ಬಸವನಬಾಗೇವಾಡಿ: ಜನಪದ ಶೈಲಿ ಪ್ರತಿಯೊಬ್ಬರನ್ನೂ ಮನಸೂರೆಗೊಳ್ಳುತ್ತದೆ. ಜನಪದ ಸಾಹಿತ್ಯಕ್ಕೆ ವಿದೇಶಿಯರು ಮಾರುಹೋಗಿರುವದನ್ನು ನಾವು ಯುಟ್ಯೂಬೊಂದರಲ್ಲಿ ನಾವು ನೋಡಿದ್ದೇವೆ ಎಂದು ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳವರ ೯೦ ನೇ ಜಾತ್ರಾಮಹೋತ್ಸವದಂಗವಾಗಿ ಶ್ರೀಮಠ, ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನಪದ ಸೊಗಡು ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜಾನಪದ ಸೊಗಡು ಇರುವದನ್ನು ಕಾಣುತ್ತೇವೆ. ಇಂದಿನ ಆಧುನಿಕ ಕಾಲದಲ್ಲಿ ಜನಪದ ಸಾಹಿತ್ಯವೆಂದು ಅಶ್ಲೀಲವಾಗಿ ರಚನೆ ಮಾಡಿ ಹಾಡುತ್ತಿರುವುದು ಜನಪದ ಸಾಹಿತ್ಯಕ್ಕೆ ಧಕ್ಕೆ ಬರುವ ಸಾಧ್ಯತೆಯಿದೆ. ಅವರು ಜನಪದ ಸಾಹಿತ್ಯಕ್ಕೆ ಧಕ್ಕೆ ಬಾರದಂತೆ ಜನಪದ ಸಾಹಿತ್ಯವನ್ನು ರಚನೆ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ. ಅದು ಎಂದಿಗೂ ಅಳಿದು ಹೋಗುವುದಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ಮಾತನಾಡಿ, ಜನ ಸಾಮಾನ್ಯರ ಸಾಹಿತ್ಯವೇ ಜಾನಪದ ಸಾಹಿತ್ಯ. ಜನಪದ ಸಾಹಿತ್ಯದಲ್ಲಿ ಅನುಭಾವದ ನುಡಿಗಟ್ಟುಗಳಿರುವದರಿಂದ ಮಹತ್ವ ಪಡೆದುಕೊಂಡಿದೆ. ಗ್ರಾಮೀಣ ಜೀವನದಲ್ಲಿ ಜನಪದ ಸಾಹಿತ್ಯ ಹಾಸುಹೊಕ್ಕಾಗಿದೆ. ಜನಪದ ಉಳಿದರೆ ಸಾಹಿತ್ಯ ಉಳಿಯುತ್ತದೆ ಎಂದರು.
ತಾಳಿಕೋಟಿಯ ಶಿವಲೀಲಾ ಮುರಾಳ ಉಪನ್ಯಾಸ ನೀಡಿ ಮಾತನಾಡಿದ ಅವರು ಜಾನಪದವನ್ನು ಉಳಿಸಿ ಬೆಳೆಸಿದ ಕೀರ್ತಿ ಗ್ರಾಮೀಣರಿಗೆ ಸಲ್ಲುತ್ತದೆ. ಮಹಿಳೆ ಪ್ರತಿನಿತ್ಯ ಕುಟುಂಬದ ಕೆಲಸದ ಜೊತೆಗೆ ಜಾನಪದ ಹಾಡುಗಳನ್ನು ಹಾಡುತ್ತಾ ತನ್ನ ಬೇಸರವನ್ನು ಕಳೆಯುತ್ತಾಳೆ ಎಂದರು.
ತಾಲೂಕು ಕನ್ನಡ ಜನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವೇಂದ್ರ ಗೋನಾಳ ಉಪನ್ಯಾಸ ನೀಡಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದ ತವರೂರು ಜನಪದ ಸಾಹಿತ್ಯವಾಗಿದೆ. ವಚನ ಸಾಹಿತ್ಯ ಹಾಗೂ ಜನಪದ ಸಾಹಿತ್ಯ ಇವೆರಡು ಕನ್ನಡ ಸಾಹಿತ್ಯ ಮೂಲಬೇರು ಎಂದರೆ ತಪ್ಪಾಗಲಾರದು. ಜನಪದ ಸಾಹಿತ್ಯ ಮರೆತರೆ ಸಾಹಿತ್ಯಕ್ಕೆ ಅರ್ಥವಿಲ್ಲವೆಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಜನಪದ ಗಾಯಕ ಬಸವರಾಜ ಹಾರಿವಾಳ, ಶಿಕ್ಷಕಿ ದ್ರಾಕ್ಷಾಯಿಣಿ ಮಂಟ್ಯಾಳ ಅವರು ಜನಪದ ಹಾಡುಗಳನ್ನು ಹಾಡುವ ಮೂಲಕ ಜನಪದ ಸಾಹಿತ್ಯವನ್ನು ಅನಾವರಣಗೊಳಿಸಿ ಜನರ ಮನಸೂರೆಗೊಂಡರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಜನಪದ ವಿಶಿಷ್ಠ ಸಂಸ್ಕ್ರತಿ ಹೊಂದಿದೆ. ಜನಪದವಿಲ್ಲದೇ ಹೋದರೆ ಬದುಕು ಅಸ್ತಿರವಾಗಲಿದೆ. ಜನಪದ ಸಾಹಿತ್ಯ ಮಾನವೀಯ ಮೌಲ್ಯ ನೀಡಿದೆ. ಇಂದು ಯುವಕರು ದುಶ್ಚಟಗಳಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿ ತಂದ ಬೇಟಿ ಪಠಾವೋ, ಬೇಟಿ ಬಚಾವೋ ರೀತಿಯಲ್ಲಿ ಬೇಟಾ ಪಠಾವೋ, ಬೇಟಾ ಬಚಾವೋ ಅಂದೋಲನ ಜಾರಿಗೆ ತರುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾನಿದ್ಯ ವಹಿಸಿದ್ದ ಮಸಬಿನಾಳದ ಸಿದ್ದರಾಮ ಶಿವಯೋಗಿಗಳು, ಪಡೇಕನೂರಿನ ಮಲ್ಲಿಕಾರ್ಜನ ಸ್ವಾಮೀಜಿ, ಚಡಚಣದ ಷಡಕ್ಷರಿ ಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ನಿವೃತ್ತ ಉಪಪ್ರಾಂಶುಪಾಲ ಎಸ್.ಎಸ್.ಝಳಕಿ, ಬಸವರಾಜ ಮೇಟಿ ಇತರರು ಇದ್ದರು.
ರಶ್ಮಿ ಪಾಟೀಲ ಪ್ರಾರ್ಥಿಸಿದರು. ಶಿವು ಮಡಿಕೇಶ್ವರ ಸ್ವಾಗತಿಸಿದರು. ಕೊಟ್ರೇಶ ಹೆಗಡ್ಯಾಳ, ಶಾಂತಾ ಬಾರಿಕಾಯಿ ನಿರೂಪಿಸಿದರು. ಸಿದ್ದು ಬಾಗೇವಾಡಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

