ದೇವರಹಿಪ್ಪರಗಿ: ಹೆಂಡತಿ ಕಳಿಸದ ನೆಪ ಕಾರಣವಾಗಿ ಅಳಿಯ ಸೇರಿದಂತೆ ಮನೆಯವರು ಮಾವನನ್ನೇ ಹೊಡೆದು ಕೊಂದ ಘಟನೆ ಪಟ್ಟಣದಲ್ಲಿ ಜರುಗಿದೆ.
ಪಟ್ಟಣದ ಶಂಕ್ರೆಪ್ಪ ದಾನಪ್ಪ ಕೋಟಿನ್(೬೦) ಎಂಬ ವ್ಯಕ್ತಿಯೇ ಮಗಳ ಗಂಡನ ಮನೆಯವರಿಂದ ಹತನಾದ ನತದೃಷ್ಟ ವ್ಯಕ್ತಿಯಾಗಿದ್ದು. ಈತನನ್ನು ಇಂಡಿ ತಾಲ್ಲೂಕಿನ ಕೆಂಗನಾಳ ಗ್ರಾಮದ ಮಲ್ಲಿಕಾರ್ಜುನ ಸೇರಿದಂತೆ ಮೂವರು ಎದೆಗೆ ಜೋರಾಗಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತನಾಗಿದ್ದಾನೆ.
ಮೃತ ವ್ಯಕ್ತಿ ತನ್ನ ಮಗಳನ್ನು ಆರಾಮವಿಲ್ಲದ ಕಾರಣ ೮ ದಿನಗಳ ಹಿಂದೆ ಚಿಕಿತ್ಸೆಗಾಗಿ ಮನೆಗೆ ಕರೆದುಕೊಂಡು ಬಂದಿದ್ದು, ಈಗ ಅವಳನ್ನು ಕರೆದುಕೊಂಡು ಹೋಗಲು ಗಂಡ ಹಾಗೂ ಮನೆಯವರು ಕಾರಿನಲ್ಲಿ ಬಂದು ಮಗಳಿಗೆ ಹೊಡೆದಿದ್ದು, ಇದಕ್ಕೆ ಕಾರಣ ಕೇಳಿದ ತಂದೆ ಶಂಕ್ರೆಪ್ಪನನ್ನು ಹೊಡೆದು ಹತ್ಯೆ ಮಾಡಿದ್ದಾರೆ. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಪಿಎಸ್‌ಐ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
