ಬಸವನಬಾಗೇವಾಡಿ: ತಾಲೂಕಿನ ಗುಳಬಾಳ ಗ್ರಾಮದಲ್ಲಿ ಜೂನ್ ೮ ರಂದು ಮಹಾಂತೇಶ ಚಿದಾನಂದ ಬಿರಾದಾರ(೨೩) ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಆರೋಪಿತರನ್ನು ಬಸವನಬಾಗೇವಾಡಿ ಪೊಲೀಸ್ರು ಮಂಗಳವಾರ ಬಂಧಿಸಿದ್ದಾರೆ. ಕೊಲೆ ನಡೆದು ಎರಡು-ಮೂರು ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡು ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ, ಬಸವನಬಾಗೇವಾಡಿ ಪೊಲೀಸ್ ಉಪಾಧೀಕ್ಷ ಬಲ್ಲಪ್ಪ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ಬಸವನಬಾಗೇವಾಡಿ ಪಿಐ ವಿಜಯ ಮುರಗುಂಡಿ ಅವರ ತನಿಖಾ ತಂಡ ಕೊಲೆ ಮಾಡಿದ ಆರೋಪಿತರಾದ ಗುಳಬಾಳ ಗ್ರಾಮದ ವಿಶ್ವರಾಜ ಶಿವಶರಣಪ್ಪ ಮದ್ದರಕಿ(೩೪), ಶೇಖರಪ್ಪ ಭೀಮರಾಯ ನೆಲ್ಲಗಿ (೩೭) ಅವರನ್ನು ಬಂಧಿಸಿದೆ. ಅನೈತಿಕ ಸಂಬಂಧ ಕಾರಣದಿಂದಾಗಿ ಕೊಲೆ ಮಾಡಲಾಗಿದೆ.
ತನಿಖಾ ತಂಡದಲ್ಲಿ ಪಿಐ ವಿಜಯ ಮುರಗುಂಡಿ, ಪಿಎಸ್ಐ ರವಿ ಪವಾರ, ಸಿಬ್ಬಂದಿಗಳಾದ ಎಂ.ಐ.ತಳವಾರ, ಎ.ಸಿ.ದಿಂಡಿ, ಎನ್.ಎನ್.ಗ್ಯಾಂಡರ್, ಎ.ಎನ್.ಬಿರಾದಾರ, ಬಿ.ಎ.ಯತ್ನಾಳ, ರಾಜು ಹರನಾಳ, ಪರಶುರಾಮ ಜಾಲವಾದಿ, ರಾಜು ಜಾಧವ, ಡಿ.ಎಲ್.ಪೂಜಾರಿ, ಆರ್.ಎಂ.ಕಳಸಗೊಂಡ, ವಿಜಯಕುಮಾರ ದುದಗಿ, ಬಿ.ಬಿ.ಶೇಬಗೊಂಡ, ಬಿ.ಬಿ.ಹೊಕ್ರಾಣಿ ಇದ್ದರು. ಕೊಲೆ ಆರೋಪಿತರನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸುವಲ್ಲಿ ತನಿಖಾ ತಂಡದ ಕಾರ್ಯ ಶ್ಲಾಘಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನಗದು ಬಹುಮಾನ ಘೋಷಿಸಿದ್ದಾರೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

