Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ. ಪ್ರತಿಯೊಬ್ಬರೂ ಗಿಡಗಳನ್ನು ನೆಡಲು ಮುಂದಾಗದೇ ಹೋದರೆ ಮುಂದೊಂದು ದಿನ ದೊಡ್ಡ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಶಾಸಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.ಪಟ್ಟಣದ ಹುಡ್ಕೋದಲ್ಲಿರುವ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗ, ಪುರಸಭೆ ಮತ್ತು ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಾನವ ಅಧುನಿಕ ಯುಗದ ಹಿಂದೆ ಬಿದ್ದು ಪರಿಸರವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾನೆ. ತನ್ನ ಅನುಕೂಲಕ್ಕಾಗಿ ದೊಡ್ಡ ದೊಡ್ಡ ಮರಗಳನ್ನು ಕಡಿದು ಬಿಸಾಕುತಿದ್ದಾನೆ. ಇದರ ಪರಿಣಾಮಗಳಿಂದಾಗಿ ಮಳೆ ಇಲ್ಲದೆ ಬೆಳೆ ಬಾರದೆ ರೈತರು ಸಂಕಷ್ಟಕ್ಕೆ ಎದುರಾಗುತ್ತಿದ್ದಾರೆ. ಜನ ಜೀವನ ಸುಗಮವಾಗಿ ಸಾಗಬೇಕಾದರೆ ಪರಿಸರದ ಅವಶ್ಯಕತೆ ಸಾಕಷ್ಟಿದೆ ಎಂಬ ಬಗ್ಗೆ ಪ್ರಯೊಬ್ಬರೂ ಅರಿತುಕೊಂಡು ಅಲ್ಲಲ್ಲಿ ಗಿಡಗಳನ್ನು ನೆಡಲು ಮುಂದಾಗಬೇಕು ಎಂದರು.ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಿ.ಐ.ಬಿರಾದಾರ ಮಾತನಾಡಿ, ಜೀವ ವೈವಿಧ್ಯತೆ ಇದ್ದರೆ ಮಾತ್ರ ನಾವು ಉಳಿಯುತ್ತೇವೆ. ಹೆಚ್ಚು ಫಸಲು ಪಡೆಯುವ…
ಸಿಂದಗಿ: ಹಿಂದೂ ಮುಸ್ಲಿಂ ಬಾಂಧವರೆಲ್ಲರೂ ಒಟ್ಟಾಗಿ ಸೇರಿ ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಪಿಎಸ್‌ಐ ಭೀಮಪ್ಪ ರಬಕವಿ ಹೇಳಿದರು.ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಬುಧವಾರ ಸಾಯಂಕಾಲ ಬಕ್ರೀದ್ ಹಬ್ಬದ ಪ್ರಯುಕ್ತವಾಗಿ ಹಮ್ಮಿಕೊಂಡ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೆ. ಪ್ರತಿಯೊಬ್ಬರಿಗೂ ಕಾನೂನಿನ ಭಯ ಇರಬೇಕು. ಯಾವುದೇ ಸಮುದಾಯದ ಹಬ್ಬವಿರಲಿ ಎಲ್ಲರೂ ಸಹಬಾಳ್ವೆಯಿಂದ ಆಚರಣೆ ಮಾಡಬೇಕು. ಸಾಮಾಜಿಕ ಜಾಳತಾಣದಲ್ಲಿ ಅಶಾಂತಿ ಸೃಷ್ಠಿಸುವ ಯಾವುದೇ ರೀತಿಯ ಸಂದೇಶಗಳನ್ನು ಪೋಸ್ಟ್ ಮಾಡುವುದು ಇನ್ನೊರ್ವರಿಗೆ ನೋವುಂಟು ಮಾಡುವುದು ಅಪರಾಧವಾಗಿದೆ ಅದರ ಕುರಿತಾಗಿ ಹಿರಿಯರು ಯುವಕರಿಗೆ ತಿಳುವಳಿಕೆ ಹೇಳಬೇಕು. ಓಂದು ವೇಳೆ ಕಾನೂನು ಉಲ್ಲಂಘನೆ ಮಾಡಿದ್ದೆಯಾದರೆ ಅಂತಹವರ ವಿರುದ್ದ ನಿರ್ಧಾಕ್ಷಿಣ್ಯವಾಗಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಅಶಾಂತಿ ತರುವವರ ವಿರುದ್ಧ ಪೊಲೀಸರು ನಿಗಾ ವಹಿಸಿದ್ದಾರೆ. ಹಾಗಾಗಿ ಎಲ್ಲರೂ ಪೊಲೀಸ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಅಪರಾಧ ವಿಭಾಗ ಪಿಎಸ್‌ಐ ಅರವಿಂದ್ ಅಂಗಡಿ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸದಾ…
ಸಿಂದಗಿ: ಅತಿಯಾದ ಅನುಭೋಗ, ಒತ್ತಡ ಮತ್ತು ಜನಸಂಖ್ಯೆ ಬೆಳವಣಿಗೆ ಕಾರಣದಿಂದ ಜೈವಿಕ ಪರಿಸರ ಕುಸಿಯುತ್ತಿದೆ ಎಂದು ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹೇಳಿದರು.ತಾಲೂಕಿನ ಗಣಿಹಾರದ ಸರ್ಕಾರಿ ಶಾಲಾ ಆವರಣದಲ್ಲಿ ಬುಧುವಾರ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚಾರಣೆಯ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದರು.ಕೈಗಾರಿಕಾ ಪ್ರಕ್ರೀಯೆ ಸೇರಿದಂತೆ ಎಲ್ಲ ರೀತಿಯ ಮಾನವನ ಚಟುವಟಿಕೆಯಿಂದ ಪರಿಸರದ ಸಮತೋಲನ ಹಾಳಾಗುತ್ತಿದೆ. ಇದರಿಂದ ಪರಿಸರ ವಿನಾಶದ ಅಂಚಿಗೆ ಸೇರುತ್ತಿದೆ. ಪ್ರಜ್ಞಾವಂತರಾದ ನಾವೇಲ್ಲ ಪರಿಸರದ ವಿಘಟನೆಗೆ ಕಾರಣವಾಗುವ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಿ ಪರಿಸರದ ಬೆಳವಣಿಗೆಗೆ ನಾವೇಲ್ಲ ಮುಂದಾಗಬೇಕು ಎಂದರು.ಈ ವೇಳೆ ಗುಜರಾತನ ಬರೋಡಾದ ಕೆಪಿಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಭಾರತಿ ಸಾಲಿಮಠ ಮಾತನಾಡಿ, ದಶಕದಿಂದ ಇತ್ತಿಚಿಗೆ ಹುಟ್ಟಿಕೊಂಡಿರುವ ಪರಿಸರ ಸಂರಕ್ಷಣಾ ಸಂಘಟನೆಗಳು ಪರಿಸರದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿವೆ. ಪರಿಸರ ಉಳಿದರೆ ಮಾತ್ರ ಮಾನವನ ಬದುಕು ಹಸನವಾಗುತ್ತದೆ. ಪರಿಸರದ ಬಗ್ಗೆ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.ಸಿಂದಗಿ ವಲಯ ಅರಣ್ಯ ವಲಯಾಧಿಕಾರಿ ರಾಜೀವ ಬಿರಾದಾರ…
ಸಿಂದಗಿಯ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ | ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಸಿಂದಗಿ: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ಪರಿಸರ ಉಳಿದರೆ ಮಾತ್ರ ನಮಗೆ ಆರೋಗ್ಯಕರವಾದ ಜೀವನವನ್ನು ನಡೆಸಲು ಸಾಧ್ಯ ಎಂದು ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಹೇಳಿದರು.ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಕಲಾ,ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಸ್ಕೌಟ್ಸ್ ಗೈಡ್ಸ್ ಘಟಕಗಳ ಸಹಯೋಗದಲ್ಲಿ ಬುಧವಾರ ವಿಶ್ವ ಪರಿಸರ ದಿನದಂದು ಸಸಿ ನೆಟ್ಟು ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಿಂದಲೇ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿಯನ್ನು ವಹಿಸಬೇಕು. ನಶಿಸಿ ಹೋಗುತ್ತಿರುವ ನಮ್ಮ ಪರಿಸರವನ್ನು ಉಳಿಸಿ ಬೇಳೆಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಈ ಸಂಧರ್ಭದಲ್ಲಿ ಎನ್.ಎಸ್.ಎಸ್ ಘಟಕದ ಸಂಯೋಜಕ ಡಾ.ಶಾಂತುಲಾಲ ಚವ್ಹಾಣ ಮಾತನಾಡಿದರು.ಈ ವೇಳೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಸಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ಬಿ.ಕುಲಕರ್ಣಿ, ಉಪನ್ಯಾಸಕರಾದ ಬಿ.ಎಸ್.ಬಿರಾದಾರ, ಎಸ್.ಎ.ಪಾಟೀಲ, ಆರ್.ಬಿ.ಹೊಸಮನಿ, ಎಮ್.ಎನ್.ಅಜ್ಜಪ್ಪ, ಎಫ್.ಎ.ಹಾಲಪ್ಪನವರ, ಮುಕ್ತಾಯಕ್ಕ ಕತ್ತಿ, ಸಿದ್ದಲಿಂಗ ಕಿಣಗಿ, ಎ.ಬಿ.ಪಾಟೀಲ, ಎಸ್.ಎ.ಬಸರಕೋಡ,…
ಮುದ್ದೇಬಿಹಾಳದಲ್ಲಿ ಪರಿಸರ ದಿನಾಚರಣೆಗೆ ಗಿಡ ನೆಡುವ ಮೂಲಕ ಚಾಲನೆ ಮುದ್ದೇಬಿಹಾಳ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪ್ರಾಣಿಗಳೂ ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಪರಿಸರದ ಮೇಲೆ ಅವಲಂಬಿತವಾಗಿರುವದರಿಂದ ಪ್ರತಿಯೊಬ್ಬರೂ ಗಿಡಗಳನ್ನು ನೆಡುವ ಮೂಲಕ ಪರಸರವನ್ನು ರಕ್ಷಿಸಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅರವಿಂದ ಬಡಾವಣೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅರಣ್ಯ ಇಲಾಖೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಈ ನೆಲ ಮತ್ತು ಜಲ ಕಾಪಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯ. ಭೂಮಿಗೆ ಬೇಕಾಗುವಷ್ಟು ಗಿಡ ಮರಗಳಿಲ್ಲದೆ ಮಳೆಯ ಅಭಾವ ಉಂಟಾಗಿ ಬರಗಾಲಕ್ಕೆ ಸಿಕ್ಕು ಜನ ಜೀವನ ತತ್ತರಿಸಿ ಹೋಗುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಸಸಿಗಳನ್ನು ನೆಡುವ ಕಾರ್ಯವನ್ನು ಕಾನೂನು ಬದ್ಧ ಹೊಣೆಗಾರಿಕೆ ಅಂತಾ ಭಾವಿಸಿ ಸಸಿಗಳನ್ನು ನೆಡಲು ಮುಂದಾಗಬೇಕು ಎಂದರು.ಕಿರಿಯ ಶ್ರೇಣಿ ಸಹಾಯಕ…
ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಪರಿಸರ ದಿನ ಆಚರಣೆ ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದ ಶ್ರೀ ಬಸವೇಶ್ವರ ಅಮೃತ ಸರೋವರದ ಆವರಣದಲ್ಲಿ ಹಾಗೂ ಸರಕಾರಿ ಶಾಲೆ ಆವರಣದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕಿ ಶೋಭಕ್ಕ ಶಿಳೀನ ಅವರು ಮಾತನಾಡಿದರು.ನಮ್ಮ ತಿಕೋಟಾ ತಾಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿಗಳ ಮೂಲಕ ಒಟ್ಟು ೦೭ ಅಮೃತ ಸರೋವರಗಳನ್ನು ಸರ್ಕಾರದ ನಿಯಮಾನುಸಾರ ನಿರ್ಮಿಸಲಾಗಿದೆ. ಮಳೆಯ ನೀರನ್ನು ತಡೆಹಿಡಿದು ಇಂಗಿಸುವ ಮೂಲಕ ಅಂತರ್ಜಲ್ಲ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸರೋವರಗಳನ್ನು ನಿರ್ಮಾಣ ಮಾಡಲಾಗಿದೆ ಮುಂದಿನ ದಿನಮಾನದಲ್ಲಿ ಲಭ್ಯ ಅನುದಾನದಲ್ಲಿ ಸರೋವರಗಳ ಸುತ್ತಲೂ ಉದ್ಯಾನವನಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಇಂದು ಪರಿಸರ ದಿನಾಚರಣೆ ಪ್ರಯುಕ್ತ ಎಲ್ಲ ಅಮೃತ ಸರೋವರಗಳ ಆವರಣದಲ್ಲಿ ಸಸಿಗಳನ್ನು ನೇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಸೋಲಾಪುರ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು…
ಚಡಚಣ: ಸಮೀಪದ ನಿವರಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನಿವರಗಿ, ಇಂಗಳೆ ವಸ್ತಿ ಶಾಲೆ ಮತ್ತು ನಿವರಗಿ ಪರಿಸರ ಪ್ರೇಮಿಗಳಿಂದ ಶಾಲೆಯಲ್ಲಿ ಗಿಡ ನೆಡುವದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.ನಿವರಗಿಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಶಿವಾನಂದ ಶಿನಖೇಡ ಮಾತನಾಡಿ, ಜಾಗತಿಕ ತಾಪಮಾನ ಏರಿಕೆಯು ಒಂದು ದೊಡ್ಡ ಸವಾಲಾಗಿದ್ದು, ಆರೋಗ್ಯಕರ ಜೀವನ ನಡೆಸಲು ಮತ್ತು ಪ್ರಕೃತಿಯ ರಕ್ಷಣೆ ಮಾಡಲು ಹರಸಾಹಸ ಪಡಬೇಕಾಗಿದೆ. ಇವೆಲ್ಲ ಕಾರಣದಿಂದ ಜನರನ್ನು ಜಾಗೃತಗೊಳಿಸಲು ಜೂನ್ 5 ರಂದು ಗಿಡಗಳನ್ನು ನೆಡಸಿ, ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.ಟಿ.ಎನ್. ತಳವಾರ ಸಿ ಆರ್ ಪಿ ನಿವರಗಿ ಕ್ಲಸ್ಟರ್ ಮಾತನಾಡಿ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವುದು, ಪರಿಸರವನ್ನು ನಾಶ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವುದೇ ಪರಿಸರ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಶ್ರೀ ಚಂದ್ರಕಾಂತ ಹೂನ್ನೂರ, ಸದಸ್ಯರಾದ ಲಲೀತಾ ನಿಂಗಪ್ಪಾ ಇಂಗಳೆ, ಉಪಾಧ್ಯಕ್ಷ ತಮ್ಮಾರಾಯ ತೇಲಿ, ಇಂಗಳೆ ವಸ್ತಿ ಮುಖ್ಯ ಗುರು ಕೆ.ಜಿ.ಸಾವಳೆ, ಬಸವರಾಜ ನೀಲವಾಣಿ,…
ಚಡಚಣ: 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತ ಎಣಿಕೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಚಿತ್ರದುರ್ಗ ಕ್ಷೇತ್ರದಿಂದ ಗೋವಿಂದ ಕಾರಜೋಳ ಅವರು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಚಡಚಣ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯನ್ನು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಆಚರಿಸಿದರು.ಪಟ್ಟಣದ ಬಸವೇಶ್ವರ ವೃತ್ತ, ಬಜಾರ್ ರಸ್ತೆ ಹಾಗೂ ದೇವರ ದಾಸಿಮಯ್ಯ ವೃತ್ತ, ಹೀರೋ ಶೋ ರೂಮ್ ನ ಮುಂಭಾಗದಲ್ಲಿ ಸೇರಿ ಪ್ರಮುಖ ಬೀದಿಗಳಲ್ಲಿ ನೂರಾರು ಬೈಕ್ ರ್ಯಾಲಿ ನಡೆಸಿ, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹರ್ಷವನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸಚಿನ್ ಅವಟಿ, ಕಾರ್ಯಕರ್ತರಾದ ಗಣಪತಿ ಅವಟಿ, ಮಂಜುನಾಥ ಅವಟಿ, ಕಲ್ಲಪ್ಪ ಮೇತ್ರಿ, ಸುಭಾಸ ಮೇತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂಡಿ: ಜಾಗತೀಕರಣದ ನಂತರ ಭಾರದತ ಪರಿಸ್ಥಿತಿ ಬದಲಾಗಿದ್ದು, ಅಭಿವೃದ್ದಿ ಹೆಸರಿನಲ್ಲಿ ಮಣ್ಣು ಪರಿಸರ ಹಾಳಾಗುತ್ತದೆ ಎಂದು ಬೆಂಗಳೂರಿನ ಡಿಸಿಪಿ ಸಿದ್ದರಾಜು ಹೇಳಿದರು.ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಕೃಷಿ,ತೊಟಗಾರಿಕೆ, ಪಶು ಸೇರಿದಂತೆ ಎಲ್ಲ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಮೊದಲಿನ ಪರಿಸ್ಥಿತಿ ಈಗ ಇಲ್ಲ. ಅರಣ್ಯವು ಕಡಿಮೆ ಯಾಗುತ್ತಿದ್ದು, ನೀರಿನ ಸೆಲೆ ಕಡಿಮೆ ಯಾಗುತ್ತಿದೆ. ಸಾವಯುವ ಕೃಷಿ ಪದ್ದತಿ ಅಳವಡಿಸಿ ಗೋ ಗ್ರೀನ್, ಸೆವ್ ಗ್ರೀನ್, ಪ್ಲಾಸ್ಟಿಕ ಮುಕ್ತ ಭಾರತ ಮಾಡಿ ನಿಸರ್ಗ ನಿರ್ಮಿತ ಕೊನೆಯತನಕದ ಪರಿಸರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಪರಿಸರದ ಜಾಗೃತಿ ಮೂಡಿಸಿ ಮಳೆ ನೀರನ್ನು ಹಿಡಿದು ಬಳಸಿಕೊಳ್ಳುವ ಕ್ರಮಗಳಿಗೆ ಆಧ್ಯತೆ ನೀಡಬೇಕಾಗಿದೆ ಎಂದರು.ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಭೂಮಿ ಮತ್ತು ಪರಿಸಲು ಉಳಿಸಲು ಜನಾಂದೋಲನ ರೂಪದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಆಧುನಿಕ ಕೃಷಿ ಪದ್ದತಿಯಿಂದ ನಿರಂತರವಾಗಿ ಅರಣ್ಯಗಳ…
ಕಲಕೇರಿಯ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಲಕೇರಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪರಿಸರದ ರಕ್ಷಣೆಯಾದಾಗ ಮಾತ್ರ ಜೀವ ಸಂಕುಲದ ರಕ್ಷಣೆಯಾಗುತ್ತದೆ ಎಂಬುದನ್ನು ನಾವು ಅರಿತು ನಡೆಯಬೇಕು. ಅಂದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಯುತ ಮತ್ತು ಸುಂದರ ಪರಿಸರವನ್ನು ಬಿಟ್ಟು ಹೋಗಲು ಸಾಧ್ಯ ಎಂದು ಆದರ್ಶ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಮ್.ಸಜ್ಜನ ಅವರು ಹೇಳಿದರು.ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆದರ್ಶ ಪದವಿ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿದ ನಂತರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾವು ಅಭಿವೃದ್ಧಿಯ ನೆಪದಲ್ಲಿ ಗಿಡಮರಗಳನ್ನು ಕಡಿದು ಕಾಂಕ್ರೀಟ್ ಪರಿಸರವನ್ನು ನಿರ್ಮಾಣ ಮಾಡುತ್ತಿದ್ದು, ಇದರಿಂದ ಕಾಲಕಾಲಕ್ಕೆ ಮಳೆಯಾಗದೇ ವಾತಾವರಣದಲ್ಲಿ ತಾಪಮಾನ ಹೆಚ್ಚಾಗಿ ಭೂಮಿಯಲ್ಲಿ ಕಾಲಮಾನಗಳ ಬದಲಾವಣೆಯಾಗುವ ಮೂಲಕ ಜೀವಸಂಕುಲಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇದರಿಂದ ಜನಜೀವನ ದುಸ್ತರವಾಗಿ ವಿನಾಶದ ಅಂಚಿಗೆ ತಲುಪುವ ಸ್ಥಿತಿ ಉಂಟಾಗಿದ್ದು, ಜೀವ ಸಂಕುಲದ ಉಳಿವಿಗಾಗಿ ಮತ್ತು ಆರೋಗ್ಯ್ತ, ಆಯಸ್ಸು…
