ಕೆ.ಆರ್.ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಗಂಭೀರ ಆರೋಪ
ಇಂಡಿ: ಜಿಲ್ಲೆಯಲ್ಲಿ ಅವ್ಯಾಹತವಾಗಿ ಭೂ ಮಾಫಿಯಾ ನಡೆಯುತ್ತಿದೆ. ಅದಕ್ಕೆ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿರುವ ಸರ್ವೆ ನಂಬರ್ 531//1 ಕ್ಷೇತ್ರ 3 ಎಕರೆ 20 ಗುಂಟೆ ಸರಕಾರಿ ಕೃಷಿ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ಮೂವರಿಗೆ ಪರಭಾರೆ ಮಾಡಿರುವುದು ತಾಜಾ ಉದಾಹರಣೆಗೆ ಎಂದು ಕೆ ಆರ್ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಗಂಭೀರವಾದ ಆರೋಪ ಮಾಡಿದರು. ಪಟ್ಟಣದಲ್ಲಿ ಸೋಮವಾರ ತಾಲೂಕು ಆಡಳಿತ ಸೌಧದ ಎದುರು ಕರ್ನಾಟಕ ರಾಷ್ಟ್ರ ಸಮತಿ ಪಕ್ಷದ ಕಾರ್ಯಕರ್ತರು ಖೊಟ್ಟಿ ದಾಖಲೆ ಹಾಜರು ಪಡಿಸಿ ಜಮೀನು ಪರಭಾರೆ ಮಾಡಿರುವ ಅಧಿಕಾರಿಗಳ ವಿರುಧ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು. ಪ್ರತಿ ಹಳ್ಳಿಯಲ್ಲಿರುವ ಸರಕಾರಿ ಆಸ್ತಿ ಮತ್ತು ಜಮೀನುಗಳು ಭವಿಷ್ಯದಲ್ಲಿ ಆ ಗ್ರಾಮಕ್ಕೆ ಅತ್ಯಂತ ಸಹಾಯ ಮತ್ತು ಸಹಕಾರಿಯಾಗಿರುತ್ತದೆ. ಆ ಗ್ರಾಮದಲ್ಲಿ ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆ, ಸಂತೆಕಟ್ಟೆ ಇತರೆ ಸಾರ್ವಜನಿಕ ಚಟುವಟಿಕೆಗಳಿಗೆ ಅತ್ಯಂತ ಸಹಕಾರಿಯಾಗಿರುತ್ತೆದೆ. ಆದರೆ ಹಂಜಗಿ ಗ್ರಾಮದಲ್ಲಿ ಬೇಲಿಯೆ ಎದ್ದು ಜಮೀನು ಮೈದಂತೆ ಕಾಣುತ್ತೆ. ಅದಕ್ಕೆ ಸರಕಾರಿ ಅಧಿಕಾರಿಗಳೆ ಖೋಟ್ಟಿ ದಾಖಲೆ ಸೃಷ್ಟಿಸಿ ಹಂಜಗಿ ಗ್ರಾಮದಲ್ಲಿ ಸರಕಾರಿ ಕೃಷಿ ಜಮೀನು ಪರಭಾರೆ ಮಾಡಿದ್ದು, ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು. ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದ ಸರ್ವೆ ನಂ 531//1 ಕ್ಷೇತ್ರ 3 ಎಕರೆ 20 ಗುಂಟೆ ಸರಕಾರಿ ಕೃಷಿ ಜಮೀನವನ್ನು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಇಂಡಿ ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಹಂಜಗಿ ಅವರು ಖೊಟ್ಟಿ ದಾಖಲೆ ಹಾಜರಪಡಿಸಿ ಮೂರು ವ್ಯಕ್ತಿಗಳಿಗೆ ಪರಭಾರೆ ಮಾಡಿದವರ ಮೇಲೆ ಕಾನೂನು ಕ್ರಮ ಜರಗಿಸಬೇಕು ಮತ್ತು ಸರಕಾರಿ ಕೆಲಸದಿಂದ ವಜಾಗೊಳಿಸಬೇಕು. ಸದರಿ ಜಮೀನವನ್ನು ಮಾರಾಟ ಮಾಡುವ ಮೊದಲು ತಾ.ಪಂ. ಮತ್ತು ಗ್ರಾಂ.ಪಂ ಯಲ್ಲಿಯಾಗಲಿ ಠರಾವು ತೆಗೆದುಕೊಳ್ಳಬೇಕಾಗಿತ್ತು. ಆದರೆ ಇದು ಯಾವುದೇ ಮಾಡದೆ ಕಾನೂನು ಚೌಕಟ್ಟು ಪಾಲಿಸದೆ, ಉಲ್ಲಂಘಸಿ ಸರಕಾರಿ ಕೃಷಿ ಜಮೀನು ಪರಭಾರೆ ಮಾಡಿದ್ದಾರೆ. ಕೂಡಲೇ ತಪ್ಪಿಸ್ಥರ ವಿರುದ್ಧ ಕ್ರಮ ಜರಗಿಸಬೇಕು. ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯ ಜಿಲ್ಲಾ ಉಸ್ತುವಾರಿ ವಿಜಯಕುಮಾರ್ ಯು ಬಿ, ಜಿಲ್ಲಾ ಅಧ್ಯಕ್ಷ ಅಶೋಕ ಜಾಧವ, ಪರಾಜೀತ ಸಂಸದ ಅಭ್ಯರ್ಥಿ ಗಣಪತಿ ರಾಠೋಡ, ಮಲ್ಲಿಕಾರ್ಜುನ ಬಿರಾದಾರ, ಚಂದ್ರಕಾಂತ ನಗರೆ, ನಬಿರಸೂಲ ಜಮಾದಾರ, ಸುರೇಶ ನಿಂಬೋಣ, ಅಜೀತ ಭಾವಿಕಟ್ಟಿ, ಲಕ್ಷೀಶ ಚಡಚಣ, ಅಣ್ಣಾ ಪೂಜಾರಿ, ಭೀಮಾಶಂಕರ ಕಾಂಬಳೆ, ದೇಸು ಚವ್ಹಾಣ ಉಪಸ್ಥಿತರಿದ್ದರು.
” ಜಿಲ್ಲೆಯಲ್ಲಿ ಭೂ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ. ಅದಕ್ಕೆ ಹಂಜಗಿ ಗ್ರಾಮ ತಾಜಾ ಉದಾಹರಣೆಯಾಗಿದೆ. ಆ ಕಾರಣದಿಂದಾಗಿ ಕೂಡಲೇ ರಾಜ್ಯ ಸರಕಾರ ಭೂ ಮಾಫಿಯಾ ಬಗ್ಗೆ ಗಮನ ಹರಿಸಿ ತಪ್ಪಿತಸ್ಥ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ಇಲ್ಲವಾದರೆ ರಾಜ್ಯ ಮಟ್ಟದಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುತ್ತದೆ.”
– ಶಿವಾನಂದ ಯಡಹಳ್ಳಿ
ಕೆ.ಆರ್.ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ

