ಮುದ್ದೇಬಿಹಾಳ: ಕುಷ್ಟಗಿ ತಾಲೂಕಿನಲ್ಲಿ ನಡೆದ ಟಗರು ಕಾಳಗದಲ್ಲಿ ತಾಲೂಕಿನ ಶಿರೋಳ ಗ್ರಾಮದ ಟಗರು ಪ್ರಥಮ ಬಹುಮಾನವಾಗಿ ಎಚ್‌ಎಫ್ ಡಿಲಕ್ಸ್ ದ್ವಿಚಕ್ರ ವಾಹನ ಪಡೆದು ಬೀಗಿದೆ.
ಶಿರೋಳ ಗ್ರಾಮದ ಪಮ್ಮು ದಾಸರ ಸಾಕಿದ್ದ ಟಗರು ಅಂದಾಜು ೮೦ಕೆಜಿ ಇದ್ದು ಯಾದಗಿರಿ ಜಿಲ್ಲೆಯ ಕೊಡೆಕಲ್ ಗ್ರಾಮದಿಂದ ಖರೀದಿಸಿದ್ದರಂತೆ. ಪ್ರತಿನಿತ್ಯ ಹುರುಳಿ, ಹಾಲು, ತತ್ತಿ, ಗೋದಿ, ಕಡಲೆಬೇಳೆ ಸೇರಿದಂತೆ ವಿಟ್ಯಾಮಿನ್ ಫುಡ್ ತಿನ್ನುವ ಈ ಟಗರು ಕಳೆದ ಹತ್ತಾರು ಕಾಳದಲ್ಲಿ ಬಹುಮಾನವನ್ನು ತಂದು ಕೊಟ್ಟಿದೆ. ಈ ವರೆಗೂ ಭಾಗವಹಿಸಿದ್ದ ೧೧ ಕಾಳಗದಲ್ಲಿ ೬ ಪ್ರಥಮ, ೩ ದ್ವಿತೀಯ, ೩ ತೃತೀಯ ೨ ಸಮಾಧಾನಕರ ಬಹುಮಾನವನ್ನು ಪಡೆದ ಈ ಟಗರಿಗೆ ೨ ವರ್ಷ ವಯಸ್ಸು.
ಟಗರು ಕಾಳಗದಲ್ಲಿ ಹೆಚ್ಚಿನ ಯಶಸ್ಸು ಪಡೆಯುತ್ತಿರುವ ಈ ಟಗರು ನಮ್ಮೂರಿನ ಹೆಮ್ಮೆ ಎಂದು ಸ್ಥಳೀಯ ನಿವಾಸಿ ಸೋಮು ಶಿರೋಳ ಮೆಚ್ಚಿಕೊಂಡಿದ್ದು ಟಗರು ಸಾಕುವ ಯುವಕ ಚಿಕ್ಕವನಾಗಿದ್ದರೂ ಟಗರುಗಳನ್ನು ತುಂಬಾ ಚನ್ನಾಗಿ ಬೆಳೆಸುತ್ತಿದ್ದಾನೆ. ಈತ ೨,೪,೬,೮ ಹಲ್ಲುಗಳುಳ್ಳ ಟಗರುಗಳನ್ನು ಸಾಕಿದ್ದು ಎಲ್ಲ ಟಗರುಗಳು ಕಾಳಗದಲ್ಲಿ ಒಳ್ಳೆ ಸಾಧನೆ ಮಾಡಿವೆ. ಇವನ ಸಾಧನೆ ನಮ್ಮೂರಿನ ಕೀರ್ತಿ ಹೆಚ್ಚಿಸಿದೆ ಎಂದಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

