ದೇವರಹಿಪ್ಪರಗಿ: ನರೇಂದ್ರ ಮೋದಿ ಮೂರನೆಯ ಬಾರಿಗೆ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಬೇಕು ಎಂಬ ಹರಕೆ ಹೊತ್ತಿದ್ದ ವ್ಯಕ್ತಿಯೊಬ್ಬರು ದೀರ್ಘದಂಡ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆ ಸಲ್ಲಿಸಿದರು.
ಮಾರ್ಕಬ್ಬಿನಹಳ್ಳಿ ಗ್ರಾಮದ ನಿವಾಸಿ ಯಲ್ಲಾಲಿಂಗ ಗುಜ್ಜಲಕರ ಎನ್ನುವ ಖಾಸಗಿ ಶಾಲಾ ಶಿಕ್ಷಕರೇ ಗ್ರಾಮದ ತಮ್ಮ ಮನೆಯಿಂದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಸಲ್ಲಿಸಿ ಹರಕೆ ಪೂರ್ಣಗೊಳಿಸಿದರು. ನಂತರ ಮಾತನಾಡಿ ವಿಶ್ವನಾಯಕ ಮೋದಿ ದೇಶ ಕಂಡ ಅತ್ಯುತ್ತಮ ಪ್ರಧಾನಿಗಳಲ್ಲಿ ಒಬ್ಬರು ಇವರ ನೇತೃತ್ವದಲ್ಲಿ ದೇಶ ಹೆಚ್ಚೇಚ್ಚು ಅಭಿವೃದ್ಧಿಯಾಗಲಿ. ಮಳೆ, ಬೆಳೆ ಉತ್ತಮವಾಗಿ ಬರಲಿ. ರೈತ ಸಮುದಾಯ ಬಡತನ, ಸಾಲಮುಕ್ತವಾಗಲಿ ಎಂದರು.
ಈ ಸಂದರ್ಭದಲ್ಲಿ ಬಾಪುಗೌಡ ಪಾಟೀಲ, ಶಿವರಾಜ್ ತಳವಾರ, ಪ್ರಕಾಶ ಡೋಣುರ, ಸುರೇಶ ಕುಂಬಾರ, ಶ್ರೀನಿವಾಸ ವಡ್ಡರ, ದೀಲೀಪ ಬಾಸುತ್ಕರ್, ಮಹಾಂತೇಶ ಬಿರಾದಾರ, ಪುನೀತ ಹಿಪ್ಪರಗಿ ಸಹಿತ ಗ್ರಾಮದ ಹಿರಿಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

