Author: editor.udayarashmi@gmail.com

ಇಂಡಿ: ಬಾಲಕಾರ್ಮಿಕ ಪದ್ಧತಿ ಜಗತ್ತಿನ ಪಿಡುಗು. ಮಕ್ಕಳನ್ನು ದುಡಿಸುವ ಪದ್ಧತಿ ರಾಷ್ಟ್ರಕ್ಕೆ ಕಳಂಕವಾಗಿದ್ದು, ಮಕ್ಕಳ ದುಡಿಮೆ ಮಾನವ ಅಭಿವೃದ್ಧಿಗೆ ಮಾರಕವಾಗಿದೆ. ಮಕ್ಕಳಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಈ ಪದ್ಧತಿಯ ಕಡಿವಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ನಿಮಿತ್ತ ‘ಮಕ್ಕಳ ಶೈಕ್ಷಣಿಕ ಸವಲತ್ತುಗಳು’ಕುರಿತು ಮಾತನಾಡಿದರು.ಶಿಕ್ಷಣದಿಂದ ಬದುಕು ಕಟ್ಟಿಕೊಂಡು, ಪ್ರಗತಿ ಹೊಂದಲು ಸಾಧ್ಯ ಎಂಬ ಅರಿವು ಪೊಷಕರಲ್ಲಿ ಮೂಡಿಸಬೇಕು. ಬಾಲಕಾರ್ಮಿಕ ಪದ್ಧತಿ ವಿರುದ್ಧದ ನಿಜವಾದ ಅಸ್ತ್ರ ಎಂದರೆ ಸಾರ್ವತ್ರಿಕ ಶಿಕ್ಷಣ. ಪೋಷಕರು ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿಸದೆ ಅವರ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಬಾಲ್ಯವು ಸಂತೋಷ, ನಗು ಮತ್ತು ಶಿಕ್ಷಣದ ಸಮಯವಾಗಿರಬೇಕು. ಬಾಲ್ಯಾವಸ್ಥೆಯಲ್ಲಿ ಮಕ್ಕಳನ್ನು ಮೂಲಭೂತ ಶಿಕ್ಷಣ, ಜ್ಞಾನ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಬೇಕು. ಅವರ ಹಕ್ಕುಗಳನ್ನು ರಕ್ಷಿಸಬೇಕಾದದ್ದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದು…

Read More

ಮುದ್ದೇಬಿಹಾಳ: ಕುಷ್ಟಗಿ ತಾಲೂಕಿನಲ್ಲಿ ನಡೆದ ಟಗರು ಕಾಳಗದಲ್ಲಿ ತಾಲೂಕಿನ ಶಿರೋಳ ಗ್ರಾಮದ ಟಗರು ಪ್ರಥಮ ಬಹುಮಾನವಾಗಿ ಎಚ್‌ಎಫ್ ಡಿಲಕ್ಸ್ ದ್ವಿಚಕ್ರ ವಾಹನ ಪಡೆದು ಬೀಗಿದೆ.ಶಿರೋಳ ಗ್ರಾಮದ ಪಮ್ಮು ದಾಸರ ಸಾಕಿದ್ದ ಟಗರು ಅಂದಾಜು ೮೦ಕೆಜಿ ಇದ್ದು ಯಾದಗಿರಿ ಜಿಲ್ಲೆಯ ಕೊಡೆಕಲ್ ಗ್ರಾಮದಿಂದ ಖರೀದಿಸಿದ್ದರಂತೆ. ಪ್ರತಿನಿತ್ಯ ಹುರುಳಿ, ಹಾಲು, ತತ್ತಿ, ಗೋದಿ, ಕಡಲೆಬೇಳೆ ಸೇರಿದಂತೆ ವಿಟ್ಯಾಮಿನ್ ಫುಡ್ ತಿನ್ನುವ ಈ ಟಗರು ಕಳೆದ ಹತ್ತಾರು ಕಾಳದಲ್ಲಿ ಬಹುಮಾನವನ್ನು ತಂದು ಕೊಟ್ಟಿದೆ. ಈ ವರೆಗೂ ಭಾಗವಹಿಸಿದ್ದ ೧೧ ಕಾಳಗದಲ್ಲಿ ೬ ಪ್ರಥಮ, ೩ ದ್ವಿತೀಯ, ೩ ತೃತೀಯ ೨ ಸಮಾಧಾನಕರ ಬಹುಮಾನವನ್ನು ಪಡೆದ ಈ ಟಗರಿಗೆ ೨ ವರ್ಷ ವಯಸ್ಸು.ಟಗರು ಕಾಳಗದಲ್ಲಿ ಹೆಚ್ಚಿನ ಯಶಸ್ಸು ಪಡೆಯುತ್ತಿರುವ ಈ ಟಗರು ನಮ್ಮೂರಿನ ಹೆಮ್ಮೆ ಎಂದು ಸ್ಥಳೀಯ ನಿವಾಸಿ ಸೋಮು ಶಿರೋಳ ಮೆಚ್ಚಿಕೊಂಡಿದ್ದು ಟಗರು ಸಾಕುವ ಯುವಕ ಚಿಕ್ಕವನಾಗಿದ್ದರೂ ಟಗರುಗಳನ್ನು ತುಂಬಾ ಚನ್ನಾಗಿ ಬೆಳೆಸುತ್ತಿದ್ದಾನೆ. ಈತ ೨,೪,೬,೮ ಹಲ್ಲುಗಳುಳ್ಳ ಟಗರುಗಳನ್ನು ಸಾಕಿದ್ದು ಎಲ್ಲ ಟಗರುಗಳು ಕಾಳಗದಲ್ಲಿ ಒಳ್ಳೆ…

Read More

ಬಸವನಬಾಗೇವಾಡಿ: ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಮಹಿಳಾ ವೇದಿಕೆ, ಐಕ್ಯೂಎಸಿ ಸಹಯೋಗದಲ್ಲಿ ಬೇಟಿ ಬಚಾವೊ ಬೇಟಿ ಪಡಾವೋ ಜನಜಾಗೃತಿ ಜಾಥಾವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಮಹಾವಿದ್ಯಾಲಯದ ಮುಂಭಾಗ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಜಾಥಾಕ್ಕೆ ಚಾಲನೆ ನೀಡಿದರು.ಜಾಥಾವು ಕಾಲೇಜಿನಿಂದ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಜಾಥಾ ಸಮಾವೇಶಗೊಂಡ ನಂತರ ಜಾಥಾ ಉದ್ದೇಶಿಸಿ ಮಹಾವಿದ್ಯಾಲಯದ ಮಹಿಳಾ ವೇದಿಕೆ ಅಧ್ಯಕ್ಷೆ, ಇತಿಹಾಸ ಪ್ರಾಧ್ಯಾಪಕಿ ಡಾ.ಎಸ್.ಬಿ.ಜನಗೊಂಡ ಮಾತನಾಡಿ, ಪ್ರತಿಯೊಬ್ಬ ಪುರುಷನಿಗೆ ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಬೇಕು. ಅದೇ ಅವಳು ಮಗಳಾಗಿ ಬೇಡವಾಗಿರುವದು ನೋವಿನ ಸಂಗತಿ. ಇಂದು ಶಿಕ್ಷಣವು ಎಲ್ಲರ ಹಕ್ಕಾಗಿ ಪರಿವರ್ತನೆಯಾಗಿದ್ದರೂ ಸಹ ಸಮಾಜದಲ್ಲಿ ಹೆಣ್ಣಿನ ಶೋಷಣೆ ನಿಲ್ಲುತ್ತಿಲ್ಲ. ಪ್ರಜ್ಞಾವಂತರಾದ ನಾವೆಲ್ಲರೂ ಹೆಣ್ಣು ಭ್ರೂಣ ಹತ್ಯೆ ತಡೆಯವಲ್ಲಿ ಮುಂದಾಗಬೇಕು. ಆಗ ಮಾತ್ರ ಪ್ರತಿ ಪುರುಷನ ಬಾಳಿನಲ್ಲಿ ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಬರಲು ಸಾಧ್ಯ. ಎಲ್ಲರೂ ಹೆಣ್ಣುಮಕ್ಕಳನ್ನು ಬೆಳೆಸುವ ಕಾರ್ಯ ಮಾಡಬೇಕೆಂದರು.ಜಾಥಾದಲ್ಲಿ ಕಾಲೇಜಿನ ಐಕ್ಯೂಎಸಿ ಮತ್ತು…

Read More

ಬಸವನಬಾಗೇವಾಡಿ: ವಿಜಯಪುರ ಜಿಲ್ಲೆಯಲ್ಲಿರುವ ನೂತನ ಎಂಟು ತಾಲೂಕುಗಳಿಗೆ ಎಲ್ಲ ಸರ್ಕಾರಿ ಕಚೇರಿಗಳನ್ನು ಮಂಜೂರು ಮಾಡಿ ರೈತರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಬುಧವಾರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ, ಅವಳಿ ಜಿಲ್ಲೆಯ ಉಸ್ತುವಾರಿ ಅಶೋಕ ಹಾರಿವಾಳ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.ಅಶೋಕ ಹಾರಿವಾಳ ಅವರು ಸಿಎಂ ಅವರಿಗೆ ತಮ್ಮ ಘನ ಸರ್ಕಾರ ನೂತನ ತಾಲೂಕುಗಳನ್ನು ಘೋಷಣೆ ಮಾಡಿದ್ದು ಶ್ಲಾಘನೀಯ. ನೂತನ ತಾಲೂಕುಗಳು ರಚನೆಯಾಗಿ ಸುಮಾರು ವರ್ಷಗಳು ಕಳೆದರೂ ಎಲ್ಲ ಸರ್ಕಾರಿ ಕಚೇರಿಗಳು ಇಲ್ಲದೇ ಇರುವದರಿಂದಾಗಿ ರೈತರಿಗೆ, ಸಾರ್ವಜನಿಕರಿಗೆ ಆಡಳಿತಾತ್ಮಕವಾಗಿ ತುಂಬಾ ತೊಂದರೆಯಾಗಿದೆ. ಕೂಡಲೇ ಎಲ್ಲ ಎಂಟು ತಾಲೂಕುಗಳಿಗೆ ಎಲ್ಲ ಸರ್ಕಾರಿ ಕಚೇರಿಗಳನ್ನು ಮಂಜೂರು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಗೆ ಸಿಎಂ ಅವರು ಸ್ಪಂದಿಸಿದರು ಎಂದು ದೂರವಾಣಿ ಮೂಲಕ ಪತ್ರಿಕೆಗೆ ತಿಳಿಸಿದರು.

Read More

ವಿಶ್ವಕಾರ್ಮಿಕ & ಬಾಲಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ನ್ಯಾಯಾಧೀಶೆ ಸೌಮ್ಯ ಹೂಲಿ ಮಾತು ಬಸವನಬಾಗೇವಾಡಿ: ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರಣಕ್ಕೂ ಯಾವುದೇ ಕೆಲಸಕ್ಕೆ ದುಡಿಯುವದಕ್ಕೆ ಕಳಿಸುವದು ಕಾನೂನುರೀತ್ಯ ಅಪರಾಧ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕೆಂದು ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ವಿಶ್ವಕಾರ್ಮಿಕ ದಿನಾಚರಣೆ, ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ಜನಸಾಮಾನ್ಯರಲ್ಲಿ ಕಾನೂನು ಅರಿವು ಬಹಳ ಮುಖ್ಯ. ಎಲ್ಲರೂ ಕಾನೂನುಗಳ ಬಗ್ಗೆ ಅರಿವು ಮೂಡಿಸಿಕೊಂಡು ಜಾಗೃತರಾಗಿ ಬಾಲಕಾರ್ಮಿಕರರಾಗುವುದನ್ನು ತಡೆಗಟ್ಟುವಲ್ಲಿ ಪಾತ್ರ ವಹಿಸಬೇಕು. ಯಾವ ಮಕ್ಕಳು ಬಾಲಕಾರ್ಮಿಕರಾಗದಂತೆ ನೋಡಿಕೊಳ್ಳುವದು ಪ್ರತಿಯೊಬ್ಬರ ಜವಾಬ್ದಾರಿ. ಮಕ್ಕಳು ಯಾವುದೇ ಕಾರಣಕ್ಕೂ ಶಾಲೆ ಬಿಡದೇ ನಿರಂತರವಾಗಿ ಶಾಲೆಗೆ ಬಂದು ಉತ್ತಮ ಅಧ್ಯಯನ ಮಾಡುವ ಮೂಲಕ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕೆಂದರು.ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ, ಸರ್ಕಾರ…

Read More

ಮುದ್ದೇಬಿಹಾಳ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಬೆಳಿಗ್ಗೆ ೧೦ಗಂಟೆಗೆ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.ತಾಲೂಕು ಕಾನೂನು ಸೇವಾ, ಸಮಿತಿ ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ ಹಾಗೂ ಇತರ ಎಲ್ಲ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಉದ್ಘಾಟಿಸುವರು.ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಳಗಿಡದ ಉಪಸ್ಥಿತಿಯಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಅಧ್ಯಕ್ಷತೆ ವಹಿಸುವರು. ಸಹಾಯಕ ಸರ್ಕಾರಿ ಅಭಿಯೋಜಕರಾದ ನಾಘರಾಜ ಪೂಜಾರ ಮತ್ತು ಬಸವರಾಜ ಆಹೇರಿ, ತಹಶೀಲ್ದಾರ ಬಸವರಾಜ ನಾಗರಾಳ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಪ್ರಭಾರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಎಸ್.ಎಸ್.ಕಲ್ಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ, ಪ್ರಭಾರ ಕಾರ್ಮಿಕ ನಿರೀಕ್ಷಕ ಆಯ್.ಎಸ್.ಇನಾಮದಾರ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಎಸ್.ಎಸ್.ಕವಡಿಮಟ್ಟಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಶಿಶು ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ ಕುಂಬಾರ ಅತಿಥಿಗಳಾಗಿ ಆಗಮಿಸಲಿದ್ದು ಹಿರಿಯ ನ್ಯಾಯವಾದಿ ಎನ್.ಆರ್.ಮೊಕಾಶಿ ಬಾಲಕಾರ್ಮಿಕ ನಿಷೇದ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

Read More

ಮುದ್ದೇಬಿಹಾಳ: ತಾಲೂಕಿನ ಆಲೂರು ಗ್ರಾಮದ ಪಾನ್‌ಶಾಪ್ ನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ.ಬಸಪ್ಪ ಭೀಮಪ್ಪ ಬಿರಾದಾರ ಅಕ್ರಮ ಮಧ್ಯ ಮಾರಾಟಗಾರ. ಈತನು ತನ್ನ ಹತ್ತಿರ ಯಾವುದೇ ಪರ್ಮಿಟ ವ ಲೈಸನ್ಸ್ ಇಲ್ಲದೇ ಅನಧಿಕೃತವಾಗಿ ಮದ್ಯ ತುಂಬಿದ ಟೆಟ್ರಾ ಪ್ಯಾಕೇಟ್‌ಗಳನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡು ಆಲೂರ ಗ್ರಾಮದ ಬಸ್ ನಿಲ್ದಾಣ ಹತ್ತಿರ ಇರುವ ತನ್ನ ಪಾನ್ ಶಾಪ್ ನಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿದ್ದು ಪಿಎಸ್‌ಐ ಸಂಜೀವ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.ಆರೋಪಿತನಿಂದ ೧೮೦ ಎಮ್‌ಎಲ್‌ದ ಬ್ಯಾಗ್‌ಪೈಪರ್ ಅಂತಾ ಬರೆದ ಒಟ್ಟು ೧೨ ವಿಸ್ಕಿ ಪ್ಯಾಕೆಟ್‌ಗಳು, ೧೨ ಟುಬರ್ಗ ಪ್ರೀಮಿಯಮ್ ಬಿಯರ್ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.

Read More

ಗ್ರಾಪಂ ಜನಪ್ರತಿನಿಧಿಗಳಿಗೆವಿಜಯಪುರ ಜಿಪಂ ಸಿಇಒ ರಿಷಿ ಆನಂದ ಸೂಚನೆ ದೇವರಹಿಪ್ಪರಗಿ: ಡೋಣಿ ನದಿಯಿಂದ ಯಾಳವಾರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ನೀರು ಸರಾಗವಾಗಿ ಹೋಗಲು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಹೇಳಿದರು.ತಾಲ್ಲೂಕಿನ ಸಾತಿಹಾಳ ಹಾಗೂ ಯಾಳವಾರ ಗ್ರಾಮಗಳ ಪಂಚಾಯಿತಿ ಹಾಗೂ ಸೇತುವೆಗಳಿಗೆ ಬುಧವಾರ ಭೇಟಿ ನೀಡಿ ಮಾತನಾಡಿದರು.ಈ ವರ್ಷ ಅತೀ ಹೆಚ್ಚು ಮಳೆಯಾಗುವ ನಿರೀಕ್ಷೆ ಇರುವುದರಿಂದ ಗ್ರಾಮದಲ್ಲಿ ಮಣ್ಣಿನ ಮನೆ ಮತ್ತು ಶಿಥಿಲಗೊಂಡ ಮನೆಗಳನ್ನು ಗುರುತಿಸಿ ಅಂಥ ಮನೆಗಳ ಸದಸ್ಯರನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಜೊತೆ ಮಾತನಾಡಿ, ಮಳೆಯಿಂದಾಗಿ ಆಗಬಹುದಾದ ಅನಾಹುತಗಳನ್ನು ತಡೆಗಟ್ಟಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನ ತಾವೆಲ್ಲರೂ ಸೇರಿ ನಿರ್ಧರಿಸಬೇಕು ಎಂದು ಹೇಳಿದರು. ನಂತರ ಯಾಳವಾರ ಸೇತುವೆಗೆ ಭೇಟಿ ನೀಡಿ, ಹೆಚ್ಚಾಗಿ ಮಳೆಯಾದ ಸಂದರ್ಭದಲ್ಲಿ ಗ್ರಾಮಸ್ಥರು ಸೇತುವೆಯಲ್ಲಿ ಸಂಚಾರ ಮಾಡದಂತೆ ನೋಡಿಕೊಳ್ಳಬೇಕು. ಇದರಿಂದಾಗುವ ಅನಾಹುತಗಳನ್ನು ಮುಂಜಾಗ್ರತ ಕ್ರಮ ಕೈಗೊಂಡು ಜಿಲ್ಲಾ ಪಂಚಾಯತಿ ವರದಿ ನೀಡಬೇಕು ಎಂದು ಪಿಡಿಓ…

Read More

ದೇವರಹಿಪ್ಪರಗಿ: ಮಕ್ಕಳಲ್ಲಿ ಸ್ವಯಂ ಮೌಲ್ಯ, ಆತ್ಮವಿಶ್ವಾಸ, ಸೃಜನಶೀಲತೆ, ಸಮಾನತೆ, ಶಾಂತಿ ಮನೋಭಾವದಂತಹ ಭಾವನೆಗಳನ್ನು ಮೂಡಿಸಲು ಶ್ರಮಿಸೋಣ ಎಂದು ತಾಲ್ಲೂಕು ಪಂಚಾಯಿತಿ ಇಓ ರಾಮು ಅಗ್ನಿ ಹೇಳಿದರು.ತಾಲ್ಲೂಕಿನ ಕೋರವಾರ ಸರ್ಕಾರಿ ಕನ್ನಡ ಶಾಲೆ ಹಾಗೂ ಮುಳಸಾವಳಗಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಮಂಗಳವಾರ ಅಂತರಾಷ್ಟ್ರೀಯ ಆಟದದಿನದ ಅಂಗವಾಗಿ ಆಟದ ಹಕ್ಕನ್ನು ಸಂಭ್ರಮಿಸುವ ಚಟುವಟಿಕೆಗಳಿಗೆ ತಾಲ್ಲೂಕು ಪಂಚಾಯಿತಿ ಇಓ ರಾಮು ಅಗ್ನಿ ಚಾಲನೆ ನೀಡಿ ಮಾತನಾಡಿದರು.ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಅಂತರರಾಷ್ಟ್ರೀಯ ಆಟದ ದಿನದ ಅಂಗವಾಗಿ ಆಟದ ಹಕ್ಕನ್ನು ಸಂಭ್ರಮಿಸಲು ವಿಶ್ವಸಂಸ್ಥೆಯು ಅಂಗೀಕರಿಸಿ ಘೋಷಿಸಿದ ರಾಷ್ಟ್ರೀಯ ಆಟದ ದಿನವಾಗಿದೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ಇಲಾಖೆ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ಲಿಂಗ, ಜಾತಿ, ವರ್ಗ ಮೂಲಗಳನ್ನು ತೊಡೆದು ಹಾಕಲು ಅರಿವು ಮೂಡಿಸುವುದಾಗಿದೆ ಎಂದರು. ನಂತರ ಕೋರವಾರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಜರುಗಿದ ಒಳಾಂಗಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಕ್ಕಳೊಂದಿಗೆ ಚೆಸ್ ಮತ್ತು ಕೇರಂ ಆಟಗಳನ್ನು ಆಡಿ ಸಂಭ್ರಮಿಸಿದರು.ಯೋಜನಾಧಿಕಾರಿ ಶ್ರೀನಿವಾಸ ಪವಾರ, ತಾಂತ್ರಿಕ ಸಂಯೋಜಕ…

Read More

ಸಿಂದಗಿ: ರಾಣಿ ಚನ್ನಮ್ಮ ಹಾಗೂ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಮೂರ್ತಿಗಳು ಭವ್ಯ ಹಾಗೂ ನಯನ ಮನೋಹರವಾಗಿವೆ. ವಿಜಯಪುರ ಜಿಲ್ಲೆಯಲ್ಲಿಯೇ ಇಂತಹ ಭವ್ಯ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದ್ದು, ಸಿಂದಗಿಯಲ್ಲಿಯೇ ಪ್ರಥಮ ಎಂದು ಕೂಡಲಸಂಗಮ ಜಗದ್ಗುರು ಪೀಠದ ಜಗದ್ಗುರು ಜಯಬಸವ ಮೃತ್ಯುಂಜಯ ಸ್ವಾಮಿಗಳು ಹೇಳಿದರು.ನಗರದಲ್ಲಿ ಕನಕದಾಸ ವೃತ್ತದ ಬಳಿ ಎರಡೂ ಪುತ್ಥಳಿಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕ ಅಶೋಕ ಮನಗೂಳಿ ಅವರ ಮುತುವರ್ಜಿ ಹಾಗೂ ನೇತೃತ್ವದಲ್ಲಿ ಎರಡೂ ಮೂರ್ತಿಗಳು ಸ್ಥಾಪನೆಗೊಂಡದ್ದು ಶ್ಲಾಘನೀಯ ಎಂದು ಹರ್ಷವ್ಯಕ್ತಪಡಿಸಿದರು.ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ತಾಲೂಕಿನ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಎರಡೂ ಮೂರ್ತಿಗಳ ಪ್ರತಿಷ್ಠಾಪನೆ ನನ್ನ ಅವಧಿಯಲ್ಲಿಯೇ ಸಾಕಾರಗೊಂಡದ್ದು ನನಗೆ ಹರ್ಷ ತಂದಿದೆ. ಈ ಮೂರ್ತಿಗಳ ಅನಾವರಣ ಕಾರ್ಯಕ್ರಮವು ಟಿಪ್ಪು ಸುಲ್ತಾನ ವೃತ್ತದ ಕಾಮಗಾರಿ ಪೂರ್ಣಗೊಂಡ ನಂತರ ಮೂರೂ ಮೂರ್ತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯದ ಹರಗುರು ಚರಮೂರ್ತಿಗಳ ಸಾನಿಧ್ಯ, ರಾಜಕೀಯ ದುರಿಣರ ಸಮ್ಮುಖ ಹಾಗೂ ಮುಖ್ಯಮಂತ್ರಿಗಳ ಹಸ್ತದಿಂದ ನೆರವೇರಿಸಲಾಗುವುದು ಎಂದು ಹೇಳಿದರು.ಕನಕದಾಸ ವೃತ್ತದಲ್ಲಿ…

Read More