ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳವರ ೯೦ ನೇ ಜಾತ್ರಾಮಹೋತ್ಸವದಂಗವಾಗಿ ಜೂ. ೧೩ ಹಾಗೂ ೧೪ ರಂದು ಎರಡು ದಿನಗಳ ಕಾಲ ಇಂಗಳೇಶ್ವರ ಉತ್ಸವ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜೂ.೧೩ ರಂದು ಸಂಜೆ ೪ ಗಂಟೆಗೆ ಬಸವೇಶ್ವರ ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶಿವಯೋಗಿಗಳವರ ಅಭಿನಂದನಾ ಗ್ರಂಥ ನಿರಂಜನ ಜ್ಯೋತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ನಿಡಸೋಸಿ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಸಿಂದಗಿಯ ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ವಿಜಯಪುರದ ಬಸವಲಿಂಗ ಸ್ವಾಮೀಜಿ, ಇಲಕಲ್ಲದ ಗುರುಮಹಾಂತ ಸ್ವಾಮೀಜಿ, ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸುವರು. ಈ ಕಾರ್ಯಕ್ರಮಕ್ಕೆ ಸಚಿವ ಎಂ.ಬಿ.ಪಾಟೀಲ, ಸೋಪು ಮತ್ತು ಡಿಟರ್ಜಂಟ ಲಿಮಿಟೆಡ್ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ, ಮಾಜಿ ಸಚಿವ ಎಸ್.ಆರ್.ಪಾಟೀಲ, ವನ್ಯಜೀವಿ ಸಂರಕ್ಷಕ ಡಾ.ಎಂ.ಆರ್.ದೇಸಾಯಿ, ಮಾಜಿ ಶಾಸಕ ಎ.ಪಾಪರೆಡ್ಡಿ, ಶಸಾಕ ಜಿ.ಟಿ.ಪಾಟೀಲ,ಅದೃಶಪ್ಪ ವಾಸಣ್ಣ ದೇಸಾಯಿ, ಡಾ.ಸೋಮನಾಥ ಯಾಳವಾರ, ಈರಣ್ಣ ಬೆಕಿನಾಳ, ವ್ಹಿ.ಡಿ.ಐಹೊಳ್ಳಿ, ಅಶೋಕಗೌಡ ಪಾಟೀಲ, ಜಂಬುನಾಥ ಕಂಚ್ಯಾಣಿ, ಸಿದ್ದಬಸವ ಕುಂಬಾರ, ನಿಂಗಪ್ಪ ಬೊಮ್ಮನಹಳ್ಳಿ ಇತರರು ಆಗಮಿಸುವರು.
ಜೂ.೧೪ ರಂದು ಬೆಳಗ್ಗೆ ೫ ಗಂಟೆಗೆ ಲಿಂ.ಸಿದ್ದಲಿಂಗ ಶಿವಯೋಗಿಗಳವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನಡೆಯಲಿದೆ. ನಂತರ ೯ ಗಂಟೆಗೆ ಮುಗಳಖೋಡದ ಡಾ.ಮುರುಘರಾಜೇಂದ್ರ ಸ್ವಾಮೀಜಿಯವರನ್ನು ಸಾರೋಟದಲ್ಲಿ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ನಂತರ ೧೨ ಗಂಟೆಗೆ ನಡೆಯುವ ಧರ್ಮಸಭೆ ಸಾನಿಧ್ಯವನ್ನು ಮಗಳಖೋಡದ ಡಾ.ಮುರುಘೇಂದ್ರ ಸ್ವಾಮೀಜಿ, ಯರನಾಳದ ಸಂಗನಬಸವ ಸ್ವಾಮೀಜಿ, ಸೊನ್ನದ ಶಿವಾನಂದ ಸ್ವಾಮೀಜಿ, ನೆಲೋಗಿಯ ಸಿದ್ದಲಿಂಗ ಸ್ವಾಮೀಜಿ, ಜಮಖಂಡಿಯ ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ, ಕೊಡೆಕಲ್ದ ಶಿವಕುಮಾರ ಸ್ವಾಮೀಜಿ, ಢವಳಗಿಯ ಘನಮಠ ಸ್ವಾಮೀಜಿ, ಸೋಲಾಪುರದ ಸ್ವಾಮಿನಾಥ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ, ನಾಗರಾಳದ ಶೇಷಪ್ಪಯ್ಯ ಸ್ವಾಮೀಜಿ, ಲಿಂಗನಾಯಕಹಳ್ಳಿಯ ಚನ್ನವೀರ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಶ್ರೀಗಳು ಸಾನಿಧ್ಯ ವಹಿಸುವರು. ಕಾರ್ಯಕ್ರಮಕ್ಕೆ ಸಚಿವ ಶಿವಾನಂದ ಪಾಟೀಲ, ಬಸವ ಸಮಿತಿಯ ಅರವಿಂದ ಜತ್ತಿ, ಮಾಜಿ ಸಚಿವ ಮುರುಗೇಶ ನಿರಾಣಿ, ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕ ಚಂದ್ರಕಾತ ಬೆಲ್ಲದ, ಶಾಸಕ ರವಿ ಬೆಲ್ಲದ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ರಾಜುಗೌಡ ಪಾಟೀಲ, ಪ್ರಕಾಶ ರಾಠೋಡ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಇತರರು ಆಗಮಿಸುವರು.
ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಬೆಳಗ್ಗೆ ೧೦.೩೦ ಗಂಟೆಗೆ ಮಹಿಳಾ ಸಬಲೀಕರಣ ಮಧ್ಯಾನ್ಹ ೨.೩೦ ಗಂಟೆಗೆ ಜಾನಪದ ಸೊಗಡು ಎಂಬ ಎರಡು ಗೋಷ್ಠಿಗಳನ್ನು ಹಮ್ಮಿಕೊಂಡಿದೆ. ಮಧ್ಯಾನ್ಹ ೧ ಗಂಟೆಗೆ ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಕಿರಿಯ ಶ್ರೀಗಳಾದ ಡಾ. ಸಿದ್ದಲಿಂಗ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

