ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಬಸವನಿಷ್ಠರಾದ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿಗಳು ೯೩ ನೇ ವರ್ಷದ ವಯೋವೃದ್ಧರಾಗಿದ್ದಾರೆ. ಗುರುವಾರ ಜರುಗಿದ ಇವರ ಅಭಿನಂದನಾ ಗ್ರಂಥ ನಿರಂಜನ ಜ್ಯೋತಿ ಗ್ರಂಥ ಬಿಡುಗಡೆಯ ಸಮಾರಂಭದಲ್ಲಿ ಗ್ರಂಥ ಬಿಡುಗಡೆ ಸಂದರ್ಭದಲ್ಲಿ ಇವರನ್ನು ವೇದಿಕೆಯ ಮೇಲೆ ಕರೆಯದೇ ಅವಮಾನ ಮಾಡಲಾಯಿತು. ದೂರದಿಂದ ಬಂದ ಭಕ್ತರು ಈ ಘಟನೆಯಿಂದ ತುಂಬಾ ನೊಂದುಕೊಂಡು ಬೇಸರ ವ್ಯಕ್ತಪಡಿಸಿದರು ಎಂದು ಬಸವನಬಾಗೇವಾಡಿಯ ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವೇದಿಕೆಯಲ್ಲಿ ಹಿರಿಯ ಶ್ರೀಗಳ ಅನುಪಸ್ಥಿತಿಯಲ್ಲಿ ಗ್ರಂಥ ಲೋಕಾರ್ಪಣೆವಾಗಿರುವುದು ಸರಿಯಾದ ಕ್ರಮವಾಗಿರಲಿಲ್ಲ. ಗ್ರಂಥ ಪ್ರಧಾನ ಸಂಪಾದಕ ಡಾ.ಸೋಮನಾಥ ಯಾಳವಾರ ಅವರು ತಮ್ಮ ಗ್ರಂಥ ಪರಿಚಯ ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪಿಸಿ ವೇದಿಕೆಯ ಬ್ಯಾನರ್ ಸಹ ಇಲ್ಲದೇ ಇರುವದನ್ನು ಸಹ ಕಾರ್ಯಕ್ರಮದಲ್ಲಿ ಗಮನಕ್ಕೆ ತಂದರು. ಆಗ ಹಿರಿಯ ಶ್ರೀಗಳನ್ನು ವೇದಿಕೆಯ ಕರೆದು ಸಂಪಾದಕ ಮಂಡಳಿಯಿಂದ ಅವರಿಗೆ ಗ್ರಂಥ ಸಮರ್ಪಿಸಿ ಗೌರವಿಸಿದರ ನಂತರ ಭಕ್ತರ ಬೇಸರ ಕೊಂಚ ದೂರವಾಯಿತು. ಬ್ಯಾನರ್ ನಂತರ ಕಟ್ಟಲಾಯಿತು. ಈ ಘಟನೆ ಸಂಘಟಕರ, ಕಿರಿಯ ಸ್ವಾಮೀಜಿಗಳ ಬೇಜವಾಬ್ದಾರಿ ಎತ್ತಿ ತೋರಿಸುತ್ತದೆ ಎಂದು ಸಾರ್ವಜನಿಕರಿಂದ ಮಾತು ಕೇಳಿಬಂದಿತ್ತು. ಈ ರೀತಿಯ ಘಟನೆಗಳು ಇನ್ನೊಮ್ಮೆ ನಡೆಯದಂತೆ ಎಚ್ಚರವಹಿಸಬೇಕಾದ ಅಗತ್ಯವಿದೆ. ಈ ರೀತಿಯ ಘಟನೆಗಳು ಸಮಾಜಕ್ಕೆ ಶೋಭೆ ತರುವುದಿಲ್ಲ. ಕಾರ್ಯಕ್ರಮದ ಆಯೋಜಕರು ಇದರ ಸೂಕ್ಷ್ಮತೆಯನ್ನು ಅರಿತುಕೊಂಡು ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಮಾಡಬೇಕು. ಈ ರೀತಿಯ ಘಟನೆಯಾಗಿರುವದಕ್ಕೆ ಸಂಘಟಕರು ಭಕ್ತರ ಕ್ಷಮೆ ಕೇಳಬೇಕೆಂದು ವಿವೇಕಾನಂದ ಕಲ್ಯಾಣಶೆಟ್ಟಿ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

