ವಿಜಯಪುರ: ಸನಾತನ ಹಿಂದೂ ಧರ್ಮ ಭಾರತೀಯ ಸಂಸ್ಕೃತಿ ಕಾಪಾಡಲು ಸಂತತಿ ಬೆಳೆಯಲು ಬ್ರಾಹ್ಮಣರು ಸೇರಿದಂತೆ ಸಮಸ್ತ ಹಿಂದೂ ಸಮಾಜ ವಿವಾಹ ಆಗುವದು ಅತಿ ಅವಶ್ಯ ಎಂದು ಆನಂದವನ ಅಗಡಿಯ ವೇ.ಬ್ರ.ಶಂಕರಭಟ್ಟ ಜೋಶಿ (ಕಮಡೊಳ್ಳಿ) ನುಡಿದರು. ಶನಿವಾರ ನಗರದ ಹೊರವಲಯದ ಶ್ರೀ ಶಿವಚಂದಬರೇಶ್ವ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಜಯಪುರದಿಂದ ಶ್ರೀಕ್ಷೇತ್ರ ಕೆಂಗೇರಿ ಮುರುಗೋಡಕ್ಕೆ ಸತತ ೨೫ ವರ್ಷಗಳ ಪಾದಯಾತ್ರೆ ಸಂಪನ್ನಗೊಂಡ ಪ್ರಯುಕ್ತ ಪಾದಯಾತ್ರಿಕರಿಗೆ ಸೇವೆ ಸಲ್ಲಿಸಿದ ಭಕ್ತಾದಿಗಳಿಗೆ ಸನ್ಮಾನ ಸಮಾರಂಭ ನಿಮಿತ್ಯ ವಿಶೇಷವಾಗಿ ಹಮ್ಮಿಕೊಂಡಿದ್ದ ಸ್ವಯಂವರ ಪಾರ್ವತಿ ಹೋಮದ ನೇತೃತ್ವವನ್ನು ವಹಿಸಿ ಆಶೀರ್ವಚನ ನೀಡಿದರು.
ಬ್ರಾಹ್ಮಣ ಸಮಾಜದಲ್ಲಿನ ಗಂಡು-ಹೆಣ್ಣುಗಳ ವಿವಾಹದಲ್ಲಿ ಸಮಸ್ತ ಬ್ರಾಹ್ಮಣ ಸಮಾಜದ ಸಮತೋಲನ ಕಾಪಾಡಿಕೊಳ್ಳುವದರ ಜೊತೆಗೆ ವರ ಹಾಗೂ ಕನ್ಯಾಗಳ ಪಿತ್ರುಗಳ ಪೋಷಕರು ಹೊಂದಿಕೊಂಡು ಹೋಗಬೇಕೆಂದು ಕರೆ ನೀಡಿದರು.
ಬ್ರಾಹ್ಮಣರಲ್ಲಿ ವಿಚ್ಚೇದನ ಪ್ರಮೇಯ ಬರಬಾರದು: ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಬ್ರಾಹ್ಮರದಲ್ಲೂ ವಿಚ್ಚೇದನ ಪ್ರಕರಣ ಕಂಡುಬರುತ್ತಿವೆ. ಅದು ಆಗಬಾರದು ವಿಪ್ರರಲ್ಲಿ ವಿವಾಹ ವಿಚ್ಚೇದನ ಪ್ರಮೇಯ ಎಂದಿಗು ಬರಬಾರದು. ಸಂಸಾರ ಎಂದರೆ ಸಾಕಷ್ಟು ತೊಂದರೆಗಳು ಅಡಚಣೆಗಳು ನೋವುಗಳು ಇರುವದು ಸಹಜ ಅವೆಲ್ಲವನ್ನು ಸುಧಾರಿಸಿಕೊಂಡು ಸಂಸಾರ ನೌಕೆ ನಡೆಸುಕೊಂಡು ಹೋಗಬೇಕೆಂದು ತಿಳಿಸಿದರು.
ಭಾರತೀಯ ಸಂಸ್ಕೃತಿ ಉಳಿಸುವಲ್ಲಿ ಮಾತೆಯರ ಪಾತ್ರ ಬಹಳ ಮುಖ್ಯವಾಗಿದೆ. ಅವರು ಧೃಡ ನಿಶ್ಚಯಗೊಂಡಾಗ ಅದು ಸಾಧ್ಯವಾಗುತ್ತದೆ. ಹಾಗೆಯೇ ಪಾರ್ವತಿ ಕಲ್ಯಾಣ ಸ್ವಯಂವರದಲ್ಲಿ ಪಾರ್ವತಿ ಪರಮೇಶ್ವರನನ್ನು ಪಡೆದಳು. ಸ್ಕಂದ ಪುರಾಣದ ಪ್ರಕಾರ ಸಂಸಾರವೆಂಬ ನೌಕೆಯನ್ನು ಸರಾಗವಾಗಿ ನಡೆಸಲು ಉದಾರವಾದ ಪತ್ನಿಯನ್ನು ನಮಗೆ ದಯಪಾಲಿಸಲು ಎಂದು ಉಲ್ಲೇಖವಿದೆ ಎಂದು ಪ್ರತಿಪಾದಿಸಿದರು.
ದಿಂಡಿ ಪಾದಯಾತ್ರೆಯಿಂದ ಪುಣ್ಯ ಪ್ರಾಪ್ತಿ:೧೫-೨೦ ವರ್ಷಗಳಿಂದ ಹುಬ್ಬಳ್ಳಿಯಿಂದ ಶ್ರೀಕ್ಷೇತ್ರ ಕೆಂಗೇರಿ ಮುರುಗೋಡಕ್ಕೆ ಪಾದಯಾತ್ರೆ ಬರುತ್ತಿದ್ದ ಭಕ್ತರೊಬ್ಬರಿಗೆ ಮಕ್ಕಳಿಲ್ಲದೆ ಬಳಲುತ್ತಿದ್ದರು. ಅವರು ಒಂದು ದಿನ ಶ್ರೀಚಿದಂಬರೇಶ್ವರನಲ್ಲಿ ಪ್ರಾರ್ಥಿಸಿ ಪಾದಯಾತ್ರಿಕರ ದಿಂಡಿಯನ್ನು ಮನೆಗೆ ಕರೆದುಕೊಂಡು ಬಂದು ಪಾದಪೂಜೆ ಮಾಡಿದ ತರುವಾಯ ಅವರಿಗೆ ಮೂರು ವರ್ಷಗಳ ನಂತರ ಗಂಡು ಮಗುವಿನ ಸಂತಾನವಾಯಿತೆಂದು ಶ್ರೀ ಶಿವಚಿದಂಬರೇಶ್ವರನ ಮಹಿಮೆಯನ್ನು ಬಣ್ಣಿಸಿದರು. ನಂತರ ಸಂಜೆ ಪ.ಪೂ.ಶ್ರೀ ವಿಶ್ವನಾಥ ಚಕ್ರವರ್ತಿ ಗುರುಗಳು ಶ್ರೀಕ್ಷೇತ್ರ ಅಗಡಿ ಇವರಿಂದ ಪ್ರವಚನ ಜರುಗಿತು.
ಸಂಜೆ.೬೩೦ ಕ್ಕೆ ಸೂರಮಣಿ ಮಹೇಶ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಇದಕ್ಕೂ ಮೊದಲು ಲೋಕಕಲ್ಯಾಣಾರ್ಥವಾಗಿ ಅವಿವಾಹತರಿಗೆ ವಿವಾಹ ಕಂಕಣ ಭಾಗ್ಯದ ಸಂಕಲ್ಪದೊಂದಿಗೆ ಹಮ್ಮಿಕೊಂಡಿದ್ದ ಸ್ವಯಂವರ ಪಾರ್ವತಿ ಹೋಮ ಪುರ್ಣಾಹುತಿ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ಮಾಧು ಜೋಶಿ, ರಾಘವೇಂದ್ರ ಜೋಶಿ, ಲಕ್ಷ್ಮೀಕಾಂತ ಕುಲಕರ್ಣಿ, ಶಂಕರಭಟ್ಟ ಅಗ್ನಿಹೋತ್ರಿ, ಪತ್ರಕರ್ತರಾದ ಮಾಧವರಾವ ಕುಲಕರ್ಣಿ, ಸೀತಾರಾಮ ಕುಲಕರ್ಣಿ, ವೆಂಕಟೇಶ್ ಜೋಶಿ ನಂದವಾಡಗಿ ಅನೀಲ ಜೋಶಿ, ಮಂಜುನಾಥ ಜೋಶಿ, ವೆಂಕಟೇಶ್ ಜೋಶಿ ನಾಗು ಜೋಶಿ ಸುಧೀಂಧ್ರ ಜೋಶಿ, ದೀಪಕ ಜೋಶಿ, ಮಾಲತೇಶ ಕುಲಕರ್ಣಿ, ವಿಜಯ ಜೋಶಿ, ಸಚಿನ ಜೋಶಿ, ಪ್ರಾಣೇಶ ಕುಲಕರ್ಣಿ, ವಿ.ಸಿಕುಲಕರ್ಣಿ, ಪಣೀಂಧ್ರ ಜೋಶಿ, ಗಂಗುಬಾಯಿ ಹುನಗುಂದ, ಹೇಮಾ ಜೋಶಿ, ಶೋಭಾ ಜೋಶಿ, ವನಮಾಲಾ ಕುಲಕರ್ಣಿ ಮಾನಿಕ್ ಕುಲಕರ್ಣಿ ಹಾಗೂ ಸಂದೀಪ್ ಕುಲಕರಣಿ ಸಂಜು ಕುಲಕರಣಿ ಸೇರಿದಂತೆ ಸಕಲ ಸದ್ಬಕ್ತರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

