ಸಿಂದಗಿ: ರಾಣಿ ಚನ್ನಮ್ಮ ಹಾಗೂ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಮೂರ್ತಿಗಳು ಭವ್ಯ ಹಾಗೂ ನಯನ ಮನೋಹರವಾಗಿವೆ. ವಿಜಯಪುರ ಜಿಲ್ಲೆಯಲ್ಲಿಯೇ ಇಂತಹ ಭವ್ಯ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದ್ದು, ಸಿಂದಗಿಯಲ್ಲಿಯೇ ಪ್ರಥಮ ಎಂದು ಕೂಡಲಸಂಗಮ ಜಗದ್ಗುರು ಪೀಠದ ಜಗದ್ಗುರು ಜಯಬಸವ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ನಗರದಲ್ಲಿ ಕನಕದಾಸ ವೃತ್ತದ ಬಳಿ ಎರಡೂ ಪುತ್ಥಳಿಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕ ಅಶೋಕ ಮನಗೂಳಿ ಅವರ ಮುತುವರ್ಜಿ ಹಾಗೂ ನೇತೃತ್ವದಲ್ಲಿ ಎರಡೂ ಮೂರ್ತಿಗಳು ಸ್ಥಾಪನೆಗೊಂಡದ್ದು ಶ್ಲಾಘನೀಯ ಎಂದು ಹರ್ಷವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ತಾಲೂಕಿನ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಎರಡೂ ಮೂರ್ತಿಗಳ ಪ್ರತಿಷ್ಠಾಪನೆ ನನ್ನ ಅವಧಿಯಲ್ಲಿಯೇ ಸಾಕಾರಗೊಂಡದ್ದು ನನಗೆ ಹರ್ಷ ತಂದಿದೆ. ಈ ಮೂರ್ತಿಗಳ ಅನಾವರಣ ಕಾರ್ಯಕ್ರಮವು ಟಿಪ್ಪು ಸುಲ್ತಾನ ವೃತ್ತದ ಕಾಮಗಾರಿ ಪೂರ್ಣಗೊಂಡ ನಂತರ ಮೂರೂ ಮೂರ್ತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯದ ಹರಗುರು ಚರಮೂರ್ತಿಗಳ ಸಾನಿಧ್ಯ, ರಾಜಕೀಯ ದುರಿಣರ ಸಮ್ಮುಖ ಹಾಗೂ ಮುಖ್ಯಮಂತ್ರಿಗಳ ಹಸ್ತದಿಂದ ನೆರವೇರಿಸಲಾಗುವುದು ಎಂದು ಹೇಳಿದರು.
ಕನಕದಾಸ ವೃತ್ತದಲ್ಲಿ ಚಾಲನೆಗೊಂಡ ಈ ಎರಡೂ ಮೂರ್ತಿಗಳ ಭವ್ಯ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳಾದ ಚಿಟ್ಟ ಹಲಗಿ, ಡೊಳ್ಳು ಕುಣಿತ, ಗೊಂಬೆ ಕುಣಿತ, ಕುದುರೆ ಕುಣಿತ, ಲೇಜಿಮ್ ಸೇರಿದಂತೆ ಇತರ ವಾದ್ಯಗಳೊಂದಿಗೆ ಮೆರವರಣಿಗೆ ನಡೆಯಿತು.
ಚನ್ನಮ್ಮ ವೃತ್ತಕ್ಕೆ ಸ್ಥಳಾವಕಾಶ ನೀಡಿದ ಆಲಮೇಲದ ಶೌಕತ್‌ಅಲಿ ಸುಂಬಡ ಅವರಿಗೆ ಹಾಗೂ ಎರಡೂ ಮೂರ್ತಿಗಳ ತಯಾರಕ ಬೆಂಗಳೂರು ಬಿಡದಿಯ ಶಿಲ್ಪಕಾರ ವಿಜಯ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಆಸಂಗಿಹಾಳ ಶ್ರೀಮಠದ ಶಂಕರಲಿಂಗ ಮಹಾರಾಜರು, ಊರನ ಹಿರಿಯಮಠದ ಶಿವಾನಂದ ಶಿವಾಚಾರ್ಯರು, ಆದಿಶೇಷ ಶ್ರೀಮಠದ ನಾಗರತ್ನ ವೀರಾಜೆಂದ್ರ ಮಹಾಸ್ವಾಮಿಗಳು, ವಿರಕ್ತಮಠದ ಬಸವಪ್ರಭು ಶ್ರೀಗಳು, ಹಿಕ್ಕಣಗುತ್ತಿ ಲಿಂಗಾಯತ ಮಠದ ಪ್ರಭುಲಿಂಗ ಶರಣರು, ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಸೋಮನಗೌಡ ಬಿರಾದಾರ, ಪುರಸಭೆ ಮಾಜಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಡಾ.ಅರವಿಂದ ಮನಗೂಳಿ, ಅಶೋಕ ಅಲ್ಲಾಪೂರ, ಸಿದ್ದನಗೌಡ ಪಾಟೀಲ ಹೂವಿನಹಳ್ಳಿ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಮುತ್ತು ಶಾಬಾದಿ, ಸಂಗನಗೌಡ ಪಾಟೀಲ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಚಂದ್ರಶೇಖರ ನಾಗರಬೆಟ್ಟ, ಅರವಿಂದ ಹಂಗರಗಿ, ಗೊಲ್ಲಾಳಪ್ಪಗೌಟ ಪಾಟೀಲ ಗೋಲಗೇರಿ, ಚನ್ನು ಹೊಡ್ಲ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಅಶೋಕ ಕೋಲಾರಿ, ಗುರುಗೌಡ ಬಿರಾದಾರ, ಆರ್.ಡಿ.ದೇಸಾಯಿ, ಸಿದ್ದು ಜಗತಿ, ರಮೇಶ ಯಾಳಗಿ, ಶಿವಾನಂದ ನಿಗಡಿ, ರಾಕೇಶ ಮಠ, ಮಲ್ಲಿಕಾರ್ಜುನ ಅಲ್ಲಾಪೂರ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಸಾವಿರಾರು ಚನ್ನಮ್ಮ ಮತ್ತು ವಿವೇಕಾನಂದರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ರಾಣಿ ಚನ್ನಮ್ಮ & ಸ್ವಾಮಿ ವಿವೇಕಾನಂದ ಮೂರ್ತಿಗಳ ಭವ್ಯ ಮೆರವಣಿಗೆ
Related Posts
Add A Comment

