Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ

ಅ.೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ

ತಾಲೂಕಾಧ್ಯಕ್ಷರಾಗಿ ಸುಂಗಠಾಣ ಆಯ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಾಸಕರ ಭರವಸೆ ಮೇರೆಗೆ ಧರಣಿ ಸತ್ಯಾಗ್ರಹ ಅಂತ್ಯ
(ರಾಜ್ಯ ) ಜಿಲ್ಲೆ

ಶಾಸಕರ ಭರವಸೆ ಮೇರೆಗೆ ಧರಣಿ ಸತ್ಯಾಗ್ರಹ ಅಂತ್ಯ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೆಸರಟ್ಟಿ – ಕಲಕೇರಿ ಮಾರ್ಗದ ಹದಗೆಟ್ಟಿರುವ ರಸ್ತೆ ದುರಸ್ಥಿಗೆ ಆಗ್ರಹಿಸಿ ನಡೆದ ಧರಣಿ | ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರಾಜುಗೌಡರಿಗೆ ಧರಣಿ ನಿರತರಿಂದ ಮನವಿ

ಉದಯರಶ್ಮಿ ದಿನಪತ್ರಿಕೆ

ತಾಳಿಕೋಟೆ: ತಾಲೂಕಿನ ಕೆಸರಟ್ಟಿ ಕ್ರಾಸ್‌ದಿಂದ ಬಿಂಜಲಭಾವಿ ಮಾರ್ಗವಾಗಿ ಕಲಕೇರಿ ಸಂಪರ್ಕಿಸುವ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿ ಹೋಗಿದ್ದು ಕೂಡಲೇ ನೂತನ ರಸ್ತೆ ನಿರ್ಮಿಸಬೇಕೆಂದು ರಾಷ್ಟ್ರೀಯ ರೈತ ಸಂಘ ಜಿಲ್ಲಾ ಹಾಗೂ ತಾಲೂಕಾ ಮತ್ತು ಗ್ರಾಮ ಘಟಕದ ನೇತೃತ್ವದಲ್ಲಿ ಕಳೆದ ೩ ದಿನಗಳಿಂದ ಬಿಂಜಲಭಾವಿ ಗ್ರಾಮದ ಹತ್ತಿರ ನಡೆದ ಧರಣಿ ಸತ್ಯಾಗ್ರಹವು ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರ ಬರವಸೆಯ ಮೇರೆಗೆ ಅಂತ್ಯಗೊಂಡಿದೆ.
ಶುಕ್ರವಾರರಂದು ಧರಣಿ ನಿರತರ ಸ್ಥಳಕ್ಕೆ ಬೆಟ್ಟಿ ನೀಡಿದ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಅವರು ಮಾತನಾಡಿ, ಸದರಿ ರಸ್ತೆ ದುರಸ್ಥಿಗಾಗಿ ೨೦೨೪ ನವ್ಹೇಂಬರ್ ನಲ್ಲಿ ೫ ಕೋಟಿ ರೂ. ಲೋಕೋಪಯೋಗಿ ಇಲಾಖೆಯಡಿ ಹಾಕಲಾಗಿತ್ತು ಯಾವುದೋ ಕಾರಣಕ್ಕೆ ಕೆಲವರ ಸ್ವಹಿತಾಸಕ್ತಿಗೆ ಸದರಿ ಕೆಲಸವು ಪ್ರಾರಂಭಗೊಳ್ಳದೇ ರದ್ದುಗೊಂಡಿತು. ಸದರಿ ರಸ್ತೆಗೆ ದುರಸ್ಥಿಗೆ ಬಂದ ಅನುದಾನ ಬೇರೆಡೆ ಹೋಯಿತು. ಈಗ ರಸ್ತೆ ದುರಸ್ಥಿಗೆ ಎಲ್ಲರ ಅಪೇಕ್ಷೆಯಂತೆ ಕೂಡಲೇ ತಾತ್ಕಾಲಿಕವಾಗಿ ಗರ್ಸು ಮಿಶ್ರೀಮ ಮರ್ಮು ರಸ್ತೆಯನ್ನು ಮಾಡಿಕೊಡಿಕೊಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ರಸ್ತೆ ಡಾಂಬರಿಕರಣ ಮಾಡುವದಕ್ಕಾಗಿ ಅನುದಾನಕ್ಕಾಗಿ ಸರ್ಕಾರ ಮಟ್ಟದಲ್ಲಿ ಪ್ರಸ್ಥಾವನೆ ಸಲ್ಲಿಸಿದ್ದೇನೆ. ಆದಷ್ಟು ಬೇಗನೇ ಸರ್ಕಾರದಿಂದ ಮಂಜೂರಾತಿ ದೊರೆತ ತಕ್ಷಣವೇ ಢಾಂಬರಿಕರಣ ಮಾಡಿಕೊಡಲಾಗುವದೆಂದು ಧರಣಿ ನಿರತರಿಗೆ ಭರವಸೆ ನೀಡಿದರು.
ಶಾಸಕ ರಾಜುಗೌಡ ಪಾಟೀಲ ಅವರ ಭರವಸೆಯ ಮೇರೆಗೆ ಧರಣಿ ನಿರತರು ಆದಷ್ಟು ಬೇಗನೇ ರಸ್ತೆ ಕಾಮಗಾರಿ ಮಾಡಿಕೊಟ್ಟರೆ ರೈತಾಪಿ ಜನತೆಗೆ ಹಾಗೂ ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂದರಲ್ಲದೇ, ಕೂಡಲೇ ರಸ್ತೆ ದುರಸ್ಥಿಗೆ ಗರ್ಸು ಮರ್ಮು ಕೆಲಸಕ್ಕೆ ಕ್ರಮಕೈಗೊಂಡಿದ್ದಕ್ಕೆ ಸ್ವಾಗತಿಸಿದರಲ್ಲದೇ ಧರಣಿ ಸತ್ಯಾಗ್ರಹವನ್ನು ಹಿಂಪಡೆದುಕೊಳ್ಳುವದಾಗಿ ತಿಳಿಸಿದರು.
ರಾಷ್ಟ್ರೀಯ ರೈತ ಸಂಘದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹಣಮಂತ ವಡ್ಡರ ಅವರು ಕೂಡಲೇ ರಸ್ತೆ ದುರಸ್ಥಿ ಮಾಡಿಕೊಡಬೇಕೆಂದು ಶಾಸಕ ರಾಜುಗೌಡ ಅವರಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ತಹಶಿಲ್ದಾರ ಶ್ರೀಮತಿ ಡಾ.ವಿನಯಾ ಹೂಗಾರ, ಪಿಡಬ್ಲುಡಿ ಅಧಿಕಾರಿ ಅರುಣಕುಮಾರ, ಜೆಡಿಎಸ್ ತಾಲೂಕಾ ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ಜಿಲ್ಲಾ ಉಪಾಧ್ಯಕ್ಷ ಮೈಹಿಬೂಬಾಷಾ ಮನಗೂಳಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಣುಕಾ ಪಾಟೀಲ, ತಾಲೂಕಾ ಅಧ್ಯಕ್ಷ ಅಶೋಕಗೌಡ ಪಾಟೀಲ, ತಾಲೂಕಾ ಯುವ ಮೂರ್ಚಾ ಅಧ್ಯಕ್ಷ ಗೌಡಪ್ಪಗೌಡ ಹಳಿಮನಿ ಅಸ್ಕಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ಶರಣು ಕೌದಿ, ಗ್ರಾಮ ಘಟಕದ ಅಧ್ಯಕ್ಷ ವಿಜಯಕುಮಾರ ಉಕ್ಕಲಿ, ಕೆಸರಟ್ಟಿ ಗ್ರಾಮದ ಮುಖಂಡರಾದ ರಾಮನಗೌಡ ಪಾಟೀಲ, ಬಸನಗೌಡ ಬಿರಾದಾರ, ಗುರುನಾಥಗೌಡ ಪಾಟೀಲ, ಬಿಂಜಲಭಾವಿ ಗ್ರಾಮದ ಮುಖಂಡರುಗಳಾದ ಸಿದ್ದಣ್ಣ ಅಸ್ಕಿ, ಮಲಕನಗೌಡ ಬಿರಾದಾರ, ಸಾಯಬಣ್ಣ ಉಕ್ಕಲಿ, ಬಸಯ್ಯ ಹಿರೇಮಠ, ಶಾಂತಗೌಡ ಬಿರಾದಾರ, ಮಹ್ಮದಲಿ ಮಕಾಂದಾರ, ಚನ್ನಾರೆಡ್ಡಿಗೌಡ ಬಿರಾದಾರ, ಒಳಗೊಂಡು ಮೊದಲಾದವರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ

ಅ.೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ

ತಾಲೂಕಾಧ್ಯಕ್ಷರಾಗಿ ಸುಂಗಠಾಣ ಆಯ್ಕೆ

ಗುಬ್ಬೇವಾಡದ ಬಾಲಕ ಕಾಣೆ: ಪ್ರಕರಣ ದಾಖಲು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ
    In (ರಾಜ್ಯ ) ಜಿಲ್ಲೆ
  • ಅ.೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ
    In (ರಾಜ್ಯ ) ಜಿಲ್ಲೆ
  • ತಾಲೂಕಾಧ್ಯಕ್ಷರಾಗಿ ಸುಂಗಠಾಣ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಗುಬ್ಬೇವಾಡದ ಬಾಲಕ ಕಾಣೆ: ಪ್ರಕರಣ ದಾಖಲು
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿನಿಯರು ಸ್ವಾವಲಂಬಿಗಳಾಗಿ ಉತ್ತಮ ಬದುಕು ಕಟ್ಟಿಕೊಳ್ಳಲಿ
    In (ರಾಜ್ಯ ) ಜಿಲ್ಲೆ
  • ಸೆ.೨೫ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಯುರ್ವೇದವು ಗ್ರಾಮಗಳಿಗೂ ತಲುಪಲಿ :ಡಾ.ಸಂಬಣ್ಣಿ
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆಯಲ್ಲಿ ೨೧ ದಿನಗಳ ರೈತರ ಧರಣಿ ಹಿಂಪಡೆತ
    In (ರಾಜ್ಯ ) ಜಿಲ್ಲೆ
  • ಸೆ.೨೮ ರಂದು ರಾಠೋಡ ಜಾತ್ರಾಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಪೌರ ಕಾರ್ಮಿಕರ ಪಾತ್ರ ಮಹತ್ವದ್ದು :ಕೋಳಶೆಟ್ಟಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.