Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಫಸಲ ಭೀಮಾ ಯೋಜನೆಯಡಿ ನಷ್ಟಗೊಂಡ ರೈತರಿಗೆ ವಿಮಾ ಪರಿಹಾರಕ್ಕೆ ರೈತಸಂಘ ಆಗ್ರಹ ವಿಜಯಪುರ: ಜಿಲ್ಲೆಯಲ್ಲಿ ಅನೇಕ ರೈತರು ೨೦೨೩-೨೪ ನೇ ಸಾಲಿನ ಮುಂಗಾರು ಹಂಗಾಮಿನ ಫಸಲ ಭೀಮಾ ಯೋಜನೆಯನ್ನು ತುಂಬಿದ್ದು, ಅಂತವರಲ್ಲಿ ಅನೇಕ ರೈತರು ಬರಗಾಲದಿಂದ ಮಳೆ ಬಾರದೇ ನಷ್ಟ ಅನುಭವಿಸಿದ್ದಾರೆ, ವಿಮೆ ಹಣ ಬಾರದೇ ಚಿಂತೆಗಿಡಾದ ರೈತರು ಅಧಿಕಾರಿಗಳಿಗೆ ಕೇಳಿದರೆ ಮುಂಗಡ ವಿಮೆ ಹಣ ನೀಡಿದ್ದೇವೆ, ಉಳಿದ ಹಣ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ಕೂಡಲೇ ವಿಮೆ ತುಂಬಿದ ಎಲ್ಲ ರೈತರಿಗೂ ಪರಿಹಾರ ನೀಡಬೇಕೆಂದು ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು.ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡುತ್ತಾ, ಈ ವರ್ಷ ರಾಜ್ಯ ಸರಕಾರವೇ ಜಿಲ್ಲೆಯ ಎಲ್ಲಾ ೧೩ ತಾಲೂಕುಗಳು ಸಂಪೂರ್ಣ ಬರ ಎಂದು ಘೋಷಣೆ ಮಾಡಿರುತ್ತದೆ, ಆದರೆ ಫಸಲ ಭೀಮಾ ಯೋಜನೆ ಅಡಿಯಲ್ಲಿ ನಷ್ಟ ಅನುಭವಿಸಿಲ್ಲ ಎಂದು, ನಿಮಗೆ ಪರಿಹಾರ ಬರುವುದಿಲ್ಲ ಎಂದು ಅಧಿಕಾರಿಗಳು…
ವಿಜಯಪುರ: ನಿಜನುಡಿಗಳಿಂದ ಕಟುವಾಗಿ ಟೀಕಿಸಿ ಅಂಬಿಗೇರ ಚೌಡಯ್ಯ ಸಮಾಜವನ್ನು ತಿದ್ದುವರು.ನೇರ ನಿಭಿ೯ತ ನುಡಿಗಳಿಂದ ವಚನಗಳನ್ನು ರಚಿಸಿ ಅರಿವೇ ಗುರು ಎಂದು ಜಗತ್ತಿಗೆ ಸಾರಿದ ಅಂಬಿಗೇರ ಚೌಡಯ್ಯ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ, ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ದತ್ತಿ ದಿವಂಗತ ಮಲ್ಲಪ್ಪ ಚಂದಪ್ಪ ಯಲಗೋಡ. ದತ್ತಿ ದಾನಿಗಳು ಡಾ: ರಾಮಕೃಷ್ಣ ಮಲ್ಲಪ್ಪ ಯಲಗೋಡಹಾಗು ದಿ ನೀಲಪ್ಪ ಬಸಪ್ಪ ಸೊಡ್ಡಿ ದತ್ತಿ. ದತ್ತಿ ದಾನಿಗಳು ರೇವಣಸಿದ್ದಪ್ಪ ನೀಲಪ್ಪ ಸೊಡ್ಡಿ ಇವರ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಂಬಿಗ ಮಾತ್ರವಲ್ಲ ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲ್ಯ ಉಳ್ಳವ ಅಂಬಿಗೇರ ಚೌಡಯ್ಯ ಎಂದರುಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ ವಿ ಎಮ್ ಬಾಗಾಯತ ಮಾತನಾಡಿ,ಜಗತ್ತಿನಲ್ಲಿರುವ ಎಲ್ಲ ಸಮುದಾಯದ ಕಾಯಕಗಳು ಪವಿತ್ರವೆಂದು ಸಾರಿ ಸಮಾಜದ ಅಂಕು ಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದರು.ಲಿಂಗ ಭೇದವಿಲ್ಲದೆ ಬದುಕಬೇಕು.…
ಬಸವನಬಾಗೇವಾಡಿ: ತಾಲೂಕಿನ ಗುಳಬಾಳ ಗ್ರಾಮದಲ್ಲಿ ಜೂನ್ ೮ ರಂದು ಮಹಾಂತೇಶ ಚಿದಾನಂದ ಬಿರಾದಾರ(೨೩) ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಆರೋಪಿತರನ್ನು ಬಸವನಬಾಗೇವಾಡಿ ಪೊಲೀಸ್ರು ಮಂಗಳವಾರ ಬಂಧಿಸಿದ್ದಾರೆ. ಕೊಲೆ ನಡೆದು ಎರಡು-ಮೂರು ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡು ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ, ಬಸವನಬಾಗೇವಾಡಿ ಪೊಲೀಸ್ ಉಪಾಧೀಕ್ಷ ಬಲ್ಲಪ್ಪ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ಬಸವನಬಾಗೇವಾಡಿ ಪಿಐ ವಿಜಯ ಮುರಗುಂಡಿ ಅವರ ತನಿಖಾ ತಂಡ ಕೊಲೆ ಮಾಡಿದ ಆರೋಪಿತರಾದ ಗುಳಬಾಳ ಗ್ರಾಮದ ವಿಶ್ವರಾಜ ಶಿವಶರಣಪ್ಪ ಮದ್ದರಕಿ(೩೪), ಶೇಖರಪ್ಪ ಭೀಮರಾಯ ನೆಲ್ಲಗಿ (೩೭) ಅವರನ್ನು ಬಂಧಿಸಿದೆ. ಅನೈತಿಕ ಸಂಬಂಧ ಕಾರಣದಿಂದಾಗಿ ಕೊಲೆ ಮಾಡಲಾಗಿದೆ.ತನಿಖಾ ತಂಡದಲ್ಲಿ ಪಿಐ ವಿಜಯ ಮುರಗುಂಡಿ, ಪಿಎಸ್ಐ ರವಿ ಪವಾರ, ಸಿಬ್ಬಂದಿಗಳಾದ ಎಂ.ಐ.ತಳವಾರ, ಎ.ಸಿ.ದಿಂಡಿ, ಎನ್.ಎನ್.ಗ್ಯಾಂಡರ್, ಎ.ಎನ್.ಬಿರಾದಾರ, ಬಿ.ಎ.ಯತ್ನಾಳ, ರಾಜು ಹರನಾಳ, ಪರಶುರಾಮ ಜಾಲವಾದಿ, ರಾಜು ಜಾಧವ, ಡಿ.ಎಲ್.ಪೂಜಾರಿ, ಆರ್.ಎಂ.ಕಳಸಗೊಂಡ, ವಿಜಯಕುಮಾರ ದುದಗಿ, ಬಿ.ಬಿ.ಶೇಬಗೊಂಡ, ಬಿ.ಬಿ.ಹೊಕ್ರಾಣಿ…
ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳವರ ೯೦ ನೇ ಜಾತ್ರಾಮಹೋತ್ಸವದಂಗವಾಗಿ ಜೂ. ೧೩ ಹಾಗೂ ೧೪ ರಂದು ಎರಡು ದಿನಗಳ ಕಾಲ ಇಂಗಳೇಶ್ವರ ಉತ್ಸವ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಜೂ.೧೩ ರಂದು ಸಂಜೆ ೪ ಗಂಟೆಗೆ ಬಸವೇಶ್ವರ ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶಿವಯೋಗಿಗಳವರ ಅಭಿನಂದನಾ ಗ್ರಂಥ ನಿರಂಜನ ಜ್ಯೋತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ನಿಡಸೋಸಿ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಸಿಂದಗಿಯ ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ವಿಜಯಪುರದ ಬಸವಲಿಂಗ ಸ್ವಾಮೀಜಿ, ಇಲಕಲ್ಲದ ಗುರುಮಹಾಂತ ಸ್ವಾಮೀಜಿ, ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸುವರು. ಈ ಕಾರ್ಯಕ್ರಮಕ್ಕೆ ಸಚಿವ ಎಂ.ಬಿ.ಪಾಟೀಲ, ಸೋಪು ಮತ್ತು ಡಿಟರ್ಜಂಟ ಲಿಮಿಟೆಡ್ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ, ಮಾಜಿ ಸಚಿವ ಎಸ್.ಆರ್.ಪಾಟೀಲ, ವನ್ಯಜೀವಿ ಸಂರಕ್ಷಕ ಡಾ.ಎಂ.ಆರ್.ದೇಸಾಯಿ, ಮಾಜಿ ಶಾಸಕ ಎ.ಪಾಪರೆಡ್ಡಿ, ಶಸಾಕ ಜಿ.ಟಿ.ಪಾಟೀಲ,ಅದೃಶಪ್ಪ ವಾಸಣ್ಣ ದೇಸಾಯಿ, ಡಾ.ಸೋಮನಾಥ ಯಾಳವಾರ, ಈರಣ್ಣ ಬೆಕಿನಾಳ, ವ್ಹಿ.ಡಿ.ಐಹೊಳ್ಳಿ, ಅಶೋಕಗೌಡ ಪಾಟೀಲ, ಜಂಬುನಾಥ ಕಂಚ್ಯಾಣಿ, ಸಿದ್ದಬಸವ…
ದೇವರಹಿಪ್ಪರಗಿ: ಇಂಗಳಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆದು ಮಾರಾಟಗಾರರ ಮೇಲೆ ಕಾನೂನು ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳೆಯರು ಹಾಗೂ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ)ಯ ಕಾರ್ಯಕರ್ತರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಆಗಮಿಸಿದ ಇಂಗಳಗಿ ಗ್ರಾಮದ ಮಹಿಳೆಯರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಬೆಳಗಾವಿ ವಿಭಾಗೀಯ ಸಂಚಾಲಕ ರಾವುತ ತಳಕೇರಿ ಮಾತನಾಡಿ, ಅಕ್ರಮ ಮದ್ಯ ಸುಮಾರು ವರ್ಷಗಳಿಂದ ಗ್ರಾಮದ ಮನೆ, ಕಿರಾಣಿ ಅಂಗಡಿ, ೧೦ರಿಂದ ೧೨ ಪಾನ್ ಶಾಪ್‌ಗಳಲ್ಲಿ ನಿರ್ಭಯವಾಗಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಿಂದಗಿ ತಾಲ್ಲೂಕು ಅಬಕಾರಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮಾರಾಟಗಾರರು ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಪ್ರತಿತಿಂಗಳ ಹಣ ನೀಡುತ್ತೇವೆ ಯಾರು ತಡೆಯುತ್ತಾರೆ ನೋಡೋಣ ಎಂದು ಸವಾಲು ಹಾಕುತ್ತಾರೆ. ಸಾಕಷ್ಟು ಬಾರಿ ಮನವಿ…
ದೇವರಹಿಪ್ಪರಗಿ: ಪಟ್ಟಣದ ಸಂತೆಯನ್ನು ಈಗ ಜರುಗುವ ಪ್ರದೇಶದಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಜರುಗಿದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮೇನ್ ಬಜಾರ್ ವ್ಯಾಪಾರಸ್ಥರು ಆಗಮಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಪ್ರಕಾಶ ಸಿಂದಗಿ ಮಾತನಾಡಿ, ಪಟ್ಟಣದ ಮೇನ್ ಬಜಾರ ವಾಹನಗಳ ದಟ್ಟಣೆಯಿಂದ ತುಂಬಿದೆ. ಸೋಮವಾರ ಎಲ್ಲೇಂದರಲ್ಲಿ ವಾಹನಗಳ ನಿಲುಗಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಸಂತೆಯನ್ನು ಬೇರೆ ಪ್ರದೇಶಕ್ಕೆ ವರ್ಗಾಯಿಸಿ ಸುಗಮ ಸಂತೆ ಜರುಗಲು ಅವಕಾಶ ಮಾಡಿಕೊಡಬೇಕು ಎಂಬ ಕಾರಣದಿಂದ ಈ ವಿಷಯ ಚರ್ಚಿಸಲಾಗುತ್ತಿದೆ ಎಂದರು.ವ್ಯಾಪಾರಸ್ಥರ ಪರವಾಗಿ ಕಾಶೀನಾಥ ಕೋರಿ, ಅಜೀಜ್ ಯಲಗಾರ ಮಾತನಾಡಿ, ಸುಮಾರು ೭೦-೮೦ ವರ್ಷಗಳಿಂದ ಇಲ್ಲಿ ಸಂತೆ ಜರುಗುತ್ತಿದೆ. ಇದು ಪಟ್ಟಣದ ಕೇಂದ್ರಸ್ಥಳ. ಇದರಿಂದ ಮಹಿಳೆಯರಿಗೂ ಅನುಕೂಲವಾಗಿದೆ. ನೀವು ಬೇರೊಂದು ಕಡೆ ಬೇರೆ ದಿನ ಸಂತೆ ನಡೆಸಲು ನಮ್ಮ ಅಭ್ಯಂತರವೇನಿಲ್ಲ. ಆದರೆ ಹಿಂದಿನಂತೆ ಸೋಮವಾರ ಜರುಗುವ ಸಂತೆ ಇಲ್ಲಿಯೇ ನಡೆಯಲಿ ಎಂದು…
ಕೆ.ಆರ್.ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಗಂಭೀರ ಆರೋಪ ಇಂಡಿ: ಜಿಲ್ಲೆಯಲ್ಲಿ ಅವ್ಯಾಹತವಾಗಿ ಭೂ ಮಾಫಿಯಾ ನಡೆಯುತ್ತಿದೆ. ಅದಕ್ಕೆ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿರುವ ಸರ್ವೆ ನಂಬರ್ 531//1 ಕ್ಷೇತ್ರ 3 ಎಕರೆ 20 ಗುಂಟೆ ಸರಕಾರಿ ಕೃಷಿ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ಮೂವರಿಗೆ ಪರಭಾರೆ ಮಾಡಿರುವುದು ತಾಜಾ ಉದಾಹರಣೆಗೆ ಎಂದು ಕೆ ಆರ್ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಗಂಭೀರವಾದ ಆರೋಪ ಮಾಡಿದರು. ಪಟ್ಟಣದಲ್ಲಿ ಸೋಮವಾರ ತಾಲೂಕು ಆಡಳಿತ ಸೌಧದ ಎದುರು ಕರ್ನಾಟಕ ರಾಷ್ಟ್ರ ಸಮತಿ ಪಕ್ಷದ ಕಾರ್ಯಕರ್ತರು ಖೊಟ್ಟಿ ದಾಖಲೆ ಹಾಜರು ಪಡಿಸಿ ಜಮೀನು ಪರಭಾರೆ ಮಾಡಿರುವ ಅಧಿಕಾರಿಗಳ ವಿರುಧ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು. ಪ್ರತಿ ಹಳ್ಳಿಯಲ್ಲಿರುವ ಸರಕಾರಿ ಆಸ್ತಿ ಮತ್ತು ಜಮೀನುಗಳು ಭವಿಷ್ಯದಲ್ಲಿ ಆ ಗ್ರಾಮಕ್ಕೆ ಅತ್ಯಂತ ಸಹಾಯ ಮತ್ತು ಸಹಕಾರಿಯಾಗಿರುತ್ತದೆ. ಆ ಗ್ರಾಮದಲ್ಲಿ ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆ, ಸಂತೆಕಟ್ಟೆ ಇತರೆ ಸಾರ್ವಜನಿಕ…
ದೇವರಹಿಪ್ಪರಗಿ: ನರೇಂದ್ರ ಮೋದಿ ಮೂರನೆಯ ಬಾರಿಗೆ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಬೇಕು ಎಂಬ ಹರಕೆ ಹೊತ್ತಿದ್ದ ವ್ಯಕ್ತಿಯೊಬ್ಬರು ದೀರ್ಘದಂಡ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆ ಸಲ್ಲಿಸಿದರು.ಮಾರ್ಕಬ್ಬಿನಹಳ್ಳಿ ಗ್ರಾಮದ ನಿವಾಸಿ ಯಲ್ಲಾಲಿಂಗ ಗುಜ್ಜಲಕರ ಎನ್ನುವ ಖಾಸಗಿ ಶಾಲಾ ಶಿಕ್ಷಕರೇ ಗ್ರಾಮದ ತಮ್ಮ ಮನೆಯಿಂದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಸಲ್ಲಿಸಿ ಹರಕೆ ಪೂರ್ಣಗೊಳಿಸಿದರು. ನಂತರ ಮಾತನಾಡಿ ವಿಶ್ವನಾಯಕ ಮೋದಿ ದೇಶ ಕಂಡ ಅತ್ಯುತ್ತಮ ಪ್ರಧಾನಿಗಳಲ್ಲಿ ಒಬ್ಬರು ಇವರ ನೇತೃತ್ವದಲ್ಲಿ ದೇಶ ಹೆಚ್ಚೇಚ್ಚು ಅಭಿವೃದ್ಧಿಯಾಗಲಿ. ಮಳೆ, ಬೆಳೆ ಉತ್ತಮವಾಗಿ ಬರಲಿ. ರೈತ ಸಮುದಾಯ ಬಡತನ, ಸಾಲಮುಕ್ತವಾಗಲಿ ಎಂದರು.ಈ ಸಂದರ್ಭದಲ್ಲಿ ಬಾಪುಗೌಡ ಪಾಟೀಲ, ಶಿವರಾಜ್ ತಳವಾರ, ಪ್ರಕಾಶ ಡೋಣುರ, ಸುರೇಶ ಕುಂಬಾರ, ಶ್ರೀನಿವಾಸ ವಡ್ಡರ, ದೀಲೀಪ ಬಾಸುತ್ಕರ್, ಮಹಾಂತೇಶ ಬಿರಾದಾರ, ಪುನೀತ ಹಿಪ್ಪರಗಿ ಸಹಿತ ಗ್ರಾಮದ ಹಿರಿಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.
ಮುದ್ದೇಬಿಹಾಳ: ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸಿ ಸದಸ್ಯರ ಅವಧಿ ಮುಂದುವರೆಸುವಂತೆ ಒತ್ತಾಯಿಸಿ ಇಲ್ಲಿನ ಪುರಸಭೆ ಸದಸ್ಯರು ಸೋಮವಾರ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ವೇಳೆ ಸದಸ್ಯ ಮಹೆಬೂಬ ಗೊಳಸಂಗಿ ಮಾತನಾಡಿ ಸರ್ಕಾರ ಪುರಸಭೆಯನ್ನು ಸಂಪೂರ್ಣ ಕಡೆಗಣಿಸಿದೆ. ಮಂತ್ರಿಗಳು ತಮಗೆ ಅನಾನುಕೂಲವಾಗುವ ಸಂಭವ ಕಂಡು ಬಂದರೆ ಕೂಡಲೇ ಕಠಿಣ ನಿರ್ಧಾರಗಳನ್ನು ತೆಗದುಕೊಳ್ಳುತ್ತಾರೆ. ಆದರೆ ನಾವು ಸಮಸ್ಯೆ ಅನುಭವಿಸುತ್ತಿದ್ದು ಸುಮಾರು ಎರಡು ವರ್ಷಗಳು ಗತಿಸಿದರೂ ಯಾವುದೇ ನಿರ್ಧಾರಕ್ಕೆ ಬರುತ್ತಿಲ್ಲ. ಮಾಧ್ಯಮದ ಮೂಲಕ ನಾನು ಸಂಬಂಧಿಸಿದ ಅಧಿಕಾರಿಗಳಿಗೂ ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರಿಗೂ ಕೈಮುಗಿದು ಕೇಳಿಕೊಳ್ಳುತ್ತೇನೆ. ಕೂಡಲೇ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದರು.ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯರುಗಳಾದ ಚನ್ನಪ್ಪ ಕಂಠಿ, ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ಸಹನಾ ಬಡಿಗೇರ, ಶಾಂತಾಬಾಯಿ ಪೂಜಾರಿ, ಶಿವು ಶಿವಪೂರ, ರಫೀಕ ದ್ರಾಕ್ಷಿ, ಯಲ್ಲಪ್ಪ ನಾಯಕಮಕ್ಕಳ, ಬಸು ಮುರಾಳ, ಅಶೋಕ ವನಹಳ್ಳಿ, ರಿಯಾಜ ಢವಳಗಿ ಸೇರಿದಂತೆ ಮತ್ತೀತರರು ಇದ್ದರು. ಪುರಸಭೆಯ…
ಮುದ್ದೇಬಿಹಾಳ: ಪಟ್ಟಣದ ಪೊಲೀಸ್ ಠಾಣೆ ಬಳಿ ಇರುವ ಬಿರಾದಾರ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ನಿವಾರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಬೆಂಗಳೂರಿನ ಜೀನಿಯ ಫರ್ಟಿಲಿಟಿ ಸೆಂಟರ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರದಲ್ಲಿ ಸಮಾಲೋಚನೆ, ಸ್ಕ್ಯಾನ್, ವೀರ್ಯಾಣು ಪರೀಕ್ಷೆ ನಡೆಸಿ ಅಂದಾಜು ೧೦೦ಕ್ಕೂ ಹೆಚ್ಚು ಜನಕ್ಕೆ ಸೂಕ್ತ ಸಲಹೆ ನೀಡಲಾಯಿತು.ಈ ವೇಳೆ ಮಾಧ್ಯದವರನ್ನುದ್ದೇಶಿಸಿ ಮಾತನಾಡಿದ ಡಾ.ದಿವ್ಯಶ್ರೀ ಬಂಜೆತನ ಶಾಪವಲ್ಲ. ಬಹಳಷ್ಟು ಜನ ತಪ್ಪು ಗ್ರಹಿಸಿದ್ದಾರೆ. ರೈತರು ಸೇರಿದಂತೆ ಹಲವರು ಬಂಜೆತನದ ಸಮಸ್ಯೆ ಎದುರಿಸುತ್ತಿದ್ದು ಮೂಢ ನಂಬಿಕೆಗಳಿಗೆ, ಸರಿಯಾಗಿ ಚಿಕಿತ್ಸಾ ಪದ್ಧತಿ ಗೊತ್ತಿರದವರ ಮಾರುಹೋಗಿ ಹಣವ್ಯಯ ಮಾಡಿಕೊಳ್ಳುತ್ತಿದ್ದಾರೆ. ಸರಿಯಾದ ಚಿಕಿತ್ಸೆ ಪಡೆದಲ್ಲಿ ಖಂಡಿತ ಮಕ್ಕಳಾಗಬಹುದು ಎಂದರು.ಡಾ.ವಿಜಯ ಬಿರಾದಾರ ಮಾತನಾಡಿ, ನಮ್ಮ ಭಾಗದ ಜನತೆಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಭಾಗದ ಜನತೆಗೆ ದೂರದ ಬೆಂಗಳೂರಿಗೆ ಹೋಗಿ ತಪಾಸಣೆ ಮಾಡಿಸುವುದು ಆರ್ಥಿಕವಾಗಿ ಕಷ್ಟವಾಗುತ್ತದೆ. ಹಾಗಾಗಿ ತಿಂಗಳಿಗೊಮ್ಮೆ ನಮ್ಮಲ್ಲಿಯೇ ಉಚಿತ ತಪಾಸಣಾ ಶಿಬಿರ ನಡೆಸುವ ಮತ್ತು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಬೇಕು ಎನ್ನುವ ಷರತ್ತಿನ ಮೇಲೆ ಶಿಬಿರವನ್ನು ಆಯೋಜಿಸಿದ್ದೇವೆ…
