Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ತಾಲೂಕಿನ ಕಾಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ‘೧೦೮’ ಆರೋಗ್ಯ ಕವಚ ವಾಹನಕ್ಕೆ ಕೊನೆಗೂ ಕಾಯಕಲ್ಪ ಸಿಕ್ಕಂತಾಗಿದ್ದು ಶನಿವಾರ ಸ್ಥಳೀಯ ಮಾಜಿ ಗ್ರಾ.ಪಂ ಅಧ್ಯಕ್ಷ ಜಾವೀದ ಇನಾಮದಾರ ಹಾಗೂ ಆಸ್ಪತ್ರೆಯ ವೈದ್ಯ ಡಾ. ರಂಗನಾಥ ವೈದ್ಯ ಸೇರಿ ಜಂಟಿಯಾಗಿ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಇನಾಮದಾರ ಸಾರ್ವಜನಿಕ ಆರೋಗ್ಯ ರಕ್ಷಣೆ ಸಂವಿಧಾನಬದ್ಧ ಹಕ್ಕು. ಹಾಗಾಗಿ, ಸಾರ್ವಜನಿಕರನ್ನು ಆರೋಗ್ಯವಂತರನ್ನಾಗಿ ಮಾಡಲು ಆರೋಗ್ಯ ಇಲಾಖೆ ಬದ್ಧವಾಗಿರಬೇಕು. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಔಷಧಿಗಳ ಕೊರೆತೆ ಕಂಡು ಬರುತ್ತವೆ. ಆದರೆ ನಮ್ಮೂರಿನ ಆಸ್ಪತ್ರೆಯಲ್ಲಿ ಯಾವುದೇ ಕೊರತೆ ಇಲ್ಲ. ಆದರೇ ರೋಗಿಗಳನ್ನು ಕರೆತರಲು, ಹೆರಿಗೆ ನೋವಿನಿಂದ ಬಳಲುವ ರೋಗಿಗಳಿಗೆ ಆಸ್ಪತ್ರೆಗೆ ಕರೆತರಲು ವಾಹನ ಇಲ್ಲದೇ ತುಂಬಾ ತೊಂದರೆ ಆಗುತ್ತಿತ್ತು. ಸದ್ಯಪ್ರಾರಂಭಗೊಂಡ ನೂತನ ೧೦೮ ವಾಹನ ಸುತ್ತಮತ್ತಲಿನ ಗ್ರಾಮಸ್ಥರಿಗೆ ಆಸರೆಯಾಗಿದೆ. ಇದರ ಸದುಪಯೋಗ ಪಡೆದಕೊಳ್ಳಬೇಕು ಎಂದರು.ಸಭೆಯಲ್ಲಿ ವೈದ್ಯಾಧಿಕಾರಿ ಡಾ.ರಂಗನಾಥ ವೈದ್ಯ, ಗ್ರಾಮ ಪಂಚಾಯತಿ ಸದಸ್ಯ ಸತೀಶ ರಾಠೋಡ, ಸ್ಥಳೀಯರಾದ ನಿಂಗಪ್ಪ ಹುಂಡಿ, ಗುರಪ್ಪ ಸಜ್ಜನ, ಜೆ ಎಚ್ ಮುಲ್ಲಾ, ಸಿದ್ದಪ್ಪ…
“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್. ಕೆ. ಬೆಂಗಳೂರು ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೆರೆಕಟ್ಟೆಗಳು, ನದಿ ಕಾಲುವೆಗಳಿಗೆ ನೀರು ಹರಿಯುತ್ತಿದೆ. ಮುಂದಿನ ಕೆಲವು ತಿಂಗಳುಗಳು ಹೀಗೆ ಮಳೆ ಮುಂದುವರಿದರೆ ಕಳೆದ ಬಾರಿಯ ಬರಗಾಲದ ಛಾಯೆ ಮರೆಯಾಗಿ, ಕೃಷಿ ಕ್ಷೇತ್ರ ಒಂದಷ್ಟು ಉತ್ತಮ ಬೆಳವಣಿಗೆ ಕಾಣುತ್ತದೆ. ಇದು ರೈತರ ಮತ್ತು ಕೃಷಿ ಅವಲಂಬಿತರ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಅಸಂಖ್ಯಾತ ಜನ ಮತ್ತು ಸರ್ಕಾರದ ಹಿತ ದೃಷ್ಟಿಯಿಂದ ಅತ್ಯುತ್ತಮ ಬೆಳವಣಿಗೆ.. ನಿಜವಾಗಲೂ ಇಡೀ ಆಡಳಿತ ವ್ಯವಸ್ಥೆ ಮತ್ತು ಅದಕ್ಕೆ ಪೂರಕವಾದ ಎಲ್ಲಾ ಕ್ಷೇತ್ರಗಳು ಈ ಬಗ್ಗೆ ಸಾಕಷ್ಟು ಗಮನಹರಿಸಿ ಒಳ್ಳೆಯ ಕೆಲಸ ಮಾಡಬೇಕಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಗಳಿಗೆ ಹಾಗು ಹಣಕಾಸು ಸಾಲ ಸೌಲಭ್ಯಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ. ಆದರೆ ದುರಾದೃಷ್ಟವಶಾತ್ ಕಳೆದ ಕೆಲವು ವಾರಗಳಿಂದ ಚುನಾವಣಾ ರಾಜಕೀಯ, ತದನಂತರದಲ್ಲಿ ನೇಹಾ ಕೊಲೆ, ಪ್ರಜ್ವಲ್ ವಿಕೃತ ಕಾಮ, ದರ್ಶನ್ ಕ್ರೌರ್ಯ, ಈಗ ಯಡಿಯೂರಪ್ಪನವರ ಫೋಕ್ಸೋ ಹೀಗೆ ಆಡಳಿತ, ಮಾಧ್ಯಮ ಮತ್ತು ಜನರ ಮನಸ್ಸಿನಲ್ಲಿ…
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧ್ಯಕ್ಷತೆಯಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ವಿಜಯಪುರ: ಮುಂಗಾರು ಹಂಗಾಮಿನಲ್ಲಿ ೭೧೧೩೭೦ ಹೆಕ್ಟೇರ್ ಗುರಿಗೆ ೧೯೫೬೭ ಹೆಕ್ಟೇರ್ ಬಿತ್ತನೆಯಾಗಿದೆ. ಮಳೆ ಬಿಡುವಿನ ನಂತರ ಬಿತ್ತನೆ ಪ್ರಗತಿಯಾಗಲಿದ್ದು, ಮುಂಗಾರು ಹಂಗಾಮಿನಲ್ಲಿ ಯಾವುದೇ ಬೀಜ, ರಸಗೊಬ್ಬರದ ಕೊರತೆಯಾದಂತೆ ಸಮರ್ಪಕವಾಗಿ ಪೂರೈಸುವಂತೆ ಅಧಿಕಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರುಗಿದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರ, ಬೀಜ ವಿತರಣೆಯಲ್ಲಿ ಯಾವುದೇ ಗೊಂದಲಗಳಾಗದಂತೆ ನೋಡಿಕೊಂಡು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ವಿತರಣೆ ಸಂದರ್ಭದಲ್ಲಿ ಜನಜಂಗುಳಿಯಾಗದಂತೆ ನೋಡಿಕೊಂಡು ಪೂರ್ವಸಿದ್ಧತೆಯೊಂದಿಗೆ ವಿತರಣೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.ಮುಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೆ ೭೭೨೦.೮೦ ಕ್ವಿಂ. ವಿವಿಧ ಬಿತ್ತನೆ ಬೀಜ ವಿತರಿಸಲಾಗಿದೆ. ಬೀಜದ ಯಾವುದೇ ಕೊರತೆ ಇಲ್ಲ. ೩೨೦೩.೭೨…
ವಿಜಯಪುರ: ಸನಾತನ ಹಿಂದೂ ಧರ್ಮ ಭಾರತೀಯ ಸಂಸ್ಕೃತಿ ಕಾಪಾಡಲು ಸಂತತಿ ಬೆಳೆಯಲು ಬ್ರಾಹ್ಮಣರು ಸೇರಿದಂತೆ ಸಮಸ್ತ ಹಿಂದೂ ಸಮಾಜ ವಿವಾಹ ಆಗುವದು ಅತಿ ಅವಶ್ಯ ಎಂದು ಆನಂದವನ ಅಗಡಿಯ ವೇ.ಬ್ರ.ಶಂಕರಭಟ್ಟ ಜೋಶಿ (ಕಮಡೊಳ್ಳಿ) ನುಡಿದರು. ಶನಿವಾರ ನಗರದ ಹೊರವಲಯದ ಶ್ರೀ ಶಿವಚಂದಬರೇಶ್ವ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಜಯಪುರದಿಂದ ಶ್ರೀಕ್ಷೇತ್ರ ಕೆಂಗೇರಿ ಮುರುಗೋಡಕ್ಕೆ ಸತತ ೨೫ ವರ್ಷಗಳ ಪಾದಯಾತ್ರೆ ಸಂಪನ್ನಗೊಂಡ ಪ್ರಯುಕ್ತ ಪಾದಯಾತ್ರಿಕರಿಗೆ ಸೇವೆ ಸಲ್ಲಿಸಿದ ಭಕ್ತಾದಿಗಳಿಗೆ ಸನ್ಮಾನ ಸಮಾರಂಭ ನಿಮಿತ್ಯ ವಿಶೇಷವಾಗಿ ಹಮ್ಮಿಕೊಂಡಿದ್ದ ಸ್ವಯಂವರ ಪಾರ್ವತಿ ಹೋಮದ ನೇತೃತ್ವವನ್ನು ವಹಿಸಿ ಆಶೀರ್ವಚನ ನೀಡಿದರು.ಬ್ರಾಹ್ಮಣ ಸಮಾಜದಲ್ಲಿನ ಗಂಡು-ಹೆಣ್ಣುಗಳ ವಿವಾಹದಲ್ಲಿ ಸಮಸ್ತ ಬ್ರಾಹ್ಮಣ ಸಮಾಜದ ಸಮತೋಲನ ಕಾಪಾಡಿಕೊಳ್ಳುವದರ ಜೊತೆಗೆ ವರ ಹಾಗೂ ಕನ್ಯಾಗಳ ಪಿತ್ರುಗಳ ಪೋಷಕರು ಹೊಂದಿಕೊಂಡು ಹೋಗಬೇಕೆಂದು ಕರೆ ನೀಡಿದರು.ಬ್ರಾಹ್ಮಣರಲ್ಲಿ ವಿಚ್ಚೇದನ ಪ್ರಮೇಯ ಬರಬಾರದು: ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಬ್ರಾಹ್ಮರದಲ್ಲೂ ವಿಚ್ಚೇದನ ಪ್ರಕರಣ ಕಂಡುಬರುತ್ತಿವೆ. ಅದು ಆಗಬಾರದು ವಿಪ್ರರಲ್ಲಿ ವಿವಾಹ ವಿಚ್ಚೇದನ ಪ್ರಮೇಯ ಎಂದಿಗು ಬರಬಾರದು. ಸಂಸಾರ ಎಂದರೆ…
ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಬಸವನಿಷ್ಠರಾದ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿಗಳು ೯೩ ನೇ ವರ್ಷದ ವಯೋವೃದ್ಧರಾಗಿದ್ದಾರೆ. ಗುರುವಾರ ಜರುಗಿದ ಇವರ ಅಭಿನಂದನಾ ಗ್ರಂಥ ನಿರಂಜನ ಜ್ಯೋತಿ ಗ್ರಂಥ ಬಿಡುಗಡೆಯ ಸಮಾರಂಭದಲ್ಲಿ ಗ್ರಂಥ ಬಿಡುಗಡೆ ಸಂದರ್ಭದಲ್ಲಿ ಇವರನ್ನು ವೇದಿಕೆಯ ಮೇಲೆ ಕರೆಯದೇ ಅವಮಾನ ಮಾಡಲಾಯಿತು. ದೂರದಿಂದ ಬಂದ ಭಕ್ತರು ಈ ಘಟನೆಯಿಂದ ತುಂಬಾ ನೊಂದುಕೊಂಡು ಬೇಸರ ವ್ಯಕ್ತಪಡಿಸಿದರು ಎಂದು ಬಸವನಬಾಗೇವಾಡಿಯ ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವೇದಿಕೆಯಲ್ಲಿ ಹಿರಿಯ ಶ್ರೀಗಳ ಅನುಪಸ್ಥಿತಿಯಲ್ಲಿ ಗ್ರಂಥ ಲೋಕಾರ್ಪಣೆವಾಗಿರುವುದು ಸರಿಯಾದ ಕ್ರಮವಾಗಿರಲಿಲ್ಲ. ಗ್ರಂಥ ಪ್ರಧಾನ ಸಂಪಾದಕ ಡಾ.ಸೋಮನಾಥ ಯಾಳವಾರ ಅವರು ತಮ್ಮ ಗ್ರಂಥ ಪರಿಚಯ ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪಿಸಿ ವೇದಿಕೆಯ ಬ್ಯಾನರ್ ಸಹ ಇಲ್ಲದೇ ಇರುವದನ್ನು ಸಹ ಕಾರ್ಯಕ್ರಮದಲ್ಲಿ ಗಮನಕ್ಕೆ ತಂದರು. ಆಗ ಹಿರಿಯ ಶ್ರೀಗಳನ್ನು ವೇದಿಕೆಯ ಕರೆದು ಸಂಪಾದಕ ಮಂಡಳಿಯಿಂದ ಅವರಿಗೆ ಗ್ರಂಥ ಸಮರ್ಪಿಸಿ ಗೌರವಿಸಿದರ ನಂತರ ಭಕ್ತರ ಬೇಸರ ಕೊಂಚ ದೂರವಾಯಿತು. ಬ್ಯಾನರ್…
ಬಸವನಬಾಗೇವಾಡಿ: ಜನಪದ ಶೈಲಿ ಪ್ರತಿಯೊಬ್ಬರನ್ನೂ ಮನಸೂರೆಗೊಳ್ಳುತ್ತದೆ. ಜನಪದ ಸಾಹಿತ್ಯಕ್ಕೆ ವಿದೇಶಿಯರು ಮಾರುಹೋಗಿರುವದನ್ನು ನಾವು ಯುಟ್ಯೂಬೊಂದರಲ್ಲಿ ನಾವು ನೋಡಿದ್ದೇವೆ ಎಂದು ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳವರ ೯೦ ನೇ ಜಾತ್ರಾಮಹೋತ್ಸವದಂಗವಾಗಿ ಶ್ರೀಮಠ, ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನಪದ ಸೊಗಡು ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜಾನಪದ ಸೊಗಡು ಇರುವದನ್ನು ಕಾಣುತ್ತೇವೆ. ಇಂದಿನ ಆಧುನಿಕ ಕಾಲದಲ್ಲಿ ಜನಪದ ಸಾಹಿತ್ಯವೆಂದು ಅಶ್ಲೀಲವಾಗಿ ರಚನೆ ಮಾಡಿ ಹಾಡುತ್ತಿರುವುದು ಜನಪದ ಸಾಹಿತ್ಯಕ್ಕೆ ಧಕ್ಕೆ ಬರುವ ಸಾಧ್ಯತೆಯಿದೆ. ಅವರು ಜನಪದ ಸಾಹಿತ್ಯಕ್ಕೆ ಧಕ್ಕೆ ಬಾರದಂತೆ ಜನಪದ ಸಾಹಿತ್ಯವನ್ನು ರಚನೆ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ. ಅದು ಎಂದಿಗೂ ಅಳಿದು ಹೋಗುವುದಿಲ್ಲ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ಮಾತನಾಡಿ, ಜನ ಸಾಮಾನ್ಯರ ಸಾಹಿತ್ಯವೇ ಜಾನಪದ ಸಾಹಿತ್ಯ. ಜನಪದ ಸಾಹಿತ್ಯದಲ್ಲಿ ಅನುಭಾವದ ನುಡಿಗಟ್ಟುಗಳಿರುವದರಿಂದ…
ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಕಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳವರ ೯೦ ನೇ ಜಾತ್ರಾಮಹೋತ್ಸವದಲ್ಲಿ ಶ್ರೀಮಠದ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿಯವರಿಗೆ ಗುರುವಾರ ನಿರಂಜನಜ್ಯೋತಿ ಅಭಿನಂದನಾ ಗ್ರಂಥವನ್ನು ಸಂಪಾದಕ ಮಂಡಳಿಯವರು ಸಮರ್ಪಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಗ್ರಂಥದ ಪ್ರಧಾನ ಸಂಪಾದಕ, ಸಂಶೋಧಕ ಡಾ.ಸೋಮನಾಥ ಯಾಳವಾರ ಮಾತನಾಡಿ, ನಾಡಿನಲ್ಲಿ ಇಂಗಳೇಶ್ವರ ಗ್ರಾಮದ ವಚನ ಶಿಲಾ ಮಂಟಪ ಎಲ್ಲ ಮಠಗಳಿಗೆ ಮಾದರಿಯಾಗುವಂತೆ ಚನ್ನಬಸವ ಸ್ವಾಮೀಜಿಗಳು ವಚನಗಳನ್ನು ಶಿಲೆಯಲ್ಲಿ ಬರೆಸುವ ಮೂಲಕ ವಚನ ಶಿಲಾ ಮಂಟಪವನ್ನು ನಿರ್ಮಾಣ ಮಾಡಿದ್ದು ಐತಿಹಾಸಿಕ ದಾಖಲೆಯಾಗಿದೆ. ಈ ಮಠವು ವಚನಗಳಿಗೆ ಮುಕುಟ ಮಣಿಯಂತೆ ಕಂಗೊಳಿಸುತ್ತಿದೆ. ಶ್ರೀಗಳು ಚನ್ನಬಸವಣ್ಣನವರ ಕರಣ ಹಸಿಗೆ ಪ್ರವಚನದ ಮೂಲಕ ಜನರ ಮನಸೂರೆಗೊಂಡಿದ್ದಾರೆ. ಇಂತಹ ಹಿರಿಯ ಶ್ರೀಗಳ ಕುರಿತು ೮೦೦ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡ ನಿರಂಜನ ಜ್ಯೋತಿ ಎಂಬ ಅಭಿನಂದನಾ ಗ್ರಂಥ ಜನರ ಮನಕ್ಕೆ ತಲುಪಲಿದೆ. ಈ ಗ್ರಂಥವು ನಾನಾ ಲೇಖಕರು ಬರೆದ ಉತ್ತಮ ಲೇಖನಗಳನ್ನು ಒಳಗೊಂಡಿದೆ. ಮುಂದಿನ ಜನಾಂಗಕ್ಕೆ ಶ್ರೀಮಠದ ಚನ್ನಬಸವ ಸ್ವಾಮೀಜಿಗಳ ಬದುಕು, ಅವರು ವಚನ ಶಿಲಾ…
ದೇವರಹಿಪ್ಪರಗಿ: ಈ ವರ್ಷ ಸಕಾಲದಲ್ಲಿ ಮಳೆಯಾಗಿದ್ದು, ಬಿತ್ತನೆ ಮಾಡುವ ಸಮಯದಲ್ಲಿ ರೈತರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮುಂಗಾರು ಬಿತ್ತನೆಗೆ ಅಗತ್ಯವಾದ ಎಲ್ಲಾ ರೀತಿಯ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ರೈತಬಾಂಧವರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮುಳಸಾವಳಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಂಗನಗೌಡ ಬಿರಾದಾರ ಹೇಳಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮದ ವಿ.ಪ್ರಾ.ಗ್ರಾ.ಕೃ.ಸ.ಸಂಘದಲ್ಲಿ ಶುಕ್ರವಾರ ರೈತರಿಗೆ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇವರಹಿಪ್ಪರಗಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ನೀಡಲಾಗುವ ಬಿತ್ತನೆ ಬೀಜಗಳನ್ನೇ ಇಲ್ಲಿ ನೀಡಲಾಗುತ್ತಿದೆ. ಯಾವುದೇ ರೀತಿಯ ತೊಂದರೆ ಹಾಗೂ ವಿಳಂಬವಾಗದಂತೆ ವ್ಯವಸ್ಥೆಯನ್ನು ಮಾಡಲಾಗಿದೆ. ರೈತರು ಬೇಗನೇ ತಮಗೆ ಅಗತ್ಯವಾದ ಬೀಜಗಳನ್ನು ಪಡೆದು ಸಕಾಲದಲ್ಲಿ ಜಮೀನು ಬಿತ್ತುವುದರ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಪಿಕೆಪಿಎಸ್ ಸಿಇಓ ಬಿ.ಎ.ಪಾಟೀಲ, ಲೆಕ್ಕಿಗ ಮಲ್ಲನಗೌಡ ಬಿರಾದಾರ, ಉಪಾಧ್ಯಕ್ಷ ಕಲ್ಲಪ್ಪ ತಳವಾರ, ನಿರ್ದೇಶಕರಾದ ಕಲ್ಲಪ್ಪ ಮೂಲಿಮನಿ, ಬಸವರಾಜ ಬಮ್ಮನಳ್ಳಿ, ಮಲಕಪ್ಪ ನಾಯ್ಕೋಡಿ, ಶ್ರೀಶೈಲ ಹದರಿ, ಚನ್ನು ಹದರಿ, ಶಿವಾನಂದ…
ದೇವರಹಿಪ್ಪರಗಿ: ಸಾತಿಹಾಳ ಗ್ರಾಮದ ಎಸ್.ಸಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೊಳಚೆ ಹಾಗೂ ಮಳೆ ನೀರು ನಿಂತು ಸಾರ್ವಜನಿಕರು ನಡೆಯಲು ಬಾರದಂತಾಗಿದ್ದು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.ತಾಲ್ಲೂಕಿನ ಸಾತಿಹಾಳ ಗ್ರಾಮದ ಎಸ್.ಸಿ.ಕಾಲೋನಿಗೆ ತೆರಳುವ ರಸ್ತೆಯನ್ನು ಈ ಮೊದಲೇ ಸಿ.ಸಿ ರಸ್ತೆಯಾಗಿ ನಿರ್ಮಿಸಿ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಈಗ ಸಿ.ಸಿ ರಸ್ತೆ ಕಾಣದಂತಾಗಿದ್ದು ಕಳಪೆ ಕಾಮಗಾರಿಗೆ ನಿದರ್ಶನವಾಗಿದೆ. ಪ್ರತಿವರ್ಷ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಗ್ರಾಮದ ರಸ್ತೆಗಳಲ್ಲಿ ಕೊಳಚೆ ಹಾಗೂ ಮಳೆ ನೀರು ನಿಂತು ಕೆಸರಿನ ಗದ್ದೆಗಳಂತಾಗುತ್ತಿವೆ. ಜೊತೆಗೆ ಮನೆಗಳಲ್ಲಿಯೂ ನೀರು ನುಗ್ಗುತ್ತಿದೆ.ಸಾತಿಹಾಳ ಡೋಣಿ ನದಿ ತೀರದ ಗ್ರಾಮವಾಗಿದ್ದು ಎರೆಮಣ್ಣಿನಿಂದ ಕೂಡಿದ್ದಾಗಿದೆ. ಸ್ವಲ್ಪವೇ ಮಳೆ ಆದರೆ ಸಾಕು ರಸ್ತೆಗಳೆಲ್ಲಾ ಕೆಸರುಮಯವಾಗಿ ನಡೆಯಲು ಬಾರದಂತಾಗುತ್ತವೆ. ಇಂಥ ರಸ್ತೆಗಳಲ್ಲಿಯೇ ವೃದ್ಧರು, ಅಂಗವಿಕಲರು ನಡೆದಾಡಲು ಹರಸಾಹಸ ಪಡುವಂತಾಗಿದೆ. ಓಣಿಗಳೆಲ್ಲಾ ನಿಂತ ಗಲೀಜು ನೀರಿನಿಂದ ಗಬ್ಬೆದ್ದು ನಾರುತ್ತಿವೆ. ಪರಿಸ್ಥಿತಿ ಆಯೋಮಯವಾಗಿದೆ. ಇದು ಮುಂದೆ…
ಬಸವನಬಾಗೇವಾಡಿ: ಪಟ್ಟಣದ ಕೋರಮಾರ ರಸ್ತೆಗೆ ಹೊಂದಿಕೊಂಡಿರುವ ಸರ್ವೇ ನಂ.೩೫೨ ಸೇರಿದಂತೆ ಅನೇಕ ಜಮೀನುಗಳ ಬಿತ್ತನೆ ಕಾರ್ಯಕ್ಕೆ ಬಿತ್ತನೆ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ಕೆಲ ಜಮೀನುಗಳ ರೈತರು ಶಿರಸ್ತೇದಾರ ಮಹೇಶ ಬಳಗಾನೂರ ಅವರ ಮೂಲಕ ಶುಕ್ರವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಬಿಸಿಲಿನ ತಾಪಮಾನಕ್ಕೆ ತತ್ತರಿಸಿ ಹೋದ ರೈತರಿಗೆ ವರಕೃಪೆಯಿಂದ ಮಳೆಯಾಗಿ ನೆಮ್ಮದಿಯ ನಿಟ್ಟಿಸಿರು ಬಿಟ್ಟ ರೈತನಿಗೆ ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಸೇರಿ ಇತರೇ ಕಾರ್ಯಗಳಿಗೆ ಕೆಲ ಜಮೀನುಗಳ ಪ್ರಬಲ ವ್ಯಕ್ತಿಗಳು ದಾರಿಯನ್ನು ಕೊಡದೇ ದಾರಿಯಲ್ಲಿ ತೆಗ್ಗುಗಳನ್ನು ತೋಡಿ ನಿಮಗೆ ದಾರಿಯಿಲ್ಲ. ನೀವು ನ್ಯಾಯಾಲಯಕ್ಕೆ ಹೋಗಿ ದಾರಿ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಕೂಡಲೇ ತಹಸೀಲ್ದಾರರು ಅವರ ವಿರುದ್ಧ ಕ್ರಮಕೈಗೊಂಡು ರೈತರ ದಾರಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ರವಿ ಗೊಲ್ಲರ, ಸುರೇಶ ಗುಂಡಿ, ಐ.ಎಂ.ನಾಗೂರ, ಜಂಗಪ್ಪ ಗೊಲ್ಲಾರ, ವಿರೇಶ ಬಸರಕೋಡ, ಭೀಮರೆಡ್ಡಿ ಜಾಯವಾಡಗಿ ಇತರರು ಇದ್ದರು.
