ಸಿಂದಗಿ: ಹಿಂದೂ ಮುಸ್ಲಿಂ ಬಾಂಧವರೆಲ್ಲರೂ ಒಟ್ಟಾಗಿ ಸೇರಿ ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಪಿಎಸ್‌ಐ ಭೀಮಪ್ಪ ರಬಕವಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಬುಧವಾರ ಸಾಯಂಕಾಲ ಬಕ್ರೀದ್ ಹಬ್ಬದ ಪ್ರಯುಕ್ತವಾಗಿ ಹಮ್ಮಿಕೊಂಡ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೆ. ಪ್ರತಿಯೊಬ್ಬರಿಗೂ ಕಾನೂನಿನ ಭಯ ಇರಬೇಕು. ಯಾವುದೇ ಸಮುದಾಯದ ಹಬ್ಬವಿರಲಿ ಎಲ್ಲರೂ ಸಹಬಾಳ್ವೆಯಿಂದ ಆಚರಣೆ ಮಾಡಬೇಕು. ಸಾಮಾಜಿಕ ಜಾಳತಾಣದಲ್ಲಿ ಅಶಾಂತಿ ಸೃಷ್ಠಿಸುವ ಯಾವುದೇ ರೀತಿಯ ಸಂದೇಶಗಳನ್ನು ಪೋಸ್ಟ್ ಮಾಡುವುದು ಇನ್ನೊರ್ವರಿಗೆ ನೋವುಂಟು ಮಾಡುವುದು ಅಪರಾಧವಾಗಿದೆ ಅದರ ಕುರಿತಾಗಿ ಹಿರಿಯರು ಯುವಕರಿಗೆ ತಿಳುವಳಿಕೆ ಹೇಳಬೇಕು. ಓಂದು ವೇಳೆ ಕಾನೂನು ಉಲ್ಲಂಘನೆ ಮಾಡಿದ್ದೆಯಾದರೆ ಅಂತಹವರ ವಿರುದ್ದ ನಿರ್ಧಾಕ್ಷಿಣ್ಯವಾಗಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಅಶಾಂತಿ ತರುವವರ ವಿರುದ್ಧ ಪೊಲೀಸರು ನಿಗಾ ವಹಿಸಿದ್ದಾರೆ. ಹಾಗಾಗಿ ಎಲ್ಲರೂ ಪೊಲೀಸ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಪರಾಧ ವಿಭಾಗ ಪಿಎಸ್‌ಐ ಅರವಿಂದ್ ಅಂಗಡಿ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಶಾಂತತೆಯಿಂದ ಹಬ್ಬ ಆಚರಿಸಬೇಕು ಎಂದು ಹೇಳಿದರು.
ಈ ವೇಳೆ ಅಬ್ದುಲರಜಾಕ್ ಮುಜಾವರ, ರಾಜಣ್ಣ ನಾರಾಯಣಕರ, ಅಶೋಕ ಸುಲ್ಪಿ ಮಾತನಾಡಿದರು.
ಸಿಬ್ಬಂದಿ ಪರಸುರಾಮ ಹಂಡರಗಲ್ ಜಕ್ಕಪ್ಪ ಕೋರೆ, ಮುಸ್ಲಿಂ ಸಮುದಾಯದ ಮುಖಂಡರಾದ ಎಂ.ಎ.ಖತೀಬ ಬಸೀರಸಾಬ್ ಮರ್ತುರ್, ಮಹ್ಮದ್ ಆಳಂದ್, ಇರ್ಫಾನ್ ಬಾಗವಾನ, ಅಬ್ದುಲ್‌ರಜಾಕ್ ಮುಜಾವಾರ, ಲಕ್ಕಪ್ಪ ಐ.ಬಿ. ರುಕ್ಕು ಮಲಘಾಣ, ರಜತ್ ತಾಂಬೆ, ಖಾಜು ಬಂಕಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಿಸಿ :ಪಿಎಸೈ ರಬಕವಿ
Related Posts
Add A Comment

