ವಿಜಯಪುರ: ಸನಾತನ ಹಿಂದೂ ಸಂಸ್ಕೃತಿಗಳಲ್ಲಿ ಯೋಗೇಶ್ವರ ಯಾಜ್ಞವಲ್ಕ್ಯ ಋಷಿಗಳ ಸರಿ ಸಮಾನರು ಮತ್ತೊಬ್ಬರಿಲ್ಲ ಎಂದು ಮುರುಗೋಡ ಕೇಂಗೇರಿ ಮೂಲ ಸಂಸ್ಥಾನ ಪೀಠಾಧ್ಯಕ್ಷರಾದ ಪ. ಪೂ. ಶ್ರೀ ದಿವಾಕರ ಶಂಕರ ದೀಕ್ಷಿತರು ನುಡಿದರು.
ಅವರು ರವಿವಾರ ನಗರದ ಹೊರ ವಲಯದಲ್ಲಿರುವ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ಯೋಗೇಶ್ವರ ಯಾಜ್ಞವಲ್ಕ್ಯರ ಜಯಂತಿ ಹಾಗೂ ವಿಜಯಪುರದಿಂದ ಶ್ರೀ ಕ್ಷೇತ್ರ ಮುರಗೋಡಕ್ಕೆ ಪಾದಯಾತ್ರೆಯ ರಜತ ಮಹೋತ್ಸವದಂಗವಾಗಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಆರ್ಶೀವಚನ ನೀಡಿದರು.
ನಾವೆಲ್ಲ ಯೋಗೆಶ್ವರ ಯಾಜ್ಞವಲ್ಕ್ಯರ ಸಂತತಿಗಳೇ ಭಗವಂತನ ಅವತಾರಿ ಶ್ರೀ ಶಿವ ಚಿದಂಬರ ನಾಮಸ್ಮರಣೆ ಎಲ್ಲರೂ ತಪ್ಪದೇ ಮಾಡಿರಿ ಅದುವೇ ಜೀವನ್ಮುಕ್ತಿಗೆ ದಾರಿದೀಪವಾಗಿದೆ ಎಂದರು.
ಕಳೆದ 25 ವರ್ಷಗಳಿಂದ ವಿಜಯಪುರದ ಭಕ್ತ ವೃಂದ ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರ ಮುರಗೋಡಕ್ಕೆ ಆಗಮಿಸಿ ಅಲ್ಲಿ ನಡೆಯುವ ಮಹೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಲಿರುವದು ಶ್ರೀ ಚಿದಂಬರ ಕೃಪೆಗೆ ಪಾತ್ರವಾಗಿದೆ.
ಸಿಂದಗಿಯ ಭೀಮಾಶಂಕರ ಮಠದ ದತ್ತಪ್ಪಯ್ಯ ಶ್ರೀಗಳು ತಮ್ಮ ಆರ್ಶೀವಚನದಲ್ಲಿ ವಿಜಯಪುರದ ಶಿವ ಚಿದಂಬರನ ಭಕ್ತಾಧಿಗಳು ಪಾದಯಾತ್ರೆ ಮೂಲಕ ಮುರಗೋಡಕ್ಕೆ ತೆರಳಿ ತಮ್ಮ ಭಕ್ತಿ,ಭಾವ ತೋರುವ ಸತ್ ಸಂಪ್ರದಾಯ ಮುಂದುವರೆಸಿಕೊಂಡು ಹೋಗಿ ಎಲ್ಲರಿಗೂ ಸುಖ: ಶಾಂತಿ, ಸಮೃದ್ದ ಜೀವನ ನಡೆಸಲು ಶಿವ ಚಿದಂಬರನ ಕೃಪೆಯಾಗಲಿ ಎಂದು ತಮ್ಮ ಆರ್ಶಿವಚನದಲ್ಲಿ ನುಡಿದರು.
ಆರಂಭದಲ್ಲಿ ಹಿರಿಯರಾದ ಮೊಹರೆ ಅವರು ಸ್ವಾಗತ, ಪ್ರಾಸ್ತವಿಕವಾಗಿ ಮಾತನಾಡಿ ಪಾದಯಾತ್ರೆಯ ಮಹತ್ವನ್ನು ಸವಿಸ್ತಾರವಾಗಿ ವಿವರಿಸಿದರು.
ಸತತ 25 ವರ್ಷಗಳ ಪರ್ಯಂತ ಪಾದಯಾತ್ರೆ ಸಾಗುವ ಮಾರ್ಗ ಮಧ್ಯದಲ್ಲಿ ಭಕ್ತಾಧಿಗಳಿಗೆ ಉಪಹಾರ, ಊಟದ ವ್ಯವಸ್ಥೆ ಮತ್ತು ವಿಶ್ರಾಂತಿ ವ್ಯವಸ್ಥೆ ಕೈಕೊಂಡ ಭಕ್ತಾದಿ ದಂಪತಿಗಳಿಗೆ
ಹಾಗೂ ವಿಜಯಪುರ, ಮುದ್ದೇಬಿಹಾಳ ಸಂಚಾಲಕರಿಗೆ ಮತ್ತು ಪಾದಯಾತ್ರೆಯೂದ್ದಕ್ಕೂ ಔಷಧಿ, ನೀರು, ವಾಹನ ವ್ಯವಸ್ಥೆ ಮಾಡಿದ ಎಲ್ಲರಿಗೂ ಮುರಗೋಡ ದಿವಾಕರ ದೀಕ್ಷಿತರು ಮತ್ತು ಸಿಂದಗಿಯ ಪರಮ ಪೂಜ್ಯ ಶ್ರೀ ಭೀಮಾಶಂಕರ ಮಠದ ದತ್ತಪ್ಪಯ್ಯ ಗುರುಗಳು ಸನ್ಮಾನಿಸಿದರು.
ವೇದಿಕೆ ಮೇಲೆ ಶಿವ ಚಿದಂಬರ ಸೇವಾ ಸಮೀತಿ ಉಪಾಧ್ಯಕ್ಷರಾದ ಮಾಧು ಜೋಶಿ, ಪಾದಯಾತ್ರೆ ಪ್ರಮುಖ ಸಂಚಾಲಕ ರಾಘು ಜೋಶಿ ಸಂಕನಾಳ ಮತ್ತಿತರರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ, ಶಂಕರಭಟ್ಟ ಅಗ್ನಿಹೋತ್ರಿ, ಚಿದಂಬರ ಭಟ್ಟ ಜೋಶಿ, ಅನೀಲ ಜೋಶಿ, ಮಂಜುನಾಥ ಜೋಶಿ, ಸುಧೀಂಧ್ರ ಜೋಶಿ, ದೀಪಕ ಜೋಶಿ, ಮಾಲತೇಶ ಕುಲಕರ್ಣಿ, ವಿಜಯ ಜೋಶಿ, ಸಚಿನ ಜೋಶಿ, ಪ್ರಾಣೇಶ ಕುಲಕರ್ಣಿ,ವಿ.ಸಿಕುಲಕರ್ಣಿ, ಪಣೀಂಧ್ರ ಜೋಶಿ, ಲಕ್ಷ್ಮೀಕಾಂತ ಕುಲಕರ್ಣಿ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
ಯೋಗೇಶ್ವರ ಯಾಜ್ಞವಲ್ಕ್ಯರು ಶ್ರೇಷ್ಠ ಋಷಿ ಮುನಿಗಳು :ದಿವಾಕರ ಶಂಕರ ದೀಕ್ಷಿತರು
Related Posts
Add A Comment

