ಇಂಡಿ: ಪಟ್ಟಣದ ಸರಕಾರಿ ಆಸ್ಪತ್ರೆ ಕೇಂದ್ರಕ್ಕೆ ಶೇ. ೧.೫ ರಕ್ತದ ಸಂಗ್ರಹ ಅವಶ್ಯಕತೆ ಇದ್ದು ಜಿಲ್ಲೆಗೆ ೧೨ ಸಾವಿರ ಯೂನಿಟ್ ರಕ್ತದ ಅವಶ್ಯಕತೆ ಇದೆ ಎಂದು ಹಾಲಿ ಪುರಸಭೆ ಸದಸ್ಯ ಮಾಜಿ ಅಧ್ಯಕ್ಷ ದೇವೆಂದ್ರ ಕುಂಬಾರ ಹೇಳಿದರು.
ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಮತ್ತು ಅವಳಿ ಸಹೋದರ ಸುನೀಲಗೌಡ ಬಿರಾದಾರ ಇವರ ೩೯ ನೇಯ ಹುಟ್ಟು ಹಬ್ಬದ ವಾರ್ಷಿಕೋತ್ಸವಲ್ಲಿ ೧೩ ನೆಯ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ ಇಂಡಿ ತಾಲೂಕಿನ ಜನಸಂಖ್ಯೆ ೪ ಲಕ್ಷ ಇದ್ದು ತಾಲೂಕಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ರಕ್ತದ ಅಗತ್ಯವಿದೆ. ಬೇರೆ ದಾನಗಳಿಗಿಂತ ರಕ್ತದಾನ ಮಹಾದಾನವಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮಾತನಾಡಿ ರಕ್ತದ ಅವಶ್ಯಕತೆ ಇರುವವರಿಗೆ ರಕ್ತ ಕೊಟ್ಟಾಗ ಅವರ ಜೀವವನ್ನು ಉಳಿಸಿದಂತಾಗುತ್ತದೆ. ನಾನು ಕಳೆದ ಬಾರಿ ರಕ್ತದಾನ ಮಾಡಿದ್ದು ಒಟ್ಟು ಆರು ಬಾರಿ ರಕ್ತದಾನ ಮಾಡಿದ್ದೇನೆ ಎಂದರು.
ಜಾತ್ಯಾತೀತ ಜನತಾದಳ ತಾಲೂಕಾ ಅಧ್ಯಕ್ಷ ಬಿ.ಡಿ.ಪಾಟೀಲ ಮಾತನಾಡಿ ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ಆಗ ಮಾತ್ರ ಮತ್ತೊಬ್ಬರ ಜೀವ ಉಳಿಸಲು ಸಾಧ್ಯ. ರಕ್ತದಾನ ಮಾಡುವದರಿಂದ ಯಾವದೇ ತೊಂದರೆ ಇಲ್ಲ. ಈ ಸಂಬಂಧ ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ. ರಕ್ತಕ್ಕಾಗಿ ಬೇರೆ ಕಡೆ ಕಳುಹಿಸುವ ಬದಲು ನಮ್ಮಲ್ಲೇ ರಕ್ತ ಸಂಗ್ರಹವಿದ್ದರೆ ಅನುಕೂಲವಾಗುತ್ತದೆ ಎಂದರು.
ಸಮಾರಂಭದಲ್ಲಿ ಅನೀಲಗೌಡ ಬಿರಾದಾರ, ಶ್ರೀಪತಿಗೌಡ ಬಿರಾದಾರ, ಜಟ್ಟೆಪ್ಪ ರವಳಿ, ಜಾವೇದ ಮೋಮಿನ್, ಪ್ರಶಾಂತ ಕಾಳೆ, ಜಗದೀಶ ಕ್ಷತ್ರಿ, ಬಾಳು ಮುಳಜಿ, ಶೀಲವಂತ ಉಮರಾಣಿ, ರಾಮಸಿಂಗ ಕನ್ನೊಳ್ಳಿ , ವಿ.ಎಚ್.ಬಿರಾದಾರ, ಭೀಮಣ್ಣ ಕವಲಗಿ, ಜೈನೊದ್ದೀನ್ ಬಾಗವಾನ ವೈದ್ಯರಾದ ಡಾ|| ಸುಮನ ಮಮದಾಪುರ, ಡಾ|| ಪ್ರಶಾಂತ ಧೂಮಗೊಂಡ, ಬಿಎಚ್‌ಒ ವಾಯ್ ಎಂ.ಪೂಜಾರಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

