Author: editor.udayarashmi@gmail.com

ದೇವರಹಿಪ್ಪರಗಿ: ಹೆಂಡತಿ ಕಳಿಸದ ನೆಪ ಕಾರಣವಾಗಿ ಅಳಿಯ ಸೇರಿದಂತೆ ಮನೆಯವರು ಮಾವನನ್ನೇ ಹೊಡೆದು ಕೊಂದ ಘಟನೆ ಪಟ್ಟಣದಲ್ಲಿ ಜರುಗಿದೆ.ಪಟ್ಟಣದ ಶಂಕ್ರೆಪ್ಪ ದಾನಪ್ಪ ಕೋಟಿನ್(೬೦) ಎಂಬ ವ್ಯಕ್ತಿಯೇ ಮಗಳ ಗಂಡನ ಮನೆಯವರಿಂದ ಹತನಾದ ನತದೃಷ್ಟ ವ್ಯಕ್ತಿಯಾಗಿದ್ದು. ಈತನನ್ನು ಇಂಡಿ ತಾಲ್ಲೂಕಿನ ಕೆಂಗನಾಳ ಗ್ರಾಮದ ಮಲ್ಲಿಕಾರ್ಜುನ ಸೇರಿದಂತೆ ಮೂವರು ಎದೆಗೆ ಜೋರಾಗಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತನಾಗಿದ್ದಾನೆ.ಮೃತ ವ್ಯಕ್ತಿ ತನ್ನ ಮಗಳನ್ನು ಆರಾಮವಿಲ್ಲದ ಕಾರಣ ೮ ದಿನಗಳ ಹಿಂದೆ ಚಿಕಿತ್ಸೆಗಾಗಿ ಮನೆಗೆ ಕರೆದುಕೊಂಡು ಬಂದಿದ್ದು, ಈಗ ಅವಳನ್ನು ಕರೆದುಕೊಂಡು ಹೋಗಲು ಗಂಡ ಹಾಗೂ ಮನೆಯವರು ಕಾರಿನಲ್ಲಿ ಬಂದು ಮಗಳಿಗೆ ಹೊಡೆದಿದ್ದು, ಇದಕ್ಕೆ ಕಾರಣ ಕೇಳಿದ ತಂದೆ ಶಂಕ್ರೆಪ್ಪನನ್ನು ಹೊಡೆದು ಹತ್ಯೆ ಮಾಡಿದ್ದಾರೆ. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಪಿಎಸ್‌ಐ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Read More

ಶಿವಣಗಿ(ದೇವರಹಿಪ್ಪರಗಿ): ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ, ಮೆದಳು ಜ್ವರದಂತ ರೋಗಗಳು ಮಳೆಗಾಲದ ಸಮಯದಲ್ಲಿ ಹೆಚ್ಚು ಹರಡುವ ಸಾಧ್ಯತೆಯಿದ್ದು, ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ, ವೈದ್ಯಾಧಿಕಾರಿ ಡಾ. ಜಯಶ್ರೀ ದೇವಗಿರಿ ತಿಳಿಸಿದರು.ವಿಜಯಪುರ ತಾಲ್ಲೂಕಿನ ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ, ಜಿ.ಪಂ, ಶಾಲಾ ಶಿಕ್ಷಣ ಇಲಾಖೆ ಗ್ರಾಮೀಣ ವಲಯ ವಿಜಯಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿವಣಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಶಾಲಾ ಶಿಕ್ಷಕರಿಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನೆಯ ಹತ್ತಿರ ತೆಗ್ಗು, ಗುಂಡಿಗಳಿದ್ದರೆ ಮಣ್ಣಿನಿಂದ ಮುಚ್ಚಬೇಕು, ಮನೆಯ ಸುತ್ತಮುತ್ತ ಹೂವಿನ ಕುಂಡ, ಟಾಯರ್, ಗ್ಲಾಸ್ ಅಥವಾ ಪ್ಲಾಸ್ಟಿಕ್ ಬಾಟಲ್, ತೆಂಗಿನ ಚಿಪ್ಪು, ಮತ್ತು ಇತರೆ ವಸ್ತುಗಳಿದ್ದರೆ ಅದರಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು, ಅವುಗಳನ್ನು ವಿಲೇವಾರಿ ಮಾಡಬೇಕು.ಸೊಳ್ಳೆಗಳ ಕಚ್ಚುವಿಕೆಯಿಂದ ಪಾರಾಗಲು, ಪ್ರತಿಯೊಬ್ಬರು ತಮ್ಮ ಮನೆಯ, ಕಿಡಕಿ, ಬಾಗಿಲುಗಳಿಗೆ ತಂತಿ ಜಾಲರಿ ಅಳವಡಿಸುವುದು, ಸೊಳ್ಳೆ ಲಿಕ್ವಿಡ್, ಸೊಳ್ಳೆಬತ್ತಿ, ಉಪಯೋಗಿಸಿ, ಮಲಗುವಾಗ ಸೊಳ್ಳೆ…

Read More

ಸಿಂದಗಿ: ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರು ರೈತರ ಒಡನಾಡಿಯಾಗಿ, ಗ್ರಾಮ ಸೇವಕರಾಗಿ ಕಾರ್ಯನಿರ್ವಹಿಸಿ ರಾಜಕೀಯಕ್ಕೆ ಪ್ರವೇಶ ಮಾಡಿದಾಗಿಂದ ಅವರ ಅಭಿಮಾನಿಯಾಗಿರುವ ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆ ಅವರನ್ನು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ ಸಂಸ್ಥೆಯ ಅಧ್ಯಕ್ಷ ಅಶೋಕ ಮನಗೂಳಿ ಅವರು ಅವರ ತಂದೆಯವರ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.ಪಟ್ಟಣದ ಕುರುಡೆ ಕಾಂಪ್ಲೇಕ್ಸನಲ್ಲಿ ನೂತನವಾಗಿ ಟಿಎಸ್‌ಪಿ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಗೌರವಿಸಿ ಮಾತನಾಡಿದ ಅವರು, ವ್ಹಿ.ಬಿ.ಕುರುಡೆ ಅವರು ಸತತ ೩೨ ವರ್ಷಗಳ ಕಾಲ ಕೃಷಿ ಇಲಾಖೆಯಲ್ಲಿ ರೈತರ ಒಡನಾಡಿಯಾಗಿ ಕೆಲಸ ಮಾಡಿದ್ದಾರೆ. ದಿ.ಎಂ.ಸಿ. ಮನಗೂಳಿ ಅವರು ರೈತರ ಒಡನಾಡಿಯಾಗಿದ್ದರು. ಕಾರಣ ಇವರನ್ನು ನಿರ್ದೇಶಕರನ್ನಾಗಿ ಆಯ್ಕೆಮಾಡಿದ್ದರಿಂದ ತಾಲೂಕಿನ ರೈತರಿಗೆ ಗೌರವ ಸಲ್ಲಿಸಿದಂತಾಗಿದೆ. ಶಾಸಕ ಹಾಗೂ ಸಂಸ್ಥೆಯ ಅಧ್ಯಕ್ಷ ಅಶೋಕ ಮನಗೂಳಿ ಅವರು ಈ ನಿರ್ಣಯ ತೆಗೆದುಕೊಂಡದ್ದು ಸಂತಸ ತಂದಿದೆ ಎಂದರು.ಸನ್ಮಾನವನ್ನು ಸ್ವೀಕರಿಸಿದ ನಿರ್ದೇಶಕ ನಿವೃತ್ತ…

Read More

ತಿಕೋಟಾ: ರಾಜ್ಯಾಧ್ಯಂತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರು ಎಂದು ಪರಿಗಣಿಸಿ ಮುಖ್ಯ ಶಿಕ್ಷಕರ ಮುಂಬಡ್ತಿ ಸೇರಿದಂತೆ ಸಹ ಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ವಿಜಯಪುರ ಗ್ರಾಮೀಣ ವಲಯ ಘಟಕದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೂಲಮಟ್ಟಿಯವರ ಮೂಲಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ಬದಲಾವಣೆ ಹಾಗೂ ನೇಮಕಾತಿ ಮತ್ತು ಅನೇಕ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರಸ್ತುತ ಸಾಲಿನ ಇಲಾಖಾ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ಜಾಧವ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಯಾತನೂರ ಖಜಾಂಚಿ ಎಸ್. ಎಸ್. ಬಿರಾದಾರ , ದೈಹಿಕ ಶಿಕ್ಷಣ ಪರೀವಿಕ್ಷಕ ಚಂದ್ರಶೇಖರ್ ಕೋರೆ, ಬಿ.ಎನ್.ಹಿರೇಮಠ, ಎ.ಜಿ.ಪೆಂಡಾರಿ, ಜಿ.ಸಿ.ಬಿರಾದಾರ. ರಾಜು.ಎಚ್, ಸಾವಳಗಿ,…

Read More

ಮೋರಟಗಿಯಲ್ಲಿ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ಮೋರಟಗಿ: ಸಹಕಾರ ಸಂಸ್ಥೆಗಳು ಬದುಕಿದರೆ ಮಾತ್ರ ರೈತರಿಗೆ ಸರ್ಕಾರ ಸಹಕರಿಸಲು ಸಾಧ್ಯ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.ರೈತರು ಉತ್ತಮ ಬದುಕು ನಡೆಸಲು ಮೊದಲು ಪ್ರಕೃತಿ ಒಲಿಯಬೇಕು. ನಂತರ ಸರ್ಕಾರ ಒಲಿಯಬೇಕು. ಇಂದು ರಾಜ್ಯದಲ್ಲಿ ೬೫ ಲಕ್ಷಕ್ಕೂ ಹೆಚ್ಚು ಜನ ಕೃಷಿಯನ್ನೇ ನಂಬಿ ಬದುಕು ನಡೆಸುತ್ತಿದ್ದಾರೆ ಎಂದರೆ ಸಹಕಾರಿ ಸಂಘಗಗಳೇ ಕಾರಣ. ಮೊದಲು ರೈತರಿಗೆ ಶೇ.೧೬ರಷ್ಟು ಬಡ್ಡಿ ದರದಲ್ಲಿ ಸಾಲ ದೊರೆಯುತ್ತಿತ್ತು. ನಂತರ ಶೇ.೧೨, ಶೇ.೭ ಹಾಗೂ ಶೇ.೩ರಂತೆ ಬಡ್ಡಿ ದರ ಕಡಿಮೆಯಾಗುತ್ತ ಬಂತು. ಸದ್ಯ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ರಾಜ್ಯ ಎಂಬ ಹೆಮ್ಮೆ ಕರ್ನಾಟಕದ್ದಾಗಿದೆ ಎಂದರು.ಸರ್ಕಾರ ರೈತರ ಪರವಾಗಿ ನಿಲ್ಲದಿದ್ದರೆ ಕೃಷಿಕರು ಸಂಕಷ್ಟ ಎದುರಿಸಬೇಕಾಗುತ್ತದೆ. ರೈತರು ಸಾಕಷ್ಟು ಪರಿಶ್ರಮದಿಂದ ಬೆಳೆದೆರೂ ಸೂಕ್ತ ಬೆಲೆ ಸಿಗದೆ…

Read More

ವಿಜಯಪುರ: ಬಾದಾಮಿಯ ಕ ಸಾ ಪ ಭವನದಲ್ಲಿ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ಬೆಳಕೂಡ ಏರ್ಪಡಿಸಿದ ರಾಜ್ಯ ಮಟ್ಟದ 4 ನೆ ಬಯಲಾಟ ಉತ್ಸವದಲ್ಲಿ ” ರಾಜ್ಯ ಮಟ್ಟದ ಕೌಜಲಗಿ ನಿಂಗಮ್ಮ” ಪ್ರಶಸ್ತಿಯನ್ನು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಇವರಿಗೆ ನೀಡಿ ಗೌರವಿಸಲಾಯಿತು.

Read More

ಆಲಮೇಲ: ಪಟ್ಟಣದಲ್ಲಿ ನಡೆಯುವ ಕಾರ ಹುಣ್ಣಿಮೆಯ ನಿಮಿತ್ಯ ನಡೆಯುವ ಬಂಡಿ ಓಡಿಸಿ ಕರಿ ಹರಿಯುವ ಸಂಪ್ರದಾಯದಂತೆ ಈ ವರ್ಷವು ಪದ್ದತಿಯಂತೆ ಶಾಂತಿಯುತವಾಗಿ ಆಚರಿಸಲಾಯಿತು.ರೈತರ ವರ್ಷದ ಮೊದಲನೆ ಹಬ್ಬ ಕಾರಹುಣ್ಣಿಮೆ ಹಬ್ಬವು ರೈತಾಪಿ ಜನರು ಶನಿವಾರ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಜೋಡೆತ್ತಿನ ಬಂಡಿ ಓಡಿಸುವ ಮೂಲಕ ಆಚರಿಸಿದರು.ರಾಜ್ಯದಲ್ಲಿ ಹಲವೆಡೆ ವಿಶಿಷ್ಠ ರೀತಿಯಲ್ಲಿ ಕಾರ ಹುಣ್ಣಿಮೆ ಆಚರಣೆ ಮಾಡಲಾಗುತದೆ ಅದೆ ರೀತಿ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಪಂಚ ಲೋಹಗಳ ಬಂಡಿಗಳು ಓಡಿಸಿ ಕರಿ ಹರಿಯುವ ಆಚರಣೆ ಬ್ರೀಟಿಷರ ಕಾಲದಿಂದ ನಡೆದುಕೊಂಡ ಬಂದ ಪದ್ದತಿ, ಸಂಪ್ರದಾಯದಂತೆ ಜರುಗಿತು.ಈ ವರ್ಷ ಮುಂಗಾರು ಮಳೆ ಸರಿಯಾಗಿ ಆಗಿರುವದರಿಂದ ರೈತರು ಮತಸ್ಟು ಸಡಗರ ಸಂಬ್ರಮದಿಂದ ಕಾರ ಹುಣ್ಣಿಮೆ ಹಬ್ಬವನ್ನು ಆಚರಿಸಿದರು. ಇದನ್ನು ನೋಡಲು ಆಲಮೇಲ ಸೇರಿದಂತೆ ಸೂತ್ತಲಿನ ಗ್ರಾಮದ ಸಾವಿರಾರು ಜನಸ್ಥೋಮವೇ ಕೂಡಿತ್ತು.ಪಟ್ಟಣದ ಪ್ರಮುಖ ಮನೆತನಗಳಾದ ದೇಶಮುಕ ಮತ್ತು ದೇಶಪಾಂಡೆ ಅವರ ಎರಡು ಬಂಡಿಗಳು ೫ ಸುತ್ತು ಸುರಳಿತವಾಗಿ ಹೋಗಿಬಂದು ಕರಿ ಹರಿದರೆ ಗ್ರಾಮಕ್ಕೆ ಮತ್ತು ರೈತಾಪಿ ಜನರ…

Read More

ಜಮಖಂಡಿ: ಭಾರತ ಪ್ರಾಚೀನ ಕಾಲದಿಂದಲೂ ವಿಶ್ವಕ್ಕೆ ಗುರು ಎನಿಸಿಕೊಂಡಿದೆ. ಜನಪದ ಆಚರಣೆಗಳಾದ ಕಲೆ, ಕ್ರೀಡೆ, ಸಂಗೀತ, ಉಡುಗೆ, ತೊಡುಗೆ, ಊಟೋಪಚಾರ, ಹಾಸ್ಯ, ಹರಟೆ, ಗಾದೆ, ಒಗಟುಗಳಂತ ಅರ್ಥಪೂರ್ಣ ಆಚರಣೆಗಳ ಮೌಲ್ಯಯುತ ಸಂಪತ್ತು ಹೊಂದಿದೆ. ತನ್ಮೂಲಕ ಸಾಹಿತ್ಯಿಕವಾಗಿ ಜಗತ್ತಿಗೆ ನಮ್ಮ ಸನಾತನ ಸಂಸ್ಕೃತಿ ಹಂಚುತ್ತಾ ಶ್ರೇಷ್ಠರೆನಿಸಿಕೊಂಡಿದ್ದೇವೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಸಾಹಿತಿ ಬಾಳನಗೌಡ ಪಾಟೀಲ ಅಭಿಪ್ರಾಯಪಟ್ಟರು.ತಾಲೂಕಿನ ಗಣಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಸದಾನಂದ ಪಗಡಿ ತಂಡ ಆಯೋಜಿಸಿದ ರಾಜ್ಯಮಟ್ಟದ ಪಗಡಿ ಪಂದ್ಯಾವಳಿ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ಪಗಡೆ ಕೇವಲ ಆಟವಲ್ಲ. ನಮ್ಮ ಸಂಸ್ಕೃತಿಯ ಅಸ್ಮಿತೆಯಾಗಿದೆ . ಇಂದಿನ ಯುವಕರು ಪಾಶ್ಚಾತ್ಯ ಸಂಸ್ಕೃಿಯತ್ತ ವಾಲುತ್ತಿರುವುದು ಆಘಾತಕಾರಿಯಾಗಿದೆ. ನಮ್ಮ ದೇಶಿ ಪದ್ಧತಿಯನ್ನು ಉಳಿಸುವ ನಿಟ್ಟಿನಲ್ಲಿ ಯುವ ಜನತೆ ಮುಂದೆ ಬರಬೇಕಾಗಿದೆ ಎಂದು ಯುವಕರಿಗೆ ಕರೆ ನೀಡಿದರು.ಗ್ರಾಮ ಪಂಚಾಯತಿ ಸದಸ್ಯ ಕಲ್ಮೇಶಗೌಡ ನ್ಯಾಮಗೌಡ ಮಾತನಾಡಿ, ಅನೇಕ ಜನಪದ ಕಲೆಗಳಿಗೆ ಅಶ್ರಯ ನೀಡಿರುವ ಗಣಿ ಗ್ರಾಮ ಬಾಗಲಕೋಟ ಜಿಲ್ಲೆಯ ಸಾಂಸ್ಕೃತಿಕ ನೆಲೆಯಾಗಿದೆ. ಅನೇಕ…

Read More

ಆಲಮೇಲ: ಹುಬ್ಬಳ್ಳಿಯ ಮಹಾರಾಷ್ಟ್ರ ಮಂಡಳ ಸಭಾಂಗಣದಲ್ಲಿ ಜರುಗಿದ ಭಾವ ಸಂಗಮ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ವೈದ್ಯಸಾಹಿತಿ ಡಾ ಸಮೀರ ಹಾದಿಮನಿ ಅವರ “ನಗೆಗುಳಿಗೆ” ಕೃತಿಗೆ ಉಮಾಶಂಕರ ಪ್ರತಿಷ್ಠಾನದ ‘ಉಮಾಶಂಕರ ಪುಸ್ತಕ ಪ್ರಶಸ್ತಿ’ ಯನ್ನು ಹಿರಿಯ ಸಾಹಿತಿ ಎಲ್.ಎಸ್.ಶಾಸ್ತ್ರಿ ಪ್ರದಾನ ಮಾಡಿದರು.ಡಾ.ಕೆ.ವಿ.ರಾಜೇಶ್ವರಿ ಮತ್ತು ಉಮಾಶಂಕರ ಪ್ರತಿಷ್ಠಾನದ ಸಂಚಾಲಕರಾದ ರಾಜೇಂದ್ರ ಪಾಟೀಲ್ ಉಪಸ್ಥಿತರಿದ್ದರು.

Read More

ವಿಜಯಪುರ: ಸ್ವಗ್ರಾಮದಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣ ಪಡೆದುಕೊಳ್ಳಲು ಸುತ್ತಮುತ್ತಲಿನ ಗ್ರಾಮಕ್ಕೆ ಕಷ್ಟಪಟ್ಟು ತೆರಳುತ್ತಿರುವ ವಿಧ್ಯಾರ್ಥಿಗಳು ತಮ್ಮ ಸ್ವ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಬೇಕೆ ಬೇಕು ಎಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ಕುಳಿತುಕೊಂಡಿರುವ ದೃಶ್ಯ ಸೋಮವಾರ ಕಂಡು ಬಂದಿತು.ತಾಲ್ಲೂಕಿನ ಸೋಮದೇವರಹಟ್ಟಿ ಗ್ರಾಮದ ನೂರಾರು ವಿಧ್ಯಾರ್ಥಿಗಳು ತಮ್ಮ ಊರಿನ ಪ್ರಾಥಮಿಕ ಶಿಕ್ಷಣ ಪಡೆದು ಪ್ರೌಢ ಶಾಲಾ ಶಿಕ್ಷಣಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಕಳ್ಳಕವಟಗಿ, ಹುಬನೂರ, ತಿಕೋಟಾ ದೂರದ ಊರುಗಳಿಗೆ ತೆರಳುತ್ತಾರೆ. ಸರಿಯಾದ ವಾಹನಗಳ ಸೌಕರ್ಯ ಇಲ್ಲದ ಇವರಿಗೆ ಪ್ರೌಢ ಶಿಕ್ಷಣ ಪಡೆಯುವದು ಕಷ್ಟವೆನಿಸುತ್ತಿದೆ. ಗ್ರಾಮದಲ್ಲೆ ಪ್ರೌಢ ಶಾಲೆ ಇರದೇ ಇರುವದರಿಂದ ಪಾಲಕರು ಮಕ್ಕಳನ್ನು ಅರ್ಧಕ್ಕೆ ಶಾಲೆ ಬಿಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಕಷ್ಟಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಗ್ರಾಮದ ಹಿರಿಯರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಕುಳಿತುಕೊಂಡು ತಮ್ಮ ಬೇಡಿಕೆ ಇಡೇರಿಕೆಗೆ ಡಿಸಿ ಕಛೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಗ್ರಾಮದ ವಿಧ್ಯಾರ್ಥಿಗಳು ಮುಂದಿನ ಶಿಕ್ಷಣ…

Read More