ದೇವರಹಿಪ್ಪರಗಿ: ಪಟ್ಟಣದ ಸಂತೆಯನ್ನು ಈಗ ಜರುಗುವ ಪ್ರದೇಶದಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಜರುಗಿದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮೇನ್ ಬಜಾರ್ ವ್ಯಾಪಾರಸ್ಥರು ಆಗಮಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಪ್ರಕಾಶ ಸಿಂದಗಿ ಮಾತನಾಡಿ, ಪಟ್ಟಣದ ಮೇನ್ ಬಜಾರ ವಾಹನಗಳ ದಟ್ಟಣೆಯಿಂದ ತುಂಬಿದೆ. ಸೋಮವಾರ ಎಲ್ಲೇಂದರಲ್ಲಿ ವಾಹನಗಳ ನಿಲುಗಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಸಂತೆಯನ್ನು ಬೇರೆ ಪ್ರದೇಶಕ್ಕೆ ವರ್ಗಾಯಿಸಿ ಸುಗಮ ಸಂತೆ ಜರುಗಲು ಅವಕಾಶ ಮಾಡಿಕೊಡಬೇಕು ಎಂಬ ಕಾರಣದಿಂದ ಈ ವಿಷಯ ಚರ್ಚಿಸಲಾಗುತ್ತಿದೆ ಎಂದರು.
ವ್ಯಾಪಾರಸ್ಥರ ಪರವಾಗಿ ಕಾಶೀನಾಥ ಕೋರಿ, ಅಜೀಜ್ ಯಲಗಾರ ಮಾತನಾಡಿ, ಸುಮಾರು ೭೦-೮೦ ವರ್ಷಗಳಿಂದ ಇಲ್ಲಿ ಸಂತೆ ಜರುಗುತ್ತಿದೆ. ಇದು ಪಟ್ಟಣದ ಕೇಂದ್ರಸ್ಥಳ. ಇದರಿಂದ ಮಹಿಳೆಯರಿಗೂ ಅನುಕೂಲವಾಗಿದೆ. ನೀವು ಬೇರೊಂದು ಕಡೆ ಬೇರೆ ದಿನ ಸಂತೆ ನಡೆಸಲು ನಮ್ಮ ಅಭ್ಯಂತರವೇನಿಲ್ಲ. ಆದರೆ ಹಿಂದಿನಂತೆ ಸೋಮವಾರ ಜರುಗುವ ಸಂತೆ ಇಲ್ಲಿಯೇ ನಡೆಯಲಿ ಎಂದು ಮನವಿ ಮಾಡಿದರು.
ಮೇನ್ ಬಜಾರ ವ್ಯಾಪಾರಸ್ಥರಾದ ನಾಗಪ್ಪ ವಡ್ಡೋಡಗಿ, ಸಿದ್ದು ಅಡಕಿ, ಪಿ.ಆರ್.ಕುಲಕರ್ಣಿ, ದಿನೇಶ ಪಾಟೀಲ, ಕಲ್ಮೇಶ ಬುದ್ನಿ, ಜಗದೀಶ ಕೋರಿ, ರಮೇಶ ಈಳಗೇರ, ಯಾಕೂಬ್ ನಧಾಪ್ ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಜಲಕತ್ತಿ, ಬಶೀರ್ ಅಹ್ಮದ್ ಬೇಪಾರಿ, ಶಾಂತಯ್ಯ ಜಡಿಮಠ, ರಮೇಶ ಮಸಬಿನಾಳ, ಕಾಶೀನಾಥ ಬಜಂತ್ರಿ, ಸುಮಂಗಲಾ ಸೇಬೆನೆವರ, ಸಿಂಧೂರ ಡಾಲೇರ ಪ್ರಮುಖರಾದ ಬಸವರಾಜ ದೇವಣಗಾಂವ, ಸೋಮು ದೇವೂರ, ಪ್ರಕಾಶ ಮಲ್ಲಾರಿ, ವಿನೋದ ಚವ್ಹಾಣ ಸೇರಿದಂತೆ ಸಾರ್ವಜನಿಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

