ಮುದ್ದೇಬಿಹಾಳ: ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸಿ ಸದಸ್ಯರ ಅವಧಿ ಮುಂದುವರೆಸುವಂತೆ ಒತ್ತಾಯಿಸಿ ಇಲ್ಲಿನ ಪುರಸಭೆ ಸದಸ್ಯರು ಸೋಮವಾರ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸದಸ್ಯ ಮಹೆಬೂಬ ಗೊಳಸಂಗಿ ಮಾತನಾಡಿ ಸರ್ಕಾರ ಪುರಸಭೆಯನ್ನು ಸಂಪೂರ್ಣ ಕಡೆಗಣಿಸಿದೆ. ಮಂತ್ರಿಗಳು ತಮಗೆ ಅನಾನುಕೂಲವಾಗುವ ಸಂಭವ ಕಂಡು ಬಂದರೆ ಕೂಡಲೇ ಕಠಿಣ ನಿರ್ಧಾರಗಳನ್ನು ತೆಗದುಕೊಳ್ಳುತ್ತಾರೆ. ಆದರೆ ನಾವು ಸಮಸ್ಯೆ ಅನುಭವಿಸುತ್ತಿದ್ದು ಸುಮಾರು ಎರಡು ವರ್ಷಗಳು ಗತಿಸಿದರೂ ಯಾವುದೇ ನಿರ್ಧಾರಕ್ಕೆ ಬರುತ್ತಿಲ್ಲ. ಮಾಧ್ಯಮದ ಮೂಲಕ ನಾನು ಸಂಬಂಧಿಸಿದ ಅಧಿಕಾರಿಗಳಿಗೂ ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರಿಗೂ ಕೈಮುಗಿದು ಕೇಳಿಕೊಳ್ಳುತ್ತೇನೆ. ಕೂಡಲೇ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದರು.
ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯರುಗಳಾದ ಚನ್ನಪ್ಪ ಕಂಠಿ, ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ಸಹನಾ ಬಡಿಗೇರ, ಶಾಂತಾಬಾಯಿ ಪೂಜಾರಿ, ಶಿವು ಶಿವಪೂರ, ರಫೀಕ ದ್ರಾಕ್ಷಿ, ಯಲ್ಲಪ್ಪ ನಾಯಕಮಕ್ಕಳ, ಬಸು ಮುರಾಳ, ಅಶೋಕ ವನಹಳ್ಳಿ, ರಿಯಾಜ ಢವಳಗಿ ಸೇರಿದಂತೆ ಮತ್ತೀತರರು ಇದ್ದರು.
ಪುರಸಭೆಯ ವ್ಯಾಪ್ತಿಯ ಪ್ರತಿ ವಾರ್ಡುಗಳಲ್ಲಿ ಹಾಗೂ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ತುಂಬಾ ತೊಂದರೆಯಾಗುತ್ತಿದ್ದು ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಕೋಡಲೇ ಎರಡನೇ ಮೀಸಲಾತಿ ನಿಗದಿಪಡಿಸಿದ ದಿನಾಂಕದಿಂದ ೩೦ ತಿಂಗಳವರೆಗೆ ಅವಧಿ ವಿಸ್ತರಿಸಬೇಕು ಎಂದು ಮನವಿ ಪತ್ರದಲ್ಲಿ ಕಾಣಿಸಲಾಗಿದೆ.

