ವಿಜಯಪುರ: ಜಿಲ್ಲೆಯಲ್ಲಿ ೨೦೨೪-೨೫ ಸಾಲಿನ ಶಾಲಾ ಶುಲ್ಕವನ್ನು ಅನುಧಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳು ೩೦ರಿಂದ ೪೦ರಷ್ಟು ಹೆಚ್ಚಿಗೆ ಪಡೆಯುತ್ತಿವೆ. ಇನ್ನು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ(ಕುಸ್ಮ)ವು ತಮ್ಮ ಅಧಿನ ಶಾಲೆಗಳ ಶುಲ್ಕವನ್ನು ಮನಸೋ ಇಚ್ಚೆ ಹೆಚ್ಚಿಗೆ ಪಡೆಯುವಂತೆ ಪ್ರೆರೇಪಿಸಿದೆ. ಇದರಿಂದಾಗಿ ಮಧ್ಯಮ ಬಡ ಕೂಲಿ ಕಾರ್ಮಿಕ ವರ್ಗದ ಪಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಲಾ ಫೀ ತುಂಬಲಾಗದೇ ತಮ್ಮ ಮಕ್ಕಳನ್ನು ಕರೆದುಕೊಂಡು ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸಿದ್ದಾರೆ. “ಕರ್ನಾಟಕ ಶಿಕ್ಷಣ ಮಸೂದೆ ೧೯೮೩ ಅಧಿನಿಯಮಗಳ ಅಡಿಯಲ್ಲಿ ಹೆಚ್ಚಿಗೆ ಶುಲ್ಕ ಪಡಿಯುವ ಶಾಲೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಅವರು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಪತ್ರ ನೀಡುವುದರ ಮೂಲಕ ಆಗ್ರಹಿಸಿದರು.
ಇವರ ಜೊತೆಯಲ್ಲಿ ದೀಪಾ ಮನೂರ, ಗಣಪತಿ ರಾಠೋಡ, ಲಕ್ಷ್ಮಣ ಚಡಚಣ, ರಾಕೇಶ ಇಂಗಳಗಿ, ಪ್ರವೀಣ ಕನಸೇ, ದುರ್ಗಪ್ಪ ಬೂದಿಹಾಳ, ವಿಕ್ರಮ ವಾಗಮೋರೆ, ಹಮಿದ ಇನಾಮದಾರ ಚಂದ್ರಕಾಂತ ನಗರೆ, ರಾಘವೇಂದ್ರ ಛಲವಾದಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ಖಾಸಗಿ ಶಾಲೆಗಳ ಶುಲ್ಕಕ್ಕೆ ಕಡಿವಾಣ ಹಾಕಲು ಕೆ.ಆರ್.ಎಸ್. ಪಕ್ಷ ಮನವಿ
Related Posts
Add A Comment

