ತಿಕೋಟಾ: ತಾಲೂಕಿನ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತಿಕೋಟಾ ತಹಶಿಲ್ದಾರ ಸುರೇಶ ಮುಂಜೆ ಅವರಿಗೆ ಮನವಿ ಸಲ್ಲಿಸಿ ಕೂಡಲೇ ಬಗೆಹರಿಸಬೇಕು. ಇಲ್ಲವಾದಲ್ಲಿ ತಹಶಿಲ್ದಾರರ ಕಛೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮನವಿ ಸಲ್ಲಿಸಿ ಮಾತನಾಡುತ್ತಾ, ತಾಲೂಕಿನಲ್ಲಿ ಮುಂಗಾರು, ಹಿಂಗಾರು ಸಂಪೂರ್ಣ ನಷ್ಟಗೊಂಡಿರುವ ಹಿನ್ನಲೆಯಲ್ಲಿ ವಿಫತ್ತು ನಿರ್ವಹಣಾ ಕಾನೂನಿನಡಿ ಪ್ರತಿ ಹೆಕ್ಟರಗೆ ೮೫೦೦ ರಾಜ್ಯ ಮತ್ತು ೮೫೦೦ ಕೇಂದ್ರದ ಪರಿಹಾರ ಗರಿಷ್ಟ ೨ ಹೆಕ್ಟರೆಗೆ ಪರಿಹಾರ ಹಾಕಬೇಕು, ಆದರೆ ಕೇಂದ್ರ ಸರಕಾರ ನೀಡಿದ ಪರಿಹಾರದಲ್ಲಿಯೇ ೨೦೦೦ ಕಡಿತ ಮಾಡಿರುವುದು ಖಂಡನೀಯ, ಅದನ್ನು ಕೂಡಲೇ ರಾಜ್ಯ ಸರಕಾರ ೨೦೦೦+೮೫೦೦ ಸೇರಿಸಿ ಒಟ್ಟಾರೆ ೧೦೫೦೦ ರೈತರ ಪ್ರತಿ ಹೆಕ್ಟರಗೆ ಹಾಕಬೇಕು. ಬರಗಾಲ ಪರಿಹಾರ ಸಮೀಕ್ಷೆ ಸರಿಯಾಗಿ ಮಾಡದೇ, ಬೇಜವ್ದಾರಿಯಿಂದ ಹೊರಗುತ್ತಿಗೆ ಮೂಲಕ ಮನಸ್ಸಿಗೆ ಬಂದ ಹಾಗೆ ಸರ್ವೇ ಮಾಡಿ ಕೈತೊಳೆದುಕೊಂಡಿದ್ದಾರೆ, ಆದರೆ ನಿಜವಾಗಿ ತಾಲೂಕಿನ ಎಲ್ಲಾ ನಷ್ಟಗೊಂಡ ರೈತರಿಗೆ ಪರಿಹಾರ ಒದಗಿಸಬೇಕು, ಅದನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿ ಆಗಿರುವ ಸಮಸ್ಯೆಯನ್ನು ಕೂಡಲೇ ಬಗೆಹರೆಸಿ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎಂದರು.
ತಾಲೂಕಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ಮಾತನಾಡುತ್ತಾ, ಮುಂಗಾರು ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತಿರುವುದರಿಂದ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಗುಣಮಟ್ಟದ, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಯಂತ್ರೋಪಕರಣಗಳನ್ನು ಅವಶ್ಯಕತೆಗೆ ಅನುಗುಣವಾಗಿ ಸರಿಯಾದ ಸಮಯಕ್ಕೆ ಸಂಗ್ರಹಿಸಿಟ್ಟುಕೊಳ್ಳಬೇಕು. ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೆಲೆಗೆ ಬಿತ್ತನೆ, ಬೀಜ, ಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ತಾಲೂಕಿನಲ್ಲಿ ವಿಜೆಲೆನ್ಸ್ ತಂಡವನ್ನು ಜಾಗೃತಗೊಳಿಸಿ ಕಾರ್ಯರೂಪಕ್ಕೆ ಬರುವಂತೆ ಆದೇಶಿಸಬೇಕು ಎಂದರು.
ತಾಲೂಕಾ ಉಪಾಧ್ಯಕ್ಷ ಶಾನುರ ನಂದರಗಿ, ಮಾತನಾಡುತ್ತಾ, ಮುಂಗಾರು ಪ್ರಾರಂಭವಾಗುವ ಅಡಿಯಲ್ಲಿ ಎಲ್ಲಾ ರೈತರು ಜಮೀನುಗಳಿಗೆ ಹೋಗುವ ಮಾರ್ಗದಲ್ಲಿ ದಾರಿ ಹದಗೆಟ್ಟು, ಕಂಠಿ ಬೆಳೆದು ಸಾಕಷ್ಟು ಅನಾನುಕೂಲವಾಗುತ್ತಿವೆ, ಅವುಗಳನ್ನು ಕೂಡಾ ಸರಿಪಡಿಸಿ ಸ್ವಚ್ಚಗೊಳಿಸಬೇಕು,
ಹಿಂದಿನ ಸರಕಾರ ವಿದ್ಯುತ್ ಇಲಾಖೆಯಡಿ ರೈತರ ಪಂಪಸೆಟಗಳಿಗೆ ೨೫೦೦೦ ಕೊಡುತ್ತಿತ್ತು, ಈಗ ನಿಲ್ಲಿಸಿದ್ದು ಈಗ ಸುಮಾರು ೨ ಲಕ್ಷ ಹಣ ಕಟ್ಟುವಂತೆ ಹೇಳುತ್ತಿದ್ದಾರೆ, ಇದು ರೈತರು ಮತ್ತು ಕೃಷಿಯನ್ನು ದೀವಾಳಿ ಎಬ್ಬಿಸುವ ಯೋಜನೆ ಆಗಿದೆ ಅದು ಕೂಡಾ ನಿಲ್ಲಬೇಕು ಎಂದರು.
ತಾಲೂಕಿನಾದ್ಯಂತ ಅನೇಕ ತೋಟದ ವಸ್ತಿಯಿದ್ದು, ಅಲ್ಲಿ ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಕೊಡಬೇಕೆನ್ನುವುದು ಎಲ್ಲರ ಬೇಡಿಕೆಯಾಗಿದೆ, ರಾತ್ರಿ ಹೊತ್ತು ಅಭ್ಯಾಸ ಮಾಡಲು, ದನಕರುಗಳಿಗೆ ಮೇವು ಹಾಕಲು ಹೋದಾಗ ಹುಳಹುಪ್ಪಡಿಗಳು ಕಡಿದು ಸಾವುಗಳು ಸಂಭವಿಸಿರುವುದು ಇದೆ, ಕಾರಣ ರಾತ್ರಿ ಸಿಂಗಲ್ ಫೇಸ್ ನೀಡಬೇಕು ಎಂದು ಆಗ್ರಹಿಸಿದರು.
ಹೊನವಾಡ ಗ್ರಾಮ ಅಧ್ಯಕ್ಷ ಹಣಮಂತ ಬ್ಯಾಡಗಿ ಮಾತನಾಡಿದರು.
ಈ ವೇಳೆ ಗೌರವಾಧ್ಯಕ್ಷ ಗಿರೀಶ ಕುಲಕರ್ಣಿ, ಮಹಿಳಾ ಅಧ್ಯಕ್ಷೆ ಸಂಗೀತಾ ರಾಠೋಡ, ಜಿಲ್ಲಾ ಸಂಚಾಲಕ ನಜೀರ £ಂದರಗಿ, ತಾ ಸಂಚಾಲಕ ಮಹಾದೇವ ಕದಮ, ಕಲಕೇರಿ ಹೊಬಳಿ ಅಧ್ಯಕ್ಷ ಮಹಿಬೂಬ ಬಾಷಾ ಮನಗೂಳಿ, ಹೊನವಾಡ ಸಂಚಾಲಕ ಖಾದರ ವಾಲಿಕಾರ, ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗುಗ್ಗರಿ, ಕಾಶಿನಾಥ ದೇವನಾಯಕ, ಮಲ್ಲಿಕಾರ್ಜುನ ಗುಗ್ಗರಿ, ಸಿದ್ದಪ್ಪ ಕೊಟ್ಟಲಗಿ, ಸುಧಾಕರ ನಲವಡೆ, ಆಮೀನಸಾಬ ತಿಕೋಟಿ , ವಿಲಾಸ ಮಾನವ, ಅರ್ಜುನ ಸಾಳ್ವಂಕೆ, ಉಮೇಶ ಕದಮ, ಗಂಗಾರಾಮ ಪವಾರ, ಶ್ರೀಕಾಂತ ಪವಾರ, ಸಿದ್ದರಾಯ ಗಗನಮಾಲಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

