ದೇವರಹಿಪ್ಪರಗಿ: ಬಿತ್ತನೆಗೆ ಮುಂಚಿತವಾಗಿ ಬೀಜಗಳಲ್ಲಿ ಬರ ನಿರೋಧಕತೆ ಹೆಚ್ಚಿಸಲು ಬೀಜೋಪಚಾರ ಅಗತ್ಯವಾಗಿದೆ ಎಂದು ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ಹೇಳಿದರು.
ಪಟ್ಟಣದ ಸಾವಿತ್ರಿ ಹಿರೇಮಠ ಕೃಷಿಭೂಮಿಯಲ್ಲಿ ಶನಿವಾರ ಜರುಗಿದ ಬೀಜೋಪಚಾರ ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿತ್ತನೆಗೆ ಮುಂಚೆ ಬೀಜಗಳನ್ನು ಶೇಕಡಾ ೨ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ಒಂದು ಗಂಟೆ ನೆನೆಸಿ ನಂತರ ನೆರಳಿನಲ್ಲಿ ಕನಿಷ್ಟ ೭ ಗಂಟೆ ಒಣಗಿಸಬೇಕು. ನಂತರ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ ೦೩ ಗ್ರಾಂ ಶೀಲೀಂದ್ರ ಮಿಶ್ರಣವಾದ ಕಾರ್ಬೇಂಡೈಜಿಮ್ ಶೇ.೧೨ ಹಾಗೂ ಮ್ಯಾಂಕೋಜೇಬ್ ಶೇ.೬೪ ಅಥವಾ ೧೦ ಗ್ರಾಮ್ ಜೈವಿಕ ಗೊಬ್ಬರಗಳಾದ ಟ್ರೆöÊಕೋಡರ್ಮ, ಪಿಎಸ್‌ಬಿ ಹಾಗೂ ರೈಜೋಬಿಯಂಗಳಿಂದ ಬೀಜೋಪಚಾರ ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಮೀನಿನ ಒಂದು ಎಕರೆಪ್ರದೇಶವನ್ನು ತೊಗರಿ ಬೆಳೆ ಪ್ರಾತ್ಯಕ್ಷಿಕೆಗಾಗಿ ಆಯ್ಕೆ ಮಾಡಲಾಯಿತು.
ನಿವೃತ್ತ ತಾಲ್ಲೂಕು ಪಂಚಾಯಿತಿ ಎಡಿ ಪ್ರಭುದೇವ ಹಿರೇಮಠ, ಸಿಂದಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ವೈ.ಸಿಂಗೆಗೋಳ, ಕೃಷಿ ಅಧಿಕಾರಿ ಎಚ್.ಕೆ.ಪಾಟೀಲ, ಸಹಾಯಕ ಕೃಷಿ ಅಧಿಕಾರಿ ರಾಜು ಸದಾನಂದ, ಆತ್ಮಾ ಸಿಬ್ಬಂದಿ ಸುಧಾಕರ್ ಇರಸೂರ, ಪಂಚಾಯಿತಿಗಳ ಕೃಷಿಸಖಿಯರು, ತಾಂತ್ರಿಕ ಉತ್ತೇಜಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

