ಸಿಂದಗಿ: ಅತಿಯಾದ ಅನುಭೋಗ, ಒತ್ತಡ ಮತ್ತು ಜನಸಂಖ್ಯೆ ಬೆಳವಣಿಗೆ ಕಾರಣದಿಂದ ಜೈವಿಕ ಪರಿಸರ ಕುಸಿಯುತ್ತಿದೆ ಎಂದು ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹೇಳಿದರು.
ತಾಲೂಕಿನ ಗಣಿಹಾರದ ಸರ್ಕಾರಿ ಶಾಲಾ ಆವರಣದಲ್ಲಿ ಬುಧುವಾರ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚಾರಣೆಯ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದರು.
ಕೈಗಾರಿಕಾ ಪ್ರಕ್ರೀಯೆ ಸೇರಿದಂತೆ ಎಲ್ಲ ರೀತಿಯ ಮಾನವನ ಚಟುವಟಿಕೆಯಿಂದ ಪರಿಸರದ ಸಮತೋಲನ ಹಾಳಾಗುತ್ತಿದೆ. ಇದರಿಂದ ಪರಿಸರ ವಿನಾಶದ ಅಂಚಿಗೆ ಸೇರುತ್ತಿದೆ. ಪ್ರಜ್ಞಾವಂತರಾದ ನಾವೇಲ್ಲ ಪರಿಸರದ ವಿಘಟನೆಗೆ ಕಾರಣವಾಗುವ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಿ ಪರಿಸರದ ಬೆಳವಣಿಗೆಗೆ ನಾವೇಲ್ಲ ಮುಂದಾಗಬೇಕು ಎಂದರು.
ಈ ವೇಳೆ ಗುಜರಾತನ ಬರೋಡಾದ ಕೆಪಿಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಭಾರತಿ ಸಾಲಿಮಠ ಮಾತನಾಡಿ, ದಶಕದಿಂದ ಇತ್ತಿಚಿಗೆ ಹುಟ್ಟಿಕೊಂಡಿರುವ ಪರಿಸರ ಸಂರಕ್ಷಣಾ ಸಂಘಟನೆಗಳು ಪರಿಸರದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿವೆ. ಪರಿಸರ ಉಳಿದರೆ ಮಾತ್ರ ಮಾನವನ ಬದುಕು ಹಸನವಾಗುತ್ತದೆ. ಪರಿಸರದ ಬಗ್ಗೆ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ಸಿಂದಗಿ ವಲಯ ಅರಣ್ಯ ವಲಯಾಧಿಕಾರಿ ರಾಜೀವ ಬಿರಾದಾರ ಮಾತನಾಡಿ, ಪರಿಸರ ಮಾಲಿನ್ಯವನ್ನು ಪ್ರಸ್ತುತ ದಿನಮಾನ ಎದುರಿಸುತ್ತಿರುವುದು ಅತ್ಯಂತ ಕಷ್ಟಕರವಾಗಿದೆ. ಕೈಗಾರಿಕರಣ ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿ ಪರಿಸರದ ಸಂಪನ್ಮೂಲಗಳ ಮೇಲೆ ಹಾನಿಯುಂಟು ಮಾಡುತ್ತಿವೆ. ಅದರ ಮೇಲಿನ ಪರಿಣಾಮವನ್ನು ತಗ್ಗಿಸಲು ಸಕಾರಾತ್ಮಕ ಕ್ರಮಗಳನ್ನು ತಗೆದುಕೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಯ ಸಿ.ಎಮ್.ಮೇತ್ರಿ, ಶಕುಂತಲಾ ಹಿರೇಮಠ, ಎಸ್‌ಡಿಎಮ್‌ಸಿ ಅಧ್ಯಕ್ಷ ಸುಧಾ ಪಾಟೀಲ, ಸಿಆರ್‌ಪಿ ಪಿ.ಆರ್.ಓಲೇಕಾರ, ಅರಣ್ಯ ಇಲಾಖೆಯ ಮಿಟೇಸಾಬ ಮುಲ್ಲಾ, ವಿರೇಶ, ಶಿವಾನಂದ ಮಂಡಗೋಡ, ರಮೇಶ ಕೋರಿ, ಶರಣು ಆನಗೊಂಡ, ದಾದಾಪೀರ ಅಂಗಡಿ, ಸಿದ್ದು ಕ್ಷತ್ರಿ, ಸಂಗಣ್ಣ ಕುಂಬಾರ, ಗುರುನಾಥ ಸುಣಗಾರ, ಶಿವು ಹೆಡಗಿ, ಶಾಲಾ ಶಿಕ್ಷಕರಾದ ಎ.ಎಮ್.ಅರಬ್, ಎ.ಎಚ್.ದೇವರಮನಿ, ಆರ್.ಜಿ.ಬಿರಾದಾರ, ಎಸ್.ಎಸ್.ಬಿರಾದಾರ, ಡಿ.ಎಮ್.ಮಾವೂರ, ವ್ಹಿ.ಎ.ಅಗಸರ, ಸಿ.ಎಸ್.ಬಮ್ಮಣ್ಣಿ, ಎಸ್.ಬಿ.ಬಿರಾದಾರ, ಎಮ್.ಡಿ.ಕೆರ್ಕಿ, ಎಮ್.ಎಲ್.ಟೇಲರ್, ಎಸ್.ಜಿ.ನಾಟಿಕಾರ, ಆರ್.ಸಿ.ಗಬ್ಬೂರ, ಪುಷ್ಪಾ ಸಂಕನಾಳ, ಸುಷ್ಮಾ,ಆರ್.ಎಸ್.ಪಟ್ಟಣಶೆಟ್ಟಿ, ಪ್ರಕಾಶ, ಕೆ.ಎಸ್.ತೊರವಿ, ಪಿ.ಎಸ್.ಅಗ್ನಿ, ಸಾಹೇಬ ಪಟೇಲ, ಎಸ್.ಸಿ.ಬಿರಾದಾರ ಸೇರಿದಂತೆ ಇತರರು ಇದ್ದರು.
ಶಿಕ್ಷಕ ಸಿದ್ದಲಿಂಗ ಚೌಧರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್.ಬಿರಾದಾರ ನಿರೂಪಿಸಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

