ದೇವರಹಿಪ್ಪರಗಿ: ಭಾರತ ಎಂದಿಗೂ ಯೋಗಿಗಳ ನಾಡು ಹೊರತೇ ರೋಗಿಗಳ ನಾಡಲ್ಲ. ಯೋಗ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ ಎಂದು ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜು ಆವರಣದಲ್ಲಿ ೧೦ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಶುಕ್ರವಾರ ಜರುಗಿದ ವಿಶ್ವ ಯೋಗ ಉತ್ಸವದಲ್ಲಿ ಓಂಕಾರದ ಮೂಲಕ ಆರಂಭಿಸಿ, ೨೧ ಯೋಗಾಸನಗಳ ಕುರಿತು ಮಾಹಿತಿ ನೀಡಿ ಯೋಗಪಾಠ ಮಾಡಿದರು. ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ವಿಶೇಷ ಸ್ಥಾನವಿದೆ. ಇದು ಯಾವುದೇ ಧರ್ಮ, ಮತ, ಪಂಥಗಳಿಗೆ ಸೀಮಿತವಾಗಿಲ್ಲ. ಗುರುಕುಲದಿಂದ ಆರಂಭಗೊಂಡ ಯೋಗ ಇಂದು ವಿಶ್ವದ ೧೯೫ ದೇಶಗಳಲ್ಲಿ ಜನಪ್ರೀಯವಾಗಿದೆ. ಯೋಗ ನಮ್ಮ ಮಾನಸಿಕ, ದೈಹಿಕ, ಆಧ್ಯಾತ್ಮೀಕ ವಿಚಾರಗಳಿಗೆ ಪೂರಕವಾಗಿದೆ ಎಂದರು.
ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ), ಮಾಜಿಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಕಾರ್ಯಕ್ರಮ ಸಂಘಟಕ ಹಾಗೂ ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರತಜ್ಞ ಪ್ರಭುಗೌಡ ಬಿ.ಎಲ್.(ಚಬನೂರ) ಮಾತನಾಡಿದರು.
ಯೋಗ ಉತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಶಿಕ್ಷಕಬಳಗ ಸೇರಿದಂತೆ ಸುಮಾರು ೩ ಸಾವಿರ ಯೋಗಾಸಕ್ತರು ೨ ಗಂಟೆಗಳ ಕಾಲ ಯೋಗಾಭ್ಯಾಸ ಪೂರೈಸಿದರು.
ಇದೇ ಸಂದರ್ಭದಲ್ಲಿ ಪಡಗಾನೂರ ಗ್ರಾಮದ ಅಂತರಾಷ್ಟ್ರೀಯ ಯೋಗಪಟು ಮಡಿವಾಳಪ್ಪ ದೊಡಮನಿ ಹಾಗೂ ಜಾಲವಾದ ಗ್ರಾಮದ ಜಲಯೋಗಪಟು ಸಿದ್ರಾಮ ಗುಂದಗಿ ಇವರಿಂದ ಯೋಗದ ಭಂಗಿಗಳು ಪ್ರದರ್ಶಿಸಲ್ಪಟ್ಟವು. ನಂತರ ಸೇರಿದ ಎಲ್ಲರಿಗೂ ಮಹಾಪ್ರಸಾದ ವಿತರಣೆಯಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಸದಯ್ಯನಮಠದ ವೀರಗಂಗಾಧರಶ್ರೀ, ಗೋರಚಿಂಚೋಳಿ ಹಿರೇಮಠದ ಸಿದ್ಧರಾಮೇಶ್ವರಶ್ರೀ, ನಿವಾಳಖೇಡ ಸಿದ್ಧಕೃಪಾ ಮಲ್ಲಿಕಾರ್ಜುನ ಮಹಾಂತಮಠದ ಬಸವಾನಂದ ಸ್ವಾಮೀಜಿ, ಗದ್ದಿಗೆಮಠದ ಕಿರಿಯಮಹಾಂತ ಸ್ವಾಮೀಜಿ, ಮುಳಸಾವಳಗಿ ನಿಂಗರಾಯರು, ಬಾಲಗಾಂವದ ಅಮೋಘಸಿದ್ಧರು, ಅವೋಗೇಶ್ವರಧಾಮದಶ್ರೀ ಸೇರಿದಂತೆ ಹಲವು ಪೂಜ್ಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

