Author: editor.udayarashmi@gmail.com

ಇಂಡಿ: ಯೋಗ ಮಾಡುವದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ದಿಯಾಗುತ್ತದೆ. ಯೋಗಭ್ಯಾಸವು ಮನುಷ್ಯನನ್ನು ಆಸ್ಪತ್ರೆಯಿಂದ ದೂರ ಇರಿಸುತ್ತದೆ. ದೈಹಿಕ ಮತ್ತು ಮಾನಸಿಕ ನೆಮ್ಮದಿ ದೊರೆತು ಉಲ್ಲಾಸಮಯ ಜೀವನ ಸಾಗಿಸಲು ನೆರವಾಗುತ್ತದೆ. ಹಾಗಾಗಿ ಯೋಗವು ಮನುಷ್ಯನ ದೇಹ ಮತ್ತು ಆರೊಗ್ಯಕ್ಕೆ ಅತ್ಯವಶ್ಯವಾಗಿದೆ ಎಂದು ಯೋಗ ಗುರು ಬಿ.ಎಸ್.ಪಾಟೀಲ ಹೇಳಿದರು.ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯ ಹಾಗೂ ಬಸವರಾಜೇಂದ್ರ ಸತ್ಸಂಗ ಸಮಿತಿ ಇಂಡಿ ಇವರ ಸಹಯೋಗದೊಂದಿಗೆ ಯೋಗಾಸನ ಮಾಡುವ ಮೂಲಕ “ಅಂತರಾಷ್ಟ್ರೀಯ ಯೋಗ” ದಿನಾಚರಣೆಯಲ್ಲಿ ಮಾತನಾಡಿದರು. ಸುರ್ಯನಮಸ್ಕಾರ, ಶಿರ್ಶ್ಯಾಸನ, ಮಯೂರಾಸನ, ಹಲಾಸನ, ಅರ್ಧಕಟಿ ಚಕ್ರಾಸನ ಮುಂತಾದ ಆಸನಗಳು, ಧ್ಯಾನ ಮತ್ತು ಪ್ರಾಣಾಯಾಮ ಮಾಡಿ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಯೋಗ ಮಾಡಬೇಕೆಂದು ನುಡಿದರು.ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ, ಸಹಾಯಕ ಪ್ರಾಧ್ಯಾಪಕರಾದ ಡಾ.ವಿಶ್ವಾಸ ಕೋರವಾರ, ಜಾವೇದ ತಾಂಬೋಳಿ, ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಪಿ.ಕೆ.ರಾಠೋಡ, ಸ್ಕೌಟ್ಸ್ & ಗೈಡ್ಸ್ ಘಟಕದ ಸಂಯೋಜಕ ಡಾ.ಶ್ರೀಕಾಂತ ರಾಠೋಡ ಮಾತನಾಡಿದರು.ವೇದಿಕೆಯಲ್ಲಿ ಬಸವರಾಜೇಂದ್ರ ಸತ್ಸಂಗ ಸಮಿತಿಯ ಅಧ್ಯಕ್ಞ…

Read More

ವಿಜಯಪುರ: ನಗರದ ಮಲಿಕ್ ಮೈದಾನ ತೋಪ ಆವರಣದಲ್ಲಿ ಕೆಬಿಎಂಪಿಎಸ್ ನಂ 3 ಶಾಲೆಯ ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆ ಆಚರಿಸಿದರು.ಯೋಗಾಭ್ಯಾಸ ಮಾಡಿಸುವದರೊಂದಿಗೆ ಮಕ್ಕಳಿಗೆ ಯೋಗದ ಮಹತ್ವ ಹಾಗೂ ಆಹಾರ ಪದ್ಧತಿಯ ಬಗ್ಗೆ ತಿಳಿವಳಿಕೆಯನ್ನು ಕೊಡಲಾಯಿತು.ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಹಾಗೂ ಶಾಲಾ ಸಿಬ್ಬಂದಿ ಇದ್ದರು.

Read More

ವಿಜಯಪುರ: ನಗರದಲ್ಲಿ ಶುಕ್ರವಾರ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಭೂಮಿಪೂಜೆ ನೆರವೇರಿಸಿದರು.ಮಹಾನಗರ ಪಾಲಿಕೆ ವಾರ್ಡ ನಂ.೩೨ ರ ವ್ಯಾಪ್ತಿಯ ಅಗಸರ ಓಣಿಯಲ್ಲಿ ಲೋಕೋಪಯೋಗಿ ಇಲಾಖೆಯ ರೂ.೧ ಕೋಟಿ ಅನುದಾನದಲ್ಲಿ ಜೋರಾಪುರ ಪೇಟ, ಬಣಗಾರ ಓಣಿ ಹಾಗೂ ಅಗಸರ ಓಣಿಯಲ್ಲಿ ಆಂತರಿಕ ಸಿಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಭೂಮಿಪೂಜೆಯ ಬಳಿಕ ಸಮಸ್ಯೆಗಳ ಪರಿಹಾರಕ್ಕಾಗಿ ಆಗಮಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಪರಿಹರಿಸುವ ಭರವಸೆ ನೀಡಿದ ಶಾಸಕರು, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ಮಹೇಶ ಹೆರಲಗಿ, ಸೂರಪ್ಪ ಮಿರ್ಜಿ, ರಾಜಶೇಖರ ಹುಣಶ್ಯಾಳ, ಸತೀಶ ಅಗಸರ, ಶಶಿಕಾಂತ ಜವಳಿ, ಆನಂದ ಸಲ್ಪೇಕರ, ಶಿವಾನಂದ ಗಿಡವೀರ, ವಿನೋದ ತೆಲಸಂಗ, ದ್ರಾಕ್ಷಾಯಣಿ ಮಠಪತಿ, ಮಲ್ಲಮ್ಮ ಜೋಗೂರ, ಗೀತಾ ಗಿಡವೀರ, ಅನೀತಾ ಕೇಶೆಟ್ಟಿ, ಲಿಂಗರಾಜ ಶಹಾಪುರ, ಪ್ರಶಾಂತ ಕೇಶೆಟ್ಟಿ, ಶ್ರೀಶೈಲ…

Read More

ವಿಜಯಪುರ: ಜಿಲ್ಲೆಯಲ್ಲಿ ೨೦೨೪-೨೫ ಸಾಲಿನ ಶಾಲಾ ಶುಲ್ಕವನ್ನು ಅನುಧಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳು ೩೦ರಿಂದ ೪೦ರಷ್ಟು ಹೆಚ್ಚಿಗೆ ಪಡೆಯುತ್ತಿವೆ. ಇನ್ನು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ(ಕುಸ್ಮ)ವು ತಮ್ಮ ಅಧಿನ ಶಾಲೆಗಳ ಶುಲ್ಕವನ್ನು ಮನಸೋ ಇಚ್ಚೆ ಹೆಚ್ಚಿಗೆ ಪಡೆಯುವಂತೆ ಪ್ರೆರೇಪಿಸಿದೆ. ಇದರಿಂದಾಗಿ ಮಧ್ಯಮ ಬಡ ಕೂಲಿ ಕಾರ್ಮಿಕ ವರ್ಗದ ಪಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಲಾ ಫೀ ತುಂಬಲಾಗದೇ ತಮ್ಮ ಮಕ್ಕಳನ್ನು ಕರೆದುಕೊಂಡು ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸಿದ್ದಾರೆ. “ಕರ್ನಾಟಕ ಶಿಕ್ಷಣ ಮಸೂದೆ ೧೯೮೩ ಅಧಿನಿಯಮಗಳ ಅಡಿಯಲ್ಲಿ ಹೆಚ್ಚಿಗೆ ಶುಲ್ಕ ಪಡಿಯುವ ಶಾಲೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಅವರು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಪತ್ರ ನೀಡುವುದರ ಮೂಲಕ ಆಗ್ರಹಿಸಿದರು.ಇವರ ಜೊತೆಯಲ್ಲಿ ದೀಪಾ ಮನೂರ, ಗಣಪತಿ ರಾಠೋಡ, ಲಕ್ಷ್ಮಣ ಚಡಚಣ, ರಾಕೇಶ ಇಂಗಳಗಿ, ಪ್ರವೀಣ ಕನಸೇ,…

Read More

ದೇವರಹಿಪ್ಪರಗಿ: ಭಾರತ ಎಂದಿಗೂ ಯೋಗಿಗಳ ನಾಡು ಹೊರತೇ ರೋಗಿಗಳ ನಾಡಲ್ಲ. ಯೋಗ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ ಎಂದು ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜು ಆವರಣದಲ್ಲಿ ೧೦ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಶುಕ್ರವಾರ ಜರುಗಿದ ವಿಶ್ವ ಯೋಗ ಉತ್ಸವದಲ್ಲಿ ಓಂಕಾರದ ಮೂಲಕ ಆರಂಭಿಸಿ, ೨೧ ಯೋಗಾಸನಗಳ ಕುರಿತು ಮಾಹಿತಿ ನೀಡಿ ಯೋಗಪಾಠ ಮಾಡಿದರು. ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ವಿಶೇಷ ಸ್ಥಾನವಿದೆ. ಇದು ಯಾವುದೇ ಧರ್ಮ, ಮತ, ಪಂಥಗಳಿಗೆ ಸೀಮಿತವಾಗಿಲ್ಲ. ಗುರುಕುಲದಿಂದ ಆರಂಭಗೊಂಡ ಯೋಗ ಇಂದು ವಿಶ್ವದ ೧೯೫ ದೇಶಗಳಲ್ಲಿ ಜನಪ್ರೀಯವಾಗಿದೆ. ಯೋಗ ನಮ್ಮ ಮಾನಸಿಕ, ದೈಹಿಕ, ಆಧ್ಯಾತ್ಮೀಕ ವಿಚಾರಗಳಿಗೆ ಪೂರಕವಾಗಿದೆ ಎಂದರು.ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ), ಮಾಜಿಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಕಾರ್ಯಕ್ರಮ ಸಂಘಟಕ ಹಾಗೂ ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರತಜ್ಞ ಪ್ರಭುಗೌಡ ಬಿ.ಎಲ್.(ಚಬನೂರ) ಮಾತನಾಡಿದರು.ಯೋಗ ಉತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಶಿಕ್ಷಕಬಳಗ ಸೇರಿದಂತೆ…

Read More

ಚಡಚಣ: ಯೋಗ ಅಭ್ಯಾಸದಿಂದ ಮನಸ್ಸು ಮತ್ತು ದೇಹದ ಸಾಮರಸ್ಯ, ಆಲೋಚನೆ ಮತ್ತು ಕ್ರಿಯೆಯ ನಡುವಿನ ಸಮತೋಲನ, ಸಂಯಮ ಹಾಗು ಏಕತೆಯನ್ನು ಸಾಧಿಸಬಹುದು ಎಂದು ಖ್ಯಾತ ಸ್ತ್ರೀರೋಗ ತಜ್ಞ ಡಾ| ಅಕ್ಕಮಹಾದೇವಿ ಡೋಣಗಾಂವ ಹೇಳಿದರು.ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ೧೦ನೇ ಅಂತರರಾಷ್ಟ್ರೀಯ ಯೋಗದಿನ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯೋಗ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ನೀಡುತ್ತದೆ. ಅಲ್ಲದೆ ನಮ್ಮ ಒತ್ತಡದ ಜೀವನಕ್ಕೆ ಶಾಂತಿಯನ್ನು ತರುತ್ತದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಡಾ. ಎಸ್. ಬಿ. ರಾಠೋಡ, ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಇದರ ಮಹತ್ವವನ್ನರಿತ ವಿಶ್ವಸಂಸ್ಥೆ ೧೧ ಡಿಸೆಂಬರ್ ೨೦೧೪ ರಂದು ಜೂನ್ ೨೧ ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. ‘ಯೋಗ’ ಎಂಬ ಪದವು ಸಂಸ್ಕೃತದಿಂದ ಬಂದಿದೆ ಮತ್ತು ದೇಹ ಮತ್ತು ಪ್ರಜ್ಞೆಯ ಒಕ್ಕೂಟವನ್ನು ಸಂಕೇತಿಸುವದು ಅಥವಾ ಒಂದಾಗುವುದು ಎಂದರ್ಥ. ಈ ವರ್ಷ ‘ಸ್ವಯಂ…

Read More

ಆಲಮಟ್ಟಿಯಲ್ಲಿ ಪೊಲೀಸರ ಯೋಗ ದಿನಾಚರಣೆ ಆಲಮಟ್ಟಿ: ಇಲ್ಲಿನ ಆಲಮಟ್ಟಿ ಜಲಾಶಯದ ಬಲಭಾಗದಲ್ಲಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರ ವಸಾಹತುವಿನಲ್ಲಿ ಶುಕ್ರವಾರ ಯೋಗ ದಿನಾಚರಣೆ ಆಚರಿಸಲಾಯಿತು.ಯೋಗ ಗುರು ಗಂಗಾಧರ ಹಿರೇಮಠ ೭೦ ಕ್ಕೂ ಪೊಲೀಸರಿಗೆ ಯೋಗದ ವಿವಿಧ ಆಸನಗಳನ್ನು ಸಂಗೀತದ ಲಯದೊಂದಿಗೆ ಮಾಡಿಸಿದರು.ಪ್ರತಿಯೊಂದು ಯೋಗವನ್ನು ಮಾಡಿಸಿ ಅದನ್ನು ಮಾಡುವ ಬಗೆ ಹಾಗೂ ಅದರಿಂದಾಗುವ ಆರೋಗ್ಯಕರ ಲಾಭದ ಬಗ್ಗೆ ವಿವರಿಸಿದರು. ದೈನಂದಿನ ಕಾರ್ಯದ ಒತ್ತಡವನ್ನು ತಡೆಗಟ್ಟಿ ಖುಷಿಯಿಂದ ಕಾರ್ಯನಿರ್ವಹಿಸಲು, ಒತ್ತಡ ನಿಯಂತ್ರಿಸಲು ಅಗತ್ಯ ವಿವಿಧ ಯೋಗಗಳ ಪ್ರಕಾರಗಳು ಹೇಳಿ ಪ್ರಾಣಾಯಾಮ ಮಾಡಿಸಿದರು.ಕೆಎಸ್‌ಐಎಸ್‌ಎಪ್ ನ ಅಸಿಸ್ಟೆಂಟ್ ಕಮಾಂಡೆಂಟ್ ಅರುಣ ಡಿ.ವಿ. ಹಾಗೂ ಆಲಮಟ್ಟಿ ಜಲಾಶಯದ ಭದ್ರತೆಯ ಮುಖ್ಯಸ್ಥ ಇನ್ಸಪೆಕ್ಟರ್ ಶಿವಲಿಂಗ ಕುರೆಣ್ಣವರ ಮಾತನಾಡಿ, ಯೋಗ್ಯವಾದ್ದನ್ನು ಗಮನದಲ್ಲಿಡುವುದೇ ಯೋಗ. ಮನಸ್ಸನ್ನು ಮೌನವಾಗಿಟ್ಟುಕೊಳ್ಳುವುದೇ ಯೋಗ, ದಿನನಿತ್ಯದ ಚೈತನ್ಯದಾಯಕ ಬದುಕು ಸಾಗಿಸಲು ನಿತ್ಯ ಕೆಲ ಸಮಯವಾದರೂ ಯೋಗ ಅಗತ್ಯವಿದೆ. ಪೊಲೀಸರಿಗೆ ಏಕತಾನತೆ ಹೋಗಿ, ಚೈತನ್ಯ ಮೂಡಿಸಲು ಯೋಗ ಶಿಬಿರ ಏರ್ಪಡಿಸಲಾಗಿದ್ದು, ಇದರ ಸದುಪಯೋಗ ಪಡೆಯಬೇಕೆಂದರು.ಪೊಲೀಸರು ತಾವಲ್ಲದೇ, ತಮ್ಮ…

Read More

ಸಿಂದಗಿ: ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ೨೦೨೪-೨೫ನೆಯ ಸಾಲಿನ ೭,೮,೯ ನೆಯ ತರಗತಿಯಲ್ಲಿ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಇಲಾಖೆ ಕರ್ನಾಟಕ ಬೆಂಗಳೂರು ಅವರ ಸುತ್ತೋಲೆಯ ಮೇರೆಗೆ ತರಗತಿ ಮತ್ತು ರೊಸ್ಟರ್‌ವಾರು ಆಧಾರದ ಮೇಲೆ ಖಾಲಿ ಇರುವ ತರಗತಿವಾರು ಸೀಟುಗಳು ಈ ಕೆಳಗಿನಂತೆ ಇರುತ್ತವೆ. ೭ ನೇ ತರಗತಿಯಲ್ಲಿ ೧೧ ಸೀಟುಗಳು, ೮ ನೇ ತರಗತಿಯಲ್ಲಿ ೧೦ ಸೀಟುಗಳು, ೯ ನೇ ತರಗತಿಯಲ್ಲಿ ೦೭ ಸೀಟುಗಳು ಇರುತ್ತವೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಜೂ.೨೦ ರಿಂದ ೨೬ರವರೆಗೆ ಸಾಯಂಕಾಲ ೫ಗಂಟೆಯೊಳಗೆ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ) ಸಿಂದಗಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿಕೊಡಲು ಕ್ಷೇತ್ರ ಶಿಕ್ಷಣಾದಿಕಾರಿ ಆರೀಫ್ ಬಿರಾದಾರ ಹಾಗೂ ಮುಖ್ಯೋಪಾಧ್ಯಯ ಎಸ್.ಕೆ.ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪರೀಕ್ಷೆಯನ್ನು ಜೂ.೨೯ ರಂದು ಬೆಳಗ್ಗೆ ೧೦:೩೦-೧:೦೦ರವರೆಗೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೯೦೦೩೬೪೦೬೩ ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

Read More

ಸಿಂದಗಿ: ವಿಜಯಪುರ ಜಿಲ್ಲೆಗೆ ಭೋವಿ ಅಭಿವೃದ್ದಿ ನಿಗಮದಿಂದ ಹೆಚ್ಚು ಅನುದಾನ ಬಿಡುಗಡೆಗೊಳಿಸಬೇಕು. ಈ ಸಮುದಾಯದ ಜನ ಹೆಚ್ಚು ಆರ್ಥಿಕ ಸ್ಥಿತಿವಂತರಲ್ಲ ಎಂದು ಸಿಂದಗಿ ಭೋವಿ ಸಮುದಾಯದ ಮುಖಂಡೆ ಸುನಂದಾ ಯಂಪೂರೆ ಹೇಳಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಭೋವಿ ಸಮುದಾಯದ ಜನರಿಗೆ ಸರ್ಕಾರದಿಂದ ಸೂಕ್ತವಾದ ಯೋಜನೆಗಳನ್ನು ನಿರ್ಮಾಣ ಮಾಡಿ ಜನತೆಗೆ ಅನುಕೂಲ ಮಾಡಬೇಕು. ಮತ್ತು ಈ ಸಮುದಾಯದ ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಿದ್ದಲ್ಲಿ ಅವರ ಕುಟುಂಬ ಹೆಚ್ಚು ಪ್ರಗತಿಯಾಗಲಿದೆ. ಪ್ರತಿ ೬ ತಿಂಗಳಿಗೊಮ್ಮೆ ಜಿಲ್ಲಾವಾರು ಸಭೆ ಮಾಡಿ ಸಮುದಾಯದ ಸಮಸ್ಯೆಗಳನ್ನು ಆಲಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ಮಹಾದೇವಿ ವಡ್ಡರ, ಮುದುಕು ಮಂಜ್ಯಾಳಕರ, ಭೀಮು ಶಿರಸಗಿ, ಹಣಮಂತ ಬಂಡಿವಡ್ಡರ, ಹಣಮಂತ ಬೆಳಗಲ್ಲ ಸೇರಿದಂತೆ ಅನೇಕರು ಇದ್ದರು.

Read More

ಸಿಂದಗಿ: ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಪೇಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಎಲ್ಲ ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಮಾಜಿ ಶಾಸಕ ರಮೆಶ ಭೂಸನೂರ ಹೇಳಿದರು.ಗುರುವಾರದಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ರಸ್ತೆ ತಡೆದು, ಟಾಯರ್‌ಗೆ ಬೆಂಕಿ ಹಚ್ಚಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಗ್ಯಾರಂಟಿಗಳಿAದ ರಾಜ್ಯದ ಅಭಿವೃದ್ದಿ ಕಾರ್ಯಗಳು ಕುಂಠಿತಗೊAಡಿವೆ. ೫ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕಾಗಿ ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಏರಿಕೆ ಮಾಡುವ ಜೊತೆಗೆ ವಾಲ್ಮೀಕಿ ನಿಗಮದ ೧೭೫ಕೋಟಿ ರೂ. ಹಗರಣ ಮಾಡಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ಅಶೋಕ ಅಲ್ಲಾಪೂರ, ಬಸವರಾಜ ಹೂಗಾರ, ಜೆಡಿಎಸ್ ತಾಲೂಕಾಧ್ಯಕ್ಷ ಎಮ್.ಎನ್.ಪಾಟೀಲ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಯೋಗಕ್ಷೇಮದೆಡೆಗೆ ಗಮನ ಹರಿಸದೇ…

Read More