ಇಂಡಿ: ಯೋಗ ಮಾಡುವದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ದಿಯಾಗುತ್ತದೆ. ಯೋಗಭ್ಯಾಸವು ಮನುಷ್ಯನನ್ನು ಆಸ್ಪತ್ರೆಯಿಂದ ದೂರ ಇರಿಸುತ್ತದೆ. ದೈಹಿಕ ಮತ್ತು ಮಾನಸಿಕ ನೆಮ್ಮದಿ ದೊರೆತು ಉಲ್ಲಾಸಮಯ ಜೀವನ ಸಾಗಿಸಲು ನೆರವಾಗುತ್ತದೆ. ಹಾಗಾಗಿ ಯೋಗವು ಮನುಷ್ಯನ ದೇಹ ಮತ್ತು ಆರೊಗ್ಯಕ್ಕೆ ಅತ್ಯವಶ್ಯವಾಗಿದೆ ಎಂದು ಯೋಗ ಗುರು ಬಿ.ಎಸ್.ಪಾಟೀಲ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯ ಹಾಗೂ ಬಸವರಾಜೇಂದ್ರ ಸತ್ಸಂಗ ಸಮಿತಿ ಇಂಡಿ ಇವರ ಸಹಯೋಗದೊಂದಿಗೆ ಯೋಗಾಸನ ಮಾಡುವ ಮೂಲಕ “ಅಂತರಾಷ್ಟ್ರೀಯ ಯೋಗ” ದಿನಾಚರಣೆಯಲ್ಲಿ ಮಾತನಾಡಿದರು. ಸುರ್ಯನಮಸ್ಕಾರ, ಶಿರ್ಶ್ಯಾಸನ, ಮಯೂರಾಸನ, ಹಲಾಸನ, ಅರ್ಧಕಟಿ ಚಕ್ರಾಸನ ಮುಂತಾದ ಆಸನಗಳು, ಧ್ಯಾನ ಮತ್ತು ಪ್ರಾಣಾಯಾಮ ಮಾಡಿ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಯೋಗ ಮಾಡಬೇಕೆಂದು ನುಡಿದರು.
ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ, ಸಹಾಯಕ ಪ್ರಾಧ್ಯಾಪಕರಾದ ಡಾ.ವಿಶ್ವಾಸ ಕೋರವಾರ, ಜಾವೇದ ತಾಂಬೋಳಿ, ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಪಿ.ಕೆ.ರಾಠೋಡ, ಸ್ಕೌಟ್ಸ್ & ಗೈಡ್ಸ್ ಘಟಕದ ಸಂಯೋಜಕ ಡಾ.ಶ್ರೀಕಾಂತ ರಾಠೋಡ ಮಾತನಾಡಿದರು.
ವೇದಿಕೆಯಲ್ಲಿ ಬಸವರಾಜೇಂದ್ರ ಸತ್ಸಂಗ ಸಮಿತಿಯ ಅಧ್ಯಕ್ಞ ಆಯ್.ಬಿ.ಸುರಪುರ, ವಿಶ್ರಾಂತ ಉಪನ್ಯಾಸಕ ಎಂ.ಜೆ.ಪಾಟೀಲ, ಎಚ್.ಆರ್.ಬಿರಾದಾರ ನಿವೃತ್ತ ಬಿ.ಎಸ್.ಎನ್.ಎಲ್ ಮುಖ್ಯಸ್ಥರು, ಎಸ್.ವ್ಹಿ.ಹೂಗಾರ ನಿವೃತ್ತ ಮುಖ್ಯೋಪಾಧ್ಯಾಯರು, ಬಿ.ಆರ್.ಬಿರಾದಾರ ನಿವೃತ್ತ ಅಭಿಯಂತ್ರರು ಹಾಗೂ ಐಕ್ಯೂಎಸಿ ಸಂಯೋಜಕ ಡಾ.ಜಯಪ್ರಸಾದ ಡಿ. ಮತ್ತಿತರಿದ್ದರು.
ಡಾ.ಆನಂದ ಸಿ. ನಡುವಿನಮನಿ, ಡಾ.ಸುರೇಂದ್ರ ಕೆ, ಶ್ರೀಶೈಲ, ಡಾ.ಸಿ.ಎಸ್.ಬಿರಾದಾರ, .ಎಮ್.ಆರ್.ಕೋಣದೆ, ಆರ್.ಪಿ.ಇಂಗನಾಳ, ಶೃತಿ ಬಿರಾದಾರ, ಬಲರಾಮ ವಡ್ಡರ, ಪಂಕಜಾ ಕುಲಕರ್ಣಿ, ಶೃತಿ ಬಿರಾದಾರ, ಪರಶುರಾಮ ಅಜಮನಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

