ಬಸವನಬಾಗೇವಾಡಿ: ವಿಜಯಪುರ ಜಿಲ್ಲೆಯಲ್ಲಿರುವ ನೂತನ ಎಂಟು ತಾಲೂಕುಗಳಿಗೆ ಎಲ್ಲ ಸರ್ಕಾರಿ ಕಚೇರಿಗಳನ್ನು ಮಂಜೂರು ಮಾಡಿ ರೈತರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಬುಧವಾರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ, ಅವಳಿ ಜಿಲ್ಲೆಯ ಉಸ್ತುವಾರಿ ಅಶೋಕ ಹಾರಿವಾಳ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಅಶೋಕ ಹಾರಿವಾಳ ಅವರು ಸಿಎಂ ಅವರಿಗೆ ತಮ್ಮ ಘನ ಸರ್ಕಾರ ನೂತನ ತಾಲೂಕುಗಳನ್ನು ಘೋಷಣೆ ಮಾಡಿದ್ದು ಶ್ಲಾಘನೀಯ. ನೂತನ ತಾಲೂಕುಗಳು ರಚನೆಯಾಗಿ ಸುಮಾರು ವರ್ಷಗಳು ಕಳೆದರೂ ಎಲ್ಲ ಸರ್ಕಾರಿ ಕಚೇರಿಗಳು ಇಲ್ಲದೇ ಇರುವದರಿಂದಾಗಿ ರೈತರಿಗೆ, ಸಾರ್ವಜನಿಕರಿಗೆ ಆಡಳಿತಾತ್ಮಕವಾಗಿ ತುಂಬಾ ತೊಂದರೆಯಾಗಿದೆ. ಕೂಡಲೇ ಎಲ್ಲ ಎಂಟು ತಾಲೂಕುಗಳಿಗೆ ಎಲ್ಲ ಸರ್ಕಾರಿ ಕಚೇರಿಗಳನ್ನು ಮಂಜೂರು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಗೆ ಸಿಎಂ ಅವರು ಸ್ಪಂದಿಸಿದರು ಎಂದು ದೂರವಾಣಿ ಮೂಲಕ ಪತ್ರಿಕೆಗೆ ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

