Subscribe to Updates
Get the latest creative news from FooBar about art, design and business.
Author: editor.udayarashmi@gmail.com
ತಿಕೋಟಾ: ತಾಲೂಕಿನ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತಿಕೋಟಾ ತಹಶಿಲ್ದಾರ ಸುರೇಶ ಮುಂಜೆ ಅವರಿಗೆ ಮನವಿ ಸಲ್ಲಿಸಿ ಕೂಡಲೇ ಬಗೆಹರಿಸಬೇಕು. ಇಲ್ಲವಾದಲ್ಲಿ ತಹಶಿಲ್ದಾರರ ಕಛೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮನವಿ ಸಲ್ಲಿಸಿ ಮಾತನಾಡುತ್ತಾ, ತಾಲೂಕಿನಲ್ಲಿ ಮುಂಗಾರು, ಹಿಂಗಾರು ಸಂಪೂರ್ಣ ನಷ್ಟಗೊಂಡಿರುವ ಹಿನ್ನಲೆಯಲ್ಲಿ ವಿಫತ್ತು ನಿರ್ವಹಣಾ ಕಾನೂನಿನಡಿ ಪ್ರತಿ ಹೆಕ್ಟರಗೆ ೮೫೦೦ ರಾಜ್ಯ ಮತ್ತು ೮೫೦೦ ಕೇಂದ್ರದ ಪರಿಹಾರ ಗರಿಷ್ಟ ೨ ಹೆಕ್ಟರೆಗೆ ಪರಿಹಾರ ಹಾಕಬೇಕು, ಆದರೆ ಕೇಂದ್ರ ಸರಕಾರ ನೀಡಿದ ಪರಿಹಾರದಲ್ಲಿಯೇ ೨೦೦೦ ಕಡಿತ ಮಾಡಿರುವುದು ಖಂಡನೀಯ, ಅದನ್ನು ಕೂಡಲೇ ರಾಜ್ಯ ಸರಕಾರ ೨೦೦೦+೮೫೦೦ ಸೇರಿಸಿ ಒಟ್ಟಾರೆ ೧೦೫೦೦ ರೈತರ ಪ್ರತಿ ಹೆಕ್ಟರಗೆ ಹಾಕಬೇಕು. ಬರಗಾಲ ಪರಿಹಾರ ಸಮೀಕ್ಷೆ ಸರಿಯಾಗಿ ಮಾಡದೇ, ಬೇಜವ್ದಾರಿಯಿಂದ ಹೊರಗುತ್ತಿಗೆ ಮೂಲಕ ಮನಸ್ಸಿಗೆ ಬಂದ ಹಾಗೆ ಸರ್ವೇ ಮಾಡಿ ಕೈತೊಳೆದುಕೊಂಡಿದ್ದಾರೆ, ಆದರೆ ನಿಜವಾಗಿ ತಾಲೂಕಿನ ಎಲ್ಲಾ ನಷ್ಟಗೊಂಡ ರೈತರಿಗೆ…
ವಿಜಯಪುರ: ಇತ್ತೀಚೆಗೆ ನಿಧನರಾದ ಜನಸಂಘದ ಹಿರಿಯರು, ತಾಳಿಕೋಟಿ ಪಟ್ಟಣದ ಮುಖಂಡರಾದ ಬಾಳುಸಿಂಗ್ ರಾಮಸಿಂಗ್ ವಿಜಾಪುರ ಅವರ ಮನೆಗೆ ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಜನಸಂಘದ ಕಾಲದಿಂದಲೂ ನಮ್ಮ ಪಕ್ಷದ ಸಂಟನೆಗಾಗಿ ಶ್ರಮಿಸಿರುವುದು, ತಮ್ಮ ಜೊತೆಗಿದ್ದ ಆತ್ಮೀಯ ಒಡನಾಟ ಬಗ್ಗೆ ಕುಟುಂಬದವರೊಂದಿಗೆ ಹಂಚಿಕೊಂಡರು. ಭಾರತೀಯ ಜನತಾ ಪಕ್ಷ ಸಂಘಟನೆಗೆ ಬಾಳುಸಿಂಗ್ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಪಕ್ಷಕ್ಕೆ ಅಪಾರ ನಷ್ಟವಾಗಿದೆ ಎಂದರು.ಈ ಸಂದರ್ಭದಲ್ಲಿ ರಜಪೂತ್ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಸುರೇಶ ಹಜೇರಿ, ರತನಸಿಂಗ್ ಕೊಕಟನೂರ, ರಮೇಶ ಗೌಡಗೇರಿ ಸೇರಿದಂತೆ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
ಚಿಮ್ಮಡ: ಸರಕಾರಿ ಶಾಲೆಗಳೆಂದರೆ ಕೊಳಕು, ಅಲ್ಲಿ ಕಲಿಯುವವರು ಅಸಮರ್ಥರು ಎಂಬ ಮಾನಸಿಕ ಭಾವನೆ ಹೊಂದಿರುವ ಪಾಲಕರಿಗೆ ಪ್ರಸಕ್ತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಎಚ್ಚರಿಸಿದೆ. ಸರಕಾರಿ ಶಾಲೆಗಳ ಕುರಿತ ಅಸಡ್ಡೆ ಭಾವನೆ ಬೇಡ ಎಂದು ಸ್ಥಳಿಯ ವಿರಕ್ತಮಠದ ಪ್ರಭು ಶ್ರೀ ಹೇಳಿದರು.ಗ್ರಾಮದ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ಶ್ರೀ ಬನಶಂಕರಿದೇವಿ ಸೇವಾ ಸಮೀತಿಯಿಂದ ಗುರುವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು ಪ್ರತೀ ಮಗುವಿನಿಂದ ಲಕ್ಷಾಂತರ ರೂ. ದೇಣಿಗೆ (ಡೊನೇಷನ್) ಪಡೆದುಕೊಂಡು, ಕಲಿಯುವ ಸಾಮರ್ಥ್ಯವಿರುವ ಮಕ್ಕಳನ್ನು ಮಾತ್ರ ನೊಂದಾಯಿಸಿಕೊಳ್ಳುವ ಖಾಸಗೀ ಶಾಲೆಗಳೂ ಮಾಡದಷ್ಟು ಸಾಧನೆ ನಮ್ಮ ಸರಕಾರಿ ಶಾಲೆಗಳು ಸಾಧಿಸಿದ್ದು ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಕಲಿಸಿದರೆ ಶಾಲೆಗಳು ಮತ್ತಷ್ಟು ಸುಧಾರಣೆ ಕಾಣಲಿವೆಯಲ್ಲದೇ ಅಭೀವೃದ್ದಿಯೂ ಹೊಂದಲಿವೆಯೆಂದರು.ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿ ವಿದ್ಯೆ ಕಸಿಯಲಾಗದ ಸಂಪತ್ತು, ಸಾಧಿಸುವ ಛಲವಿದ್ದವರಿಗೆ ಯಾವುದೇ ಸಮಸ್ಯೆ ಅಡ್ಡಿಯಾಗದು, ಎರಡೂ ಕಾಲಿಲ್ಲದವರೂ ಎವರೆಷ್ಟ ಶಿಖರವೇರಿದ ಇತಿಹಾಸ ದೇಶ ಹೊಂದಿದೆ ಎಂದರು.ಸಮಾಜದ ಮುಖ್ಯಸ್ಥ…
ಮುದ್ದೇಬಿಹಾಳ: ಬ್ಯಾಂಕ್ ನಲ್ಲಿದ್ದ ಹಣ ಡ್ರಾ ಮಾಡಿಕೊಂಡು ಬೈಕ್ ನಲ್ಲಿಟ್ಟು ಎಳೆನೀರು ಕುಡಿಯುವಷ್ಟರಲ್ಲಿ ಖದೀಮರು ಹಣ ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ಹುಡಕೋ ಗೇಟ್ ಬಳಿ ಬುಧವಾರ ಸಂಭವಿಸಿದೆ.ಪಟ್ಟಣದ ನಿವಾಸಿಯಾಗಿರುವ ಶಿಕ್ಷಕರೊಬ್ಬರು ಮನೆ ಕಟ್ಟಿಸಲು ಅವಶ್ಯವಾಗಿರುವ ೩ಲಕ್ಷಕ್ಕೂ ಅಧಿಕ ಹಣವನ್ನು ದಂಪತಿ ಸಮೇತ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಕರ್ನಾಟಕ ಬ್ಯಾಂಕ್ ಗೆ ತೆರಳಿ ಮಧ್ಯಾಹ್ನ ಡ್ರಾ ಮಾಡಿಕೊಂಡಿದ್ದರು. ಆ ಹಣವನ್ನು ತಮ್ಮ ದ್ವಿ ಚಕ್ರ ವಾಹನದ ಹಿಂಬದಿ ಇರುವ ಬ್ಯಾಗ್ ನಲ್ಲಿಟ್ಟು ಎಳೆನೀರು ಕುಡಿಯಲೆಂದು ಮುಖ್ಯ ರಸ್ತೆಯಲ್ಲಿಯೇ ಬೈಕ್ ನಲ್ಲಿಸಿ ಎಳೆನೀರು ಖರೀದಿಸಲು ಪತಿ ತೆರಳಿದರೆ, ಹತ್ತಿರವಿರುವ ಬೇಕರಿಯಲ್ಲಿ ತಿನಿಸು ತರಲು ಪತ್ನಿ ತೆರಳಿದ್ದಾರೆ. ಬ್ಯಾಂಕ್ ನಿಂದಲೇ ಇವರನ್ನು ಬೆನ್ನಟ್ಟಿದ ಖದೀಮರ ತಂಡ ಬೈಕ್ ಹತ್ತಿರ ಯಾರೂ ಇಲ್ಲದ್ದನ್ನು ಗಮನಿಸಿ ಸಲೀಸಾಗಿ ಹಣ ತೆಗೆದುಕೊಂಡು ವಿಜಯಪುರ ರಸ್ತೆಯ ಕಡೆಗೆ ಸಾಗಿದ್ದಾನೆ. ಈ ಘಟನೆ ಸಿಸಿಟಿವಿ ಯೊಂದರಲ್ಲಿ ಸೆರೆಯಾಗಿದ್ದು ಬೈಕ್ ನಿಂದ ಹಣ ಎಗರಿಸುವವರೆಗೆ ಕಾಣುತ್ತಿದ್ದು ಮುಖ ಕಂಡಿಲ್ಲ. ಎಳೆನೀರು ಮಾರಾಟಗಾರ ಬಿಸಿಲಿನ…
ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಒಂದು ಊರಿನಲ್ಲಿ ಒಬ್ಬ ಧನಿಕನಿದ್ದ. ಒಮ್ಮೆ ಆತ ತನ್ನ ಕುಟುಂಬದೊಂದಿಗೆ ಮಾರುಕಟ್ಟೆಗೆ ತೆರಳುತ್ತಾನೆ. ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುತ್ತಾ ಕೊನೆಗೆ ಬಾಳೆಹಣ್ಣಿನ ಅಂಗಡಿಯ ಮುಂದೆ ಬಂದು ನಿಲ್ಲುತ್ತಾನೆ. ಅಂಗಡಿಯ ಮುಂದೆ ನೇತುಹಾಕಿದ್ದ ಬಾಳೆಹಣ್ಣನ್ನು ನೋಡಿ ಇದರ ದರವೆಷ್ಟು ಎಂದು ವ್ಯಾಪಾರಿಯಲ್ಲಿ ಕೇಳುತ್ತಾನೆ. ಆಗ ವ್ಯಾಪಾರಿಯು ಕಿಲೋಗೆ ಅರುವತ್ತು ರೂಪಾಯಿ ಎನ್ನುತ್ತಾನೆ. ಬಾಳೆಹಣ್ಣನ್ನು ತೆಗೆದುಕೊಳ್ಳಲೇ ಎಂದು ಧನಿಕನು ತನ್ನ ಹೆಂಡತಿಯಲ್ಲಿ ಕೇಳಿದಾಗ, ಹೆಂಡತಿಯು ದರವು ಅತ್ಯಂತ ದುಬಾರಿಯಾಯಿತು ಬೇರೆಡೆ ನೋಡೋಣ ಎನ್ನುತ್ತಾಳೆ. ಇವರು ಇನ್ನೊಂದು ಅಂಗಡಿಗೆ ತೆರಳಿ ಅಲ್ಲಿ ಬಾಳೆಹಣ್ಣಿನ ದರವನ್ನು ವಿಚಾರಿಸಿದಾಗ ಕಿಲೋಗೆ ನಲುವತ್ತೊಂದು ರೂಪಾಯಿ ಎಂದು ಅಂಗಡಿಯಾತ ಹೇಳುತ್ತಾನೆ. ಧನಿಕನ ಆಶ್ಚರ್ಯಗೊಂಡು ಒಂದೇ ಗುಣಮಟ್ಟದ ಬಾಳೆಹಣ್ಣು ಹತ್ತಿರ ಹತ್ತಿರದ ಎರಡು ಅಂಗಡಿಗಳಲ್ಲಿದ್ದರೂ ದರದಲ್ಲೇಕೆ ಎಷ್ಟೊಂದು ವ್ಯತ್ಯಾಸವೆಂದು ಚಿಂತಿಸುತ್ತಾನೆ. ಧನಿಕ ಮರಳಿ ಮೊದಲನೇ ಬಾಳೆಹಣ್ಣಿನ ಅಂಗಡಿಗೆ ಬಂದು ಅಲ್ಲಿನ ವ್ಯಾಪಾರಿಯಲ್ಲಿ ನಿನ್ನ ದರವು ಹೆಚ್ಚಾಗಿದ್ದು ಪಕ್ಕದ…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಪ್ರೀತಿಯ ಮಗಳೇ,ಅರೆ! ನೆನ್ನೆ ತಾನೆ ನನ್ನನ್ನು ಕಳಿಸಲು ಬಂದ ಅಮ್ಮ ಇಷ್ಟು ಬೇಗ ಪತ್ರ ಬರೆಯಲು ಕಾರಣವೇನು? ಎಂದು ಗಾಬರಿಯಾಗಬೇಡ.. ತಾಯಿ ಹೃದಯದ ಅಳಲು ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು. ನಮ್ಮ ಮನೆಯಂಗಳದಲ್ಲಿ ಚಂದದ ಪ್ರಾಕು ಧರಿಸಿ,ಎರಡು ಪುಟ್ಟ ಜುಟ್ಟು ಹಾಕಿಕೊಂಡು, ಮುಖಕ್ಕೆ ಪೌಡರ್ ಸವರಿ, ಹಣೆಗೆ ಕಾಡಿಗೆಯ ಬೊಟ್ಟುಇಟ್ಟು ಕಾಲಿನ ಗೆಜ್ಜೆಯ ಸದ್ದು ಮಾಡುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನೆಯೆಲ್ಲ ನಡೆಯುತ್ತಿದ್ದ, ಅರಳು ಹುರಿದಂತೆ ಮುದ್ದಾಗಿ ಬಾಯಿ ತುಂಬಾ ಮಾತನಾಡುತ್ತಿದ್ದ ಪುಟ್ಟ ಕಂದ ನೀನು, ಇಂದು ಕಾಲೇಜಿಗೆ ಹೋಗುವಷ್ಟು ದೊಡ್ಡವಳಾಗಿರುವೆ. ಅತ್ಯುತ್ತಮ ಅಂಕ ಗಳಿಸಿ ಒಳ್ಳೆಯ ಕಾಲೇಜಿನಲ್ಲಿ ಸೀಟು…
Udayarashmi kannada daily newspaper
ವಿಜಯಪುರ: ಖೊಟ್ಟಿ ದಾಖಲೆ ಸೃಷ್ಟಿಸಿ ಭೂಗರಣ ಇಡೀ ಜಿಲ್ಲೆಯಲ್ಲಿಯೇ ಸಂಚಲನ ಮೂಡಿಸಿದ್ದು, ಈ ರೀತಿಯ ಭೂಗರಣ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಬಾಬಾನಗರ ನಿವಾಸಿ ಸಾಹೇಬಗೌಡ ಮಲ್ಲನಗೌಡ ರುದ್ರಗೌಡರ ಅವರಿಗೆ ವಂಚಿಸಿದ ಪ್ರಕರಣ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳನ್ನು ರಾಜು ಮಾಳಪ್ಪ ಮಾನೆ, ದಯಾನಂದ ಅಮಯ್ಯ ಸಂಗಮದ, ಕಿರಣ ವಾಸುದೇವ ಬೇಡೆಕರ, ದಶರಥ ಸಿದ್ಧರಾಮ ಹೊಸಮನಿ, ದತ್ತಾತ್ರೇಯ ಶರಣಪ್ಪ ಶಿವಶರಣ, ಸಾಕೀಫ್ ಬಷೀರ್‌ಅಹ್ಮದ್ ನಂದವಾಡಗಿ ಸೇರಿದಂತೆ ಇನ್ನೂ ಕೆಲವರು ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಸರ್ವೆಯಲ್ಲಿ ಬರುವ ರಿ.ಸ.ನಂಬರ ೪೮/*/೧ ಕ್ಷೆತ್ರ ೨೦ ಎಕರೆ ಜಮೀನು ಮಾಲೀಕನಾದ ಅರ್ಗನ್ ಉರ್ಫ್ ಅಗನು ಧೋಳು ಕಾಳೆ ಅವರ ಹೆಸರಿನಲ್ಲಿ ಖೊಟ್ಟಿ ಆಧಾರ್ ಹಾಗೂ ಪ್ಯಾನ್ ಕಾರ್ಡನ್ನು ಸೃಷ್ಟಿ ಮಾಡಿಕೊಂಡು ಅವುಗಳನ್ನು ಖರೀದಿ ಪತ್ರದಲ್ಲಿ ಖೊಟ್ಟಿ ರೀತಿಯಿಂದ ನಮೂದ ಮಾಡಿ ಖರೀದಿ ಪತ್ರ ತಯಾರು ಮಾಡಿಕೊಂಡು ದೂರುದಾರರ ಕಡೆಯಿಂದ ೪೬,೫೦,೦೦೦ ರೂ.ಗಳನ್ನು ಪಡೆದುಕೊಂಡು ವಂಚನೆ ಮಾಡಿ, ಮೋಸತನದಿಂದ ಜಮೀನು…
ಕೊಲ್ಹಾರದಲ್ಲಿನ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿ ವಿಜಯಪುರ: ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಕೊಲ್ಹಾರದಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ದರೋಡೆ ಮಾಡಿದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಮಹಾಂತೇಶ ಶಿವಗೊಂಡ ತಳವಾರ, ಧರೇಶ ರೇವಣಸಿದ್ಧ ದಳವಾಯಿ, ಶಿವಪ್ಪ ಶರಣಪ್ಪ ಮಾಶ್ಯಾಳ, ಸುನೀಲ ರಾಮಪ್ಪ ವಡ್ಡರ, ಶಿವಾನಂದ ದಳವಾಯಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಸುಲಿಗೆಯಾದ ೩೨,೨೯,೩೬೪ ಲಕ್ಷ ರೂ.ಗಳ ಪೈಕಿ ೩೧,೦೪,೩೫೬ ಲಕ್ಷ ರೂ.ಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ.ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವನೆ ಮಾಹಿತಿ ನೀಡಿ, ಕೊಲ್ಹಾರದಲ್ಲಿ ಲಾರಿ ಚಾಲಕನ ಮೇಲೆ ನಡೆದ ಹಲ್ಲೆ, ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ನಮ್ಮ ಇಲಾಖೆಯ ತಂಡ ಯಶಸ್ವಿಯಾಗಿದ್ದು, ಕೃತ್ಯದಲ್ಲಿ ಕ್ಯಾಂಟರ ಲಾರಿ ಚಾಲಕ ಮಹಾಂತೇಶ ಶಿವಗೊಂಡ ತಳವಾರ ಅವರ ಕೈವಾಡ ಇರುವುದು ಕಂಡು ಬಂದಿದ್ದು, ಆತನ ಮಾಹಿತಿ ಮೇರೆಗೆ ಇನ್ನೂಳಿದ ೪ ಜನ ಆರೋಪಿತರು ಬುಲೆರೋ…
ವಿಜಯಪುರ: ನಗರದ ಮನಗೂಳಿ ಅಗಸಿ ಹತ್ತಿರದ ದಲಿತ ಕಾಲೋನಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ವಾರ್ಡ್ ನಂ. 23 ರ ಸಿ ಟಿ ಎಸ್ ನಂ 605/1ಎ /1/ಎ 2ದಲ್ಲಿ ಸರ್ಕಾರದಿಂದ ಕಾಯ್ದಿರಿಸಿದ ಜಾಗದಲ್ಲಿ ಸರ್ಕಾರದಿಂದ ಮಂಜೂರಾದ ಸಮುದಾಯ ಭವನ ನಿರ್ಮಾಣ ಮಾಡಲು ತಕರಾರು ತೆಗೆಯುತ್ತಿರುವ ಅನ್ಯಕೋಮಿನ ಹಿತಾಸಕ್ತವಾದಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ತಮಗೆ ನ್ಯಾಯ ಒದಗಿಸಬೇಕೆಂದು ಬಡಾವಣೆಯ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಶ್ರೀಶೈಲ್ ಕಾಖಂಡಕಿ ಅವರು ಮಾತನಾಡಿ ನಮ್ಮ ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಎಂದು ಜಾಗವನ್ನು ಸರ್ಕಾರದಿಂದಲೇ ಕಾಯ್ದಿರಿಸಲಾಗಿದೆ. ಈಗ ಸರ್ಕಾರ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನವನ್ನು ಕೂಡ ಮಂಜೂರು ಮಾಡಿದೆ. ಟೆಂಡರ್ ಪ್ರಕ್ರಿಯೆಯಾದ ಕಾಮಗಾರಿಯನ್ನು ಇಲ್ಲಸಲ್ಲದ ಕಾರಣ ಹೇಳಿ ವಿನಾಕಾರಣ ತಡೆಯುಂಟು ಮಾಡುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಮುಖ್ಯವಾಗಿ ದಲಿತ ಜನಾಂಗದ…
