ಚಿಮ್ಮಡ: ಸರಕಾರಿ ಶಾಲೆಗಳೆಂದರೆ ಕೊಳಕು, ಅಲ್ಲಿ ಕಲಿಯುವವರು ಅಸಮರ್ಥರು ಎಂಬ ಮಾನಸಿಕ ಭಾವನೆ ಹೊಂದಿರುವ ಪಾಲಕರಿಗೆ ಪ್ರಸಕ್ತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಎಚ್ಚರಿಸಿದೆ. ಸರಕಾರಿ ಶಾಲೆಗಳ ಕುರಿತ ಅಸಡ್ಡೆ ಭಾವನೆ ಬೇಡ ಎಂದು ಸ್ಥಳಿಯ ವಿರಕ್ತಮಠದ ಪ್ರಭು ಶ್ರೀ ಹೇಳಿದರು.
ಗ್ರಾಮದ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ಶ್ರೀ ಬನಶಂಕರಿದೇವಿ ಸೇವಾ ಸಮೀತಿಯಿಂದ ಗುರುವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು ಪ್ರತೀ ಮಗುವಿನಿಂದ ಲಕ್ಷಾಂತರ ರೂ. ದೇಣಿಗೆ (ಡೊನೇಷನ್) ಪಡೆದುಕೊಂಡು, ಕಲಿಯುವ ಸಾಮರ್ಥ್ಯವಿರುವ ಮಕ್ಕಳನ್ನು ಮಾತ್ರ ನೊಂದಾಯಿಸಿಕೊಳ್ಳುವ ಖಾಸಗೀ ಶಾಲೆಗಳೂ ಮಾಡದಷ್ಟು ಸಾಧನೆ ನಮ್ಮ ಸರಕಾರಿ ಶಾಲೆಗಳು ಸಾಧಿಸಿದ್ದು ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಕಲಿಸಿದರೆ ಶಾಲೆಗಳು ಮತ್ತಷ್ಟು ಸುಧಾರಣೆ ಕಾಣಲಿವೆಯಲ್ಲದೇ ಅಭೀವೃದ್ದಿಯೂ ಹೊಂದಲಿವೆಯೆಂದರು.
ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿ ವಿದ್ಯೆ ಕಸಿಯಲಾಗದ ಸಂಪತ್ತು, ಸಾಧಿಸುವ ಛಲವಿದ್ದವರಿಗೆ ಯಾವುದೇ ಸಮಸ್ಯೆ ಅಡ್ಡಿಯಾಗದು, ಎರಡೂ ಕಾಲಿಲ್ಲದವರೂ ಎವರೆಷ್ಟ ಶಿಖರವೇರಿದ ಇತಿಹಾಸ ದೇಶ ಹೊಂದಿದೆ ಎಂದರು.
ಸಮಾಜದ ಮುಖ್ಯಸ್ಥ ಅಶೋಕ ಧಡೂತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಸದಸ್ಯ ಮನೋಜ ಹಟ್ಟಿ, ನಿವೃತ ಮುಖ್ಯೋಪಾದ್ಯಾಯ ಕಲ್ಲಪ್ಪ ವಿಜಾಪೂರ, ಪ್ರವೀಣ ಮೈತ್ರಿ ಮಾತನಾಡಿದರು.
ಸೇವಾ ಸಮೀತಿಯ ಅಧ್ಯಕ್ಷ ಚಂದ್ರಕಾಂತ ಜಾಡಗೌಡರ, ಪ್ರಮುಖರಾದ ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ ವೇಡಿಕೆಯಲ್ಲಿದ್ದರು. ಇದೇ ಸಂದರ್ಬದಲ್ಲಿ ಪಿಯೂಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಹದಿನೈದು ವಿದ್ಯಾರ್ಥಿಗಳನ್ನು ಸತ್ಕರಿಸಿ ನಗದು ಧನಸಹಾಯ ನೀಡಿ ಪುರಸ್ಕರಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

