ದೇವರಹಿಪ್ಪರಗಿ: ಮಕ್ಕಳಲ್ಲಿ ಸ್ವಯಂ ಮೌಲ್ಯ, ಆತ್ಮವಿಶ್ವಾಸ, ಸೃಜನಶೀಲತೆ, ಸಮಾನತೆ, ಶಾಂತಿ ಮನೋಭಾವದಂತಹ ಭಾವನೆಗಳನ್ನು ಮೂಡಿಸಲು ಶ್ರಮಿಸೋಣ ಎಂದು ತಾಲ್ಲೂಕು ಪಂಚಾಯಿತಿ ಇಓ ರಾಮು ಅಗ್ನಿ ಹೇಳಿದರು.
ತಾಲ್ಲೂಕಿನ ಕೋರವಾರ ಸರ್ಕಾರಿ ಕನ್ನಡ ಶಾಲೆ ಹಾಗೂ ಮುಳಸಾವಳಗಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಮಂಗಳವಾರ ಅಂತರಾಷ್ಟ್ರೀಯ ಆಟದದಿನದ ಅಂಗವಾಗಿ ಆಟದ ಹಕ್ಕನ್ನು ಸಂಭ್ರಮಿಸುವ ಚಟುವಟಿಕೆಗಳಿಗೆ ತಾಲ್ಲೂಕು ಪಂಚಾಯಿತಿ ಇಓ ರಾಮು ಅಗ್ನಿ ಚಾಲನೆ ನೀಡಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಅಂತರರಾಷ್ಟ್ರೀಯ ಆಟದ ದಿನದ ಅಂಗವಾಗಿ ಆಟದ ಹಕ್ಕನ್ನು ಸಂಭ್ರಮಿಸಲು ವಿಶ್ವಸಂಸ್ಥೆಯು ಅಂಗೀಕರಿಸಿ ಘೋಷಿಸಿದ ರಾಷ್ಟ್ರೀಯ ಆಟದ ದಿನವಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ಇಲಾಖೆ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ಲಿಂಗ, ಜಾತಿ, ವರ್ಗ ಮೂಲಗಳನ್ನು ತೊಡೆದು ಹಾಕಲು ಅರಿವು ಮೂಡಿಸುವುದಾಗಿದೆ ಎಂದರು. ನಂತರ ಕೋರವಾರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಜರುಗಿದ ಒಳಾಂಗಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಕ್ಕಳೊಂದಿಗೆ ಚೆಸ್ ಮತ್ತು ಕೇರಂ ಆಟಗಳನ್ನು ಆಡಿ ಸಂಭ್ರಮಿಸಿದರು.
ಯೋಜನಾಧಿಕಾರಿ ಶ್ರೀನಿವಾಸ ಪವಾರ, ತಾಂತ್ರಿಕ ಸಂಯೋಜಕ ಶರಣಗೌಡ ಪಾಟೀಲ, ಐಇಸಿ ಸಂಯೋಜಕ ಸಿದ್ಧು ಕಾಂಬಳೆ, ಪಿಡಿಓ ಕಾಶೀನಾಥ ಕಡಕಭಾವಿ, ಕಾರ್ಯದರ್ಶಿಗಳಾದ ಸಿ.ಎಸ್. ಬಿರಾದಾರ, ಜಿ.ವಿ.ಪಟ್ಟಣಶೆಟ್ಟಿ, ರವಿ ಗೋಟೂರ, ಶಂಕರ ಉಕುಮನಾಳ, ಆರ್.ಎಸ್.ಉಪ್ಪಾರ, ಬಿ.ಐ.ಟಕ್ಕಳಕಿ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ವರ್ಗ, ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
ಮಕ್ಕಳಲ್ಲಿ ಆತ್ಮವಿಶ್ವಾಸ, ಸಮಾನತೆ ಮೂಡಿಸಲು ಶ್ರಮಿಸೋಣ :ತಾಪಂ ಇಓ ಅಗ್ನಿ
Related Posts
Add A Comment

