ಮುದ್ದೇಬಿಹಾಳ: ಪಟ್ಟಣದ ಪೊಲೀಸ್ ಠಾಣೆ ಬಳಿ ಇರುವ ಬಿರಾದಾರ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ನಿವಾರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಜೀನಿಯ ಫರ್ಟಿಲಿಟಿ ಸೆಂಟರ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರದಲ್ಲಿ ಸಮಾಲೋಚನೆ, ಸ್ಕ್ಯಾನ್, ವೀರ್ಯಾಣು ಪರೀಕ್ಷೆ ನಡೆಸಿ ಅಂದಾಜು ೧೦೦ಕ್ಕೂ ಹೆಚ್ಚು ಜನಕ್ಕೆ ಸೂಕ್ತ ಸಲಹೆ ನೀಡಲಾಯಿತು.
ಈ ವೇಳೆ ಮಾಧ್ಯದವರನ್ನುದ್ದೇಶಿಸಿ ಮಾತನಾಡಿದ ಡಾ.ದಿವ್ಯಶ್ರೀ ಬಂಜೆತನ ಶಾಪವಲ್ಲ. ಬಹಳಷ್ಟು ಜನ ತಪ್ಪು ಗ್ರಹಿಸಿದ್ದಾರೆ. ರೈತರು ಸೇರಿದಂತೆ ಹಲವರು ಬಂಜೆತನದ ಸಮಸ್ಯೆ ಎದುರಿಸುತ್ತಿದ್ದು ಮೂಢ ನಂಬಿಕೆಗಳಿಗೆ, ಸರಿಯಾಗಿ ಚಿಕಿತ್ಸಾ ಪದ್ಧತಿ ಗೊತ್ತಿರದವರ ಮಾರುಹೋಗಿ ಹಣವ್ಯಯ ಮಾಡಿಕೊಳ್ಳುತ್ತಿದ್ದಾರೆ. ಸರಿಯಾದ ಚಿಕಿತ್ಸೆ ಪಡೆದಲ್ಲಿ ಖಂಡಿತ ಮಕ್ಕಳಾಗಬಹುದು ಎಂದರು.
ಡಾ.ವಿಜಯ ಬಿರಾದಾರ ಮಾತನಾಡಿ, ನಮ್ಮ ಭಾಗದ ಜನತೆಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಭಾಗದ ಜನತೆಗೆ ದೂರದ ಬೆಂಗಳೂರಿಗೆ ಹೋಗಿ ತಪಾಸಣೆ ಮಾಡಿಸುವುದು ಆರ್ಥಿಕವಾಗಿ ಕಷ್ಟವಾಗುತ್ತದೆ. ಹಾಗಾಗಿ ತಿಂಗಳಿಗೊಮ್ಮೆ ನಮ್ಮಲ್ಲಿಯೇ ಉಚಿತ ತಪಾಸಣಾ ಶಿಬಿರ ನಡೆಸುವ ಮತ್ತು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಬೇಕು ಎನ್ನುವ ಷರತ್ತಿನ ಮೇಲೆ ಶಿಬಿರವನ್ನು ಆಯೋಜಿಸಿದ್ದೇವೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

