ಆಲಮೇಲ: ಪಟ್ಟಣದಲ್ಲಿ ನಡೆಯುವ ಕಾರ ಹುಣ್ಣಿಮೆಯ ನಿಮಿತ್ಯ ನಡೆಯುವ ಬಂಡಿ ಓಡಿಸಿ ಕರಿ ಹರಿಯುವ ಸಂಪ್ರದಾಯದಂತೆ ಈ ವರ್ಷವು ಪದ್ದತಿಯಂತೆ ಶಾಂತಿಯುತವಾಗಿ ಆಚರಿಸಲಾಯಿತು.
ರೈತರ ವರ್ಷದ ಮೊದಲನೆ ಹಬ್ಬ ಕಾರಹುಣ್ಣಿಮೆ ಹಬ್ಬವು ರೈತಾಪಿ ಜನರು ಶನಿವಾರ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಜೋಡೆತ್ತಿನ ಬಂಡಿ ಓಡಿಸುವ ಮೂಲಕ ಆಚರಿಸಿದರು.
ರಾಜ್ಯದಲ್ಲಿ ಹಲವೆಡೆ ವಿಶಿಷ್ಠ ರೀತಿಯಲ್ಲಿ ಕಾರ ಹುಣ್ಣಿಮೆ ಆಚರಣೆ ಮಾಡಲಾಗುತದೆ ಅದೆ ರೀತಿ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಪಂಚ ಲೋಹಗಳ ಬಂಡಿಗಳು ಓಡಿಸಿ ಕರಿ ಹರಿಯುವ ಆಚರಣೆ ಬ್ರೀಟಿಷರ ಕಾಲದಿಂದ ನಡೆದುಕೊಂಡ ಬಂದ ಪದ್ದತಿ, ಸಂಪ್ರದಾಯದಂತೆ ಜರುಗಿತು.
ಈ ವರ್ಷ ಮುಂಗಾರು ಮಳೆ ಸರಿಯಾಗಿ ಆಗಿರುವದರಿಂದ ರೈತರು ಮತಸ್ಟು ಸಡಗರ ಸಂಬ್ರಮದಿಂದ ಕಾರ ಹುಣ್ಣಿಮೆ ಹಬ್ಬವನ್ನು ಆಚರಿಸಿದರು. ಇದನ್ನು ನೋಡಲು ಆಲಮೇಲ ಸೇರಿದಂತೆ ಸೂತ್ತಲಿನ ಗ್ರಾಮದ ಸಾವಿರಾರು ಜನಸ್ಥೋಮವೇ ಕೂಡಿತ್ತು.
ಪಟ್ಟಣದ ಪ್ರಮುಖ ಮನೆತನಗಳಾದ ದೇಶಮುಕ ಮತ್ತು ದೇಶಪಾಂಡೆ ಅವರ ಎರಡು ಬಂಡಿಗಳು ೫ ಸುತ್ತು ಸುರಳಿತವಾಗಿ ಹೋಗಿಬಂದು ಕರಿ ಹರಿದರೆ ಗ್ರಾಮಕ್ಕೆ ಮತ್ತು ರೈತಾಪಿ ಜನರ ಮಳೆ ಬೆಳೆ ಚನ್ನಾಗಿ ಆಗುತ್ತವೆ ಎಂದು ಇಲ್ಲಿನ ಜನರ ನಂಬಿಕೆ. ಹಾಗೆ ಕಾರ ಹುಣ್ಣುಮೆ ಬಳಿಕ ರೈತರು ತಮ್ಮ ಕೃಷಿ ಕಾಯಕದಲ್ಲಿ ತೋಡಗುತ್ತಾರೆ. ದೇಶಮುಖರ ಲಕ್ಷ್ಮೀ ಬಂಡಿಗೆ ಖಂಡು ಉಮ್ಮೋಜಿ ಲಾವಟೆ ಅವರ ಎತ್ತುಗಳು ಕಟ್ಟಿದರೆ. ದೇಶಪಾಂಡೆಯವರ ಬಂಡಿಗೆ ಶ್ರೀಮಂತ ಮಾರುತಿ ಲಾವಟೆ ಅವರ ಎತ್ತುಗಳು ಕಟ್ಟಿದರು.
ಸಾಯಂಕಾಲದ ೪ ಗಂಟೆಗೆ ಚಿಟ(ಸಣ್ಣ) ಬಂಡಿಗಳ ಓಡಿಸುವ ಸ್ಪರ್ದೇ ಜರುಗಿತು ಈ ಸ್ಪರ್ದೇಯಲ್ಲಿ ಸುಮಾರು ಐದಾರು ಜೋಡೆತ್ತಿನ ಚಿಟ(ಸಣ್ಣ) ಬಂಡಿಗಳು ಪಾಲ್ಗೊಂಡಿದ್ದವು. ಅದರಲ್ಲಿ ನಾಗರಾಜ ದೇವಕತೆ, ರವಿ ಇಟಗಿ, ಸಿದ್ದಪ್ಪ ಪೂಜಾರಿ, ಪೈಗಂಬಡ ಸೌದಗರ, ಶಾಂತಪ್ಪ ಪೂಜಾರಿ ಇವರ ಚಿಟ ಬಂಡಿಗಳ ಸ್ಪರ್ಧೆಯಲ್ಲಿ ಪಾಲೊಂಡಿದ್ದವು. ನಂತರ ೫ ಗಂಟೆಗೆ ದೇಶಮುಖ ಹಾಗೂ ದೇಶಪಾಂಡೆಯವರ ದೈತ್ಯಾಕಾರದ ಬಂಡಿಗಳು ಗ್ರಾಮ ದೇವರಾದ ಶ್ರೀ ಫೀರ ಗಾಲಿಬ ಸಾಬ ದರ್ಗಾದ ಎದರು ಮೈದಾನದಲ್ಲಿ ಒಂದರ ನಂತರ ಒಂದು ೫ ಸೂತ್ತು ಬಂಡಿಗಳು ಓಡಿಸಿ ಮನೆಗೆ ತೆರಳುವಾಗ ದಕ್ಷಿಣ ದಿಕ್ಕಿನಲ್ಲಿರುವ ದೇವರ ಅಗಸಿ ಹತ್ತಿರ ಕರಿ ಹರಿಯಲಾಯಿತು. ಊರು ಬಾಬತ್ತುದಾರರಾದ ವಾಲೀಕಾರರು, ತಳವಾರರು, ಯಂಟಮಾನರು, ಮೇಲಿನಮನಿ ಸಮಗಾರರು, ಭಜಂತ್ರಿಗಳು ಬಂಡಿಯ ಮೂಲ ಸ್ಥಳಕ್ಕೆ ನೀಲ್ಲಿಸಿ ಓಡೆಯರಿಗೆ ನಮಸ್ಕರಿಸಿ ಮನೆಗೆ ತೆರಳಿದರು.
ಬಂಡಿಯ ಚಕ್ರಗಳು ಪಂಚ ಲೋಹದು: ದೇಶಮುಖರ ಮನೆತನದ ಲಕ್ಷ್ಮೀ ಬಂಡಿಯ ಗಾಲಿಗಳು ಪಂಚ ಲೋಹಗಳಿಂದ ತಯಾರಿಸಲಾಗಿದ್ದು ಒಂದು ಗಾಲಿ ಸುಮಾರು ೫ ಕ್ವಿಂಟಾಲ ತೋಕ ಬಾರ ಇದೆ ಹಿಗೆ ಎರಡು ಗಾಲಿ ತೋಕ ಸುಮಾರು ೧೧ ಕ್ವಿಂಟಾಲ್ ಬಾರ ಇರುವ ಬಂಡಿ ಇದಾಗಿದೆ. ದೇಶಮುಖರ ಮನೆಯಲ್ಲಿರುವ ಬಂಡಿಗೆ ಗ್ರಾಮದ ನಡುವುರು ಲಕ್ಷ್ಮೀ ಎಂದೆ ಕರೆಯುತ್ತಾರೆ ಗ್ರಾಮಸ್ಥರು ಬಕ್ತಿ ಶೃದ್ದೆಯಿಂದ ವರ್ಷವಿಡಿ ಪೂಜಿಸಿ ಆರಾದಿಸುತ್ತಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

