ಇಂಡಿ: ಜಾಗತೀಕರಣದ ನಂತರ ಭಾರದತ ಪರಿಸ್ಥಿತಿ ಬದಲಾಗಿದ್ದು, ಅಭಿವೃದ್ದಿ ಹೆಸರಿನಲ್ಲಿ ಮಣ್ಣು ಪರಿಸರ ಹಾಳಾಗುತ್ತದೆ ಎಂದು ಬೆಂಗಳೂರಿನ ಡಿಸಿಪಿ ಸಿದ್ದರಾಜು ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಕೃಷಿ,ತೊಟಗಾರಿಕೆ, ಪಶು ಸೇರಿದಂತೆ ಎಲ್ಲ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮೊದಲಿನ ಪರಿಸ್ಥಿತಿ ಈಗ ಇಲ್ಲ. ಅರಣ್ಯವು ಕಡಿಮೆ ಯಾಗುತ್ತಿದ್ದು, ನೀರಿನ ಸೆಲೆ ಕಡಿಮೆ ಯಾಗುತ್ತಿದೆ. ಸಾವಯುವ ಕೃಷಿ ಪದ್ದತಿ ಅಳವಡಿಸಿ ಗೋ ಗ್ರೀನ್, ಸೆವ್ ಗ್ರೀನ್, ಪ್ಲಾಸ್ಟಿಕ ಮುಕ್ತ ಭಾರತ ಮಾಡಿ ನಿಸರ್ಗ ನಿರ್ಮಿತ ಕೊನೆಯತನಕದ ಪರಿಸರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಪರಿಸರದ ಜಾಗೃತಿ ಮೂಡಿಸಿ ಮಳೆ ನೀರನ್ನು ಹಿಡಿದು ಬಳಸಿಕೊಳ್ಳುವ ಕ್ರಮಗಳಿಗೆ ಆಧ್ಯತೆ ನೀಡಬೇಕಾಗಿದೆ ಎಂದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಭೂಮಿ ಮತ್ತು ಪರಿಸಲು ಉಳಿಸಲು ಜನಾಂದೋಲನ ರೂಪದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಆಧುನಿಕ ಕೃಷಿ ಪದ್ದತಿಯಿಂದ ನಿರಂತರವಾಗಿ ಅರಣ್ಯಗಳ ಒತ್ತುವರಿ ನಡೆಯುತ್ತಿದೆ. ಅಭಿವೃದ್ದಿ ಹೆಸರಿನಲ್ಲಿ ಪಟ್ಟಣಗಳು ವಿಸ್ತಾರಗೊಳ್ಳುತ್ತಿವೆ.ವಾಹನ ದಟ್ಟನೆ ಹೆಚ್ಚಾಗಿದೆ. ಅರಣ್ಯ ಉತ್ಸನ್ನಗಳ ಮಿತಿ ಮೀರಿದ ಬಳಕೆಯಿಂದ ಅರಣ್ಯಗಳು ನಾಶವಾಗುತ್ತಿವೆ. ನದಿ, ಕಣಿವೆ ವಿವಿಧೋದ್ದೇಶ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಾಗುವ ಅವಿಷ್ಕಾರ, ಸಂಶೋಧನೆಯು ಮಾಲಿನ್ಯ ಹೆಚ್ಚಾಗಲು ಕಾರಣವಾಗಿದೆ ಎಂದರು.
ಕೃಷಿ ವಿವಿಯ ವಿಸ್ತರಣಾ ಅಧಿಕಾರಿ ಆರ್.ಬಿ.ಬೆಳ್ಳಿ ಮಾತನಾಡಿ, ಹುಟ್ಟುವ ಪ್ರತಿ ಮಗುವು ಸಸಿಯನ್ನು ನೆಟ್ಟು ಅದರ ಪಾಲನೆ ಪೋಷಣೆ ಮಾಡಬೇಕಾಗಿದೆ. ಜನರಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಶಂಕರಮೂರ್ತಿ ಮಾತನಾಡಿ, ವಿಜಯಪುರ ಜಿಲ್ಲೆ ಕೇವಲ ಒಂದು ಪ್ರತಿಶತ ಮಾತ್ರ ಅರಣ್ಯ ಪ್ರದೇಶವಿದ್ದು ಅದನ್ನು ಕನಿಷ್ಠ ೩೩ ಪ್ರತಿಶತ ಮಾಡುವ ಗುರಿ ಕೃಷಿ ವಿಜ್ಞಾನ ಕೇಂದ್ರ ಹೊಂದಿದ್ದು ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಅರಣ್ಯ ಇಲಾಖೆಯ ರಾಂಜೇಂದ್ರ ಹುನ್ನೂರ, ಕೃಷಿ ವಿಜ್ಞಾನಿ ಡಾ|| ಹೀನಾ, ಬಸವರಾಜ ಗೊರನಾಳ ಮಾತನಾಡಿದರು.
ವೇದಿಕೆಯ ಮೇಲೆ ತಹಸೀಲ್ದಾರ ಮಂಜುಳಾ ನಾಯಕ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಂಜುನಾಥ ಧುಲೆ, ಪ್ರಾಧೇಶಿಕ ಅನಂತಕುಮಾರ ಇದ್ದರು.
ಸಮಾರಂಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಸಿಪಿಐ ರತನಕುಮಾರ ಜಿರಗಿಹಾಳ, ಟಿಎಚ್‌ಓ ಅರ್ಚನಾ ಕುಲಕರ್ಣಿ, ಇಒ ನೀಲಗಂಗಾ ಬಬಲಾದ, ವಿಜ್ಞಾನಿ ಡಾ|| ಪ್ರಕಾಶ, ಪ್ರಗತಿಪರ ರೈತ ಎಸ್.ಟಿ.ಪಾಟೀಲ, ಎಲ್.ಜಿ.ನಾದ, ಡಿ.ಎ.ಮುಜಗೊಂಡ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

