ಮುದ್ದೇಬಿಹಾಳ: ತಾಲೂಕಿನ ಕಾಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ‘೧೦೮’ ಆರೋಗ್ಯ ಕವಚ ವಾಹನಕ್ಕೆ ಕೊನೆಗೂ ಕಾಯಕಲ್ಪ ಸಿಕ್ಕಂತಾಗಿದ್ದು ಶನಿವಾರ ಸ್ಥಳೀಯ ಮಾಜಿ ಗ್ರಾ.ಪಂ ಅಧ್ಯಕ್ಷ ಜಾವೀದ ಇನಾಮದಾರ ಹಾಗೂ ಆಸ್ಪತ್ರೆಯ ವೈದ್ಯ ಡಾ. ರಂಗನಾಥ ವೈದ್ಯ ಸೇರಿ ಜಂಟಿಯಾಗಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಇನಾಮದಾರ ಸಾರ್ವಜನಿಕ ಆರೋಗ್ಯ ರಕ್ಷಣೆ ಸಂವಿಧಾನಬದ್ಧ ಹಕ್ಕು. ಹಾಗಾಗಿ, ಸಾರ್ವಜನಿಕರನ್ನು ಆರೋಗ್ಯವಂತರನ್ನಾಗಿ ಮಾಡಲು ಆರೋಗ್ಯ ಇಲಾಖೆ ಬದ್ಧವಾಗಿರಬೇಕು. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಔಷಧಿಗಳ ಕೊರೆತೆ ಕಂಡು ಬರುತ್ತವೆ. ಆದರೆ ನಮ್ಮೂರಿನ ಆಸ್ಪತ್ರೆಯಲ್ಲಿ ಯಾವುದೇ ಕೊರತೆ ಇಲ್ಲ. ಆದರೇ ರೋಗಿಗಳನ್ನು ಕರೆತರಲು, ಹೆರಿಗೆ ನೋವಿನಿಂದ ಬಳಲುವ ರೋಗಿಗಳಿಗೆ ಆಸ್ಪತ್ರೆಗೆ ಕರೆತರಲು ವಾಹನ ಇಲ್ಲದೇ ತುಂಬಾ ತೊಂದರೆ ಆಗುತ್ತಿತ್ತು. ಸದ್ಯಪ್ರಾರಂಭಗೊಂಡ ನೂತನ ೧೦೮ ವಾಹನ ಸುತ್ತಮತ್ತಲಿನ ಗ್ರಾಮಸ್ಥರಿಗೆ ಆಸರೆಯಾಗಿದೆ. ಇದರ ಸದುಪಯೋಗ ಪಡೆದಕೊಳ್ಳಬೇಕು ಎಂದರು.
ಸಭೆಯಲ್ಲಿ ವೈದ್ಯಾಧಿಕಾರಿ ಡಾ.ರಂಗನಾಥ ವೈದ್ಯ, ಗ್ರಾಮ ಪಂಚಾಯತಿ ಸದಸ್ಯ ಸತೀಶ ರಾಠೋಡ, ಸ್ಥಳೀಯರಾದ ನಿಂಗಪ್ಪ ಹುಂಡಿ, ಗುರಪ್ಪ ಸಜ್ಜನ, ಜೆ ಎಚ್ ಮುಲ್ಲಾ, ಸಿದ್ದಪ್ಪ ಮನಗೂಳಿ, ಮಹಾಂತೇಶ ಮಠಪತಿ, ಚಂದ್ರು ಹಗ್ಗದ, ಸಿಬ್ಬಂದಿಗಳಾದ ಸಿ.ಎಸ್ ಜಾರಡ್ಡಿ, ಹನಮಂತ ಕೋಳೂರ, ವಿಜಯಮಹಾಂತೇಶ, ವೆಂಕಟೇಶ ಪವಾರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

