Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಹೇರಿದ್ದು ಖಂಡಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಗಾಂಧಿವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ ಬೈಕ್‌ಗೆ ಹಗ್ಗಕಟ್ಟಿ ಎಳೆದುಕೊಂಡು ಬರುವುದ ಮೂಲಕ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಓಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಮಾತನಾಡಿ, ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನವಿರೋಧಿ ಎಂದು ಕಂಡಿಲ್ಲ. ಸುಳ್ಳು ಭರವಸೆ ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಕೂಡಲೇ ಪೆಟ್ರೋಲ್ ಡಿಸೇಲ್ ಏರಿಕೆಯನ್ನು ಕಡಿತಗೊಳಿಸಿ ಈ ನಿರ್ಧಾರವನ್ನು ಹಿಂಪಡೆಯಬೇಕು.ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ರಾಜ್ಯದ ಜನತೆಗೆ ನೆಮ್ಮದಿಯ ಬದುಕು ನೀಡಲು ಸಾಧ್ಯವಿಲ್ಲದಿದ್ದರೆ, ಈ ಸರ್ಕಾರ ಅಧಿಖಾರ ಬಿಟ್ಟು ತೊಲಗಲಿ, ಅಗತ್ಯ ವಸ್ತುಗಳ ಬೆಲೆಗಳಣ್ನು…
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರಿಗೆ ’ಉದಯರಶ್ಮಿ’ ಬಳಗದ ಪರವಾಗಿ ಸನ್ಮಾನ ವಿಜಯಪುರ: ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ದಂಪತಿಗೆ ’ಉದಯರಶ್ಮಿ’ ಪತ್ರಿಕಾ ಬಳಗದ ಪರವಾಗಿ ಸಂಪಾದಕ ಇಂದುಶೇಖರ ಮಣೂರ ದಂಪತಿ ಸೋಮವಾರ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಸಂಪಾದಕರೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡ ಸಂಗಮೇಶ ಬಬಲೇಶ್ವರ ಅವರು, ಮೂರು ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಬಾಲ ಮಂದಿರದ ನಿರ್ಗತಿಕ ಮಕ್ಕಳ ಮನಸ್ಸು ಅರಳಿಸುವ ಜೊತೆ ಬಾವ, ಸಂಸ್ಕಾರ, ಸಂಸ್ಕೃತಿ ಕಲಿಸಿ ಸಮಾಜಕ್ಕೆ ಬೆಳಕಾಗುವಂತೆ ಹೊಸ ಭಾಷ್ಯ ಬರೆಯುವ ವಿಶ್ವಾಸ ವ್ಯಕ್ತಪಡಿಸಿದರು.ಈಗಾಗಲೇ “ಅಮ್ಮನ ಮಡಿಲು” ಟ್ರಸ್ಟ್ ಸ್ಥಾಪಿಸಿ ಅನಾಥ ಮಕ್ಕಳಿಗೆ ವಸತಿ, ಶಿಕ್ಷಣ ನೀಡಿ ಆತ್ಮವಿಶ್ವಾಸ ತುಂಬಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದೇನೆ ಎಂದರು.ಈ ಹುದ್ದೆಗಾಗಿ ತಾವು ಯಾವುದೇ ತೆರನಾದ ಪ್ರಯತ್ನ ಮಾಡಿರಲಿಲ್ಲ. ಇದು ಅನಿರೀಕ್ಷಿತವಾಗಿ ಒದಗಿದ ಗೌರವ. ತಾವು ಈ ಹುದ್ದೆಗೆ ನ್ಯಾಯ ಒದಗಿಸಿ ಅಕಾಡೆಮಿಗೆ ಹೊಸ ಸ್ವರೂಪ ನೀಡುವ ಕನಸು…
ವಿಜಯಪುರ: ಸನಾತನ ಹಿಂದೂ ಸಂಸ್ಕೃತಿಗಳಲ್ಲಿ ಯೋಗೇಶ್ವರ ಯಾಜ್ಞವಲ್ಕ್ಯ ಋಷಿಗಳ ಸರಿ ಸಮಾನರು ಮತ್ತೊಬ್ಬರಿಲ್ಲ ಎಂದು ಮುರುಗೋಡ ಕೇಂಗೇರಿ ಮೂಲ ಸಂಸ್ಥಾನ ಪೀಠಾಧ್ಯಕ್ಷರಾದ ಪ. ಪೂ. ಶ್ರೀ ದಿವಾಕರ ಶಂಕರ ದೀಕ್ಷಿತರು ನುಡಿದರು.ಅವರು ರವಿವಾರ ನಗರದ ಹೊರ ವಲಯದಲ್ಲಿರುವ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ಯೋಗೇಶ್ವರ ಯಾಜ್ಞವಲ್ಕ್ಯರ ಜಯಂತಿ ಹಾಗೂ ವಿಜಯಪುರದಿಂದ ಶ್ರೀ ಕ್ಷೇತ್ರ ಮುರಗೋಡಕ್ಕೆ ಪಾದಯಾತ್ರೆಯ ರಜತ ಮಹೋತ್ಸವದಂಗವಾಗಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಆರ್ಶೀವಚನ ನೀಡಿದರು.ನಾವೆಲ್ಲ ಯೋಗೆಶ್ವರ ಯಾಜ್ಞವಲ್ಕ್ಯರ ಸಂತತಿಗಳೇ ಭಗವಂತನ ಅವತಾರಿ ಶ್ರೀ ಶಿವ ಚಿದಂಬರ ನಾಮಸ್ಮರಣೆ ಎಲ್ಲರೂ ತಪ್ಪದೇ ಮಾಡಿರಿ ಅದುವೇ ಜೀವನ್ಮುಕ್ತಿಗೆ ದಾರಿದೀಪವಾಗಿದೆ ಎಂದರು.ಕಳೆದ 25 ವರ್ಷಗಳಿಂದ ವಿಜಯಪುರದ ಭಕ್ತ ವೃಂದ ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರ ಮುರಗೋಡಕ್ಕೆ ಆಗಮಿಸಿ ಅಲ್ಲಿ ನಡೆಯುವ ಮಹೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಲಿರುವದು ಶ್ರೀ ಚಿದಂಬರ ಕೃಪೆಗೆ ಪಾತ್ರವಾಗಿದೆ.ಸಿಂದಗಿಯ ಭೀಮಾಶಂಕರ ಮಠದ ದತ್ತಪ್ಪಯ್ಯ ಶ್ರೀಗಳು ತಮ್ಮ ಆರ್ಶೀವಚನದಲ್ಲಿ ವಿಜಯಪುರದ ಶಿವ ಚಿದಂಬರನ ಭಕ್ತಾಧಿಗಳು ಪಾದಯಾತ್ರೆ ಮೂಲಕ ಮುರಗೋಡಕ್ಕೆ ತೆರಳಿ ತಮ್ಮ ಭಕ್ತಿ,ಭಾವ ತೋರುವ…
ವಿಜಯಪುರ: ನಗರದಲ್ಲಿ ಸೋಮವಾರ ಮುಸ್ಲಿಂ ಬಾಂಧವರು ಪವಿತ್ರ ಬಕ್ರೀದ ಹಬ್ಬದ ಪ್ರಯುಕ್ತ ನಗರದ ದಖನಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಸಯ್ಯದ್ ಮೊಹಮ್ಮದ್ ತನ್ವಿರಪೀರಾಂ ಹಾಶಮಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಫಯಾಜ್ ಕಲಾದಗಿ, ಚಂದ್ಸಬ್ ಗಡೆಗ್ಲಾವ್, ಬಂದೇನವಾಜ್ ಸಾಂಗ್ಲಿಕರ್, ಮೊಹಮ್ಮದನಾಸಿಮ್ ರೋಜಿಂದರ್, ಫಾರೂಕ್ ಶುತ್ತಾರಿ, ಸಂದಾನಿ ಇನಾಮದರ್ ಸೇರಿದಂತೆ ಸಾವಿರಾರು ಸಂಖ್ಯೆಯಲಿ ಜನ ಉಪಸ್ಥಿತರಿದ್ದರು
ಬಕ್ರೀದ್ ಹಬ್ಬದ ವಿಶೇಷ ಲೇಖನ -ಮಲಿಕ್ ಎಲ್.ಜಮಾದಾರ ಲೇಖಕರು,ಉಪನ್ಯಾಸಕರು ವಿಜಯಪುರ ಇಸ್ಲಾಂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಪ್ರಮುಖ ಬಕ್ರೀದ್ ಹಬ್ಬ ಈ ಹಬ್ಬವು ತನ್ನದೇ ಆದ ಆದ ಐತಿಹ್ಯವನ್ನು ಹೊಂದಿರುವಂಥದ್ದು. ಪ್ರವಾದಿಗಳಲ್ಲಿ ಒಬ್ಬರಾದ ಇಬ್ರಾಹಿಂ(ಅ.ಸ)ತಮ್ಮ ಮಗ ಇಸ್ಮಾಯಿಲ್(ಅ.ಸ)ರನ್ನು ಸೃಷ್ಟಿಕರ್ತನಾದ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಬಕ್ರೀದ್ ಆಥವಾ ಬಲಿದಾನದ ದಿನವೆಂದು ಆಚರಿಸಲಾಗುತ್ತದೆ. ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್(ಅ.ಸ)ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬ.ಈ ಹಬ್ಬದ ಶುಭ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಹಜ್ ಯಾತ್ರೆಯನ್ನು ನೆರವೇರಿಸುವುದು ವಿಶೇಷ.• ಬಕ್ರೀದ್ ಹಬ್ಬದ ಐತಿಹಾಸಿಕ ಹಿನ್ನೆಲೆ:ಪ್ರವಾದಿ ಇಬ್ರಾಹಿಂ ಅವರಿಗೆ ಸತ್ವ ಪರೀಕ್ಷೆ ಮಾಡಲು ಅಲ್ಲಾಹನು ಒಮ್ಮೆ ಅವರಿಗೆ ನಿನ್ನ ಅತೀ ಪ್ರೀತಿಯ ವಸ್ತುವಿಗೆ ಪಾತ್ರವಾದ ಒಂದು ಜಿವನವನ್ನು ಬಲಿಕೊಡಬಲ್ಲೆಯೋ ಎಂದು ಪ್ರಶ್ನಿಸುತಾರೆ.ಇದೆಲ್ಲಾ ಆಜ್ಞೆ ಭಗವಂತನು ಎಂದು ಅರಿತ ಇಬ್ರಾಹಿಂ(ಅ.ಸ)ರು ತಮ್ಮ ಏಕೈಕ ಪುತ್ರನಾದ ಇಸ್ಮಾಯಿಲ್ (ಅ.ಸ)ರನ್ನು ಅಲ್ಲಾಹನ ಇಚ್ಛೆಯಂತೆ ಬಲಿಕೊಡಲೇಬೇಕು…
ಎನ್.ಆರ್. ಕುಲಕರ್ಣಿ ಅವರ “ಬಕುಲ ಪುಷ್ಪ” ಗ್ರಂಥ ಲೋಕಾರ್ಪಣೆ | ಗ್ರಂಥ ತುಲಾಭಾರ ವಿಜಯಪುರ: ಎನ್.ಆರ್. ಕುಲಕರ್ಣಿ ಅವರ ಬಕುಲ ಪುಷ್ಪ ಅಭಿನಂದನ ಗ್ರಂಥ ಬಿಡುಗಡೆ ಹಾಗೂ ಗ್ರಂಥ ತುಲಾಭಾರ ಸಮಾರಂಭವು ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜರುಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಒಂದು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಇಷ್ಟೊಂದು ಜನ ಕೂಡಿರುವದು ಸಂತಸವನ್ನುಂಟು ಮಾಡುತ್ತದೆ. ಸಾಹಿತ್ಯಾಭಿರುಚಿ ಎಲ್ಲರಲ್ಲಿ ಇರಬೇಕು. ಸಾಹಿತ್ಯದ ಜ್ಞಾನದಿಂದ ನಾವು ನಮ್ಮ ಜೀವನದಲ್ಲಿ ಯಶಸ್ವಿ ಆಗಲು ಸಾಧ್ಯವಾಗುತ್ತದೆ. ಸಂಪತ್ತಿನಿಂದ ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಜ್ಞಾನವೊಂದಿದ್ದರೆ ಈ ಜೀವನದಲ್ಲಿ ಏನೆಲ್ಲಾ ಪಡೆದುಕೊಳ್ಳಬಹುದು. ಅದೇ ರೀತಿ ಎನ್.ಆರ್. ಕುಲಕರ್ಣಿ ಅವರಂತೆ ಸಾಹಿತ್ಯಾಭಿರುಚಿಯೊಂದಿಗೆ ಒಳ್ಳೆಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಲ್ಲಿ ನೆರೆದ ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ತಿಳಿ ಹೇಳಿ ಸಮಾಜ ಮುಖಿಯಾಗಿ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ ಎಂದರು.ಕೆ.ಎಫ್. ಅಂಕಲಗಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಎನ್.ಆರ್. ಕುಲಕರ್ಣಿ ಅವರು ರಚಿಸಿದ ಬಕುಲ ಪುಷ್ಪ…
ಝಳಕಿ: ಗ್ರಾಮೀಣ ಭಾಗದ ಜನರು ಬಡತನದಿಂದ ನಿರಾಶ್ರಿತರಾಗಿರುತ್ತಾರೆ ಈ ಉದೇಶದಿಂದ ಗ್ರಾಮೀಣ ಭಾಗದ ಬಡ ಜನರ ಸೇವೆ ಮಾಡಲು ಡಾ.ಎಲ್.ಎಚ್ ಬಿದರಿ ಅವರು ಮುಂದಾಗಿದ್ದಾರೆ ಆದರಿಂದ ಎಲ್ಲ ಜನರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಯುವ ಮುಖಂಡ ರಾಘವೇಂದ್ರ ಕಾಪಸೆ ಹೇಳಿದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವಿಜಯಪುರ ಡಾ.ಬಿದರಿಯವರ ಅಶ್ವಿನಿ ಆಸ್ಪತ್ರೆ ಹಾಗೂ ನ್ಯೂ ಅಶ್ವಿನಿ ಇನ್ಸ್ಟಿಟ್ಯೂಟ್ ಆಪ್ ನರ್ಸಿಂಗ್ ಸೈನ್ಸಸ್,ಝಳಕಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಹೃದಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ದಾನಗಳಲ್ಲಿ ರಕ್ತದಾನ ಮಹಾದಾನ ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದ್ದು, ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವುದರ ಮೂಲಕ ಎಲ್ಲರೂ ಜನರ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಬೇಕು ಎಂದರು.ಡಾ.ಎಲ್.ಎಚ್.ಬಿದರಿ ಮಾತನಾಡಿ, ಮಾನವನಿಗೆ ಆಕಸ್ಮಿಕ ಸಂದರ್ಭಗಳಲ್ಲಿ ತುರ್ತಾಗಿ ಅಗತ್ಯವಾಗಿ ಬೇಕಾಗುವ ರಕ್ತವು ಅಮೂಲ್ಯ ಜೀವ ಉಳಿಸುವ ವಸ್ತುವಾಗಿದೆ. ಇದನ್ನರಿತು ಸಮಾಜದ…
ಇಂಡಿ: ಪಟ್ಟಣದ ಸರಕಾರಿ ಆಸ್ಪತ್ರೆ ಕೇಂದ್ರಕ್ಕೆ ಶೇ. ೧.೫ ರಕ್ತದ ಸಂಗ್ರಹ ಅವಶ್ಯಕತೆ ಇದ್ದು ಜಿಲ್ಲೆಗೆ ೧೨ ಸಾವಿರ ಯೂನಿಟ್ ರಕ್ತದ ಅವಶ್ಯಕತೆ ಇದೆ ಎಂದು ಹಾಲಿ ಪುರಸಭೆ ಸದಸ್ಯ ಮಾಜಿ ಅಧ್ಯಕ್ಷ ದೇವೆಂದ್ರ ಕುಂಬಾರ ಹೇಳಿದರು.ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಮತ್ತು ಅವಳಿ ಸಹೋದರ ಸುನೀಲಗೌಡ ಬಿರಾದಾರ ಇವರ ೩೯ ನೇಯ ಹುಟ್ಟು ಹಬ್ಬದ ವಾರ್ಷಿಕೋತ್ಸವಲ್ಲಿ ೧೩ ನೆಯ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ ಇಂಡಿ ತಾಲೂಕಿನ ಜನಸಂಖ್ಯೆ ೪ ಲಕ್ಷ ಇದ್ದು ತಾಲೂಕಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ರಕ್ತದ ಅಗತ್ಯವಿದೆ. ಬೇರೆ ದಾನಗಳಿಗಿಂತ ರಕ್ತದಾನ ಮಹಾದಾನವಾಗಿದೆ ಎಂದರು.ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮಾತನಾಡಿ ರಕ್ತದ ಅವಶ್ಯಕತೆ ಇರುವವರಿಗೆ ರಕ್ತ ಕೊಟ್ಟಾಗ ಅವರ ಜೀವವನ್ನು ಉಳಿಸಿದಂತಾಗುತ್ತದೆ. ನಾನು ಕಳೆದ ಬಾರಿ ರಕ್ತದಾನ ಮಾಡಿದ್ದು ಒಟ್ಟು ಆರು…
ಕೊಳಚೆ ಗುಂಡಿ ಖಾಲಿ: ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿದ ಪಪಂ ದೇವರಹಿಪ್ಪರಗಿ: ಬಸ್ ನಿಲ್ದಾಣ ಕಂಪೌಂಡಿಗೆ ಹೊಂದಿಕೊಂಡಿರುವ ಕೊಳಚೆ ಗುಂಡಿ ತ್ಯಾಜ್ಯದ ಸಮಸ್ಯೆಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಜಾಗೆಯ ಮಾಲೀಕ ಸ್ಪಂದಿಸಿ ಮಲೀನ ನೀರು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿದರು.ಪಟ್ಟಣದ ಸ್ಥಳೀಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು ಭಾನುವಾರ “ಉದಯರಶ್ಮಿ” ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಸುದ್ದಿ ಹಾಗೂ ಸಮಸ್ಯೆಗೆ ಸ್ಪಂದಿಸಿದ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಕೂಡಲೇ ಕಾರ್ಯಪ್ರವೃತ್ತರಾಗಿ ಜಾಗೆಯ ಮಾಲೀಕರಿಗೆ ನಿರ್ದೇಶನ ನೀಡಿದ ಪರಿಣಾಮ ಜಾಗೆಯ ಮಾಲೀಕರು ಸಹ ಕೂಡಲೇ ಸ್ಪಂದಿಸಿ ಭಾನುವಾರ ಮಲೀನ ನೀರನ್ನು ತೆರವುಗೊಳಿಸಿದರು.ನಂತರ ಪಟ್ಟಣ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿ ಜೆಸಿಬಿಯೊಂದಿಗೆ ಆಗಮಿಸಿ ಗುಂಡಿಯಲ್ಲಿ ತುಂಬಿದ್ದ ತ್ಯಾಜ್ಯವನ್ನು ಬೇರೆಡೆ ಸಾಗಿಸಿ ಗುಂಡಿಯನ್ನು ಸ್ವಚ್ಛಗೊಳಿಸಿದರು.ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ ತಕ್ಷಣವೇ ಕಾರ್ಯ ನೆರವೇರಿಸಿದ ಮುಖ್ಯಾಧಿಕಾರಿ, ಜಾಗೆಯ ಮಾಲೀಕ ಹಾಗೂ ಪಟ್ಟಣ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿಗೆ ಸ್ಥಳೀಯ ಅಂಗಡಿ ಮಾಲೀಕರು ಹಾಗೂ ಎಲ್ಲ ವ್ಯಾಪಾರಸ್ಥರು ಅಭಿನಂದಿಸಿದ್ದಾರೆ.
ದೇವರಹಿಪ್ಪರಗಿ: ಬಿತ್ತನೆಗೆ ಮುಂಚಿತವಾಗಿ ಬೀಜಗಳಲ್ಲಿ ಬರ ನಿರೋಧಕತೆ ಹೆಚ್ಚಿಸಲು ಬೀಜೋಪಚಾರ ಅಗತ್ಯವಾಗಿದೆ ಎಂದು ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ಹೇಳಿದರು.ಪಟ್ಟಣದ ಸಾವಿತ್ರಿ ಹಿರೇಮಠ ಕೃಷಿಭೂಮಿಯಲ್ಲಿ ಶನಿವಾರ ಜರುಗಿದ ಬೀಜೋಪಚಾರ ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡಿದರು.ಬಿತ್ತನೆಗೆ ಮುಂಚೆ ಬೀಜಗಳನ್ನು ಶೇಕಡಾ ೨ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ಒಂದು ಗಂಟೆ ನೆನೆಸಿ ನಂತರ ನೆರಳಿನಲ್ಲಿ ಕನಿಷ್ಟ ೭ ಗಂಟೆ ಒಣಗಿಸಬೇಕು. ನಂತರ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ ೦೩ ಗ್ರಾಂ ಶೀಲೀಂದ್ರ ಮಿಶ್ರಣವಾದ ಕಾರ್ಬೇಂಡೈಜಿಮ್ ಶೇ.೧೨ ಹಾಗೂ ಮ್ಯಾಂಕೋಜೇಬ್ ಶೇ.೬೪ ಅಥವಾ ೧೦ ಗ್ರಾಮ್ ಜೈವಿಕ ಗೊಬ್ಬರಗಳಾದ ಟ್ರೆöÊಕೋಡರ್ಮ, ಪಿಎಸ್‌ಬಿ ಹಾಗೂ ರೈಜೋಬಿಯಂಗಳಿಂದ ಬೀಜೋಪಚಾರ ಮಾಡಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಜಮೀನಿನ ಒಂದು ಎಕರೆಪ್ರದೇಶವನ್ನು ತೊಗರಿ ಬೆಳೆ ಪ್ರಾತ್ಯಕ್ಷಿಕೆಗಾಗಿ ಆಯ್ಕೆ ಮಾಡಲಾಯಿತು.ನಿವೃತ್ತ ತಾಲ್ಲೂಕು ಪಂಚಾಯಿತಿ ಎಡಿ ಪ್ರಭುದೇವ ಹಿರೇಮಠ, ಸಿಂದಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ವೈ.ಸಿಂಗೆಗೋಳ, ಕೃಷಿ ಅಧಿಕಾರಿ ಎಚ್.ಕೆ.ಪಾಟೀಲ, ಸಹಾಯಕ ಕೃಷಿ ಅಧಿಕಾರಿ ರಾಜು ಸದಾನಂದ, ಆತ್ಮಾ ಸಿಬ್ಬಂದಿ ಸುಧಾಕರ್ ಇರಸೂರ, ಪಂಚಾಯಿತಿಗಳ…
