ದೇವರಹಿಪ್ಪರಗಿ: ಈ ವರ್ಷ ಸಕಾಲದಲ್ಲಿ ಮಳೆಯಾಗಿದ್ದು, ಬಿತ್ತನೆ ಮಾಡುವ ಸಮಯದಲ್ಲಿ ರೈತರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮುಂಗಾರು ಬಿತ್ತನೆಗೆ ಅಗತ್ಯವಾದ ಎಲ್ಲಾ ರೀತಿಯ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ರೈತಬಾಂಧವರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮುಳಸಾವಳಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಂಗನಗೌಡ ಬಿರಾದಾರ ಹೇಳಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದ ವಿ.ಪ್ರಾ.ಗ್ರಾ.ಕೃ.ಸ.ಸಂಘದಲ್ಲಿ ಶುಕ್ರವಾರ ರೈತರಿಗೆ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇವರಹಿಪ್ಪರಗಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ನೀಡಲಾಗುವ ಬಿತ್ತನೆ ಬೀಜಗಳನ್ನೇ ಇಲ್ಲಿ ನೀಡಲಾಗುತ್ತಿದೆ. ಯಾವುದೇ ರೀತಿಯ ತೊಂದರೆ ಹಾಗೂ ವಿಳಂಬವಾಗದಂತೆ ವ್ಯವಸ್ಥೆಯನ್ನು ಮಾಡಲಾಗಿದೆ. ರೈತರು ಬೇಗನೇ ತಮಗೆ ಅಗತ್ಯವಾದ ಬೀಜಗಳನ್ನು ಪಡೆದು ಸಕಾಲದಲ್ಲಿ ಜಮೀನು ಬಿತ್ತುವುದರ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪಿಕೆಪಿಎಸ್ ಸಿಇಓ ಬಿ.ಎ.ಪಾಟೀಲ, ಲೆಕ್ಕಿಗ ಮಲ್ಲನಗೌಡ ಬಿರಾದಾರ, ಉಪಾಧ್ಯಕ್ಷ ಕಲ್ಲಪ್ಪ ತಳವಾರ, ನಿರ್ದೇಶಕರಾದ ಕಲ್ಲಪ್ಪ ಮೂಲಿಮನಿ, ಬಸವರಾಜ ಬಮ್ಮನಳ್ಳಿ, ಮಲಕಪ್ಪ ನಾಯ್ಕೋಡಿ, ಶ್ರೀಶೈಲ ಹದರಿ, ಚನ್ನು ಹದರಿ, ಶಿವಾನಂದ ಬಿರಾದಾರ, ಜಾವೀದ ಮಕಾನದಾರ, ಮಡು ಕುಂಬಾರ,ರಮೇಶ ರಾಠೋಡ, ವಿಜಯಕುಮಾರ ತಳವಾರ, ರಾಜಶೇಖರ ತಳವಾರ, ಅರವಿಂದ ನಾಯ್ಕೋಡಿ, ಸಿದ್ದಪ್ಪ ನಾಗರಳ್ಳಿ, ಮನೋಹರ ಪೂಜಾರಿ, ಲಕ್ಷ್ಮಣ ಜಾಧವ, ರಿಯಾಜ, ಸಾಹೇಬಗೌಡ ಖ್ಯಾಡಗಿ, ನಿಂಗಪ್ಪ ನಾಗರಳ್ಳಿ, ಹಣಮಂತ ಹಡಪದ, ಅಪ್ಪಾಸಾಹೇಬ ಬಸರಕೋಡ, ಮಾದೇವಪ್ಪ ನಾಗರಳ್ಳಿ, ಸೇರಿದಂತೆ ಸಿಬ್ಬಂದಿ ಹಾಗೂ ರೈತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

