Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ

ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ

ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮನ – ಮನೆ – ಮನಸ್ಸಿನ ವಾತಾವರಣ..
ವಿಶೇಷ ಲೇಖನ

ಮನ – ಮನೆ – ಮನಸ್ಸಿನ ವಾತಾವರಣ..

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್. ಕೆ. ಬೆಂಗಳೂರು

ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೆರೆಕಟ್ಟೆಗಳು, ನದಿ ಕಾಲುವೆಗಳಿಗೆ ನೀರು ಹರಿಯುತ್ತಿದೆ. ಮುಂದಿನ ಕೆಲವು ತಿಂಗಳುಗಳು ಹೀಗೆ ಮಳೆ ಮುಂದುವರಿದರೆ ಕಳೆದ ಬಾರಿಯ ಬರಗಾಲದ ಛಾಯೆ ಮರೆಯಾಗಿ, ಕೃಷಿ ಕ್ಷೇತ್ರ ಒಂದಷ್ಟು ಉತ್ತಮ ಬೆಳವಣಿಗೆ ಕಾಣುತ್ತದೆ. ಇದು ರೈತರ ಮತ್ತು ಕೃಷಿ ಅವಲಂಬಿತರ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಅಸಂಖ್ಯಾತ ಜನ ಮತ್ತು ಸರ್ಕಾರದ ಹಿತ ದೃಷ್ಟಿಯಿಂದ ಅತ್ಯುತ್ತಮ ಬೆಳವಣಿಗೆ..

ನಿಜವಾಗಲೂ ಇಡೀ ಆಡಳಿತ ವ್ಯವಸ್ಥೆ ಮತ್ತು ಅದಕ್ಕೆ ಪೂರಕವಾದ ಎಲ್ಲಾ ಕ್ಷೇತ್ರಗಳು ಈ ಬಗ್ಗೆ ಸಾಕಷ್ಟು ಗಮನಹರಿಸಿ ಒಳ್ಳೆಯ ಕೆಲಸ ಮಾಡಬೇಕಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಗಳಿಗೆ ಹಾಗು ಹಣಕಾಸು ಸಾಲ ಸೌಲಭ್ಯಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ. ಆದರೆ ದುರಾದೃಷ್ಟವಶಾತ್ ಕಳೆದ ಕೆಲವು ವಾರಗಳಿಂದ ಚುನಾವಣಾ ರಾಜಕೀಯ, ತದನಂತರದಲ್ಲಿ ನೇಹಾ ಕೊಲೆ, ಪ್ರಜ್ವಲ್ ವಿಕೃತ ಕಾಮ, ದರ್ಶನ್ ಕ್ರೌರ್ಯ, ಈಗ ಯಡಿಯೂರಪ್ಪನವರ ಫೋಕ್ಸೋ ಹೀಗೆ ಆಡಳಿತ, ಮಾಧ್ಯಮ ಮತ್ತು ಜನರ ಮನಸ್ಸಿನಲ್ಲಿ ಬಹುತೇಕ ಇದೇ ವಿಷಯ ತಲೆಯಲ್ಲಿ ತುಂಬಿಕೊಂಡಿದೆ..

ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ಯಾವ ವಿಷಯ ಬ್ರೇಕಿಂಗ್ ನ್ಯೂಸ್ ಮತ್ತು ಲೀಡ್ ಆಗುತ್ತದೆಯೋ ಅದು ಹೆಚ್ಚು ವ್ಯಾಪಕವಾಗಿ ಜನರ ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತದೆ. ಬೆಳಗಿನ ವಾಯುವಿಹಾರವೇ ಇರಲಿ, ಹೋಟೆಲ್ಗಳೇ ಇರಲಿ, ವಿಶ್ರಾಂತಿ ಮತ್ತು ಹರಟೆ ಕಟ್ಟೆಗಳೇ ಇರಲಿ, ಮೊಬೈಲಿನ ಆತ್ಮೀಯ ಜೊತೆಗಾರೇ ಇರಲಿ ಎಲ್ಲಾ ಕಡೆಯೂ ಈ ವಿಷಯಗಳೇ ಪ್ರಮುಖವಾಗಿ ಸ್ಥಾನ ಪಡೆದು ನಿಜಕ್ಕೂ ಅಭಿವೃದ್ದಿಯ, ನೆಮ್ಮದಿಯ ಮೂಲ ವಿಷಯಗಳು ಮೂಲೆಗುಂಪಾಗುತ್ತವೆ..

ಈ ಸಮಾಜದಲ್ಲಿ, ಆಡಳಿತದಲ್ಲಿ, ಮಾಧ್ಯಮಗಳಲ್ಲಿ, ಜನರ ಮನಸ್ಸಿನಲ್ಲಿ, ಯಾವ ವಿಷಯ ಹೆಚ್ಚು ಪ್ರಾಮುಖ್ಯತೆ ಪಡೆಯಬೇಕು, ಯಾವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಆಗಬೇಕು, ಯಾವ ದೃಷ್ಟಿಕೋನದಿಂದ ಅಭಿವೃದ್ಧಿ ಹೊಂದಬೇಕು ಈ ವಿಷಯಗಳು ಹೆಚ್ಚು ಹೆಚ್ಚು ಸಾರ್ವಜನಿಕ ಚರ್ಚೆಗೆ ಬರದೇ, ಈ ರೀತಿಯ ಕೆಲವು ಪ್ರಖ್ಯಾತ ವ್ಯಕ್ತಿಗಳ ದುಷ್ಕೃತ್ಯಗಳೇ ಮುಖ್ಯ ವಾಹಿನಿಯಲ್ಲಿ ಹರಿದಾಡುವಾಗ ಯುವ ಜನಾಂಗ ಮತ್ತು ಸಾಮಾನ್ಯ ಜನ ಇದರ ಪ್ರಭಾವಕ್ಕೆ ಒಳಗಾಗಿ ನೈಜ, ಕ್ರಿಯಾತ್ಮಕ ಭಾವನೆಗಳನ್ನು ನಿಧಾನವಾಗಿ ಮರೆಯುತ್ತಾರೆ.
ಇಡೀ ವಾತಾವರಣ ಕಲುಷಿತವಾಗಿದೆಯೇನೋ ಎಂಬ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲೂ ಉಂಟಾಗುತ್ತದೆ..

ಶಿಕ್ಷಣ, ಮಾಧ್ಯಮ, ಹಿರಿಯರ ಹಿತನುಡಿಗಳು ನಿಜವಾಗಲೂ ಸಂಸ್ಕೃತಿಯ ವಾಹಕಗಳು. ಸಾಂಸ್ಕೃತಿಕ ವಾತಾವರಣ ಅತ್ಯಂತ ಮನೋಲ್ಲಾಸದ, ಅರಿವಿನ, ಜ್ಞಾನದ ನೆಲೆಯಲ್ಲಿ ಸಂಚರಿಸುತ್ತಾ ಪ್ರಜ್ಞಾವಸ್ಥೆಯಲ್ಲಿ ಚಲಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಅದನ್ನು ಹೊರತುಪಡಿಸಿ ಈ ರೀತಿಯ ಮಾಲಿನ್ಯವನ್ನೇ ಹೆಚ್ಚು ಹೆಚ್ಚು ಚರ್ಚಾ ರೂಪದ ಪ್ರಚಾರದಲ್ಲಿರಿಸಿದರೆ, ಇಡೀ ವಾತಾವರಣವೇ ಅದರ ಪ್ರತಿಬಿಂಬವಾಗುತ್ತದೆ..

ಕ್ರೀಡೆ ಸಾಹಿತ್ಯ ಸಂಗೀತ ವಿಜ್ಞಾನ ಲಲಿತ ಕಲೆಗಳು ಸಮಾಜ ಸೇವೆ ಸಾಹಸ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಹೋರಾಟಗಳು, ಸಾಧನೆಗಳು, ನಿರಂತರವಾಗಿ ನಡೆಯುತ್ತಿವೆ. ನಮ್ಮ ಮಕ್ಕಳು ಮತ್ತು ಯುವಜನರಿಗೆ ಈ ವಿಷಯಗಳು ನಿರಂತರವಾಗಿ ತಲುಪುತ್ತಲೇ ಇರಬೇಕು..

ಕೇವಲ ಮನೆಯಲ್ಲಿ, ಶಾಲೆಯಲ್ಲಿ, ಮಾಧ್ಯಮಗಳಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಸಾಮಾಜಿಕ ಪರಿಸರ ಒಳ್ಳೆಯದನ್ನೇ, ಸಾಧನೆಗಳನ್ನೇ, ಸೇವೆಗಳನ್ನೇ ಹೆಚ್ಚು ಹೆಚ್ಚು ಸುದ್ದಿ – ಚರ್ಚೆ ಮಾಡುತ್ತಿದ್ದರೆ, ಅದರ ಪ್ರಭಾವವು ಎಲ್ಲಾ ಕಡೆ ಪಸರಿಸುತ್ತದೆ..

ಸಾಂಸ್ಕೃತಿಕ ನಾಯಕರಾಗಿ ಬಸವಣ್ಣನವರನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿರುವ ಈ ಸಂದರ್ಭದಲ್ಲಿ ಆ ವಿಷಯ ಹೆಚ್ಚು ಹೆಚ್ಚು ಜನರಿಗೆ ತಲುಪಬೇಕು. ಬಸವ ತತ್ವಗಳು, ಬೌದ್ಧ ತತ್ವಗಳು, ಗಾಂಧಿ ಚಿಂತನೆಗಳು, ಅಂಬೇಡ್ಕರ್ ಚಿಂತನೆಗಳು, ವಿವೇಕಾನಂದರ ವಿಚಾರಗಳು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳು, ಪ್ರತಿನಿತ್ಯ ಕನಿಷ್ಠ ಮಕ್ಕಳ ಕಿವಿಗೆ ಬೀಳುವಂತಾದರೂ ಆಗಬೇಕು. ಅದನ್ನು ಹೊರತುಪಡಿಸಿ ವಿಕೃತಗಳೇ ಮಕ್ಕಳಿಗೆ ತಿಳಿಯುತ್ತಿದ್ದರೆ ಅವರು ಜೀವಪರ ನಿಲುವುಗಳನ್ನು ಹೊಂದುವುದಾದರೂ ಹೇಗೆ…

ಆದ್ದರಿಂದ ನಾವುಗಳು ಸಹ ಆದಷ್ಟೂ ಒಳ್ಳೆಯ ಮನಸ್ಸಿನ, ಒಳ್ಳೆಯ ವಿಷಯಗಳನ್ನು ಮನ, ಮನೆ, ಶಾಲೆ, ಗೆಳೆಯರು, ವಾಕಿಂಗ್, ಮೊಬೈಲ್ ಮುಂತಾದ ಎಲ್ಲಾ ಕಡೆ ಚರ್ಚಿಸುವ ಮನೋಭಾವ
ಬೆಳೆಸಿಕೊಳ್ಳಬೇಕು. ಆಗ ನಿಧಾನವಾಗಿ ನಮ್ಮ ಸಾಂಸ್ಕೃತಿಕ ವಾತಾವರಣ ಉತ್ತಮಗೊಳ್ಳುತ್ತದೆ. ಇದನ್ನು ದಯವಿಟ್ಟು ಪ್ರಯತ್ನಿಸೋಣ..

– ವಿವೇಕಾನಂದ. ಎಚ್. ಕೆ. ಬೆಂಗಳೂರು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ

ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ

ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ

ಭರತ ನಾಟ್ಯ ಭಾರತೀಯ ಪರಂಪರೆ-ಸಂಸ್ಕೃತಿಯ ಪ್ರತಿಬಿಂಬ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ
    In (ರಾಜ್ಯ ) ಜಿಲ್ಲೆ
  • ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ
    In (ರಾಜ್ಯ ) ಜಿಲ್ಲೆ
  • ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ
    In (ರಾಜ್ಯ ) ಜಿಲ್ಲೆ
  • ಭರತ ನಾಟ್ಯ ಭಾರತೀಯ ಪರಂಪರೆ-ಸಂಸ್ಕೃತಿಯ ಪ್ರತಿಬಿಂಬ
    In (ರಾಜ್ಯ ) ಜಿಲ್ಲೆ
  • ಪ್ರಸಕ್ತ ಸಾಲಿಗೆ 7 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ
    In (ರಾಜ್ಯ ) ಜಿಲ್ಲೆ
  • ಬಿ.ಎಂ.ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ ರಕ್ತದಾನ ಶಿಬಿರ
    In (ರಾಜ್ಯ ) ಜಿಲ್ಲೆ
  • ಅಂತರಂಗದ ರಾಕ್ಷಸ ನಾಶವೇ ವಿಜಯದಶಮಿ
    In (ರಾಜ್ಯ ) ಜಿಲ್ಲೆ
  • ಅಥಣಿ ಸರ್ಕಾರಿ ಕಾಲೇಜಿನಲ್ಲಿ ಆಕರ್ಷಕ ಅಣುಕು ಸಂಸತ್ ಕಲಾಪ
    In (ರಾಜ್ಯ ) ಜಿಲ್ಲೆ
  • ಕವಿಗಳ ಲೇಖನಿ ಸಮಾಜಕ್ಕೆ ಕೈಗನ್ನಡಿಯಾಗಲಿ :ಕುಚಬಾಳ
    In (ರಾಜ್ಯ ) ಜಿಲ್ಲೆ
  • ೩೭೧(ಜೆ) ಹೋರಾಟಕ್ಕೆ ತಳವಾರ ಸಮಾಜ & ದಸಂಸ ಬೆಂಬಲ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.