ಎನ್.ಆರ್. ಕುಲಕರ್ಣಿ ಅವರ “ಬಕುಲ ಪುಷ್ಪ” ಗ್ರಂಥ ಲೋಕಾರ್ಪಣೆ | ಗ್ರಂಥ ತುಲಾಭಾರ
ವಿಜಯಪುರ: ಎನ್.ಆರ್. ಕುಲಕರ್ಣಿ ಅವರ ಬಕುಲ ಪುಷ್ಪ ಅಭಿನಂದನ ಗ್ರಂಥ ಬಿಡುಗಡೆ ಹಾಗೂ ಗ್ರಂಥ ತುಲಾಭಾರ ಸಮಾರಂಭವು ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಒಂದು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಇಷ್ಟೊಂದು ಜನ ಕೂಡಿರುವದು ಸಂತಸವನ್ನುಂಟು ಮಾಡುತ್ತದೆ. ಸಾಹಿತ್ಯಾಭಿರುಚಿ ಎಲ್ಲರಲ್ಲಿ ಇರಬೇಕು. ಸಾಹಿತ್ಯದ ಜ್ಞಾನದಿಂದ ನಾವು ನಮ್ಮ ಜೀವನದಲ್ಲಿ ಯಶಸ್ವಿ ಆಗಲು ಸಾಧ್ಯವಾಗುತ್ತದೆ. ಸಂಪತ್ತಿನಿಂದ ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಜ್ಞಾನವೊಂದಿದ್ದರೆ ಈ ಜೀವನದಲ್ಲಿ ಏನೆಲ್ಲಾ ಪಡೆದುಕೊಳ್ಳಬಹುದು. ಅದೇ ರೀತಿ ಎನ್.ಆರ್. ಕುಲಕರ್ಣಿ ಅವರಂತೆ ಸಾಹಿತ್ಯಾಭಿರುಚಿಯೊಂದಿಗೆ ಒಳ್ಳೆಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಲ್ಲಿ ನೆರೆದ ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ತಿಳಿ ಹೇಳಿ ಸಮಾಜ ಮುಖಿಯಾಗಿ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಕೆ.ಎಫ್. ಅಂಕಲಗಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಎನ್.ಆರ್. ಕುಲಕರ್ಣಿ ಅವರು ರಚಿಸಿದ ಬಕುಲ ಪುಷ್ಪ ಗ್ರಂಥದಲ್ಲಿ ಎನ್.ಆರ್. ಕುಲಕರ್ಣಿ ಅವರು ಬೆಳೆದು ಬಂದ ಪರಿ, ಅವರು ಅನುಭವಿದ ಕಷ್ಟ-ಸುಖಗಳನ್ನು ಕುರಿತು ಸವಿಸ್ತಾರವಾಗಿ ಬರೆದಿದ್ದು, ಈ ಗ್ರಂಥವನ್ನು ತಾವು ಪಡೆದುಕೊಂಡು ಇಂತಹ ಆದರ್ಶಮಯ ವ್ಯಕ್ತಿಯ ಕುರಿತು ತಿಳಿದುಕೊಳ್ಳಬಹುದು ಎಂದರು.
ಡಾ.ಆರ್.ಕೆ. ಕುಲಕರ್ಣಿ, ವಿಶ್ರಾಂತ ಇಂಗ್ಲೀಷ ಪ್ರಾಧ್ಯಾಕರು ಗ್ರಂಥ ಬಿಡುಗಡೆಗೊಳಿಸಿ ಮಾತನಾಡುತ್ತ, ಮಣ್ಣಿಲ್ಲದೇ ಮಡಿಕೆ ಇಲ್ಲ, ಅದೇ ರೀತಿ ನಾವು ಮಾಡುವ ಕೆಲಸದಲ್ಲಿ ನಮ್ಮಲ್ಲಿ ಆತ್ಮಸ್ಥೆರ್ಯ ಇದ್ದರೆ ಸಾಧನೆ ಮಾಡಬಹುದು. ಅದೇ ನಮ್ಮಲ್ಲಿ ಕಾರ್ಯಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಎನ್.ಆರ್. ಕುಲಕರ್ಣಿಯವರು ತಾಂಬಾದಲ್ಲಿ ಜನಿಸಿ, ಬೊಮ್ಮನಹಳ್ಳಿ, ಜೇರಟಗಿಯಲ್ಲಿ ವಿದ್ಯಾಭ್ಯಾಸ ಕಲಿತು ನಂತರ ತಮ್ಮ ಶಿಕ್ಷಕ ವೃತ್ತಿಯನ್ನು ಗಡಿನಾಡ ಪ್ರದೇಶವಾದ ನಾಗಣಸೂರದಲ್ಲಿ ಸುಮಾರು ೩೬ ವರ್ಷಗಳ ಕಾಲ ತಮ್ಮ ಸೇವೆಯನ್ನು ಕನ್ನಡ ಮಾತೆಗೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹಾನ ವ್ಯಕ್ತಿಯ ಅಭಿನಂದನಾ ಗ್ರಂಥವಾಗಿ ಹೊರಹೊಮ್ಮಿರುವ ಬಕುಲ ಪುಷ್ಪ ವು ಬಕುಲ ಎಂದರೆ ಎನ್.ಆರ್. ಕುಲಕರ್ಣಿ ಅವರ ತಾಯಿಯ ಹೆಸರಾದ ಬಕುಲಬಾಯಿ ಎಂಬುದು ಅದೇ ರೀತಿ ಪುಷ್ಪ ಎಂದರೆ ಹೂವು ತಮ್ಮ ತಾಯಿಯ ನಿರ್ಮಲವಾದ ಆರ್ಶೀವಾದ ಸೂಚ್ಯಕವಾಗಿ ಬಕುಲ ಪುಷ್ಪ ಎಂಬುದು ಈ ಗ್ರಂಥವಾಗಿದೆ ಎಂದರು.
ಆರ್.ಕೆ. ಕುಲಕರ್ಣಿ ಇವರು ಗ್ರಂಥಾವಲೋಕನ ಮಾತನಾಡಿ, ಎನ್.ಆರ್. ಎಂದರೆ ಎನ್ನವರು ಎಂರ್ಥ ಅವರ ಹೆಸರಿಗೆ ತಕ್ಕಂತೆ ತನ್ನವರನ್ನು ತಮ್ಮ ಸುತ್ತಮುತ್ತಲಿರುವ ಎಲ್ಲ ಸಹೃಯಿಗಳನ್ನು ಎನ್ನವರು ಎನ್ನುವ ಭಾವನೆಯಿಂದಲೆ ಇಂತಹ ಗ್ರಂಥ ಹೊರಲು ಸಾಧ್ಯವಾಗಿದೆ. ಈ ಗ್ರಂಥದಲ್ಲಿ ಸುಮರು ೩೫೧ಕ್ಕೂ ಹೆಸರು ಪುಟಗಳಿದ್ದು, ಸುಮಾರು ೬ ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಇದರಲ್ಲಿ ೧೬ ಕಾವ್ಯಕಾರಂಜಿ, ಗದ್ಯಗುಚ್ಚ, ಸಂಕೀರ್ಣ, ಲೇಖನಗಳನ್ನು ಒಳಗೊಂಡಿದ್ದು, ಈ ಗ್ರಂಥ ಒಳ-ಹೊರ ವಿನ್ಯಾಸ ಬಹಳ ಚೆನ್ನಾಗಿದ್ದು, ಈ ಗ್ರಂಥದಲ್ಲಿ ಎನ್.ಆರ್. ಕುಲಕರ್ಣಿಅವರು ಬೆಳೆದು ಬಂದ ಪರಿ, ಇವರಿಗೆ ಗಡಿಭಾಗದಲ್ಲಿ ಕನ್ನಡ ಬೆಳೆಸುವಲ್ಲಿ ಪಟ್ಟ ಶ್ರಮ, ಇನ್ನಿತರ ವಿಷಯಗಳ ಕುರಿತು ಸವಿಸ್ತಾರವಾಗಿ ತಿಳಿಸಲಾಗಿದೆ ಎಂದು ಗ್ರಂಥದ ಬಗ್ಗೆ ತಿಳಿಸಿದರು.
ಸಾನ್ನಿಧ್ಯ ವಹಿಸಿದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರು ಬಮ್ಮಲಿಂಗೇಶ್ವರ ಬೃಹನ್ಮಠ, ನಾಗಣಸೂರ ಇವರು ಆಶೀರ್ವಚನ ನೀಡಿದರು.
ವಿ.ಎಸ್. ಖಾಡೆ ಸ್ವಾಗತಿಸಿದರು. ಡಾ.ಜಿ.ಡಿ. ಕೊಟ್ನಾಳ ಹಾಗೂ ಎಸ್.ಬಿ. ಬಾಗೇವಾಡಿ ಪರಿಚಯಸಿದರು. ಪ್ರೊ.ಯು.ಆರ್. ಕುಂಟೋಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ವಿದ್ಯಾವತಿ ಅಂಕಲಗಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮಂದಾಕಿನಿ ಬಿರಾದಾರ ಇವರ ಸಂಗಡಿಗರಿಂದ ವಚನ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಅಬಿನಂದನ ಗ್ರಂಥ ಸಂಪಾದಕ ಸಮಿತಿಯಿಂದ ಡಾ. ಅನುರಾಧಾ ಪ್ರವೀಣ ಜೋಶಿ, ಜಿ.ಆರ್. ಕುಲಕರ್ಣಿ, ಎಸ್.ಬಿ. ಬಾಗೇವಾಡಿ, ಶ್ರೀಮತಿ ವಿದ್ಯಾವತಿ ಅಂಕಲಗಿ, ಹಾಗೂ ಅಭಿನಂದನ ಸಮಿತಿಯಿಂದ ವಿ.ಎಸ್. ಖಾಡೆ, ಎಸ್.ಎಂ. ಕಣಬೂರ, ಜಿ.ಎಸ್.ಕುಲಕರ್ಣಿ, ಶಂಕರ ಬಸವಪ್ರಭು (ಸಕ್ರಿ), ಸಿದ್ದಲಿಂಗಪ್ಪ ಹದಿಮೂರ, ಮೋಹನ ಪಿ. ಕುಲಕರ್ಣಿ, ಶಿವಪುತ್ರಪ್ಪ ಕೃಷ್ಣಮೂರ್ತಿ, ರುಕ್ಮಾಂಗದ ಅ. ಗುಡಿ, ಶ್ರೀಶೈಲ ಜಿ. ಮದಭಾವಿ, ಪಂಡಿರಾವ ಪಾಟೀಲ, ಶ್ರೀಮತಿ ಸ್ಮೃತಿ ಮುಕುಂದ ಕುಲಕರ್ಣಿ ಹಾಜರಿದ್ದರು.

