ವಿಜಯಪುರ: ಖೊಟ್ಟಿ ದಾಖಲೆ ಸೃಷ್ಟಿಸಿ ಭೂಗರಣ ಇಡೀ ಜಿಲ್ಲೆಯಲ್ಲಿಯೇ ಸಂಚಲನ ಮೂಡಿಸಿದ್ದು, ಈ ರೀತಿಯ ಭೂಗರಣ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಬಾನಗರ ನಿವಾಸಿ ಸಾಹೇಬಗೌಡ ಮಲ್ಲನಗೌಡ ರುದ್ರಗೌಡರ ಅವರಿಗೆ ವಂಚಿಸಿದ ಪ್ರಕರಣ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ರಾಜು ಮಾಳಪ್ಪ ಮಾನೆ, ದಯಾನಂದ ಅಮಯ್ಯ ಸಂಗಮದ, ಕಿರಣ ವಾಸುದೇವ ಬೇಡೆಕರ, ದಶರಥ ಸಿದ್ಧರಾಮ ಹೊಸಮನಿ, ದತ್ತಾತ್ರೇಯ ಶರಣಪ್ಪ ಶಿವಶರಣ, ಸಾಕೀಫ್ ಬಷೀರ್‌ಅಹ್ಮದ್ ನಂದವಾಡಗಿ ಸೇರಿದಂತೆ ಇನ್ನೂ ಕೆಲವರು ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಸರ್ವೆಯಲ್ಲಿ ಬರುವ ರಿ.ಸ.ನಂಬರ ೪೮/*/೧ ಕ್ಷೆತ್ರ ೨೦ ಎಕರೆ ಜಮೀನು ಮಾಲೀಕನಾದ ಅರ್ಗನ್ ಉರ್ಫ್ ಅಗನು ಧೋಳು ಕಾಳೆ ಅವರ ಹೆಸರಿನಲ್ಲಿ ಖೊಟ್ಟಿ ಆಧಾರ್ ಹಾಗೂ ಪ್ಯಾನ್ ಕಾರ್ಡನ್ನು ಸೃಷ್ಟಿ ಮಾಡಿಕೊಂಡು ಅವುಗಳನ್ನು ಖರೀದಿ ಪತ್ರದಲ್ಲಿ ಖೊಟ್ಟಿ ರೀತಿಯಿಂದ ನಮೂದ ಮಾಡಿ ಖರೀದಿ ಪತ್ರ ತಯಾರು ಮಾಡಿಕೊಂಡು ದೂರುದಾರರ ಕಡೆಯಿಂದ ೪೬,೫೦,೦೦೦ ರೂ.ಗಳನ್ನು ಪಡೆದುಕೊಂಡು ವಂಚನೆ ಮಾಡಿ, ಮೋಸತನದಿಂದ ಜಮೀನು ಖರೀಧಿ ಹಾಕಿಕೊಟ್ಟಿದ್ದು ಈ ಬಗ್ಗೆ ವಿಜಯಪುರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆಗಾಗಿ ಪೊಲೀಸ್ ಅಧಿಕಾರಿಗಳಾದ ಸುನೀಲಕುಮಾರ ನಂದದೇಶ್ವರ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತನಿಖಾ ತಂಡ ೪೬,೫೦,೦೦೦ ರೂ. ಗಳನ್ನು ಜಪ್ತ ಮಾಡಲಾಗಿದೆ. ಅಲ್ಲದೇ ಪ್ರಕರಣದಲ್ಲಿ ನಕಲಿ ಆಧಾರ ಕಾರ್ಡ ಹಾಗೂ ಪಾನ್ ಕಾರ್ಡ ಸೃಷ್ಟಿ ಮಾಡಿದವರಿಗೆ ಪತ್ತೆ ಮಾಡಿ ವಿಚಾರಣೆ ಮಾಡುವ ತನಿಖೆ ಪ್ರಗತಿಯಲ್ಲಿದೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

