ವಿಜಯಪುರ: ನಗರದ ಮನಗೂಳಿ ಅಗಸಿ ಹತ್ತಿರದ ದಲಿತ ಕಾಲೋನಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ವಾರ್ಡ್ ನಂ. 23 ರ ಸಿ ಟಿ ಎಸ್ ನಂ 605/1ಎ /1/ಎ 2ದಲ್ಲಿ ಸರ್ಕಾರದಿಂದ ಕಾಯ್ದಿರಿಸಿದ ಜಾಗದಲ್ಲಿ ಸರ್ಕಾರದಿಂದ ಮಂಜೂರಾದ ಸಮುದಾಯ ಭವನ ನಿರ್ಮಾಣ ಮಾಡಲು ತಕರಾರು ತೆಗೆಯುತ್ತಿರುವ ಅನ್ಯಕೋಮಿನ ಹಿತಾಸಕ್ತವಾದಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ತಮಗೆ ನ್ಯಾಯ ಒದಗಿಸಬೇಕೆಂದು ಬಡಾವಣೆಯ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಶ್ರೀಶೈಲ್ ಕಾಖಂಡಕಿ ಅವರು ಮಾತನಾಡಿ ನಮ್ಮ ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಎಂದು ಜಾಗವನ್ನು ಸರ್ಕಾರದಿಂದಲೇ ಕಾಯ್ದಿರಿಸಲಾಗಿದೆ. ಈಗ ಸರ್ಕಾರ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನವನ್ನು ಕೂಡ ಮಂಜೂರು ಮಾಡಿದೆ. ಟೆಂಡರ್ ಪ್ರಕ್ರಿಯೆಯಾದ ಕಾಮಗಾರಿಯನ್ನು ಇಲ್ಲಸಲ್ಲದ ಕಾರಣ ಹೇಳಿ ವಿನಾಕಾರಣ ತಡೆಯುಂಟು ಮಾಡುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಮುಖ್ಯವಾಗಿ ದಲಿತ ಜನಾಂಗದ ಅಭಿವೃದ್ಧಿಗೆ ತೊಂದರೆ ಉಂಟು ಮಾಡುತ್ತಿರುವ ಮಾಡುತ್ತಿರುವ ಅನ್ಯಕೋಮಿನ ಹಿತಾಸಕ್ತವಾದಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ಕೂಡಲೇ ಜಿಲ್ಲಾ ಆಡಳಿತ ನೊಂದ ದಲಿತ ಜನಾಂಗಕ್ಕೆ ನ್ಯಾಯ ಒದಗಿಸಬೇಕೆಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಕೀರ್ತಿ ಕಾಖಂಡಕಿ, ಸತೀಶ್ ಕೊಬ್ಬ ಕಡ್ಡಿ, ಬಸವರಾಜ್ ಕಾಂಬಳೆ, ಮಂಜುನಾಥ್ ಶಿವಶರಣ, ಉಮೇಶ್ ಕಾಂಬಳೆ, ರಾಕೇಶ್ ಕಾಕಂಡಕಿ,ಉಮೇಶ ಚಲವಾದಿ, ಕೃಷ್ಣ ಚಲವಾದಿ, ಸತೀಶ್ ಚಲವಾದಿ, ಪ್ರತಾಪ್ ಚಿಕ್ಕಲಕಿ, ಆಕಾಶ್ ಕಾಂಬಳೆ, ರೋಹಿತ್ ಮಲ್ಕಣ್ಣನವರ್, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

