ವಿಜಯಪುರ: ನಿಜನುಡಿಗಳಿಂದ ಕಟುವಾಗಿ ಟೀಕಿಸಿ ಅಂಬಿಗೇರ ಚೌಡಯ್ಯ ಸಮಾಜವನ್ನು ತಿದ್ದುವರು.
ನೇರ ನಿಭಿ೯ತ ನುಡಿಗಳಿಂದ ವಚನಗಳನ್ನು ರಚಿಸಿ ಅರಿವೇ ಗುರು ಎಂದು ಜಗತ್ತಿಗೆ ಸಾರಿದ ಅಂಬಿಗೇರ ಚೌಡಯ್ಯ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ, ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ದತ್ತಿ ದಿವಂಗತ ಮಲ್ಲಪ್ಪ ಚಂದಪ್ಪ ಯಲಗೋಡ. ದತ್ತಿ ದಾನಿಗಳು ಡಾ: ರಾಮಕೃಷ್ಣ ಮಲ್ಲಪ್ಪ ಯಲಗೋಡ
ಹಾಗು ದಿ ನೀಲಪ್ಪ ಬಸಪ್ಪ ಸೊಡ್ಡಿ ದತ್ತಿ. ದತ್ತಿ ದಾನಿಗಳು ರೇವಣಸಿದ್ದಪ್ಪ ನೀಲಪ್ಪ ಸೊಡ್ಡಿ ಇವರ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಂಬಿಗ ಮಾತ್ರವಲ್ಲ ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲ್ಯ ಉಳ್ಳವ ಅಂಬಿಗೇರ ಚೌಡಯ್ಯ ಎಂದರು
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ ವಿ ಎಮ್ ಬಾಗಾಯತ ಮಾತನಾಡಿ,
ಜಗತ್ತಿನಲ್ಲಿರುವ ಎಲ್ಲ ಸಮುದಾಯದ ಕಾಯಕಗಳು ಪವಿತ್ರವೆಂದು ಸಾರಿ ಸಮಾಜದ ಅಂಕು ಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದರು.ಲಿಂಗ ಭೇದವಿಲ್ಲದೆ ಬದುಕಬೇಕು. ಆತ್ಮಕ್ಕೆಲಿಂಗ ಬೇದವಿಲ್ಲ. ನಾರಿಯನ್ನು ರಾಕ್ಷಸಿ ಎಂದು ಕರೆಯಕೂಡದು. ಬಸವಣ್ಣನವರ ಗರಡಿಯಲ್ಲಿ ಪಳಗಿದ ಇವರ ಅನುಭವವು ಅಮೃತದಾರೆಯಾಗಿ ವಚನಗಳ ರೂಪದಲ್ಲಿ ಹರಿದು ಬಂದಿದೆ ಎಂದರು.
ಶಿವಶರಣ ಅಂಬಿಗೇರ ಚೌಡಯ್ಯ ಬದುಕು ಬರಹ ಕುರಿತು ಉಪನ್ಯಾಸ ನೀಡಿದ ಪ್ರಾಧ್ಯಾಪಕ ಶರಣಗೌಡ ಪಾಟೀಲ ಅಂಬಿಗೇರ ಚೌಡಯ್ಯ ಆತ್ಮ ಶುದ್ಧಿಗೆ ಪ್ರಾಧ್ಯಾನತೆ ನೀಡಿದ್ದರು. ಇಂದಿನ ಪುರವಂತರ ಹಾಡುಗಳಲ್ಲಿ ಅಂಬಿಗೇರ ಚೌಡಯ್ಯನ ವಚನಗಳನ್ನು ಕಾಣುತ್ತೇವೆ.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಬಿಗೇರ ಚೌಡಯ್ಯ ಸ್ನಾತಕೋತ್ತರ ಶಿಕ್ಷಣ ವಿಭಾಗ ಪ್ರಾರಂಭಿಸಿದ್ದು ಅತ್ಯಂತ ಶ್ಲಾಘನೀಯ ಎಂದರು.
ಶರಣ ಸಾಹಿತ್ಯ ಕುರಿತು ಮಾತನಾಡಿದ ವಿಶ್ರಾಂತ ಮುಖ್ಯ ಅಧ್ಯಾಪಕಿ ಶಾರದಾ ಐಹೊಳ್ಳಿ, ವಿಶ್ವ ಸಾಹಿತ್ಯದಲ್ಲಿ ಶರಣ ಸಾಹಿತ್ಯ ಮಹತ್ವ ಪಡೆದುಕೊಂಡಿದೆ. 12ನೇ ಶತಮಾನದಲ್ಲಿ ಶರಣರ ವಚನಗಳು ಪ್ರಸಿದ್ಧವಾಗಿದೆ. ಶರಣ ಸಾಹಿತ್ಯ ಮೌಲ್ಯಗಳನ್ನು ಪ್ರತಿಪಾದಿಸಿವೆ. ಡಾ: ಫ ಗು ಹಳಕಟ್ಟಿಯವರು ವಚನ ಸಾಹಿತ್ಯ ಸಂರಕ್ಷಣೆ ಮಾಡಿದವರಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ ಧಾರ್ಮಿಕ ಹಾಗು ಆಧ್ಯಾತ್ಮಿಕ ಕ್ರಾಂತಿ ಮಾಡಿದವರು ಶರಣರು ಎಂದರು.
ರಾಮಕೃಷ್ಣ ಯಲಗೋಡ. ರಾಮನಗೌಡ ಬಗಲಿ. ಪ್ರಶಾಂತ ಕಾಳೆ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ರಾಮನಗೌಡ ಬಗಲಿ ವೇದಿಕೆಯಲ್ಲಿದ್ದರು.
ಡಾ: ಸಂಗಮೇಶ ಮೇತ್ರಿ ಸ್ವಾಗತಿಸಿ ಪರಿಚಯಿಸಿದರು. ಡಾ ಮಾಧವ ಗುಡಿ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವಿ ತೆಲಗಿ ಪ್ರಾಥಿ೯ಸಿದರು. ಸಾಹಿತಿ ಶಿಲ್ಪಾ ಬಸ್ಮೆ ನಿರೂಪಿಸಿದರು. ಪ್ರಾಚಾರ್ಯ ಸಿದ್ರಾಮಯ್ಯ ಲಕ್ಕುಂಡಿಮಠ ವಂದಿಸಿದರು.
ಅನ್ನಪೂರ್ಣ ಬೆಳ್ಳೆನವರ, ಸುಖದೇವಿ ಅಲಬಾಳಮಠ, ವಿಜಯಲಕ್ಷ್ಮಿ ಹಳಕಟ್ಟಿ, ಎಚ್ ಎಮ್ ಕಣಬೂರ, ರಾ ಶಿ ವಾಡೇದ, ಅಹಮ್ಮದ ವಾಲಿಕಾರ,
ಮಲ್ಲಿಕಾರ್ಜುನ ಹಣಶಿಹಾಳ, ಡಾ ಡಿ ಆರ ಪಾಟೀಲ, ಪ್ರದೀಪ ಕುಲಕರ್ಣಿ, ಡಾ ವಿ ಡಿ ಐಹೊಳೆ, ಭಾಗೀರಥಿ ಸಿಂದೆ, ಶೋಭಾ ಮೇಡೆಗಾರ, ಕವಿತಾ ಕಲ್ಯಾಣಪ್ಪಗೋಳ, ಕೆ ಎಸ್ ಹಣಮಾನಿ, ಅಮೊಘಸಿದ್ದ ಪೂಜಾರಿ, ಜಿ ಎಎಸ ಬಳ್ಳೂರ, ಎಮ್ ಆರ ನಿಂಬಾಳ, ಭಾಗೀರಥಿ ಸಿಂಧೆ, ಶಶಿಕಲಾ ನಾಯ್ಕೋಡಿ, ಲಕ್ಷ್ಮಿ ಬಿರಾದಾರ, ಗಂಗಮ್ಮ ರಡ್ಡಿ, ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಅರಿವೇ ಗುರು ಎಂದು ಜಗತ್ತಿಗೆ ಸಾರಿದ ಅಂಬಿಗರ ಚೌಡಯ್ಯ :ಕಂಚಾಣಿ
Related Posts
Add A Comment

