ಚಡಚಣ: ಸಮೀಪದ ನಿವರಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನಿವರಗಿ, ಇಂಗಳೆ ವಸ್ತಿ ಶಾಲೆ ಮತ್ತು ನಿವರಗಿ ಪರಿಸರ ಪ್ರೇಮಿಗಳಿಂದ ಶಾಲೆಯಲ್ಲಿ ಗಿಡ ನೆಡುವದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ನಿವರಗಿಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಶಿವಾನಂದ ಶಿನಖೇಡ ಮಾತನಾಡಿ, ಜಾಗತಿಕ ತಾಪಮಾನ ಏರಿಕೆಯು ಒಂದು ದೊಡ್ಡ ಸವಾಲಾಗಿದ್ದು, ಆರೋಗ್ಯಕರ ಜೀವನ ನಡೆಸಲು ಮತ್ತು ಪ್ರಕೃತಿಯ ರಕ್ಷಣೆ ಮಾಡಲು ಹರಸಾಹಸ ಪಡಬೇಕಾಗಿದೆ. ಇವೆಲ್ಲ ಕಾರಣದಿಂದ ಜನರನ್ನು ಜಾಗೃತಗೊಳಿಸಲು ಜೂನ್ 5 ರಂದು ಗಿಡಗಳನ್ನು ನೆಡಸಿ, ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಟಿ.ಎನ್. ತಳವಾರ ಸಿ ಆರ್ ಪಿ ನಿವರಗಿ ಕ್ಲಸ್ಟರ್ ಮಾತನಾಡಿ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವುದು, ಪರಿಸರವನ್ನು ನಾಶ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವುದೇ ಪರಿಸರ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಶ್ರೀ ಚಂದ್ರಕಾಂತ ಹೂನ್ನೂರ, ಸದಸ್ಯರಾದ ಲಲೀತಾ ನಿಂಗಪ್ಪಾ ಇಂಗಳೆ, ಉಪಾಧ್ಯಕ್ಷ ತಮ್ಮಾರಾಯ ತೇಲಿ, ಇಂಗಳೆ ವಸ್ತಿ ಮುಖ್ಯ ಗುರು ಕೆ.ಜಿ.ಸಾವಳೆ, ಬಸವರಾಜ ನೀಲವಾಣಿ, ರವಿ ಸಾಬಣಿ, ಆಕಾಶ ಬಡಿಗೇರ, ಶುಭಂ ಮಠಪತಿ, ವರುಣ ಹೂಗಾರ, ನಿವರಗಿಯ ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಹಾಗೂ ನಿವರಗಿಯ ಗ್ರಾಮಸ್ಥರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

