ಇಂಡಿ: ರಕ್ತ ದಾನ ಶ್ರೇಷ್ಠ ದಾನ, ಅದರಲ್ಲಿ ಯುವ ಜನತೆಯ ಪಾತ್ರ ಹೆಚ್ಚಿದೆ. ಇಂದು ಎಲ್ಲೆಡೆ ರಕ್ತದ ಅಗತ್ಯತೆ ಹೆಚ್ಚಿದೆ. ಆದ್ದರಿಂದ ರಕ್ತದಾನಿಗಳ ಅಗತ್ಯವು ಹೆಚ್ಚಿದೆ ಎಂದು ರೋಡಗಿಯ ಅಭಿನವ ಶಿವಪುತ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ರೋಡಗಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಲಿಂಗೇಶ್ವರ ಮಹಾಸ್ವಾಮಿಗಳ ೧೩ ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತç ಚಿಕಿತ್ಸಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಿದ್ದರು.
ಅಪಘಾತಕ್ಕಿಡಾದವರಿಗೆ ಮತ್ತು ಹೆರಿಗೆ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಹೋಗುವ ಜೀವಗಳನ್ನು ಉಳಿಸಲು ರಕ್ತದಾನ ಮಾಡುವದು ಅತೀ ಅವಶ್ಯ ಎಂದರು.
ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.
ಶಿಬಿರದಲ್ಲಿ ಡಾ|| ಅನೀಲ ರಾಠೋಡ, ಸಂಗಮೇಶ ಕಡಿಬಾಗ, ಆರೀಫ್ ಇನಾಮದಾರ, ಅರುಣ ಕಾಂಬಳೆ, ಪ್ರಕಾಶ ಕವಲಗಿ ಮತ್ತಿತರಿದ್ದರು.
ಗ್ರಾಮಸ್ಥರಾದ ರುದ್ರಗೌಡ ಅಲಬಗೊಂಡ, ಪ್ರಶಾಂತ ಅಲಗೊಂಡ, ಶಂಕರಗೌಡ ಬಂಡಿ, ಸಂತೋಷ ಪಾಟೀಲ, ಗಂಗಾಧರ ಬಡಿದಾಳ, ಗಜಾನನ ನಿರ್ವಹಣಶೆಟ್ಟಿ, ಶ್ರೀಮಂತ ತಾವರಖೇಡ, ಶ್ರೀಧರ ಪೂಜಾರಿ ಮತ್ತಿತರಿದ್ದರು.
೪೫೦ ಜನರಿಗೆ ನೇತ್ರ ತಪಾಸಣೆ, ೨೫ ಜನರಿಗೆ ಶಸ್ತ್ರಚಿಕಿತ್ಸೆ, ೧೨ ಜನರಿಗೆ ಕಣ್ಣು ಪೊರೆ ತೆಗೆಯುವದು ಸೇರಿದಂತೆ ೩೨ ಜನ ರಕ್ತದಾನ ಮಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

