ಮುದ್ದೇಬಿಹಾಳ: ಬ್ಯಾಂಕ್ ನಲ್ಲಿದ್ದ ಹಣ ಡ್ರಾ ಮಾಡಿಕೊಂಡು ಬೈಕ್ ನಲ್ಲಿಟ್ಟು ಎಳೆನೀರು ಕುಡಿಯುವಷ್ಟರಲ್ಲಿ ಖದೀಮರು ಹಣ ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ಹುಡಕೋ ಗೇಟ್ ಬಳಿ ಬುಧವಾರ ಸಂಭವಿಸಿದೆ.
ಪಟ್ಟಣದ ನಿವಾಸಿಯಾಗಿರುವ ಶಿಕ್ಷಕರೊಬ್ಬರು ಮನೆ ಕಟ್ಟಿಸಲು ಅವಶ್ಯವಾಗಿರುವ ೩ಲಕ್ಷಕ್ಕೂ ಅಧಿಕ ಹಣವನ್ನು ದಂಪತಿ ಸಮೇತ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಕರ್ನಾಟಕ ಬ್ಯಾಂಕ್ ಗೆ ತೆರಳಿ ಮಧ್ಯಾಹ್ನ ಡ್ರಾ ಮಾಡಿಕೊಂಡಿದ್ದರು. ಆ ಹಣವನ್ನು ತಮ್ಮ ದ್ವಿ ಚಕ್ರ ವಾಹನದ ಹಿಂಬದಿ ಇರುವ ಬ್ಯಾಗ್ ನಲ್ಲಿಟ್ಟು ಎಳೆನೀರು ಕುಡಿಯಲೆಂದು ಮುಖ್ಯ ರಸ್ತೆಯಲ್ಲಿಯೇ ಬೈಕ್ ನಲ್ಲಿಸಿ ಎಳೆನೀರು ಖರೀದಿಸಲು ಪತಿ ತೆರಳಿದರೆ, ಹತ್ತಿರವಿರುವ ಬೇಕರಿಯಲ್ಲಿ ತಿನಿಸು ತರಲು ಪತ್ನಿ ತೆರಳಿದ್ದಾರೆ. ಬ್ಯಾಂಕ್ ನಿಂದಲೇ ಇವರನ್ನು ಬೆನ್ನಟ್ಟಿದ ಖದೀಮರ ತಂಡ ಬೈಕ್ ಹತ್ತಿರ ಯಾರೂ ಇಲ್ಲದ್ದನ್ನು ಗಮನಿಸಿ ಸಲೀಸಾಗಿ ಹಣ ತೆಗೆದುಕೊಂಡು ವಿಜಯಪುರ ರಸ್ತೆಯ ಕಡೆಗೆ ಸಾಗಿದ್ದಾನೆ. ಈ ಘಟನೆ ಸಿಸಿಟಿವಿ ಯೊಂದರಲ್ಲಿ ಸೆರೆಯಾಗಿದ್ದು ಬೈಕ್ ನಿಂದ ಹಣ ಎಗರಿಸುವವರೆಗೆ ಕಾಣುತ್ತಿದ್ದು ಮುಖ ಕಂಡಿಲ್ಲ. ಎಳೆನೀರು ಮಾರಾಟಗಾರ ಬಿಸಿಲಿನ ರಕ್ಷಣೆಗೆ ಕಟ್ಟಿದ್ದ ಹಸಿರು ಪರದೆ ಅಡ್ಡಿಯಾಗಿದೆ. ಸಿಸಿಟಿವಿ ಯಲ್ಲಿ ಖದೀಮನ ಕೈಚಳಕ ಮಾತ್ರ ಸೆರೆಯಾಗಿದ್ದು ಪೊಲೀಸರಿಗೆ ಸವಾಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಪಟ್ಟಣದಲ್ಲಿ ಮನೆಕಳ್ಳತನವಾದಾಗ ಹಣ ಮತ್ತು ಆಭರಣಗಳನ್ನು ಎಲ್ಲಂದರಲ್ಲಿ ಅಸುರಕ್ಷಿತ ಜಾಗದಲ್ಲಿ ಇರಿಸದಂತೆ, ಬೈಕ್ ಕಾರ್ ನಲ್ಲಿಟ್ಟು ಓಡಾಡದಂತೆ ಪೊಲೀಸರು ಅಟೋ ಮೂಲಕ ಜಾಗೃತಿ ಮೂಡಿಸಿದರೂ ಈ ಘಟನೆ ಜನತೆಯ ಅಲಕ್ಷತನವನ್ನು ಸಾಬೀತು ಮಾಡಿದಂತಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
