರಹಿಪ್ಪರಗಿ ಪಟ್ಟಣ ಹಾಗೂ ಪಡಗಾನೂರ ಗ್ರಾಮದ ಪ್ರಮುಖರು ಇದ್ದರು.
Subscribe to Updates
Get the latest creative news from FooBar about art, design and business.
ಮಕ್ಕಳ ಧಾಮದ ಕುರಿತು ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು :ಗುತ್ತೇದಾರ
Related Posts
Add A Comment

