ಬಕ್ರೀದ್ ಹಬ್ಬದ ವಿಶೇಷ ಲೇಖನ
–ಮಲಿಕ್ ಎಲ್.ಜಮಾದಾರ ಲೇಖಕರು,ಉಪನ್ಯಾಸಕರು ವಿಜಯಪುರ
ಇಸ್ಲಾಂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಪ್ರಮುಖ ಬಕ್ರೀದ್ ಹಬ್ಬ ಈ ಹಬ್ಬವು ತನ್ನದೇ ಆದ ಆದ ಐತಿಹ್ಯವನ್ನು ಹೊಂದಿರುವಂಥದ್ದು. ಪ್ರವಾದಿಗಳಲ್ಲಿ ಒಬ್ಬರಾದ ಇಬ್ರಾಹಿಂ(ಅ.ಸ)ತಮ್ಮ ಮಗ ಇಸ್ಮಾಯಿಲ್(ಅ.ಸ)ರನ್ನು ಸೃಷ್ಟಿಕರ್ತನಾದ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಬಕ್ರೀದ್ ಆಥವಾ ಬಲಿದಾನದ ದಿನವೆಂದು ಆಚರಿಸಲಾಗುತ್ತದೆ. ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್(ಅ.ಸ)ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬ.ಈ ಹಬ್ಬದ ಶುಭ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಹಜ್ ಯಾತ್ರೆಯನ್ನು ನೆರವೇರಿಸುವುದು ವಿಶೇಷ.
• ಬಕ್ರೀದ್ ಹಬ್ಬದ ಐತಿಹಾಸಿಕ ಹಿನ್ನೆಲೆ:
ಪ್ರವಾದಿ ಇಬ್ರಾಹಿಂ ಅವರಿಗೆ ಸತ್ವ ಪರೀಕ್ಷೆ ಮಾಡಲು ಅಲ್ಲಾಹನು ಒಮ್ಮೆ ಅವರಿಗೆ ನಿನ್ನ ಅತೀ ಪ್ರೀತಿಯ ವಸ್ತುವಿಗೆ ಪಾತ್ರವಾದ ಒಂದು ಜಿವನವನ್ನು ಬಲಿಕೊಡಬಲ್ಲೆಯೋ ಎಂದು ಪ್ರಶ್ನಿಸುತಾರೆ.ಇದೆಲ್ಲಾ ಆಜ್ಞೆ ಭಗವಂತನು ಎಂದು ಅರಿತ ಇಬ್ರಾಹಿಂ(ಅ.ಸ)ರು ತಮ್ಮ ಏಕೈಕ ಪುತ್ರನಾದ ಇಸ್ಮಾಯಿಲ್ (ಅ.ಸ)ರನ್ನು ಅಲ್ಲಾಹನ ಇಚ್ಛೆಯಂತೆ ಬಲಿಕೊಡಲೇಬೇಕು ಎಂದು ನಿರ್ಧಾರಕ್ಕೆ ಬರುತ್ತಾರೆ.ಇದೆಲ್ಲವು ಅಲ್ಲಾಹನ ಆಜ್ಞೆ ಎಂಬುದು ಮನವರಿಕೆ ಮಾಡಿಕೊಂಡ ಅವರು ತಮ್ಮ ಮಗನನ್ನು ಬಲಿ ಕೊಡಲು ಸಿದ್ಧರಾಗುತ್ತಾರೆ.ಬಲಿ ನೀಡಲು ತಮ್ಮ ಕೈಯಲ್ಲಿದ್ದ ಕತ್ತಿಯನ್ನು ಮಗನ ಕತ್ತಿನ ಮೇಲಿಡುತ್ತಾರೆ,ಆ ಸಂದರ್ಭದಲ್ಲಿ ಕತ್ತಿಯೂ ಹರಿಯಲಿಲ್ಲ ತಂದೆಯ ಇಚ್ಛೆಯನ್ನು ಪೂರೈಸಲು ಬಲಿಯಾಗುವ ಸ್ಥಾನದಲ್ಲಿದ್ದ ಪುತ್ರ ಇಸ್ಮಾಯಿಲ್(ಅ.ಸ)ರು ತಂದೆಗೆ “ಅಪ್ಪಾ, ನಿನ್ನನ್ನು ಅತಿಯಾದ ಪುತ್ರ ವಾತ್ಸಲ್ಯ ಕಾಡುತ್ತಿದೆ,ಆದ್ದರಿಂದ ನೀನು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ನನ್ನ ಕತ್ತುಗೆಗೆ ಕತಿಗೆಯನ್ನು ಹರಿಸು ಎಂದು ತಿಳಿಸುತ್ತಾನೆ”.ಪುತ್ರ ಹೇಳಿಕೆಯಂತೆ ತಂದೆ ಇಬ್ರಾಹಿಂ (ಅ.ಸ)ರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು “ಬಿಸ್ಮಿಲ್ಲಾ”ಎಂದು ಹೇಳಿ ಪುತ್ರನ ಕತ್ತಿಗೆ ಕತ್ತು ಹರಿಸಿದರೂ ಕೊನೆಗೆ ದೈವಶಕ್ತಿಯಿಂದ ಪುತ್ರ ಇಸ್ಮಾಯಿಲ(ಅ.ಸ)ರ ಕತ್ತುಗೆಗೆ ಕತ್ತಿ ಹರಿಯಲೇ ಇಲ್ಲ.
ಇದನ್ನು ಕಂಡ ಪತ್ಯಕ್ಷಕ್ಷರಾದ ದೇವಧೂತ ಜಿಬ್ರಾಯಿಲ್,ಓ…ಇಬ್ರಾಹಿಂ(ಅ.ಸ)ಅವರೇ ನೀವು ಅಲ್ಲಾಹನಲ್ಲಿಟ್ಟಿದ್ದ ಸತ್ವ ನಿಷ್ಠೆಯ ಭಕ್ತಿಯ ಫಲದಿಂದ ನಿಮ್ಮ ಮೇಲೆ ಈವರೆಗೂ ನಡೆದಿರುವ ದೈವಿಭಕ್ತಿಯ ಪರೀಕ್ಷೆ ಮಾತ್ರ,ಆದರೆ ಅಲ್ಲಾಹನು ನಿಮ್ಮ ಪರೀಕ್ಷೆ ಮಾಡಿಬಿಟ್ಟನು,ನೀವು ಇಟ್ಟ ಭಕ್ತಿ ಶ್ರದ್ದೆಯಿಂದ ನಿಮ್ಮ ಪುತ್ರ ಉಳಿದನು.ಅದೇ ಕಾರಣಕ್ಕೆ ಪುತ್ರ ಬಲಿದಾನದ ಸ್ಥಳದಲ್ಲಿದ್ದ ಇಸ್ಮಾಯಿಲ್(ಅ.ಸ)ರನ್ನು ಸರಿಸಿ ಪುತ್ರ ಬಲಿದಾನದ ಬದಲು ಒಂದು ಪ್ರಾಣಿ ಬಲಿ ನೀಡು ಎಂದು ಅಲ್ಲಾಹನೇ ಅಜ್ಞಾಪಿಸಿದ್ದಾನೆಂದು ಹೇಳುತ್ತಾರೆ.ಅಲ್ಲಾಹನ ಆಜ್ಞೆಯಂತೆ ಇಬ್ರಾಹಿಂ(ಅ.ಸ)ರು ಪ್ರಾಣಿ ಬಲಿಯನ್ನು ಕೊಡುತ್ತಾರೆ.ಹೀಗಾಗಿ ಪ್ರವಾದಿ ಹಜರತ್ ಇಬ್ರಾಹಿಂ ಅವರ ಜೀವನ, ತತ್ವಗಳನ್ನು ಹಾಗೂ ಅವರಲ್ಲಿನ ಭಕ್ತಿವಂತ ದೈವ ನಿಷ್ಠೆ ಹಾಗೂ ತ್ಯಾಗಗುಣದೊಂಧಿಗೆ ಬಕ್ರೀದ್ ಹಬ್ಬ ಇಡೀ ವಿಶ್ವದ್ಯಾದ್ಯಂತ ಬಕ್ರೀದ್ ಆಚರಿಸಲಾಗುತ್ತದೆ.
• ಹಬ್ಬ ಆಚರಣೆ:
ಹಬ್ಬದ ದಿನ ಬೆಳಿಗ್ಗೆ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲು ಇದ್ಗಾ ಮೈದಾನಕ್ಕೆ ತೆಳುತ್ತಾರೆ.ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಶುಭಾಶಯಗಳು ಕೋರಿ ಮನೆಗೆ ತೆರಳಿ ಪ್ರಮುಖ ಕುರ್ಬಾನಿ ಕಾರ್ಯದಲ್ಲಿ ತೊಡಗುತ್ತಾರೆ.

–ಮಲಿಕ್ ಎಲ್.ಜಮಾದಾರ ಲೇಖಕರು,ಉಪನ್ಯಾಸಕರು ವಿಜಯಪುರ

